ಆಲಿವ್

ಆಲಿವ್ ಆಂಥ್ರಾಕ್ನೋಸ್

Glomerella cingulata

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕೇಂದ್ರೀಕೃತ ಉಂಗುರಗಳಿಂದ ಸುತ್ತುವರಿದ ವೃತ್ತಾಕಾರದ ಗುಳಿಬಿದ್ದ ಗಾಯಗಳು.
  • ಕಿತ್ತಳೆ ಬಣ್ಣದ ಜಿಲಾಟಿನಸ್ ಮ್ಯಾಟ್ರಿಕ್ಸ್‌ನೊಂದಿಗೆ ಕಂದು ಹಣ್ಣು ಕೊಳೆತ.
  • ಹಣ್ಣಿನ ಮಮ್ಮಿಫಿಕೇಷನ್.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಆಲಿವ್

ಆಲಿವ್

ರೋಗಲಕ್ಷಣಗಳು

ಮೊದಲ ರೋಗಲಕ್ಷಣಗಳು ವೃತ್ತಾಕಾರದ ಗುಳಿಬಿದ್ದ ಗಾಯಗಳೊಂದಿಗೆ ಕೇಂದ್ರೀಕೃತ ಉಂಗುರಗಳಾಗಿ ಕಾಣಿಸಿಕೊಳ್ಳುತ್ತವೆ. ತೇವಾಂಶದ ಪರಿಸ್ಥಿತಿಗಳಲ್ಲಿ, ಮೃದುವಾದ ಗಾಢ ಕಂದು ಹಣ್ಣಿನ ಕೊಳೆತ ಸಂಭವಿಸುತ್ತದೆ. ಶುಷ್ಕ ಪರಿಸ್ಥಿತಿಗಳಲ್ಲಿ, ಹಣ್ಣು ನಿರ್ಜಲೀಕರಣಗೊಳ್ಳುತ್ತದೆ ಮತ್ತು ಮಮ್ಮಿಫಾ ಆಗುತ್ತದೆ. ಎರಡೂ ಸಂದರ್ಭಗಳಲ್ಲಿ, ಹಣ್ಣುಗಳು ಅಕಾಲಿಕವಾಗಿ ಉದುರುತ್ತವೆ. ಹಣ್ಣುಗಳು ಪಕ್ವವಾದಾಗ ಈ ಲಕ್ಷಣಗಳು ಹೆಚ್ಚಾಗಿ ಗೋಚರಿಸುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಹೂಬಿಡುವುಕ್ಕೂ ಮೊದಲು ಮತ್ತು ಹಣ್ಣು-ಪಕ್ವಗೊಳ್ಳುವ ಹಂತಗಳಲ್ಲಿ ಬಳಸಿದಾಗ. ಆರಿಯೊಬಾಸಿಡಿಯಮ್ ಪುಲ್ಯುಲಾನ್ಸ್‌ನ ಕೆಲವು ಎಂಡೋಫೈಟಿಕ್ ತಳಿಗಳು ಕೊಲೆಟೊಟ್ರಿಕಮ್ ಎಸ್‌ಪಿಪಿ ವಿರುದ್ಧ ಹೆಚ್ಚಿನ ಮಟ್ಟದ ರಕ್ಷಣೆಯನ್ನು ಒದಗಿಸುತ್ತವೆ ಎಂದು ಕಂಡುಬಂದಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಸ್ಟ್ರೋಬಿಲುರಿನ್‌ಗಳು, ಮ್ಯಾಂಕೋಜೆಬ್ ಅಥವಾ ತಾಮ್ರ ಆಧಾರಿತ ಶಿಲೀಂಧ್ರನಾಶಕಗಳಂತಹವುಗಳನ್ನು ಒಂದು ಅಥವಾ ಎರಡು ಬಾರಿ ಸಿಂಪಡಣೆ ಮಾಡಿ. ಒಂದು ಸಿಂಪಡಣೆ ಹೂಬಿಡುವ ಮೊದಲು ಮತ್ತು ಇನ್ನೊಂದು ಕಾಯಿ ಹಿಡಿಯುವ ಆರಂಭಿಕ ಅವಧಿಯಲ್ಲಿ. ಹಿಂದಿನ ಸಿಂಪಡಣೆ ನಂತರ ಸೋಂಕು ಉಳಿದಿದ್ದರೆ ಎರಡನೇ ಸಿಂಪಡಣೆ ಅಗತ್ಯವಾಗಬಹುದು. ಮರದ ಮೇಲೆ ಉಳಿದಿರುವ ಗಾಯ ಮತ್ತು ಅಂಗಾಂಶಗಳ ಮರುಸೋಂಕನ್ನು ತಡೆಯಲು ಸಮರುವಿಕೆಯನ್ನು ಮಾಡಿದ ನಂತರ ಸಿಂಪಡಣೆ ಮಾಡಿ.

