ದಾಳಿಂಬೆ

ದಾಳಿಂಬೆಯ ಸೊರಗು ರೋಗ

Ceratocystis fimbriata

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.
  • ಎಲೆಗಳೆಲ್ಲವೂ ಉದುರಿ ಹೋಗುತ್ತವೆ.
  • ಕಾಂಡವು ಉದ್ದಕ್ಕೆ ಬಿರುಕು ಬಿಡುತ್ತದೆ.
  • ಬೇರುಗಳು, ಕಾಂಡದ ತೊಗಟೆ ಮತ್ತು ಕೆಳಭಾಗದ ರೆಂಬೆಗಳು ಸೀಳಿಕೊಳ್ಳುತ್ತವೆ.
  • ನಾಳೀಯ ಅಂಗಾಂಶದಲ್ಲಿ ಗಾಢ ಊದಾ-ಕಂದು ಬಣ್ಣದ ಎಳೆಗಳು ಕಾಣುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ದಾಳಿಂಬೆ

ರೋಗಲಕ್ಷಣಗಳು

ಮೊದಲಿಗೆ ಒಂದು ಅಥವಾ ಕೆಲವೇ ಕೆಲವು ರೆಂಬೆಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕ್ರಮೇಣ ಇದು ಮರಕ್ಕೆಲ್ಲ ಹರಡುವುದರಿಂದ ಎಲೆಗಳೆಲ್ಲ ಉದುರಿ ಹೋಗುವುದಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಎಲೆಯುದುರುವಿಕೆ ಕೆಳಭಾಗದ ಎಲೆಗಳಿಂದ ಶುರುವಾಗಿ ಮೇಲಕ್ಕೆ ಹಬ್ಬುತ್ತದೆಯಾದರೂ ಕೆಲವು ಗಿಡಗಳಲ್ಲಿ ಎಲ್ಲ ಎಲೆಗಳೂ ಒಮ್ಮೆಗೇ ಉದುರಿ ಹೋಗಬಹುದು. ರೆಂಬೆಗಳು ಉದ್ದಕ್ಕೆ ಬಿರುಕು ಬಿಡುವುದು ಸಾಮಾನ್ಯ. ಬೇರುಗಳು, ಕಾಂಡದ ತೊಗಟೆ ಹಾಗೂ ಕೆಳಭಾಗದ ರೆಂಬೆಗಳಲ್ಲಿ ಸೀಳುಗಳು ಕಾಣಿಸಿಕೊಳ್ಳಬಹುದು. ಈ ಸೀಳುಗಳಲ್ಲಿ, ಅಥವಾ ಗಿಡವನ್ನು ಅಡ್ಡಕ್ಕೆ ಅಥವಾ ಉದ್ದಕ್ಕೆ ಸೀಳಿ ನೋಡಿದರೆ, ಸಾಮಾನ್ಯವಾಗಿ ನಾಳೀಯ ಅಂಗಾಂಶದಲ್ಲಿ ಗಾಢ ಊದಾ-ಕಂದು ಬಣ್ಣದ ಎಳೆಗಳು ಕಾಣಸಿಗುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬ್ಯಾಸಿಲಸ್ ಸಬ್ಟಿಲಸನ್ನು ಮಣ್ಣಿನ ಮೇಲೆ ಬಳಸಿದರೆ ಸೋಂಕು ತಗ್ಗುವುದೆಂದು ಕಂಡು ಬಂದಿದೆ. ದಾಳಿಂಬೆ ಗಿಡಗಳ ಕಾಂಡದ ಸುತ್ತ ಟ್ರೈಕೋಡರ್ಮಾ ಎಸ್‍ಪಿ. ಯನ್ನು, ಪೇಸಿಲೋಮೈಸಿಸ್ ಎಸ್ ಪಿ. 25 ಗ್ರಾಂ ನಂತೆ ಹಾಗೂ 2 ಕೆಜಿ ಚೆನ್ನಾಗಿ ಕೊಳೆತ ಜೈವಿಕ ಗೊಬ್ಬರದ ಜೊತೆಗೆ ಬಳಸಿದರೆ ಸೋಂಕಿನ ಸಂಭವ ಕಡಿಮೆಯಾಗುತ್ತದೆ. ಬೇವು, ಹೊಂಗೆ, ಇಪ್ಪೆ ಮತ್ತು ಹರಳೆಣ್ಣೆಯ ಉಂಡೆಗಳು (ಕೇಕ್) ಈ ಶಿಲೀಂಧ್ರದ ಎದುರು ಪರಿಣಾಮಕಾರಿಯೆಂದು ಕಂಡುಬಂದಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಪ್ರಾಪೈಕೊನಝಾಲ್ (0.1%) + ಬೋರಿಕ್ ಆಸಿಡ್ (0.5%) + ಫಾಸ್ಫಾರಸ್ ಆಸಿಡ್ (0.5%) – ಇವುಗಳಿಂದ ಹೊಲದ ಎಲ್ಲ ಗಿಡಗಳ ಸುತ್ತಲಿನ ಮಣ್ಣನ್ನು ಅಥವಾ ಸೋಂಕಿತ ಗಿಡ ಹಾಗೂ ಅದರ ಸುತ್ತಲಿರುವ ಗಿಡಗಳ ಸುತ್ತಲೂ ಮಣ್ಣನ್ನು ಒದ್ದೆ ಮಾಡುವುದಕ್ಕೆ ಸೂಚಿಸಲಾಗುತ್ತದೆ. ಪುನಃ ಗಿಡ ನೆಡುವ ಮೊದಲು ಶಿಲೀಂಧ್ರನಾಶಕ (0.2%) ದಿಂದ ಮಣ್ಣಿನಲ್ಲಿನ ರೋಗಕಾರಕಗಳನ್ನು ಕಳೆಯುವುದರಿಂದ ಸೋಂಕನ್ನು ನಿಗ್ರಹಿಸಬಹುದು. ಪ್ರಾಪೈಕೊನಝಾಲ್ (0.15%) ಅಥವಾ ಕ್ಲಾರ್ಪೈರಿಫೋಸ್ (0.25%) ನಿಂದ ಕೂಡ ಮಣ್ಣನ್ನು ಒದ್ದೆ ಮಾಡಬಹುದು.

