ಮರಗೆಣಸು

ಮರಗೆಣಸು ಪೊರೆ

Aonidomytilus albus

ಕೀಟ

ಸಂಕ್ಷಿಪ್ತವಾಗಿ

  • ಕಾಂಡಗಳು, ಚಿಗುರುಗಳು ಮತ್ತು ಕೆಲವೊಮ್ಮೆ ಎಲೆಗಳ ಭಾಗಗಳ ಮೇಲೆ ರೋಗದ ಪರಿಣಾಮಗಳು ಕಾಣಿಸಿಕೊಳ್ಳುತ್ತದೆ.
  • ಇವು ಬಿಳಿ ಮರಿಕೀಟಗಳು ಮತ್ತು ಸ್ರಾವಗಳಿಂದ ಲೇಪಿತವಾಗಿರುತ್ತವೆ.
  • ಕಾಂಡಗಳು ಒಣಗಿ ಗಾಳಿಗೆ ಮುರಿಯುತ್ತವೆ.
  • ಪೊದೆಯಂತಹ ನೋಟ.
  • ಅಂಡಾಕಾರದ, ಬೆಳ್ಳಿ-ಬಿಳಿ ಬಣ್ಣದ ಲೇಪನ ಹೊಂದಿರುವ ಪಟ್ಟೆಗಳ ತರಹದ ಪೊರೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಮರಗೆಣಸು

