ಮೆಕ್ಕೆ ಜೋಳ

ಸಣ್ಣ ಕೊಂಬಿನ ಮಿಡತೆ ಮತ್ತು ಶಲಭ

Oxya intricata & Locusta migratoria manilensis

ಕೀಟ

ಸಂಕ್ಷಿಪ್ತವಾಗಿ

  • ಪ್ರೌಢ ಭತ್ತದ ಮಿಡತೆಯು ಮೇಲ್ಭಾಗದಲ್ಲಿ ಮೂರು ಕಪ್ಪು ಗೆರೆಗಳನ್ನು ಹೊಂದಿರುವ ಹೊಳೆಯುವ ಹಸಿರು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿದ್ದು ನಮ್ಮ ಕೈನ ಸಣ್ಣ ಬೆರಳಿನ ಗಾತ್ರವನ್ನು ಹೊಂದಿರುತ್ತದೆ.
  • ಹೊಳೆಯುವ ಹಸಿರು ಬಣ್ಣದಲ್ಲಿದ್ದು 5 ಮಿಮೀ ನಿಂದ 11 ಸೆಂಮೀ ಉದ್ದವಿರುತ್ತದೆ.
  • ಎಲೆಗಳು, ಚಿಗುರುಗಳು ಮತ್ತು ಹೂಗೊಂಚಲುಗಳಲ್ಲಿ ಕೀಟ ತಿಂದು ಬಿಟ್ಟಿರುವ ಗುರುತುಗಳು (ಕಟ್ ಔಟ್).
  • ವಯಸ್ಕ ಕೀಟಗಳು ಗುಂಪುಗುಂಪಾಗಿ ವಲಸೆ ಹೋಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಮೆಕ್ಕೆ ಜೋಳ

ರೋಗಲಕ್ಷಣಗಳು

ಮಿಡತೆ ಎಲೆಗಳನ್ನು ತಿನ್ನುತ್ತವೆ ಮತ್ತು ಅಂಚುಗಳನ್ನು ಹಾನಿಗೊಳಿಸುತ್ತವೆ ಅಥವಾ ಎಲೆ ಗರಿಯ ದೊಡ್ಡ ಭಾಗಗಳನ್ನು ಕತ್ತರಿಸುತ್ತವೆ. ಅವು ಚಿಗುರುಗಳನ್ನು ಕೆರೆದು ತಿನ್ನುತ್ತವೆ ಹೆಚ್ಚಾಗಿ ಹೂಗೊಂಚಲುಗಳನ್ನು ತೂತು ಮಾಡುತ್ತವೆ. ಭತ್ತಗಳಲ್ಲಿ ಮೊಟ್ಟೆಗಳ ಮತ್ತು ಹಳದಿ ಹಾಗು ಕಂದು ಬಣ್ಣದ ಮರಿಹುಳುಗಳ ಉಪಸ್ಥಿತಿ ಮತ್ತು ಪ್ರೌಢ ಕೀಟಗಳು ಭತ್ತದ ಎಲೆಗಳನ್ನು ತಿನ್ನುವುದು ಈ ಕೀಟದ ಮತ್ತಷ್ಟು ರೋಗಲಕ್ಷಣಗಳು.