ಅದಕ್ಕೆ ಏನು ಕಾರಣ

ಶಿಲೀಂಧ್ರದ ಬೀಜಕಗಳು ವಿಶ್ರಾಂತ ಸ್ಥಿತಿಯಲ್ಲಿ ಅಥವಾ ಸಕ್ರಿಯ ಮೈಸೀಲಿಯಾದ ರೂಪದಲ್ಲಿ 190 ದಿನಗಳವರೆಗೆ ಸೋಂಕು ತಗುಲಿದ ಗಿಡದ ಭಾಗಗಳಲ್ಲಿ ಬದುಕುತ್ತವೆ, ಅಥವಾ ಮಣ್ಣಿನಲ್ಲಿ ನಾಲ್ಕು ತಿಂಗಳವರೆಗೆ ಬದುಕುತ್ತವೆ. ನೆಲದ ಮೇಲಿನ ಭಾಗಗಳಿಗೆ ಗಾಯಗಳ ಮೂಲಕ ಸೋಂಕು ತಗುಲುತ್ತದೆ. ಬೇರುಗಳಿಗೆ ಮಾತ್ರ ಗಾಯವಾಗದೆ ಕೂಡ ಸೋಂಕು ತಗುಲಬಹುದು. ಬೀಜಕಗಳು ಸೋಂಕು ತಗುಲಿದ ಮೊಳಕೆಗಳ ಮೂಲಕ ಹರಡುತ್ತವೆ. ಅಲ್ಲದೆ ಕೃಷಿ ನೀರು ಮತ್ತು ಕೀಟಗಳ ಮೂಲಕ, ಹಾಗೂ ಹೊಲದ ದೈನಂದಿನ ಕೆಲಸದ ಸಮಯದಲ್ಲೂ ಬೀಜಕಗಳು ಹರಡುತ್ತವೆ. ಆಶ್ರಯದಾತ ಗಿಡವನ್ನು ಪ್ರವೇಶಿಸಿದ ನಂತರ ಮೈಸೀಲಿಯಾ ಮತ್ತು ಬೀಜಕಗಳು ಮರದ ನಾಳೀಯ ಅಂಗಾಂಶದ ಮೂಲಕ ಚಲಿಸುತ್ತವೆ. ಇದರಿಂದ ಕೆಂಪು-ಕಂದು ಅಥವಾ ನೇರಳೆ ಅಥವಾ ಕಪ್ಪಗಿನ ಎಳೆಗಳು ಕ್ಸೈಲಮ್ಮಿನಲ್ಲಿ ಕಂಡುಬರುತ್ತದೆ.


ಮುಂಜಾಗ್ರತಾ ಕ್ರಮಗಳು

  • ರೋಗ ಹರಡುವುದನ್ನು ತಪ್ಪಿಸಲು ಸೋಂಕು ತಗುಲಿದ ಗಿಡದ ಭಾಗಗಳನ್ನೆಲ್ಲ ತೆಗೆದು ಹಾಕಿ ನಾಶ ಮಾಡಬೇಕು.
  • ಗಿಡವನ್ನು ಕತ್ತರಿಸುವ ಮತ್ತು ಕಸಿ ಮಾಡುವ ಉಪಕರಣಗಳನ್ನೆಲ್ಲ ಬಳಕೆಯ ಮೊದಲು ಹಾಗೂ ಬಳಕೆಯ ನಂತರ ಶುದ್ಧೀಕರಿಸಿ ಸೋಂಕು ಮುಕ್ತವಾಗಿಸಬೇಕು.
  • ಸಿ.
  • ಫಿಂಬ್ರಿಯಾಟಾ ಈಗಾಗಲೇ ಇರುವ ಸ್ಥಳಗಳಲ್ಲಿ ಕೃಷಿ ಮಾಡಬೇಡಿ ಹಾಗೂ ಈ ರೋಗಕಾರಕಕ್ಕೆ ಆಶ್ರಯ ಕೊಡದ ಬೆಳೆಗಳೊಂದಿಗೆ ಆವರ್ತಿಸಿ.
  • ಮರಗಳ ನಡುವೆ ಸಾಕಷ್ಟು ಸ್ಥಳ ಇರುವಂತೆ ನೋಡಿಕೊಳ್ಳಿ (ಬೇರಿನೊಂದಿಗೆ ಸಂಪರ್ಕ ತಪ್ಪಿಸಲು, ಶಿಲೀಂಧ್ರ ಅಲ್ಲಿಂದಲೇ ಹರಡುವುದು).
  • ಚರಂಡಿ ವ್ಯವಸ್ಥೆ ಸರಿಯಾಗಿರದಿದ್ದರೆ ಸೋಂಕಿನ ಸಾಧ್ಯತೆ ಹೆಚ್ಚುತ್ತದೆ.
  • ಹೊಲದ ಕೆಲಸದ ಸಮಯದಲ್ಲಿ ಗಿಡಕ್ಕೆ ಗಾಯವಾಗದಂತೆ ಎಚ್ಚರ ವಹಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