ಅದಕ್ಕೆ ಏನು ಕಾರಣ

ಗ್ಲೋಮೆರೆಲ್ಲಾ ಸಿಂಗ್ಯುಲಾಟಾ ಎಂಬ ಶಿಲೀಂಧ್ರವು ಸಸ್ಯದ ಅಂಗಾಂಶದಲ್ಲಿ ಸುಪ್ತವಾಗಿರುತ್ತದೆ ಮತ್ತು ಅತಿಯಾದ ತೇವ ಅಥವಾ ಶುಷ್ಕ ಪರಿಸರದ ಪರಿಸ್ಥಿತಿಗಳಲ್ಲಿ ಸಕ್ರಿಯಗೊಳ್ಳುತ್ತದೆ. ಬೆಚ್ಚಗಿನ ಮತ್ತು ಆರ್ದ್ರ ವಾತಾವರಣವು, ವಿಶೇಷವಾಗಿ ಹೂಬಿಡುವ ಹಂತದಲ್ಲಿ ಮತ್ತು ಕೊಯ್ಲಿಗೂ ಮುಂಚಿನ ಸಮಯದಲ್ಲಿ. ಗ್ಲೋಮೆರೆಲ್ಲಾ ಸಿಂಗ್ಯುಲಾಟಾದ ಬೆಳವಣಿಗೆಗೆ ಅನುಕೂಲಕರವಾಗಿದೆ. ರೋಗಕಾರಕವು ಮಮ್ಮಿಫೈಡ್ ಹಣ್ಣುಗಳು, ಮರದ ಮೇಲೆ ಉಳಿದಿರುವ ಎಲೆಗಳು ಅಥವಾ ಸೋಂಕಿತ ಮರದ ಅಂಗಾಂಶಗಳ ಮೇಲೆ ಬದುಕುಳಿಯುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ಆಯ್ಕೆಮಾಡಿ.
  • ಹೊಸ ಆಲಿವ್ ತೋಪುಗಳಲ್ಲಿ ನೆಟ್ಟ ವಸ್ತುವು ರೋಗ-ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಿ.
  • ಮೇಲಾವರಣದಲ್ಲಿ ಗಾಳಿಯಾಡುವಿಕೆ ಮತ್ತು ಸೂರ್ಯನ ಬೆಳಕನ್ನು ಗರಿಷ್ಠಗೊಳಿಸಿ.
  • ಸಾಕಷ್ಟು ಸಾರಜನಕ ಅಂಶದೊಂದಿಗೆ, ಸಮರ್ಪಕ ಫಲವತ್ತತೆಯನ್ನು ಒದಗಿಸಿ.
  • ನಿಮ್ಮ ಮರಗಳಿಗೆ ಹೆಚ್ಚು ನೀರುಹಾಕುವುದನ್ನು ತಪ್ಪಿಸಿ.
  • ಆರಂಭಿಕ ಸೋಂಕುಗಳಿಗಾಗಿ ಮೇಲ್ವಿಚಾರಣೆ ಮಾಡಿ ಮತ್ತು ಅದನ್ನು ಗುರುತಿಸಿ.
  • ಸಮರುವಿಕೆಯನ್ನು ಮಾಡುವ ಉಪಕರಣವನ್ನು ಸ್ವಚ್ಛಗೊಳಿಸಿ ಮತ್ತು ಸೋಂಕುರಹಿತಗೊಳಿಸಿ.
  • ರೋಗ ಮತ್ತಷ್ಟು ಹರಡುವುದನ್ನು ತಡೆಯಲು ಪೀಡಿತ ಸಸ್ಯಗಳನ್ನು ಕತ್ತರಿಸಿ.
  • ಸೋಂಕಿತ ಹಣ್ಣುಗಳು ಮತ್ತು ಕತ್ತರಿಸಿದ ಸಸ್ಯ ವಸ್ತುಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