ಮರಗೆಣಸು

ರೋಗಲಕ್ಷಣಗಳು

ಮರಿಕೀಟಗಳು ಕಾಂಡದ ಸುತ್ತಲೂ ರಸವನ್ನು ಹೀರಲು ಕೂಡಿ ಸೇರುತ್ತವೆ. ಅಂತಿಮವಾಗಿ ಕಾಂಡವವನ್ನು ಎದ್ದುಕಾಣುವ ಬಿಳಿ ಸ್ರಾವಗಳಿಂದ "ಲೇಪನ" ಮಾಡುತ್ತವೆ. ಅಡ್ಡ ಚಿಗುರುಗಳು, ಎಲೆ ತೊಟ್ಟುಗಳು ಮತ್ತು ಎಲೆಯ ಕೆಳಭಾಗವು ಸಾಂದರ್ಭಿಕವಾಗಿ ಸೋಂಕಿಗೆ ಒಳಗಾಗಬಹುದು. ಎಲೆಗಳು ಕಳೆಗುಂದುತ್ತವೆ, ಒಣಗುತ್ತವೆ ಮತ್ತು ಉದುರುತ್ತವೆ. ಆದರೆ ತೀವ್ರವಾಗಿ ದಾಳಿಗೊಳಗಾದ ಸಸ್ಯಗಳು ಕುಂಠಿತಗೊಳ್ಳುತ್ತವೆ. ನಾಟಿ ಮಾಡುವಾಗಲೇ ಸೋಂಕಿಗೊಳಗಾದ ಕಟ್ಟಿಂಗ್ ಸುತ್ತಲಿನ ಜಾಗಗಳು ಹೊಲದಲ್ಲಿ ಒಂದು ತೇಪೆಯಂತೆ ಕಾಣಿಸಿಕೊಳ್ಳಬಹುದು. ಮರಿಕೀಟಗಳು ಅತಿಯಾಗಿ ತಿನ್ನುವುದರಿಂದ ಕಾಂಡಗಳು ಒಣಗಲು ಮತ್ತು ದುರ್ಬಲಗೊಳ್ಳಲು ಕಾರಣವಾಗುತ್ತದೆ. ಹೆಚ್ಚಾಗಿ ಗಾಳಿಗೆ ಮುರಿದು ಬೀಳತ್ತವೆ. ಸಸ್ಯವು ಕಾಂಡಗಳು ಮುರಿಯುವುದನ್ನು ಸರಿದೂಗಿಸಲು ಹೊಸ ಚಿಗುರುಗಳನ್ನು ಉತ್ಪಾದಿಸುತ್ತದೆ. ಇದು ಹೆಚ್ಚಿನ ಶಾಖೆಗಳುನ್ನುಂಟು ಮಾಡುವುದರಿಂದ ಸೋಂಕಿತ ಸಸ್ಯಗಳು ಪೊದೆಯಂತೆ ಕಾಣುತ್ತವೆ. ಆ ಗಿಡಗಳಲ್ಲಿ ಬೇರಿನ ಬೆಳವಣಿಗೆ ಕಳಪೆಯಾಗಿರುತ್ತದೆ ಮತ್ತು ಗೆಡ್ಡೆಗಳು ತಿನ್ನಲಾಗದಂತಾಗುತ್ತವೆ. ಈ ಹಿಂದೆ ಕೀಟಗಳ ದಾಳಿ ಮತ್ತು ಬರದಿಂದ ದುರ್ಬಲಗೊಂಡ ಸಸ್ಯಗಳ ಮೇಲೆ ರೋಗಲಕ್ಷಣಗಳು ಇನ್ನೂ ಕೆಟ್ಟದಾಗಿರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕತ್ತರಿಸಿದ ಗಿಡಗಳನ್ನು ನಾಟಿ ಮಾಡಲು ಬಳಸುವ ಮೊದಲು ಮರಗೆಣಸು ಬೇರುಗಳಿಂದ ಮಾಡಿದ ದ್ರವ ಸಾರದಲ್ಲಿ 60 ನಿಮಿಷಗಳ ಕಾಲ ಮುಳುಗಿಸುವುದು ಎ. ಅಲ್ಬಸ್ ಅನ್ನು ಕೊಲ್ಲುತ್ತದೆ. ಬಿಸಿ ನೀರಿನಲ್ಲಿ ಮುಳುಗಿಸುವುದನ್ನೂ ಸಹ ಮಾಡಬಹುದು ಆದರೆ ಇದು ಕಡಿಮೆ ಪರಿಣಾಮಕಾರಿಯಾಗಿರುತ್ತದೆ. ಕಾಂಡಗಳ ಲಂಬವಾದ ಶೇಖರಣೆಯು ಸೋಂಕನ್ನು ಕಡಿಮೆ ಮಾಡುತ್ತದೆ ಎಂದು ಸಹ ಗಮನಿಸಲಾಗಿದೆ. ಕೆಲವು ಕೋಸಿನೆಲ್ಲಿಡ್ ಪರಭಕ್ಷಕಗಳು, ಉದಾಹರಣೆಗೆ ಚಿಲೋಕೋರಸ್ ನಿಗ್ರೈಟಸ್ ಕೂಡ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಸಾವಯವ ಗೊಬ್ಬರಗಳ ಬಳಕೆ ಅಥವಾ ಸಾವಯವ ಪದಾರ್ಥಗಳ ಸೇರ್ಪಡೆಯ ಮೂಲಕ ಮಣ್ಣಿನ ಫಲವತ್ತತೆಯ ಸುಧಾರಣೆಯು ಸಹ ಸಹಾಯ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಯಾವಾಗಲೂ ಜೈವಿಕ ಚಿಕಿತ್ಸೆಗಳೊಂದಿಗೆ ಮುಂಜಾಗ್ರತಾ ಕ್ರಮಗಳಿರುವ ಸಮಗ್ರ ವಿಧಾನವನ್ನು ಪರಿಗಣಿಸಿ. ಮುಂಜಾಗ್ರತಾ ಕ್ರಮವಾಗಿ, ಕಾಂಡಗಳ ಮೇಲೆ 5 ನಿಮಿಷಗಳ ಕಾಲ ಡಿಮಿಥೋಯೇಟ್, ಡೈಯಾಜಿನ್, ಮೀಥೈಲ್ ಡಿಮೆಟನ್ ಅಥವಾ ಮಲಾಥಿಯಾನ್ (ಸೂತ್ರೀಕರಣಗಳನ್ನು ಅವಲಂಬಿಸಿ 0.01 ರಿಂದ 0.05% ರವರೆಗೆ) ದ್ರಾವಣವನ್ನು ಸಿಂಪಡಿಸುವ ಅಥವಾ ಅವುಗಳಲ್ಲಿ ಮುಳುಗಿಸುವ ಮೂಲಕ ಸೋಂಕನ್ನು ತಡೆಗಟ್ಟಬಹುದು. ಕಟಿಂಗ್ ಗಳನ್ನು ಮಲಾಥಿಯಾನ್, ಡೈಯಾಜಿನಿನ್ ಅಥವಾ ಡೈಮಿಥೋಯೇಟ್ ಹೊಂದಿರುವ ದ್ರವಗಳಲ್ಲಿ ನೆನೆಸುವುದು ಸಹ ಮರಗೆಣಸು ಸೋಂಕನ್ನು ತಪ್ಪಿಸುತ್ತದೆ.

