ಭತ್ತ

ಸುರುಳಿ ಹುಳು (ವರ್ಲ್ ಮ್ಯಾಗಟ್)

Hydrellia philippina

ಕೀಟ

ಸಂಕ್ಷಿಪ್ತವಾಗಿ

  • ಹಳದಿ ಚುಕ್ಕೆಗಳು, ಬಿಳಿ ಅಥವಾ ಪಾರದರ್ಶಕ ತೇಪೆಗಳೊಂದಿಗೆ ಅಥವಾ ಎಲೆಗಳ ಮೇಲೆ ಪಟ್ಟೆಗಳು ಮತ್ತು ಪಿನ್ ರಂಧ್ರಗಳು.
  • ಎಲೆಗಳಲ್ಲಿ ವಿರೂಪತೆ ಮತ್ತು ಸ್ಥಗಿತಗೊಂಡ ಸಸ್ಯ ಬೆಳವಣಿಗೆ.
  • ಕೆಲವೊಮ್ಮೆ ಧಾನ್ಯಗಳು ಭಾಗಶಃ ಭರ್ತಿಯಾಗುತ್ತವೆ.
  • ಪಾರದರ್ಶಕ ಅಥವಾ ತಿಳಿ ಬಣ್ಣದ ಕೆನೆ ರೀತಿಯ ಲಾರ್ವಾಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಸುರುಳಿಯಾಗದ ಎಲೆಗಳ ಒಳಗಿನ ಅಂಚುಗಳನ್ನು ಎಚ್. ಫಿಲಿಪ್ಪಿನಾದ ಲಾರ್ವಾಗಳು ತಿನ್ನುತ್ತವೆ. ಸಸ್ಯಕ ಹಂತದ ಅವಧಿಯಲ್ಲಿ ಎಲೆಗಳು ನಿಧಾನವಾಗಿ ತೆರೆಯುವುದರಿಂದ, ಅವುಗಳ ಒಳಗಿನ ಅಂಚಿನಲ್ಲಿ, ಹಳದಿ ಕಲೆಗಳು ಅಥವಾ ಗೆರೆಗಳ ರೂಪದಲ್ಲಿ ಮತ್ತು ಸಣ್ಣ ತೂತುಗಳ ರೂಪದಲ್ಲಿ ತಿಂದು ಬಿಟ್ಟಿರುವ ಹಾನಿಗಳು ಕಂಡುಬರುತ್ತವೆ. ಹಾನಿಗೊಳಗಾದ ಎಲೆಗಳು ವಿರೂಪಗೊಂಳ್ಳುತ್ತವೆ ಮತ್ತು ಗಾಳಿಯಿಂದ ಮುರಿದು ಬೀಳಬಹುದು. ಮರಿಹುಳುಗಳು ತುದಿಯಲ್ಲಿರುವ ಎಲೆಗಳಿಗೂ ಸಹ ಹಾನಿಯನ್ನು ಉಂಟುಮಾಡಬಹುದು, ಇದರಲ್ಲಿ ಎಲೆಗಳ ಮೇಲೆ ಸಣ್ಣ ತೂತುಗಳು ಮತ್ತು ಬಣ್ಣ ರಹಿತ ಅಂಚುಗಳು ಕಂಡುಬರುತ್ತವೆ. ಅವು ಬೆಳೆಯುತ್ತಿರುವ ಹೂಗೊಂಚಲುಗಳನ್ನು ತಲುಪಿದರೆ, ಧಾನ್ಯಗಳು ಭಾಗಶಃ ತುಂಬಿರುವುದು ಕಂಡುಬರುತ್ತದೆ. ಸಾಧಾರಣವಾಗಿ, ಭತ್ತದ ಸಸ್ಯಗಳು ಸುರುಳಿ ಹುಳುವಿನಿಂದ ಉಂಟಾಗುವ ಹಾನಿಯನ್ನು ಸರಿದೂಗಿಸಬಲ್ಲವು