ಶಿಫಾರಸುಗಳು

ಜೈವಿಕ ನಿಯಂತ್ರಣ

ನೈಸರ್ಗಿಕವಾಗಿ ಲಭ್ಯವಿರುವ ಕಣಜಗಳು, ಪರಾವಲಂಬಿ ಕೀಟಗಳು ಮತ್ತು ಹುಳುಗಳು, ಇರುವೆಗಳು, ಪಕ್ಷಿಗಳು, ಕಪ್ಪೆಗಳು, ಬಲೆ ಕಟ್ಟುವ ಜೇಡಗಳಂತಹ ಜೈವಿಕ ನಿಯಂತ್ರಣ ಏಜೆಂಟ್ಗಳನ್ನು ಪ್ರೋತ್ಸಾಹಿಸಬೇಕು. ಶಿಲೀಂಧ್ರ ರೋಗಕಾರಕಗಳು ಮತ್ತು ಎಂಟೋಮೊಪಾಥೋಜೆನಿಕ್ ಶಿಲೀಂಧ್ರ (ಮೆಟಾಹಾರ್ಜಿಯಾಮ್ ಅಕ್ರಿಡಮ್)ಗಳನ್ನು ಸಹ ಮರಿಹುಳುಗಳ ಸಂಖ್ಯಾ ಸಾಂದ್ರತೆಯನ್ನು ಕಡಿಮೆ ಮಾಡಲು ಬಳಸಿಕೊಳ್ಳಬಹುದು. ಉಪ್ಪು ನೀರು ಮತ್ತು ಭತ್ತದ ಹೊಟ್ಟುಗಳಿಂದ ಮನೆಯಲ್ಲಿ ಮಾಡಿದ ವಿಷದ ಆಹಾರ ಬಳಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ಒಟ್ಟಾಗಿ ತಡೆಗಟ್ಟುವ ಕ್ರಮಗಳ ಸಮಗ್ರ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಭತ್ತದ ಗದ್ದೆಗಳಲ್ಲಿ ಮಿಡತೆಗಳನ್ನು ನಿಯಂತ್ರಿಸಲು ಎಲೆಗಳ ಮೇಲೆ 10% ಗಿಂತ ಕಡಿಮೆ ಹಾನಿಯಿರುವ ಕೀಟನಾಶಕ ಸಿಂಪಡಿಸುವಿಕೆಯನ್ನು ಬಳಸಿ. ಕಾಳುಗಳಂತಿರುವ ಕೀಟನಾಶಕಗಳು ಪರಿಣಾಮಕಾರಿಯಾಗಿರುವುದಿಲ್ಲ. ವಯಸ್ಕ ಕೀಟಗಳನ್ನು ಆಕರ್ಷಿಸಲು ವಿಷಯುಕ್ತ ಬಲೆಗಳನ್ನು ಬಳಸಬಹುದು. ಕೀಟಗಳ ವಿರುದ್ಧ ಸಿಂಪಡಿಸಬಹುದಾದ ಕೀಟನಾಶಕಗಳೆಂದರೆ ಕ್ಲೋರೋಪಿರಿಫೊಸ್, ಬುಪ್ರೊಫೆಸಿನ್ ಅಥವಾ ಎಥೊಫೆನ್ಪ್ರಾಕ್ಸ್. ನಾಟಿ ಮಾಡುವ ಮೊದಲು ಭತ್ತದ ಬಂಡ್ಗಳ ಮೇಲೆ ಮಲೇಥಿಯನ್ ಅನ್ನು ಸಿಂಪಡಿಸಬಹುದು. ಇತರ ಎಫ್‌ಎಒ ಶಿಫಾರಿತ ರಾಸಾಯನಿಕಗಳಲ್ಲಿ ಬ್ಯಾಂಡಿಯೊಕಾರ್ಬ್ 80% WP@ 125 ಗ್ರಾಂ / ಹೆಕ್ಟೇರ್, ಕ್ಲೋರ್‌ಪಿರಿಫೋಸ್ 50% EC@ 20 EC@ 480 ಮಿಲೀ / ಹೆಕ್ಟೇರ್, ಡೆಲ್ಟಾಮೆಥ್ರಿನ್ 2.8% EC@ 450 ಮಿಲೀ / ಹೆಕ್ಟೇರ್ ಸೇರಿವೆ.

ಅದಕ್ಕೆ ಏನು ಕಾರಣ

ಎಲೆಗಳು ಮತ್ತು ಹೂಗೊಂಚಲುಗಳಲ್ಲಿನ ವಿಶಿಷ್ಟ ಲಕ್ಷಣಗಳು ಮರಿಹುಳುಗಳು ಮತ್ತು ಪ್ರೌಢ ಕೀಟಗಳಿಂದ ಉಂಟಾಗುತ್ತವೆ. ಜಲವಾಸಿ ಪರಿಸರಗಳು ಅವುಗಳ ಬೆಳವಣಿಗೆಗೆ ಸೂಕ್ತವಾಗಿವೆ (ಉದಾ. ಭತ್ತದ ಗದ್ದೆಗಳು). ಮಿಡತೆ 5 ಮಿ.ಮೀ. ನಿಂದ 11 ಸೆಂ.ಮೀ ಉದ್ದದ ಗಾತ್ರದಲ್ಲಿರುತ್ತದೆ ಮತ್ತು ಅವು ಉದ್ದ ಮತ್ತು ತೆಳ್ಳಗೆ ಅಥವಾ ಸಣ್ಣ ಮತ್ತು ದಪ್ಪವಾಗಿರಬಹುದು. ಅವು ಹಸಿರು ಅಥವಾ ಒಣಹುಲ್ಲಿನ ಬಣ್ಣದ್ದಾಗಿರುವುದರಿಂದ ಅವು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಲಭವಾಗಿ ಬೆರೆತುಕೊಳ್ಳುತ್ತವೆ. ಹೆಣ್ಣು ಕೀಟಗಳು ಭತ್ತದ ಎಲೆಗಳ ಮೇಲೆ ಹಳದಿ ಮೊಟ್ಟೆಗಳನ್ನು ಇಡುತ್ತವೆ. ವಯಸ್ಕ ಕೀಟಗಳಿಗೆ ರೆಕ್ಕೆಗಳು ಬೆಳೆಯಬಹುದು, ಅವು ಗುಂಪುಗೂಡಿ ವಲಸೆ ಹೋಗಬಹುದು.


