ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ ಹಿಂದು ಮಿಟೆ

Schizotetranychus hindustanicus

ಹುಳು

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಅನೇಕ ಸೂಕ್ಷ್ಮವಾದ ಬೂದು ಅಥವಾ ಬೆಳ್ಳಿ ಬಣ್ಣದ ಚುಕ್ಕೆಗಳು ಗೋಚರಿಸುತ್ತವೆ.
  • ಆಕ್ರಮಣಕ್ಕೆ ಒಳಗಾದ ಅಂಗಾಂಶವು ಸಾಮಾನ್ಯವಾಗಿ ದೂರದಿಂದ ಬೆಳ್ಳಿಯ ಬಣ್ಣದಲ್ಲಿ ಕಾಣುತ್ತದೆ.
  • ಅತಿ ಹೆಚ್ಚು ಮುತ್ತುವಿಕೆ ಅಕಾಲಿಕ ಎಲೆಯ ಉದುರುವಿಕೆಗೆ, ಕೊಂಬೆಗಳ ಡೈಬ್ಯಾಕ್ ಗೆ ದಾರಿ ಮಾಡಿಕೊಡುತ್ತದೆ, ಹಣ್ಣುಗಳ ಗುಣಮಟ್ಟವನ್ನು ಕಡಿಮೆಗೊಳಿಸುತ್ತದೆ ಮತ್ತು ಮರಗಳ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ.
  • ಒಳ್ಳೆಯ ನೀರಿನ ಸರಬರಾಜು ಈ ಕೀಟದಿಂದ ಉಂಟಾದ ಹಾನಿ ಮತ್ತು ಸಂಭನೀಯತೆಯನ್ನು ಕಡಿಮೆ ಮಾಡುತ್ತದೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಸಣ್ಣ ಬೂದು ಅಥವಾ ಬೆಳ್ಳಿಯ ಚುಕ್ಕೆಗಳು ಎಲೆಗಳ ಮೇಲಿನ ಮೇಲ್ಮೈಯಲ್ಲಿ ಗೋಚರಿಸುವುದು ಈ ಹಾನಿಯ ಲಕ್ಷಣವಾಗಿದೆ. ಇದು ಸ್ಟಿಪ್ಲಿಂಗ್ ಎಂಬ ಪ್ರಕ್ರಿಯೆಯಾಗಿದೆ. ಇವು ಸಾಮಾನ್ಯವಾಗಿ ಮಧ್ಯನಾಳದ ಉದ್ದಕ್ಕೂ ಹೆಚ್ಚು ಸಂಖ್ಯೆಯಲ್ಲಿರುತ್ತವೆ ಮತ್ತು ನಂತರ ಸಂಪೂರ್ಣವಾಗಿ ಎಲೆಯ ಮೇಲ್ಮೈಗೆ ವಿಸ್ತರಿಸುತ್ತವೆ. ಸಾಮಾನ್ಯವಾಗಿ, ಮರದ ಹೊರ ಅಂಚಿನಲ್ಲಿರುವ ಹಣ್ಣುಗಳು ಮತ್ತು ಕೊಂಬೆಗಳು ಧಾಳಿಗೆ ಒಳಗಾಗುತ್ತವೆ. ಮುತ್ತುವಿಕೆ ಅತಿಯಾದ ಮಟ್ಟದಲ್ಲಿದ್ದಾಗ, ಈ ಚುಕ್ಕೆಗಳು ದೊಡ್ಡ ಕಲೆಗಳೊಂದಿಗೆ ಸೇರಿ ವಿಲೀನಗೊಂಡು ಎಲೆ ಅಥವಾ ಹಸಿರು ಹಣ್ಣಿಗೆ ಏಕರೂಪದ ಬೆಳ್ಳಿಯ ಅಥವಾ ಕಂಚಿನ ಬಣ್ಣವನ್ನು ನೀಡುತ್ತವೆ. ಆಕ್ರಮಣಕ್ಕೊಳಗಾದ ಅಂಗಾಂಶಗಳು ಕ್ರಮೇಣ ಗಟ್ಚಿಯಾಗಿ, ಕೊಳೆತು, ಅಕಾಲಿಕ ಎಲೆ ಉದುರುವಿಕೆ, ಕೊಂಬೆಗಳ ಡೈಬ್ಯಾಕ್ ಗೆ ದಾರಿ ಮಾಡಿಕೊಡುತ್ತದೆ. ಹಣ್ಣುಗಳ ಗುಣಮಟ್ಟವನ್ನು ಕಡಿಮೆಗೊಳಿಸುತ್ತದೆ ಮತ್ತು ಮರಗಳ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ. ಇದು ನಿರ್ದಿಷ್ಟವಾಗಿ ಪ್ರತಿಕೂಲ ವಾತಾವರಣದ ಪರಿಸ್ಥಿತಿಗಳಲ್ಲಿ, ಉದಾಹರಣೆಗೆ ಶುಷ್ಕ, ಬಿರುಗಾಳಿಯ ಹವಾಮಾನದಲ್ಲಿ ಹೆಚ್ಚಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಒಳ್ಳೆಯ ನೀರು ಸರಬರಾಜು ಈ ಕೀಟದಿಂದ ಉಂಟಾಗುವ ಹಾನಿ ಮತ್ತು ಸಂಭನೀಯತೆಯನ್ನು ಕಡಿಮೆ ಮಾಡುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸ್ಕಿಜೊಟೆಟ್ರಾನಿಚಸ್ ಹಿಂದೂಸ್ತಾನಿಕಸ್ ದೊಡ್ಡ ಸಂಖ್ಯೆಯ ಪರಭಕ್ಷಕಗಳನ್ನು ಮತ್ತು ಇತರ ನೈಸರ್ಗಿಕ ಶತ್ರುಗಳನ್ನು ಹೊಂದಿದೆ. ಹವಾಮಾನದ ಪರಿಸ್ಥಿತಿಗಳು ಕೀಟಕ್ಕೆ ಅಹಿತಕರವಾದರೆ ಅದರ ಹರಡುವಿಕೆಯನ್ನು ನಿಯಂತ್ರಿಸಲು ಇವುಗಳೇ ಸಾಕಾಗುತ್ತವೆ. ಬಲೆ ಗೂಡುಗಳು ಕಾರಣ, ಫೈಟೋಸೈಯಿಡ್ ಮಿಟೆಗಳು (ಉದಾಹರಣೆಗೆ ಯೂಸಿಯಸ್ ಸ್ಟಿಪ್ಯುಲೇಟಸ್) ಈ ಮಿಟೆಯ ವಿರುದ್ಧ ಪರಿಣಾಮಕಾರಿಯಾಗಿರುವುದಿಲ್ಲ. ಸ್ಟೆಥೋರಸ್ ನ ವರ್ಗದ ಕೆಲವು ಲೇಡಿ ಬರ್ಡ್ ಜಾತಿಗಳು, ಈ ಕೀಟಗಳನ್ನು ತಿನ್ನುತ್ತವೆ. ಶಿಲೀಂಧ್ರಗಳು, ಮತ್ತು ವಿಶೇಷವಾಗಿ ವೈರಸ್ ಗಳು ಸಹ, ಹೊಲದಲ್ಲಿನ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ. ಇದನ್ನು ತಾಪಮಾನದಿಂದ ಪ್ರಭಾವಿಸಬಹುದಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ವಿಶಾಲ ರೋಹಿತ ಕೀಟನಾಶಕಗಳು, ಪರಭಕ್ಷಕಗಳನ್ನು ಮತ್ತು ಇತರ ಪ್ರಯೋಜನಕಾರಿಯಾದ ಕೀಟಗಳನ್ನು ಕೊಲ್ಲುವ ಮೂಲಕ ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದಾದ್ದರಿಂದ ಆಯ್ದ ಕೀಟನಾಶಕಗಳನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ, ಹಲವಾರು ವಿಧದ ಅಕರೈಸೈಡ್ ಗಳ ಸರದಿ ಬಳಕೆ ಪ್ರತಿರೋಧದ ಬೆಳೆಯುವುದನ್ನು ತಪ್ಪಿಸುತ್ತದೆ.

