ಇತರೆ

ವೆಸ್ಟರ್ನ್ ಪ್ಲಾಂಟ್ ಬಗ್

Lygus hesperus

ಕೀಟ

ಸಂಕ್ಷಿಪ್ತವಾಗಿ

  • ಎಳೆಯ ಹಣ್ಣುಗಳ ಮೇಲೆ ಗುಳಿ, ಹೊಂಡಗಳು ಬೀಳುವುದು ಮತ್ತು ಕಲೆಗಳು ಮತ್ತು ಗುಳಿಬಿದ್ದ ಚುಕ್ಕಿಗಳು, ಇದರ ಪರಿಣಾಮವಾಗಿ ವಿರೂಪತೆಗಳು ಅಥವಾ ಮಾಗಿದ ಹಣ್ಣುಗಳು "ಬೆಕ್ಕಿನ ಮುಖದಂತೆ"(ಕ್ಯಾಟ್ ಫೇಸಿಂಗ್) ಆಗುವುದು.
  • ಹಣ್ಣಿನ ಸಿಪ್ಪೆಯ ಅಡಿಯಲ್ಲಿ ಬಿಳಿ ಗಡಸಾದ ಪ್ರದೇಶಗಳು.
  • ಮೊಗ್ಗುಗಳು ಮತ್ತು ಚಿಗುರುಗಳು ಬಾಡುತ್ತವೆ ಮತ್ತು ಸಾಯುತ್ತವೆ, ಇಳುವರಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

