ಭತ್ತ

ಬಿಯಾಂಫಾಲರಿಯಾ ಬಸವನಹುಳು

Biomphalaria spp.

ಇತರೆ

ಸಂಕ್ಷಿಪ್ತವಾಗಿ

  • ಭತ್ತದ ಸಸ್ಯಗಳಿಗೆ ಇದರಿಂದಾಗುವ ಹಾನಿ ಸಾಮಾನ್ಯವಾಗಿ ಸೀಮಿತವಾಗಿರುತ್ತದೆ.
  • ಇವುಗಳಲ್ಲಿ ಕೆಲವು ಬಸವನಗಳುಗಳು ಪರಾವಲಂಬಿಗಳಿಗೆ ಮಧ್ಯಂತರ ಆಶ್ರಯದಾತವಾಗಿದ್ದು, ಇವು ಮನುಷ್ಯರಿಗೂ ಸೋಂಕು ಉಂಟುಮಾಡಿ, ಸ್ಕಿಸ್ಟೊಸೊಮಿಯಾಸಿಸ್ ಎಂದು ಕರೆಯಲ್ಪಡುವ ರೋಗವನ್ನುಂಟುಮಾಡಬಲ್ಲವು.
  • ಸ್ಥಳೀಯರಿಗೆ ಹಾನಿಯಾಗದಂತೆ ತಡೆಯಲು ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳು ಅವಶ್ಯಕ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಭತ್ತದ ಸಸ್ಯಗಳಿಗೆ ಇದರಿಂದಾಗುವ ಹಾನಿ ಸಾಮಾನ್ಯವಾಗಿ ಸೀಮಿತವಾಗಿರುತ್ತದೆ. ಆದಾಗ್ಯೂ, ಈ ಬಸವನಹುಳುಗಳಲ್ಲಿ ಕೆಲವು, ಉದಾಹರಣೆಗೆ ಬಿ. ಗ್ಲಬ್ರಾಟಾ, ಮನುಷ್ಯರಿಗೂ ಸೋಂಕು ಉಂಟುಮಾಡಬಲ್ಲ ಪರಾವಲಂಬಿ ಜೀವಿಗಳಿಗೆ ಮಧ್ಯಂತರ ಹೋಸ್ಟ್ ಗಳಾಗಿವೆ. ಆದ್ದರಿಂದ ಎಚ್ಚರಿಕೆ ಏನಕ್ಕೆ ಅವಶ್ಯಕವೆಂದರೆ ಈ ಬಸವನಹುಳುವು ಮಾನವರಿಗೆ ವೈದ್ಯಕೀಯವಾಗಿ ಪ್ರಮುಖವಾದ ಕೀಟವಾಗಬಹುದು. ಈ ಪರಾವಲಂಬಿ ಜೀವಿಯು ಸ್ಕಿಸ್ಟೊಸೊಮಿಯಾಸಿಸ್ ಎಂಬ ರೋಗವನ್ನು ಉಂಟುಮಾಡುತ್ತದೆ ಮತ್ತು ಇದು ಪರಾವಲಂಬಿ ಜೀವಿಯನ್ನು ಹೊತ್ತಿರುವ ಬಸವನಹುಳು ವಾಸಿಸುವ ಕಲುಷಿತ ಸಿಹಿನೀರಿನ ಮೂಲಕ ಮಾನವ ಸಂಪರ್ಕದಿಂದ ಹರಡುತ್ತದೆ (ಸರೋವರಗಳು, ಕೊಳಗಳು, ನದಿಗಳು, ಅಣೆಕಟ್ಟುಗಳು, ಜೌಗು ಪ್ರದೇಶಗಳು ಮತ್ತು ಭತ್ತದ ಗದ್ದೆಗಳು). ಇದು ಮುಖ್ಯವಾಗಿ ಹರಡುವುದು ನೀರಾವರಿ ಕಾಲುವೆಗಳು, ಹೊಳೆಗಳು, ಮೋರಿಗಳು ಮತ್ತು ಪ್ರವಾಹದಿಂದ. ಆದಾಗ್ಯೂ, ಚಿಲುಮೆ ಮತ್ತು ಬಾವಿಗಳಲ್ಲಿರುವ ನೀರಿನ ವಿಶೇಷ ರಸಾಯನಿಕದಿಂದಾಗಿ, ಇವುಗಳಲ್ಲಿ ಈ ಬಸವನಹುಳುಗಳು ಸಾಮಾನ್ಯವಾಗಿ ಕಂಡುಬರುವುದಿಲ್ಲ. ಸ್ಥಳೀಯರಿಗೆ ಹಾನಿಯಾಗದಂತೆ ತಡೆಯಲು ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳು ಅವಶ್ಯಕ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕೊಳಗಳಲ್ಲಿ ಮೀನುಗಳನ್ನು ಸಾಕುವುದು, ಉದಾಹರಣೆಗೆ ಟಿಲಾಪಿಯಾ ಅಥವಾ ಗುಪ್ಪಿ ಜಾತಿಗಳು, ಬಿಯಾಂಫಾಲರಿಯಾದ ಸಂಖ್ಯೆಯನ್ನು ನಿಯಂತ್ರಿಸುವ ಒಂದು ಪರಿಣಾಮಕಾರಿ ಮಾರ್ಗವಾಗಿದೆ. ಸ್ಕಿಸ್ಟೊಸೊಮಿಯಾಸಿಸ್ ಮಧ್ಯಂತರ ಆಶ್ರಯದಾತದಿಂದ ಮೀನುಗಳನ್ನು ದೂರವಿಡುವಲ್ಲಿ ಮೀನಿರುವ ಕೊಳಗಳ ನಿರ್ವಹಣೆ ನಿರ್ಣಾಯಕವಾಗಿದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಮಾನವರಲ್ಲಿ ಸ್ಸಿಸ್ಟೊಸೊಮಿಯಾಸಿಸ್ಗೆ ಚಿಕಿತ್ಸೆ ನೀಡುವ ಪ್ರಾಥಮಿಕ ರೂಪವೆಂದರೆ ಪ್ರಾವಿಕ್ವೆಂಟೆಲ್ ಎಂಬ ಸಂಯುಕ್ತ. ಔಷಧದ ಒಂದು ಡೋಸ್ ಸೋಂಕಿನ ಮತ್ತು ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಮತ್ತೊಮ್ಮೆ ಕಲುಷಿತವಾದ ನೀರಿನಲ್ಲಿ ಕೆಲಸ ಮಾಡುವುದು ಸೂಕ್ತವಲ್ಲ ಏಕೆಂದರೆ ಸೋಂಕು ಮತ್ತೆ ಆಗಬಹುದು. ಸೋಂಕು ಹರಡುವ ಚಕ್ರವನ್ನು ಮುರಿಯಲು ಬಸವನಹುಳುಗಳನ್ನು ನಿಯಂತ್ರಿಸುವ ಅಗತ್ಯವಿದೆ.