ಅದಕ್ಕೆ ಏನು ಕಾರಣ

ಸಿಟ್ರಸ್ ಹಿಂದು ಮಿಟೆ ಸ್ಕಿಜೊಟೆಟ್ರಾನಿಚಸ್ ಹಿಂದುಸ್ತಾನಿಕಸ್ ನ ವಯಸ್ಕ ಕೀಟಗಳು ಮತ್ತು ಮರಿಹುಳುಗಳ ಆಹಾರ ಚಟುವಟಿಕೆಗಳಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಅವುಗಳು ವಿಶಿಷ್ಟವಾದ ಬಲೆ ಗೂಡುಗಳ (ವ್ಯಾಸ 1-3 ಮಿಮೀ)ನ್ನು ಹೊಂದಿರುತ್ತವೆ. ಅವುಗಳನ್ನು ಹೆಣ್ಣು ಕೀಟಗಳು ಎಲೆಗಳ ಕೆಳಭಾಗದಲ್ಲಿ ಉತ್ಪಾದಿಸುತ್ತವೆ ಮತ್ತು ಅದರ ಅಡಿಯಲ್ಲಿ ವಸಾಹತು ಬೆಳೆಯುತ್ತದೆ. ಈ ಲಕ್ಷಣವು ಇವುಗಳನ್ನು ಇತರ ಹುಳಗಳಿಂದ ಪ್ರತ್ಯೇಕಿಸುತ್ತದೆ ಮತ್ತು ಇವುಗಳ ಇತರ ಸಾಮಾನ್ಯ ಹೆಸರುಗಳಾದ 'ನೆಸ್ಟ್ – ವೆಬ್ಬಿಂಗ್ ಮಿಟೆ' ಮುಂತಾದವುಗಳಿಗೆ ಕಾರಣವಾಗಿದೆ. ವಯಸ್ಕ ಕೀಟಗಳು ಗೂಡಿನಿಂದ ಹೊರಗೆ ಹೋಗುತ್ತವೆ ಮತ್ತು ಇತರ ಎಲೆಗಳು ಅಥವಾ ಹಣ್ಣಿನ ಅಂಗಾಂಶಗಳನ್ನು ಆಕ್ರಮಿಸುತ್ತವೆ. ಆದರೆ ಮರಿಹುಳುಗಳು ಬಲೆಯ ಅಡಿಯಲ್ಲಿ ನೆಲೆಗೊಳ್ಳಲು ಬಯಸುತ್ತವೆ. ಕೀಟಗಳು ಮತ್ತು ಪಕ್ಷಿಗಳು ಇತರ ಮರಗಳಿಗೆ ಮಿಟೆಗಳನ್ನು ಸಾಗಿಸಬಹುದು ಮತ್ತು ಹರಡಬಹುದು. ಸೋಂಕಿಗೊಳಗಾದ ಉಪಕರಣಗಳು ಮತ್ತು ಕೆಟ್ಟ ಕೃಷಿ ಅಭ್ಯಾಸಗಳು ಕೀಟವನ್ನು ಇತರ ಕ್ಷೇತ್ರಗಳಿಗೆ ಹರಡುತ್ತವೆ. ಮರಗಳಿಗೆ ಸೂಕ್ತ ನೀರು ಸರಬರಾಜು ಹೊಂದಿರುವ ಉತ್ತಮ ನೀರಾವರಿ ಯೋಜನೆ ಕೀಟದಿಂದ ಉಂಟಾಗುವ ಹಾನಿಯ ತೀವ್ರತೆ ಮತ್ತು ಸಂಭವನೀಯತೆಯನ್ನು ಕಡಿಮೆಗೊಳಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಕಡಿಮೆ ಅಥವಾ ಅಧಿಕ ಆರ್ದ್ರತೆ, ಅಧಿಕ ಗಾಳಿ, ಬರ/ಜಲಕ್ಷಾಮ, ಅಥವಾ ಕಳಪೆಯಾಗಿ ಅಭಿವೃದ್ಧಿ ಹೊಂದಿದ ಬೇರಿನ ವ್ಯವಸ್ಥೆಯು ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸುತ್ತವೆ.


ಮುಂಜಾಗ್ರತಾ ಕ್ರಮಗಳು

  • ಮಿಟೆಗಳ ಸಂಖ್ಯೆಯನ್ನು ನಿರ್ಣಯಿಸಲು ಲೆನ್ಸ್ ಬಳಸಿ ನಿಯಮಿತವಾಗಿ ತೋಟದ ಮೇಲ್ವಿಚಾರಣೆ ಮಾಡಿ.
  • ಕ್ರಿಮಿನಾಶಕಗಳ ಅತಿಯಾದ ಬಳಕೆ ತಪ್ಪಿಸಿ.
  • ಏಕೆಂದರೆ ಇದು ಲಾಭದಾಯಕ ಕೀಟಗಳ ಸಂಖ್ಯೆಯ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ.
  • ಮರಕ್ಕೆ ಸರಿಯಾಗಿ ನೀರು ಹಾಕಿ ಮತ್ತು ಬರದ ಒತ್ತಡವನ್ನು ತಪ್ಪಿಸಿ.
  • ಹುಲ್ಲುಗಳು ಅಥವಾ ನೆಲದ ಮೇಲಿನ ಕಳೆಗಳೊಂದಿಗೆ ಶಾಖೆಗಳ ಸಂಪರ್ಕವನ್ನು ತಪ್ಪಿಸಿ.
  • ತೋಟವನ್ನು ಕಳೆ ಮುಕ್ತವಾಗಿ ಇರಿಸಿ.
  • ಸುಗ್ಗಿಯ ನಂತರ ತ್ಯಾಜ್ಯ ಮತ್ತು ಅವಶೇಷಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