ಅದಕ್ಕೆ ಏನು ಕಾರಣ

ಓನಿಡೋಮಿಟಿಲಸ್ ಅಲ್ಬಸ್ ಎಂಬ ಪೊರೆ ಕೀಟದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಸಸ್ಯಗಳನ್ನು ತಿನ್ನುತ್ತಾ ಬದುಕುತ್ತವೆ ಮತ್ತು ಗಾಳಿ ಅಥವಾ ಪ್ರಾಣಿ/ಮಾನವ ಸಂಪರ್ಕದಿಂದ ಹರಡುತ್ತವೆ. ಮರು ನೆಡುವಿಕೆಗೆ ಕತ್ತರಿಸಿದಂತಹ ಸೋಂಕಿತ ಸಸ್ಯ ಸಾಮಗ್ರಿಗಳ ಸಾಗಣೆಯು ಸಹ ರೋಗವನ್ನು ದೂರದವರೆಗೆ ಹರಡುತ್ತದೆ. ಹೆಣ್ಣುಗಳು ಸಸ್ಯಗಳನ್ನು ತಿನ್ನುತ್ತವೆ ಮತ್ತು ಮೊಗ್ಗು ಪೊರೆಗಳ ಕೆಳಗೆ ಮೊಟ್ಟೆಗಳನ್ನು ಇಡುತ್ತವೆ. ಎಳೆಯ ಮರಿಕೀಟಗಳು ಕೆಲವು ದಿನಗಳ ನಂತರ ಹೊರಬಂದು ಇತರ ಸಸ್ಯ ಭಾಗಗಳಿಗೆ ತೆವಳುತ್ತವೆ. ಅಲ್ಲಿ ಅವು ನಡೆಯುವುದನ್ನು ನಿಲ್ಲಿಸಿ ನೆಲೆಯಾಗುತ್ತವೆ. ಅವು ಕಾಂಡದ ರಸವನ್ನು ಅತಿಯಾಗಿ ತಿನ್ನುತ್ತವೆ ಮತ್ತು ಅದನ್ನು ನಿರ್ಜಲೀಕರಣಗೊಳಿಸುತ್ತವೆ. ಪ್ರೌಢ ಕೀಟಗಳು ಬಿಳಿ ಮೇಣದ ಸ್ರವಿಸುವಿಕೆಯನ್ನು ಉತ್ಪಾದಿಸುತ್ತವೆ ಮತ್ತು ಬೆಳ್ಳಿ-ಬಿಳಿ ಬಣ್ಣದ ಲೇಪನದೊಂದಿಗೆ ಅಂಡಾಕಾರದ ಮತ್ತು ಪಟ್ಟಿ ತರಹದ ಪೊರೆ ಪದರವಾಗಿ ಬೆಳೆಯುತ್ತವೆ. ಗಂಡು ಕೀಟವು ರೆಕ್ಕೆಯುಳ್ಳದ್ದಾಗಿದ್ದು ಕಡಿಮೆ ದೂರದವರೆಗೆ ಹಾರಬಲ್ಲದು. ಆದರೆ ಹೆಣ್ಣು ಕೀಟ ರೆಕ್ಕೆಯಿಲ್ಲದವು ಮತ್ತು ಜಡವಾಗಿರುತ್ತವೆ. ಭಾರೀ ಮಳೆ ಮತ್ತು ಹೆಚ್ಚಿನ ಗಾಳಿಯು ಸಸ್ಯಗಳಿಂದ ರೋಗಕಾರಕವನ್ನು ತೆಗೆದುಹಾಕಬಹುದು. ಇದಕ್ಕೆ ತದ್ವಿರುದ್ಧವಾಗಿ, ದೀರ್ಘಕಾಲದ ಒಣ ಪರಿಸ್ಥಿತಿಗಳು ಸಸ್ಯಗಳನ್ನು ಕೀಟಕ್ಕೆ ಹೆಚ್ಚು ಸೂಕ್ಷ್ಮವಾಗುವಂತೆ ಮಾಡುತ್ತದೆ ಮತ್ತು ಅದರ ಹರಡುವಿಕೆಗೆ ಅನುಕೂಲವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಸಾಧ್ಯವಾದರೆ ನಾಟಿ ಮಾಡಲು ಪ್ರಮಾಣೀಕರಿಸಿದ ಮೂಲಗಳಿಂದ ಪೊರೆ- ಮುಕ್ತ ಕಟ್ಟಿಂಗ್ ಗಳನ್ನು ಮಾತ್ರ ಬಳಸಿ.