ಬಾಳೆಹಣ್ಣು

ಬಾಳೇಹಣ್ಣಿನ ಮಾತ್ (ಪತಂಗ)

Opogona sacchari

ಕೀಟ

ಸಂಕ್ಷಿಪ್ತವಾಗಿ

  • ಬೇರುಗಳು, ಕಾಂಡಗಳು, ತೊಟ್ಟುಗಳು, ಕಾಂಡಗಳು ಮತ್ತು ಹಣ್ಣುಗಳ ಮೇಲೆ ಆಹಾರ ಹಾನಿಯು ಸುರಂಗಗಳಾಗಿ ಕಾಣಿಸಿಕೊಳ್ಳುತ್ತದೆ.
  • ಸಸ್ಯಗಳು ಸಂಪೂರ್ಣವಾಗಿ ಟೊಳ್ಳಾಗಬಹುದು.
  • ಎಲೆಗಳು ಸೊರಗಿದಂತೆ ಕಂಡುಬರುತ್ತವೆ ಮತ್ತು ಉದುರಿಹೋಗುತ್ತವೆ.
  • ಇದು ಅಕಾಲಿಕ ವಿಪರ್ಣನಕ್ಕೆ ಕಾರಣವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಬಾಳೆಹಣ್ಣು

ರೋಗಲಕ್ಷಣಗಳು

ಸಸ್ಯಕ ಬೆಳವಣಿಗೆಯ ಹಂತದಲ್ಲಿ, ಹೂಬಿಡುವ ಹಂತದಲ್ಲಿ ಮತ್ತು ಕೊಯ್ಲು ಮಾಡಿದ ನಂತರವೂ ಸೋಂಕು ಬರಬಹುದು. ವಿಶಿಷ್ಟವಾಗಿ, ಪ್ರೌಢ ಹುಳುಗಳು ಹಾನಿಗೊಳಗಾದ ಮತ್ತು ಒತ್ತಡದಲ್ಲಿರುವ ಸಸ್ಯಗಳಿಗೆ ಆಕರ್ಷಿತವಾಗುತ್ತವೆ. ಲಾರ್ವಾಗಳಿಂದ ಮಾತ್ರ ಆಹಾರ ಹಾನಿಯುಂಟಾಗುತ್ತದೆ, ಏಕೆಂದರೆ ಅವು ಸಾಮಾನ್ಯವಾಗಿ ಸಸ್ಯದ ಕೊಳೆತ ಭಾಗಗಳನ್ನು ತಿನ್ನುತ್ತವೆ. ಉಳಿಕೆಗಳನ್ನು ತಿಂದ ನಂತರ, ಅವು ಆರೋಗ್ಯಕರ ಸಸ್ಯ ಭಾಗಗಳನ್ನು ತಿನ್ನಲು ಪ್ರಾರಂಭಿಸುತ್ತವೆ (ಬೇರುಗಳು, ಕಾಂಡಗಳು, ಸೂಡೊಸ್ಟೊಮ್ ಗಳು, ತೊಟ್ಟುಗಳು ಮತ್ತು ಹಣ್ಣುಗಳು). ಬೀಜಗಳಿಗೂ ಸಹ ಆಕ್ರಮಣವಾಗಬಹುದು. ಆರಂಭದ ಲಕ್ಷಣಗಳು ಸುರಂಗಗಳಂತೆ ಕಾಣಿಸುತ್ತವೆ, ಆದರೆ ಅವುಗಳನ್ನು ಆರಂಭಿಕ ಹಂತಗಳಲ್ಲಿ ಗುರುತಿಸುವುದು ಬಹಳ ಕಷ್ಟ. ಸಾಮಾನ್ಯವಾಗಿ, ಕೀಟವನ್ನು ನಂತರದ ಹಂತಗಳಲ್ಲಿ ಕಂಡುಹಿಡಿಯಬಹುದು. ದಪ್ಪಗಿರುವ ಸಸ್ಯದ ಭಾಗಗಳು ಸಂಪೂರ್ಣವಾಗಿ ಟೊಳ್ಳಾಗಬಹುದು ಮತ್ತು ಎಲೆಗಳು ಸೊರಗಿದಂತೆ ಕಾಣುತ್ತವೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಇದು ಸಸ್ಯದ ವಿಘಟನೆ ಮತ್ತು ಕುಸಿತಕ್ಕೆ ಕಾರಣವಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಹಸಿರುಮನೆ ಪ್ರಯೋಗಗಳಲ್ಲಿ, ಸ್ಟಿನೆರ್ನೆಮಾ ಫೆಲ್ಟಿಯೇ, ಹೀಟರ್ರೋಹ್ಯಾಬಿಡಿಟಿಸ್ ಬ್ಯಾಕ್ಟೀರೋಫೊರಾ ಮತ್ತು ಹೆಟೆರೋರಾಬಾಡಿಟಿಸ್ ಹೀಲಿಯೊಡಿಡಿಸ್ ನಂತಹ ನೆಮಟೋಡ್ಗಳ ಬಳಕೆಯು ಲಾರ್ವಾಗಳ ವಿರುದ್ಧ ಪರಿಣಾಮಕಾರಿಯಾಗಿದೆ. ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಉತ್ಪನ್ನಗಳನ್ನು ಸಹ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಚಿಕಿತ್ಸೆಗಾಗಿ ನೀವು ಇಮಿಡಾಕ್ಲೋಪ್ರಿಡ್ ಹೊಂದಿರುವ ಉತ್ಪನ್ನಗಳನ್ನು ಬಳಸಬಹುದು.