ಮತ್ತು ಬೆಳೆಯ ಗರಿಷ್ಟ ಟಿಲ್ಲರಿಂಗ್ ಹಂತದಲ್ಲಿ ರೋಗಲಕ್ಷಣಗಳು ಮರೆಯಾಗುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಓಪಿಯಸ್, ಟೆಟ್ರಾಸ್ಟಿಕಸ್ ಮತ್ತು ಟ್ರೈಕೊಗ್ರಾಮ ಜಾತಿಯ ಸಣ್ಣ ಕಣಜಗಳು ಮೊಟ್ಟೆಗಳನ್ನು ಮತ್ತು ಮರಿಹುಳುಗಳನ್ನು ಪರಾವಲಂಬಿಯಾಗಿಸುತ್ತವೆ. ಮೊಟ್ಟೆಗಳ ಮೇಲೆ ಬೇಟೆಯಾಡುವ ಪರಭಕ್ಷಕಗಳೆಂದರೆ ಡೊಲಿಕೋಪಸ್, ಮೆಡೆಟೆರಾ ಮತ್ತು ಸಿಂಥಾರ್ಮನ್ಗಳ ಜಾತಿಗಳು. ಒಕೆಥೆರಾ ಬ್ರೀವಿಟಿಬಿಯಾಲಿಸ್, ಲಿಕೋಸಾ ಸ್ಯುಡೊಎನ್ಯುಲಾಟಾ ಮತ್ತು ನಿಯೋಸ್ಕಾನಾ ಥಿಸಿ ಜಾತಿಗಳ ಎಫಿಡ್ರಿಡ್ ನೊಣಗಳು ಮತ್ತ ಆಕ್ಸಿಪಸ್ ಜಾವನಸ್ ಜಾತಿಯ ಜೇಡಗಳು, ಪ್ರೌಢ ಕೀಟಗಳನ್ನು ತಿನ್ನುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ಒಟ್ಟಾಗಿ ತಡೆಗಟ್ಟುವ ಕ್ರಮಗಳ ಸಮಗ್ರ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಸಾಮಾನ್ಯವಾಗಿ, ಎಚ್. ಫಿಲ್ಲಿಪಿನಾದ ರೋಗಲಕ್ಷಣಗಳು ಬೆಳೆಯ ಟಿಲ್ಲರಿಂಗ್ ನ ಗರಿಷ್ಟ ಹಂತದ ಸಮಯದಲ್ಲಿ ಮರೆಯಾಗುತ್ತವೆ ಮತ್ತು ಕೀಟನಾಶಕ ನಿಯಂತ್ರಣವನ್ನು ಶಿಫಾರಸು ಮಾಡುವುದಿಲ್ಲ. ತೀವ್ರವಾದ ದಾಳಿಯಾದ ಸಂದರ್ಭಗಳಲ್ಲಿ, ಏಕ-ಬೇರು ವಲಯ ನಿಯೋಜನೆಯೊಂದಿಗೆ ಕೀಟನಾಶಕಗಳ ಕಣಗಳನ್ನು ಕಲ್ಲಿದ್ದಲು ಟಾರ್ ಅಥವಾ ನೀಮ್ ತೈಲದೊಂದಿಗೆ ಸೀರಿಸಿ ಬಳಸುವುದರಿಂದ ಅದು ಪರಿಣಾಮಕಾರಿ ನಿಯಂತ್ರಣವನ್ನು ಒದಗಿಸುತ್ತದೆ, ವಿಶೇಷವಾಗಿ ರಾಬಿ ಋತುವಿನಲ್ಲಿ ಅಥವಾ ತಡವಾಗಿ ನೆಟ್ಟ ಸನ್ನಿವೇಶಗಳಲ್ಲಿ.