12 ಬೆಳೆಗಳು
ಸೇಬು
ಜಲ್ದರು ಹಣ್ಣು
ಹುರುಳಿ
ಕ್ಯಾರೆಟ್
ಇನ್ನಷ್ಟು

ಇತರೆ

ರೋಗಲಕ್ಷಣಗಳು

ಬೆಳೆಯುತ್ತಿರುವ ಮೊಗ್ಗುಗಳು ಮತ್ತು ಎಳೆಯ ಹಣ್ಣುಗಳಿಗೆ ಹಾನಿಯಾಗುವುದರಿಂದ ಎಳೆಯ ಹಣ್ಣಿನ ಮೇಲೆ ಅಸಹ್ಯವಾದ ಗುಳಿ, ಹೊಂಡಗಳು ಬೀಳುವುದು ಮತ್ತು ಕರೆಗಳು ಮತ್ತು ಗುಳಿಬಿದ್ದ ಚುಕ್ಕೆಗಳು ಉಂಟಾಗುತ್ತವೆ. ಕೊಯ್ಲಿನ ಸಮಯದ ಹೊತ್ತಿಗೆ, ಹಣ್ಣುಗಳು ಕೆಟ್ಟದಾಗಿ ವಿರೂಪಗೊಳ್ಳುತ್ತವೆ. ಇದನ್ನು ಸಾಮಾನ್ಯವಾಗಿ "ಬೆಕ್ಕಿನ ಮುಖ" ಎಂದು ಉಲ್ಲೇಖಿಸಲಾಗುತ್ತದೆ ಮತ್ತು ಮೇಲ್ಮೈಯಲ್ಲಿ ಸ್ರವಿಸುವಿಕೆಯನ್ನು ಗಮನಿಸಬಹುದು. ಹಣ್ಣಿನ ಒಳಭಾಗದ ಹಾನಿಯು ಸಿಪ್ಪೆಯ ಅಡಿಯಲ್ಲಿ ಬಿಳಿ ಗಡಸಾದ ಪ್ರದೇಶಗಳಾಗಿ ಮತ್ತು ಕೊಳೆಯುತ್ತಿರುವ ಬೀಜಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕೀಟ ತಿನ್ನುವುದರಿಂದ ಮೊಗ್ಗುಗಳು ಮತ್ತು ಚಿಗುರುಗಳು ವಿರೂಪಗೊಳ್ಳಬಹುದು ಅಥವಾ ಸಾಯಬಹುದು. ಅವುಗಳು ಸುಕ್ಕುಗಟ್ಟಿ ಸಾಯುತ್ತದೆ ಹಾಗೆ ಇಳುವರಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಈ ಕೀಟಗಳು ಸ್ಟೋನ್ ಮತ್ತು ಪೋಮ್ ಹಣ್ಣುಗಳು, ಕೃಷಿ ಮಾಡದ ಭೂಮಿಯಲ್ಲಿ ನೈಸರ್ಗಿಕ ಸಸ್ಯವರ್ಗ ಮತ್ತು ಪಕ್ಕದ ಪ್ರದೇಶಗಳಲ್ಲಿನ ಕಳೆಗಳನ್ನು ಒಳಗೊಂಡಿರುವ ಅತ್ಯಂತ ವಿಶಾಲವಾದ ಆಶ್ರಯದಾತ ಸಸ್ಯ ಶ್ರೇಣಿಯನ್ನು ಹೊಂದಿವೆ. ಈ ಕೀಟಗಳು ಮರದ ಬೆಳೆಗಳ ಮೇಲೆ ಸಂತಾನೋತ್ಪತ್ತಿ ಮಾಡುವುದಿಲ್ಲ. ಆದರೆ ಈ ಆಶ್ರಯದಾತ ಸಸ್ಯಗಳಿಂದ ತೋಟಗಳನ್ನು ಆಕ್ರಮಿಸುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ಕೀಟಗಳ ಪರಭಕ್ಷಕಗಳಲ್ಲಿ ದೊಡ್ಡ ಕಣ್ಣಿನ ಹುಳಗಳು, ಡ್ಯಾಮ್ಸೆಲ್ ಬಗ್‌ಗಳು, ಅಸಾಸಿನ್ ಬಗ್‌ಗಳು ಮತ್ತು ಕೊಲೊಪ್ಸ್ ಜೀರುಂಡೆಗಳು, ಹಾಗೆಯೇ ಮೊಟ್ಟೆಯ ಪರಭಕ್ಷಕ ಅತೀ ಸಣ್ಣ ಪೈರೇಟ್ ಬಗ್‌ಗಳು ಸೇರಿವೆ. ಪರಾವಲಂಬಿ ಕೀಟಗಳಲ್ಲಿ ಅನಾಫೆಸ್ ಅಯೋಲ್ಸ್ ಮತ್ತು ಟ್ರಿಸ್ಸೊಲ್ಕಸ್ ಹ್ಯಾಲಿಮಾರ್ಫೇ ಸೇರಿವೆ. ಇವು ಬೆಕ್ಕಿನ ಮುಖದ ಕೀಟಗಳ ಮೊಟ್ಟೆಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಬೇವಿನ ಸಾರಗಳನ್ನು ಆಧರಿಸಿದ ಉತ್ಪನ್ನಗಳು L. ಹೆಸ್ಪೆರಸ್ ಮತ್ತು E. ಕಾನ್‌ಸ್ಪರ್ಸಸ್ ಗಳ ಸಂಖ್ಯೆಯನ್ನು ಕಡಿಮೆಗೊಳಿಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಎಸ್ಫೆನ್ವಾಲೆರೇಟ್, ಫಾರ್ಮೆಟನೇಟ್ ಹೈಡ್ರೋಕ್ಲೋರೈಡ್, ಇಂಡಾಕ್ಸಿಕಾರ್ಬ್ ಅಥವಾ ಲ್ಯಾಂಬ್ಡಾ-ಸೈಹಾಲೋಥ್ರಿನ್ ಹೊಂದಿರುವ ಕೀಟನಾಶಕಗಳು ಕ್ಯಾಟ್ ಫೇಸಿಂಗ್ ಕೀಟಗಳ ವಿರುದ್ಧ ಪರಿಣಾಮಕಾರಿ. ಈ ಸಂಯುಕ್ತಗಳು ಮೀನು ಮತ್ತು ಜಲವಾಸಿ ಅಕಶೇರುಕಗಳಿಗೆ ಅತ್ಯಂತ ವಿಷಕಾರಿಯಾಗಿದೆ, ಹೀಗಾಗಿ, ಸಿಂಪಡಿಕೆ ಗುರಿ ತಪ್ಪದಂತೆ ಮತ್ತು ಮೇಲ್ಮೈ ನೀರಿಗೆ ಹರಿದು ಹೋಗದಂತೆ ನೋಡಿಕೊಳ್ಳಬೇಕು. ಪೈರೆಥ್ರಾಯ್ಡ್ ಉತ್ಪನ್ನಗಳ ಸ್ಪ್ರೇ ಅಪ್ಲಿಕೇಶನ್‌ಗಳು ವಯಸ್ಕ ಹುಳಗಳನ್ನು ಗುರಿಯಾಗಿರಿಸಿಕೊಳ್ಳುತ್ತವೆ.