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ (ಕೆಲವು ಜಾತಿಗಳು ಅಸ್ತಿತ್ವದಲ್ಲಿವೆ) ರೋಗ ನಿರೋಧಕ ಪ್ರಭೇದಗಳನ್ನು ಬಳಸಿ.
  • ಆರೋಗ್ಯಕರ ಕಾಂಡಗಳನ್ನು ಸುಲಭವಾಗಿ ಗಾಳಿಯಾಡುವಂತೆ ಮತ್ತು ಬೆಳಕು ಸಮವಾಗಿ ಹರಡುವಂತೆ ನೆರಳಿನ ಕೆಳಗೆ ಲಂಬವಾಗಿ ನೆಡಬೇಕು.
  • ಸಸ್ಯಗಳ ನಡುವೆ ಸಾಕಷ್ಟು ಅಂತರ ಬಿಡುವುದರಿಂದ ಮರಗೆಣಸು ಪೊರೆ ರೋಗ ಏಕಾಏಕಿ ಹೆಚ್ಚಾಗುವ ಅಪಾಯ ಕಡಿಮೆಯಾಗುತ್ತದೆ.
  • ಹೊಲವನ್ನು ಮೇಲ್ವಿಚಾರಣೆ ಮಾಡಿ ಮತ್ತು ಸೋಂಕಿತ ಕಾಂಡಗಳನ್ನು ನಾಶಮಾಡಿ.
  • ಮುತ್ತಿಕೊಳ್ಳುವಿಕೆಯನ್ನು ತಡೆಗಟ್ಟಲು ಬೆಳೆ ಸರದಿ ಯೋಜನೆ ಮಾಡಿ.
  • ಮರು ನಾಟಿ ಮಾಡುವ ಮೊದಲು ಕನಿಷ್ಠ ಮೂರು ದಿನಗಳವರೆಗೆ ಹೊಲವನ್ನು ತೆರವುಗೊಳಿಸಿ.
  • ರೋಗದ ಲಕ್ಷಣಗಳಿಗಾಗಿ ರಫ್ತು ಮಾಡಿದ ಮತ್ತು ಆಮದು ಮಾಡಿದ ಮರಗೆಣಸಿನ ತುಂಡುಗಳನ್ನು ಪರೀಕ್ಷಿಸಿ.
  • ಸೋಂಕಿತ ಮರಗೆಣಸಿನ ವಸ್ತುಗಳನ್ನು ಸಾಗಿಸಬೇಡಿ.
  • ಆದರೆ ಅವುಗಳನ್ನು ತಕ್ಷಣವೇ ಸುಟ್ಟು ಅಥವಾ ಆಳವಾಗಿ ಹೂಳುವ ಮೂಲಕ ನಾಶಮಾಡಿ.
  • ಕೀಟನಾಶಕಗಳ ಅತಿಯಾದ ಬಳಕೆಯನ್ನು ತಪ್ಪಿಸಿ.
  • ಏಕೆಂದರೆ ಇವು ಪೊರೆ ರೋಗದ ನೈಸರ್ಗಿಕ ಶತ್ರುಗಳನ್ನು ಕೊಲ್ಲಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