ಅದಕ್ಕೆ ಏನು ಕಾರಣ

ಆಪೋಗೊನಾ ಸ್ಯಾಚಾರಿ ಜಾತಿಯ ಲಾರ್ವಾಗಳಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಈ ಹುಳುಗಳು ರಾತ್ರಿಯಲ್ಲಿ ಓಡಾಡುತ್ತವೆ. ಅವುಗಳ ದೇಹ ಗಾಢ ಕಂದು ಬಣ್ಣದ್ದಾಗಿದ್ದು, ಸುಮಾರು 11 ಮಿ.ಮೀ ಗಾತ್ರದ್ದಾಗಿರುತ್ತವೆ ಮತ್ತು ಅವುಗಳ ರೆಕ್ಕೆಯ ಅಗಲ 18-25 ಮಿಮೀ ಇರುತ್ತದೆ. ಮುಂದಿನ ರೆಕ್ಕೆಗಳು ಏಕರೂಪದ ಕಂದು ಬಣ್ಣದ್ದಾಗಿರುತ್ತವೆ, ಕೆಲವೊಮ್ಮೆ ಕೆಲವು ಉದ್ದವಾದ ಗಾಢ ಬಣ್ಣದ ಪಟ್ಟೆಗಳಿರುತ್ತವೆ ಮತ್ತು ಗಂಡು ಹುಳುಗಳ ದೇಹದ ಮೇಲೆ ಗಾಢ ಕಂದು ಬಣ್ಣದ ಕಲೆಯಿರುತ್ತದೆ. ಹಿಂಭಾಗದ ರೆಕ್ಕೆಗಳು ಬೂದು ಬಣ್ಣದ್ದಾಗಿರುತ್ತವೆ ಮತ್ತು ಹೊಳೆಯುತ್ತವೆ ಮತ್ತು ಅವುಗಳ ಅಂಚಿನಲ್ಲಿ ಕರೆಯಿರುತ್ತದೆ. ಹೆಣ್ಣು ಹುಳುಗಳು ಸುಮಾರು 50-200 ಮೊಟ್ಟೆಗಳನ್ನು 5 ರ ಗುಂಪಿನಲ್ಲಿ ಸಸ್ಯಗಳ ಅಂಗಾಂಶದ ಗಾಯಗಳು ಮತ್ತು ಬಿರುಕುಗಳಲ್ಲಿ ಇಡುತ್ತವೆ. ಸುಮಾರು 12 ದಿನಗಳ ನಂತರ ಬಿಳಿ ಅಥವಾ ತಿಳಿ ಹಸಿರು ಬಣ್ಣದ, ಸ್ವಲ್ಪ ಪಾರದರ್ಶಕ ಲಾರ್ವಾಗಳು ಹೊರಬರುತ್ತವೆ. ಲಾರ್ವಾಗಳ ತಲೆ ಗಾಢವಾದ ಕೆಂಪು ಅಥವಾ ಕಂದು ಬಣ್ಣದ್ದಾಗಿದ್ದು ಎರಡೂ ಕಡೆಗಳಲ್ಲಿ ಕಣ್ಣಿನಂತಹ ಗುರುತುಗಳಿರುತ್ತವೆ. ಲಾರ್ವಾಗಳು ಸುಮಾರು 