ಅದಕ್ಕೆ ಏನು ಕಾರಣ

ಸಾಮಾನ್ಯವಾಗಿ "ಕ್ಯಾಟ್-ಫೇಸಿಂಗ್" ಎಂದು ಕರೆಯಲ್ಪಡುವ ರೋಗಲಕ್ಷಣಗಳು ಹಲವಾರು ಜಾತಿಯ ಹುಳಗಳಿಂದ ಉಂಟಾಗುತ್ತವೆ. ಅವುಗಳಲ್ಲಿ ಕೆಲವೆಂದರೆ ಸಸ್ಯದ ಹುಳಗಳಾದ ಲೈಗಸ್ ಹೆಸ್ಪೆರಸ್ ಮತ್ತು ಸ್ಟಿಂಕ್ ಬಗ್ ಗಳಾದ ಯೂಶಿಸ್ಟಸ್ ಕಾನ್ಪರ್ಸಸ್. ವಯಸ್ಕ ಕೀಟಗಳು ರಕ್ಷಿತ ನೆಲದ ಹೊದಿಕೆಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಋತುವಿನ ಆರಂಭದಲ್ಲಿ, ಅವು ಪಕ್ಕದ ಹೊಲಗಳಲ್ಲಿನ ಅಗಲವಾದ ಎಲೆಗಳ ಬೆಳೆಗಳು ಅಥವಾ ಕಳೆಗಳನ್ನು ತಿನ್ನುತ್ತವೆ. ನಂತರ ಬೇಸಿಗೆಯಲ್ಲಿ, ಈ ಪರ್ಯಾಯ ಆಶ್ರಯದಾತ ಸಸ್ಯಗಳು ಒಣಗಿ ಹೋಗುವುದರಿಂದ, ಈ ಹುಳಗಳು ಪೋಮ್ ಮತ್ತು ಹಣ್ಣಿನ ಮರಗಳ ಮೇಲಾವರಣಕ್ಕೆ ಹಾರಿ ಹೋಗಬಹುದು. ವಯಸ್ಕ ಸಸ್ಯದ ಹುಳಗಳು ಚಪ್ಪಟೆಯಾಗಿರುತ್ತವೆ, ಅರೆ-ಅಂಡಾಕಾರದ ಕೀಟಗಳು, ಹಳದಿ, ಹಸಿರು ಮತ್ತು ಗಾಢ ಕಂದು ಬಣ್ಣದಿಂದ ಕಪ್ಪು ಬಣ್ಣದಲ್ಲಿರುತ್ತವೆ. ಇವೆಲ್ಲವೂ ಹಿಂಭಾಗದಲ್ಲಿ ಎದ್ದುಕಾಣುವ ಹಳದಿ ಅಥವಾ ತೆಳು ಹಸಿರು ತ್ರಿಕೋನವನ್ನು ಹೊಂದಿರುತ್ತವೆ. ವಯಸ್ಕ ಸ್ಟಿಂಕ್ ಹುಳಗಳು ಚಪ್ಪಟೆಯಾದ ಶೀಲ್ಡ್ ಆಕಾರವನ್ನು ಹೊಂದಿರುತ್ತವೆ ಮತ್ತು ಬೂದು ಬಣ್ಣದಿಂದ ಕಂದು ಬಣ್ಣದಿಂದ ಹಸಿರು ಬಣ್ಣದಲ್ಲಿರುತ್ತವೆ. ಸ್ಟಿಂಕ್ ಬಗ್‌ಗಳು ಶಬ್ದ ಮಾಡಿಕೊಂಡು ಹಾರುವಂತವು, ಉದ್ದವಾದ, ಚೂಪು-ಹೀರುವ ಬಾಯಿಯ ಭಾಗಗಳನ್ನು ಹೊಂದಿರುತ್ತವೆ. ಇವು ಅಗಲವಾದ ಎಲೆಗಳ ಕಳೆಗಳ ನೆಲ ಹೊದಿಕೆಯಿರುವ ಹಣ್ಣಿನ ತೋಟಗಳಲ್ಲಿ ಅಥವಾ ಅಲ್ಫಾಲ್ಫಾ ಹೊಲಗಳು ಅಥವಾ ಇತರ ಆಶ್ರಯದಾತ ಸಸ್ಯಗಳ ಬಳಿ ಇರುವ ತೋಟಗಳಲ್ಲಿ ಸಮಸ್ಯೆಯಾಗಿರಬಹುದು.