ಅದಕ್ಕೆ ಏನು ಕಾರಣ

ಬಿಯಾಂಫಾಲರಿಯಾ ಎಂಬ ತಳಿಯ ಗಾಳಿಯನ್ನು ಉಸಿರಾಡುವ ಸಿಹಿನೀರಿನ ಬಸವನಹುಳುಗಳಿಂದ ಭತ್ತದ ಸಸ್ಯಗಳಿಗೆ ಹಾನಿಯಾಗುತ್ತದೆ. ಬಿಯಾಂಫಾಲರಿಯಾದ ಎಲ್ಲಾ ಜಾತಿಗಳು ಉಭಯಲಿಂಗಿ ಆಗಿರುತ್ತವೆ. ಅಂದರೆ ಅವುಗಳಿಗೆ ಹೆಣ್ಣು ಮತ್ತು ಗಂಡು ಎರಡರ ಅಂಗಗಳೂ ಇದ್ದು ಅವು ಸ್ವಯಂ ಅಥವಾ ಮಿಶ್ರ-ಸಂತಾನೋತ್ಪತ್ತಿಯನ್ನು ಮಾಡಬಲ್ಲವು. ಅವು ನಡುವೆ ಸ್ವಲ್ಪ ಅವಧಿಯ ಅಂತರವಿರುವಂತೆ ಮೊಟ್ಟೆಗಳನ್ನು 5-40 ಸಂಖ್ಯೆಯ ಗುಂಪುಗಳಲ್ಲಿ ಇಡುತ್ತವೆ. ಮತ್ತು ಪ್ರತಿ ಗುಂಪೂ ಜೆಲ್ಲಿ-ತರಹದ ವಸ್ತುವಿನ ರಾಶಿಯಿಂದ ಮುಚ್ಚಲ್ಪಟ್ಟಿರುತ್ತದೆ. ಸಣ್ಣ ಬಸವನಗಳುಗಳು 6-8 ದಿನಗಳ ನಂತರ ಹೊರಬರುತ್ತವೆ ಮತ್ತು ಜಾತಿಗಳು ಮತ್ತು ಪರಿಸರ ಸ್ಥಿತಿಗಳನ್ನು ಅವಲಂಬಿಸಿ 4-7 ವಾರಗಳಲ್ಲಿ ಪ್ರಬುದ್ಧತೆಯನ್ನು ತಲುಪುತ್ತವೆ. ತಾಪಮಾನ ಮತ್ತು ಆಹಾರ ಲಭ್ಯತೆಯು ಪ್ರಮುಖ ಸೀಮಿತ ಅಂಶಗಳಾಗಿವೆ. ಒಂದು ಬಸವನಹುಳು ಒಂದು ವರ್ಷಕ್ಕೂ ಹೆಚ್ಚು ಕಾಲದ ತನ್ನ ಜೀವಿತಾವಧಿಯಲ್ಲಿ 1000 ಮೊಟ್ಟೆಗಳವರೆಗೆ ಇಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಈ ಬಸವನಹುಳುಗಳು ಇರುವುದನ್ನು ಕಂಡುಹಿಡಿಯಲು ಭೂಮಿಯನ್ನು ಆಗಾಗ್ಗೆ ಪರಿಶೀಲಿಸಿ.
  • ಋತುವಿನ ಉದ್ದಕ್ಕೂ ಉತ್ತಮ ಕೃಷಿ ಪದ್ಧತಿಗಳನ್ನು ಅನುಸರಿಸಿ.
  • ಎಚ್ಚರಿಕೆ ಏನಕ್ಕೆ ಅವಶ್ಯಕವೆಂದರೆ ಈ ಬಸವನಹುಳುವು ಮಾನವರಿಗೆ ವೈದ್ಯಕೀಯವಾಗಿ ಪ್ರಮುಖವಾದ ಕೀಟವಾಗಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