Mononychellus tanajoa
ಹುಳು
ಈ ಹುಳಗಳು ಸಾಮಾನ್ಯವಾಗಿ ಮರಗೆಣಸಿನ ಚಿಗುರೆಲೆಗಳ ಕೆಳಭಾಗದಿಂದ, ಹಸಿರು ಕಾಂಡಗಳು ಮತ್ತು ಅಕ್ಷೀಯ ಮೊಗ್ಗುಗಳನ್ನು ತಿನ್ನುತ್ತವೆ. ಅವು ತಮ್ಮ ಚುಚ್ಚುವ ಮತ್ತು ಹೀರುವ ಬಾಯಿಯ ಭಾಗಗಳನ್ನು ಜೀವಕೋಶಗಳೊಳಗೆ ಸೇರಿಸುತ್ತವೆ ಮತ್ತು ಹಸಿರು ಕ್ಲೋರೊಫಿಲ್ ಸೇರಿದಂತೆ ಎಲ್ಲಾ ಸಾರವನ್ನು ಹೊರತೆಗೆಯುತ್ತವೆ. ಎಲೆಗಳ ಮೇಲೆ, ಅವುಗಳ ತಿನ್ನುವ ಚಟುವಟಿಕೆಯು ಬರಿಗಣ್ಣಿಗೆ ಎಲೆಗಳ ಮೇಲ್ಮೈ ಮೇಲೆ ಸಣ್ಣ ಹಳದಿ ಕಲೆಗಳಂತೆ ಕಾಣುತ್ತದೆ. ಅತಿಯಾದ ಸೋಂಕು ಕಳಪೆ ಬೆಳವಣಿಗೆಯೊಂದಿಗೆ ಕಲೆಯುಳ್ಳ ಎಲೆಗಳನ್ನುಂಟು ಮಾಡುತ್ತದೆ. ಎಲೆಗಳು ತರುವಾಯ ಬಾಡುತ್ತವೆ ಮತ್ತು ಉದುರುತ್ತವೆ. ಕೊನೆಯ ಚಿಗುರುಗಳ ಮೇಲೆ ದಾಳಿಯು ಒಂದು ವಿಶಿಷ್ಟವಾದ 'ಕ್ಯಾಂಡಲ್ ಸ್ಟಿಕ್' ರೋಗಲಕ್ಷಣಕ್ಕೆ ಕಾರಣವಾಗುತ್ತದೆ, ಇದು ನೆಕ್ರೋಟಿಕ್ ಅಂಶವನ್ನು ತರುತ್ತವೆ ಮತ್ತು ಚಿಗುರಿನ ತುದಿಗಳು ಉದುರುತ್ತವೆ. 2-9 ತಿಂಗಳಷ್ಟು ಬೆಳೆದ ಮರಗೆಣಸು ಗಿಡಗಳು ಸೋಂಕಿಗೆ ಅತಿಹೆಚ್ಚು ಸೂಕ್ಷ್ಮವಾಗಿರುತ್ತವೆ. ತೀವ್ರವಾದ ಮಿಟೆ ದಾಳಿಯು ಗೆಣಸಿನ ಇಳುವರಿಯಲ್ಲಿ 20-80 % ನಷ್ಟಕ್ಕೆ ಕಾರಣವಾಗಬಹುದು. ಮೇಲಾಗಿ, ಮರಗೆಣಸಿನ ಕಾಂಡಗಳ ಗುಣಮಟ್ಟವೂ ಹಾಳಾಗುತ್ತದೆ. ಇದರ ಪರಿಣಾಮವಾಗಿ ಬೆಳೆಯ ಮುಂದುವರಿಕೆಗೆ ನಾಟಿ ವಸ್ತುಗಳ ಕೊರತೆಯುಂಟಾಗುತ್ತದೆ.
ಹಲವಾರು ಪರಭಕ್ಷಕ ಪ್ರಭೇದಗಳು ಮಿಟೆ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ಕಡಿಮೆಮಾಡುತ್ತವೆ ಎಂದು ವರದಿಯಾಗಿದೆ. ಆಂಬ್ಲಿಸಿಯಸ್ ಲಿಮೋನಿಕಸ್ ಮತ್ತು ಎ. ಐಡಿಯಸ್ ಗಳನ್ನು ಬಿಡುವುದರಿಂದ ಹಸಿರು ಜೇಡ ಮಿಟೆಗಳ ಆಕ್ರಮಣವನ್ನು 50% ಕಡಿಮೆ ಮಾಡಬಹುದು. ಪರಭಕ್ಷಕ ಮಿಟೆಗಳಾದ ಟೈಫ್ಲೋಡ್ರೊಮಲಸ್ ಅರಿಪೋ ಮತ್ತು ಟಿ. ಮಣಿಹೋಟಿಗಳನ್ನು ಆಫ್ರಿಕಾದ ಹಲವಾರು ದೇಶಗಳಲ್ಲಿ ಬಳಸಲಾಗಿದೆ. ಇವು ಮರಗೆಣಸಿನ ಹಸಿರು ಜೇಡ ಮಿಟೆಗಳ ಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸುತ್ತವೆ. ನಿಯೋಜೈಗೈಟ್ಸ್ ಕುಲದ ಪರಾವಲಂಬಿ ಶಿಲೀಂಧ್ರಗಳು ಹಲವಾರು ದೇಶಗಳಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸಿವೆ. ಇವು ಮರಗೆಣಸಿನ ಹಸಿರು ಜೇಡ ಮಿಟೆಗಳಲ್ಲಿ ಸಾವಿಗೆ ಕಾರಣವಾಗಿವೆ. ಬೇವಿನ ಎಣ್ಣೆಯ ಸಂಯುಕ್ತಗಳನ್ನು ಹೊಂದಿರುವ ಸ್ಪ್ರೇಗಳು ಸಹ ತೃಪ್ತಿಕರ ಫಲಿತಾಂಶಗಳನ್ನು ನೀಡುತ್ತವೆ.
ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ಮುಂಜಾಗ್ರತಾ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮೊನೊನಿಚೆಲಸ್ ಟಾನಜೋವಾಕ್ಕೆ ರಾಸಾಯನಿಕ ನಿಯಂತ್ರಣವನ್ನು ಶಿಫಾರಸು ಮಾಡಲಾಗುವುದಿಲ್ಲ. ಏಕೆಂದರೆ ಇದು ಪ್ರತಿರೋಧ ಮತ್ತು ಮರು ರೋಗದ ಏಕಾಏಕಿ ಬೆಳವಣಿಗೆಗೆ ಕಾರಣವಾಗಬಹುದು. ಅಕಾಮೈಡ್ ಅಬಾಮೆಕ್ಟಿನ್ ಮಾತ್ರ ಕೀಟ ನಿಯಂತ್ರಣಕ್ಕೆ ಪರಿಣಾಮಕಾರಿ ಎಂದು ಕಂಡುಬಂದಿದೆ.
ರೋಗಲಕ್ಷಣಗಳು ಹಸಿರು ಜೇಡ ಹುಳಗಳಾದ ಮೊನೊನಿಚೆಲಸ್ ಟಾನಜೋವಾ ಮತ್ತು ಮೊನೊನಿಚೆಲಸ್ ಪ್ರೊಗ್ರೆಸಿವಸ್ ಗಳ ತಿನ್ನುವ ಚಟುವಟಿಕೆಯಿಂದ ಉಂಟಾಗುತ್ತವೆ. ಅವು ಚಿಗುರೆಲೆಗಳ ಕೆಳಭಾಗದಲ್ಲಿ ತಮ್ಮ ಚುಚ್ಚುವ ಮತ್ತು ಹೀರುವ ಬಾಯಿಯ ಭಾಗಗಳನ್ನು ಜೀವಕೋಶಗಳಲ್ಲಿ ಸೇರಿಸುವ ಮೂಲಕ ಮತ್ತು ಕೋಶದ ಸಾರಗಳನ್ನು ಹೊರತೆಗೆಯುವ ಮೂಲಕ ತಿನ್ನುತ್ತವೆ. ಅವುಗಳನ್ನು ಮರಗೆಣಸಿನ ಗಂಭೀರವಲ್ಲದ ಕೀಟಗಳೆಂದು ಪರಿಗಣಿಸಲಾಗುತ್ತದೆ ಆದರೆ ಅನುಕೂಲಕರ ಪರಿಸ್ಥಿತಿಗಳಲ್ಲಿ, ಉದಾಹರಣೆಗೆ ಒಣ ಕಾಲದಲ್ಲಿ, ಅವು ಗಮನಾರ್ಹ ಹಾನಿ ಉಂಟುಮಾಡಬಹುದು. ಮಿಟೆ ಒಂದು ಸಸ್ಯದಿಂದ ಇನ್ನೊಂದಕ್ಕೆ ಸಕ್ರಿಯವಾಗಿ ಚಲಿಸಬಹುದು. ಜೊತೆಗೆ, ಗಾಳಿ ಮತ್ತು ನೀರಿನ ಎರಚಲುಗಳಿಂದಲೂ ಸಹ ಹರಡಬಹುದು. ಕಟಿಂಗ್ ಗಳ ಮೇಲೆ ಅವು 60 ದಿನಗಳವರೆಗೆ ಬದುಕಬಲ್ಲವಾದ್ದರಿಂದ, ಹುಳಗಳ ಮುಖ್ಯ ವಾಹಕ ಹೆಚ್ಚಾಗಿ ರೈತರೇ ಆಗಿರುತ್ತಾರೆ. ಅವರು ಹೊಲ ಅಥವಾ ತೋಟಗಳ ನಡುವೆ ಹುಳು ಮುತ್ತಿಕೊಂಡಿರುವ ಸಸ್ಯ ವಸ್ತುಗಳನ್ನು ಸಾಗಿಸುತ್ತಾರೆ. ಕಿರಿಯ ಮಿಟೆಗಳು ಹಸಿರು ಬಣ್ಣದಲ್ಲಿರುತ್ತವೆ. ನಂತರ ಬೆಳೆಯುತ್ತಾ ಹೋದಂತೆ ಹಳದಿ ಬಣ್ಣಕ್ಕೆ ತಿರುಗುತ್ತವೆ. ಅವುಗಳ ದೇಹ ವಿವಿಧ ಭಾಗಗಳ ಗಮನಕ್ಕೆ ಬಾರದಂತೆ ಇರುವುದರಿಂದ ಇಡೀ ದೇಹವು ಒಂದೇ ಭಾಗದಂತೆ ಕಾಣಬಹುದು. ಪ್ರೌಢ ಹೆಣ್ಣು ಕೀಟ ಪುರುಷ ಕೀಟಕ್ಕಿಂತ ದೊಡ್ಡದಾಗಿರುತ್ತದೆ ಮತ್ತು 0.8 ಮಿಮೀ ಗಾತ್ರವನ್ನು ತಲುಪಬಲ್ಲವು.