50 ದಿನಗಳಲ್ಲಿ ಸುಮಾರು 26 ಮಿಮೀ ಬೆಳೆಯುತ್ತವೆ. ನಂತರ ಅವು ಆಹಾರ ಸುರಂಗಗಳ ಕೊನೆಯಲ್ಲಿ ಪ್ಯೂಪಾ ಆಗುತ್ತವೆ. ಹೆಚ್ಚುವರಿ 20 ದಿನಗಳ ನಂತರ, ಹೊಸ ಪೀಳಿಗೆಯ ಪ್ರೌಢ ಪತಂಗಗಳು ಹೊರಬರುತ್ತವೆ. ತಂಪಾದ ತಾಪಮಾನ (ಸುಮಾರು 15°C) ಮತ್ತು ಒಣ ಹವಾಮಾನ ಇವುಗಳ ಬೆಳವಣಿಗೆಗೆ ಸೂಕ್ತವಾದವು. ಬೆಚ್ಚಗಿನ ಹವಾಮಾನ ಪರಿಸ್ಥಿತಿಗಳಲ್ಲಿ ಈ ಅವಧಿಯು ಕಡಿಮೆಯಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಬೀಜಗಳು ಮತ್ತು ನಾಟಿ ವಸ್ತುಗಳನ್ನು ಬಳಸಿ.
  • ಕೀಟಗಳ ಇರುವಿಕೆಯ ಯಾವುದೇ ಚಿಹ್ನೆಗೆ ನಿಮ್ಮ ಸಸ್ಯಗಳು ಅಥವಾ ಹೊಲಗಳನ್ನು ನಿಯಮಿತವಾಗಿ ಪರಿಶೀಲಿಸಿ.
  • ಸೋಂಕನ್ನು ನಿಗ್ರಹಿಸಲು ಸೋಂಕಿಗೊಳಗಾದ ಸಸ್ಯಗಳನ್ನು ಅಥವಾ ಸಸ್ಯದ ಭಾಗಗಳನ್ನು ಕೈಯಿಂದ ತೆಗೆದುಹಾಕಿ ನಾಶಮಾಡಿ.
  • ಒಣಗಿಹೋದ ಸಸ್ಯ ವಸ್ತುಗಳನ್ನು ತೆಗೆದುಹಾಕಿ ನಾಶಮಾಡಿ ಏಕೆಂದರೆ ಅವು ಸೋಂಕಿಗೆ ಮೂಲ ವಸ್ತುವಾಗಬಹುದು.
  • ಕೃಷಿ ಮಾಡುವ ಸಮಯದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿ ಮತ್ತು ಸಸ್ಯಗಳಿಗೆ ಯಾವುದೇ ಯಾಂತ್ರಿಕ ಗಾಯಗಳನ್ನು ಮಾಡಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