ಅದಕ್ಕೆ ಏನು ಕಾರಣ

ಅರೆ-ಜಲವಾಸಿ ಸುರುಳಿ ಹುಳುವಾದ, ಹೈಡ್ರೆಲಿಯಾ ಫಿಲಿಪ್ಪಿನಾದ ಲಾರ್ವಾಗಳಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಎಲೆ ಸುರಂಗ ಕೀಟದ ಜಾತಿಯದ್ದಾಗಿದ್ದು, ಇದರಲ್ಲಿ ವ್ಯತ್ಯಾಸವೇನೆಂದರೆ ಇದು ಇತರ ಎಲೆಗಳಿಗೂ ಹೋಗುವುದಕ್ಕೂ ಮುನ್ನ ತೆರೆದಿರುವ ಎಲೆಗಳನ್ನು ಕೊರೆಯುತ್ತದೆ, ಈ ರೀತಿಯಲ್ಲಿ ಎಲೆಯ ಮೇಲೆ ಕೊಳೆತ ಗಾಯಗಳ ವಿಶಿಷ್ಟ ಮಾದರಿಯನ್ನು ರಚಿಸುತ್ತದೆ. ನೀರಾವರಿ ಮಾಡುವ ಹೊಲಗಳು, ಕೊಳಗಳು, ತೊರೆಗಳು ಮತ್ತು ಸರೋವರಗಳು ಅಥವಾ ಹೇರಳವಾದ ಶಾಂತ ನೀರು ಮತ್ತು ಸೊಂಪಾದ ಸಸ್ಯವರ್ಗವಿರುವ ಸ್ಥಳಗಳಲ್ಲಿ ಇದು ಸಾಮಾನ್ಯವಾಗಿರುತ್ತದೆ. ವರ್ಷಪೂರ್ತಿ ಭತ್ತದ ಕೃಷಿ, ಮತ್ತು ಎಳೆ ಸಸಿಗಳನ್ನು ನಾಟಿ ಮಾಡುವುದೂ ಕೂಡ ಅದರ ಅಭಿವೃದ್ಧಿಗೆ ಅನುಕೂಲಕರವಾಗಿರುತ್ತದೆ. ಆದಾಗ್ಯೂ, ಇದು ನೇರವಾಗಿ-ಬೀಜ ಬಿತ್ತನೆ ಮಾಡಿದ ಹೊಲಗಳು, ಸಸಿಮಡಿಗಳು ಅಥವಾ ಬರಿದಾದ ಹೊಲಗಳಲ್ಲಿ ಬೆಳೆಯುವುದಿಲ್ಲ. ಪೂರ್ಣವಾಗಿ ಬೆಳೆದ ಮ್ಯಾಗಟ್‌ಗಳು ಆಹಾರದ ಕಾಂಡದ ಹೊರಗೆ ಪ್ಯೂಪೇಟ್ ಆಗುತ್ತವೆ. ಪ್ರಾಥಮಿಕ ಆತಿಥೇಯ ಅಕ್ಕಿ ಆದರೆ ಇದು ಬ್ರಾಚಿಯೇರಿಯಾ ಜಾತಿ., ಸೈನೋಡಾನ್ ಜಾತಿ., ಎಕಿನೋಕ್ಲೋವಾ ಜಾತಿ., ಲೀರ್ಸಿಯಾ ಜಾತಿ., ಪ್ಯಾನಿಕಮ್ ಜಾತಿ., ಮತ್ತು ಕಾಡು ಅಕ್ಕಿ ಮುಂತಾದ ಹುಲ್ಲುಗಳ ಮೇಲೆ ಸಂತಾನೋತ್ಪತ್ತಿ ಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಆರಿಸಿ.
  • ಪ್ರೌಢ ಕೀಟಗಳನ್ನು ಬೀಜಗಳು ಆಕರ್ಷಿಸುವುದಿಲ್ಲವಾದ ಕಾರಣ, ಗದ್ದೆಗಳಲ್ಲಿ ನೇರವಾಗಿ ಬಿತ್ತನೆ ಮಾಡಿ ಅಥವಾ ಸಸಿಮಡಿಗಳನ್ನು ಬಳಸಿ.
  • ಸಾರಜನಕ ಸಂಯುಕ್ತಗಳೊಂದಿಗೆ ಅತಿಯಾಗಿ ಫಲವತ್ತಾಗಿಸಬೇಡಿ.
  • ನೀರಿನ ಅಂಶವನ್ನು ವೇಗವಾಗಿ ಹೀರಿಕೊಳ್ಳುವ ವ್ಯವಸ್ಥೆಯನ್ನು ಸಸ್ಯಗಳಿಗೆ ನೀಡುವಂತಹ ಬೆಳೆ-ಸ್ಥಾಪನೆ ವಿಧಾನಗಳನ್ನು ಬಳಸಿ, ಇದರಿಂದ ಭತ್ತಕ್ಕೆ ಕೀಟಗಳ ಬಾಧೆ ಕಡಿಮೆಯಾಗುತ್ತದೆ.
  • ಅಜೊಲ್ಲಾ ಮತ್ತು ಸಾಲ್ವಿನಿಯ ಮೊಲೆಸ್ತಾದೊಂದಿಗೆ ನೀರಿನ ಮೇಲ್ಭಾಗವನ್ನು ಮುಚ್ಚುವುದರಿಂದ ಸೋಂಕಾಗುವುದನ್ನು ತಡೆಗಟ್ಟಲು ಅದು ಸಹಾಯ ಮಾಡುತ್ತದೆ.
  • ಕಸಿ ಮಾಡಿದ ನಂತರ ಮೊದಲ 30 ದಿನಗಳಲ್ಲಿ ನಿಯಮಿತ ಮಧ್ಯಂತರಗಳಲ್ಲಿ ನೀರನ್ನು ಹರಿದುಬಿಡಿ.
  • ವಿಶಾಲ-ರೋಹಿತ ಕೀಟನಾಶಕಗಳ ದುರುಪಯೋಗವನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