ಮುಂಜಾಗ್ರತಾ ಕ್ರಮಗಳು

  • ಕ್ಯಾಟ್-ಫೇಸಿಂಗ್ ಕೀಟಗಳ ಪರಭಕ್ಷಕಗಳನ್ನು ಆಕರ್ಷಿಸುವ ಕೃಷಿ ಸ್ಥಳಗಳನ್ನು ಆಯ್ಕೆಮಾಡಿ ಮತ್ತು ಕೀಟನಾಶಕಗಳ ವಿವೇಚನೆಯಿಲ್ಲದ ಬಳಕೆಯನ್ನು ಮಾಡಬೇಡಿ.
  • ವಯಸ್ಕ ಸ್ಟಿಂಕ್ ಬಗ್ ಗಳ ಉಪಸ್ಥಿತಿಗಾಗಿ ಹಣ್ಣಿನ ಮರಗಳ ಮೇಲಾವರಣವನ್ನು ನಿಯತಕಾಲಿಕವಾಗಿ ಮೇಲ್ವಿಚಾರಣೆ ಮಾಡಿ.
  • ಮೇಲ್ವಿಚಾರಣೆ ಮಾಡಲು ನಿರ್ಣಾಯಕ ಸಮಯವೆಂದರೆ ಪಕ್ಕದಲ್ಲಿರುವ ಕಳೆ ಗಿಡಗಳು ಒಣಗುತ್ತಿರುವಾಗ ಅಥವಾ ಹತ್ತಿರದಲ್ಲಿ ಕೀಟಕ್ಕೆ ಆಶ್ರಯ ನೀಡಬಹುದಾದ ಬೆಳೆಗಳನ್ನು ಕೊಯ್ಲು ಮಾಡಲಾಗುತ್ತಿರುವಾಗ.
  • ಏಪ್ರಿಕಾಟ್ ಮರಗಳನ್ನು ಒಣಹುಲ್ಲಿನ ಹೊಲಗಳು, ಕಳೆಗಳು ಅಥವಾ ಕೃಷಿ ಮಾಡದ ಭೂಮಿಯ ಪಕ್ಕದಲ್ಲಿ ನೆಡಬೇಡಿ.
  • ಋತುವಿನ ಆರಂಭದಲ್ಲಿ ಸರಿಯಾದ ಕಳೆ ನಿರ್ವಹಣೆ ಕೆಲಸ ಮಾಡಿ.
  • ಹಣ್ಣಿನ ಕೊಯ್ಲು ಮಾಡಿದ ಎರಡು ವಾರಗಳಲ್ಲಿ ತೋಟದ ನೆಲದಲ್ಲಿ ಹುಲ್ಲು ಕತ್ತರಿಸಬೇಡಿ.
  • ಏಕೆಂದರೆ ನೆಲದ ಹೊದಿಕೆಯಲ್ಲಿನ ಯಾವುದೇ ಕೀಟಗಳು ಮರದ ಮೇಲಾವರಣಕ್ಕೆ ಚಲಿಸುತ್ತದೆ.
  • ವಯಸ್ಕ ಕೀಟಗಳನ್ನು ಹಿಡಿಯಲು ಸ್ವೀಪ್ ನೆಟ್ ಅನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