ಮುಂಜಾಗ್ರತಾ ಕ್ರಮಗಳು

  • ನಾಟಿ ಮಾಡುವಾಗ, ಮೊಟ್ಟೆ ಕೋಶಗಳು ಮತ್ತು ಮರಿಹುಳುಗಳನ್ನು ನಾಶ ಮಾಡಲು ಭತ್ತದ ಒಡ್ಡುಗಳನ್ನು ಸ್ವಚ್ಛಗೊಳಿಸಿ.
  • ಹಾನಿಯ ಲಕ್ಷಣಗಳು ಮತ್ತು ಮಿಡತೆಯ ಮರಿಹುಳುಗಳು ಅಥವಾ ವಯಸ್ಕವುಗಳ ಉಪಸ್ಥಿತಿಗಾಗಿ ನಿಯಮಿತವಾಗಿ ಗದ್ದೆಯನ್ನು ಮೇಲ್ವಿಚಾರಣೆ ಮಾಡಿ.
  • ರಾತ್ರಿಯಲ್ಲಿ ಪ್ರೌಢ ಕೀಟೆಗಳು ನಿಷ್ಕ್ರಿಯವಾಗಿದ್ದಾಗ ಅವುಗಳನ್ನು ನೇರವಾಗಿ ಎಲೆಗಳ ಮೇಲಿಂದ ಹೆಕ್ಕಿ ತೆಗೆಯಿರಿ.
  • ಕೀಟವನ್ನು ಮುಳುಗಿಸಲು ಸಸಿಮಡಿಯಲ್ಲಿ ನೀರು ತುಂಬಿಸಿ.
  • ಕೀಟವನ್ನು ಹಿಡಿಯಲು ಸಣ್ಣ ಸಸಿಮಡಿಗಳಲ್ಲಿ ಬಲೆಗಲನ್ನು ಹಾಸಿ.
  • ಪರ್ಯಾಯ ಆಶ್ರಯದಾತ ಗಿಡಗಳಂತೆ ಕಾರ್ಯನಿರ್ವಹಿಸುವಂತಹ ಕಳೆಗಳನ್ನು ತೆಗೆದುಹಾಕಿ.
  • ಪ್ರಯೋಜನಕಾರಿ ಕೀಟಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುವಂತಹ ನಿರಂತರ ಕೀಟನಾಶಕ ಸಿಂಪಡಣೆಯನ್ನು ಮಾಡಬೇಡಿ.
  • ಚಳಿಗಾಲದ ಋತುವಿನಲ್ಲಿ ಕೊಯ್ಲು ಮಾಡಿದ ನಂತರ ಆಳವಾದ ಉಳುಮೆ ಮಾಡಿ ಪರಭಕ್ಷಕಗಳಿಗೆ ಮೊಟ್ಟೆಯ ದ್ರವ್ಯರಾಶಿಗಳನ್ನು ಒಡ್ಡುವುದಕ್ಕಾಗಿ ಸೂಚಿಸಲಾಗುತ್ತದೆ.
  • ನಡೆದುಕೊಂಡು ಓಡಾಡುವ ಮಿಡತೆಗಳ ಮುಂಭಾಗದಲ್ಲಿ 45 ಸೆಂ.ಮೀ ಆಳ ಮತ್ತು 30 ಸೆಂ.ಮೀ ಅಗಲದ ಕಂದಕಗಳನ್ನು ಅಗೆಯಬಹುದು ಮತ್ತು ಕಂದಕಗಳಲ್ಲಿ ಲೋಹದ ಹಾಳೆಯ ತಡೆಗೋಡೆಗಳನ್ನು ಒದಗಿಸಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