ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಕಂಬಳಿಹುಳು

Euproctis sp.

ಕೀಟ

ಸಂಕ್ಷಿಪ್ತವಾಗಿ

  • ಕೆಂಪುಮಿಶ್ರಿತ ಕಂದು ಬಣ್ಣದ ರೋಮಭರಿತ ಲಾರ್ವಾಗಳು ಮಾವಿನ ಎಲೆ ಉದುರುವುದಕ್ಕೆ ಕಾರಣವಾಗುತ್ತವೆ.
  • ಈ ಹುಳಗಳ ದೇಹದ ಎರಡೂ ತುದಿಗಳಲ್ಲಿ ಜುಟ್ಟಿನಂತೆ ಕೂದಲಿದ್ದು, ಎಳೆಯ ಲಾರ್ವಾಗಳ ದೇಹದ ತುಂಬ ಬಿಳಿಯ ಕೂದಲಿರುತ್ತದೆ.
  • ಪತಂಗವು ಹಳದಿ ಬಣ್ಣದಲ್ಲಿದ್ದು, ಮುಂದಿನ ರೆಕ್ಕೆಗಳಲ್ಲಿ ಗಾಢವಾದ ಗೆರೆಗಳೂ ಕಪ್ಪು ಚುಕ್ಕೆಗಳೂ ಇರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

13 ಬೆಳೆಗಳು
ಕಾಫಿ
ಹತ್ತಿ
ಬದನೆ
ದ್ರಾಕ್ಷಿ
ಇನ್ನಷ್ಟು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ರೋಗಲಕ್ಷಣಗಳು

ಮಾವಿಗೆ ದಾಳಿಯಿಡುವ ಕಂಬಳಿಹುಳಗಳ ಆರಂಭಿಕ ಹಂತದ ಲಾರ್ವಾಗಳ ದೇಹದ ಪಾರ್ಶ್ವದಿಂದ ಉದ್ದನೆಯ ಬಿಳಿಯ ಕೂದಲಿರುತ್ತವೆ. ಅವು ಗುಂಪಾಗಿ ಮಾವಿನ ಮತ್ತು ಇತರ ಅನೇಕ ಜಾತಿಯ ಮರಗಳ ಎಲೆಯನ್ನು ತಿನ್ನುತ್ತವೆ. ಇದರಿಂದ ಕೊನೆಗೆ ಮರದ ಎಲೆಯೆಲ್ಲವೂ ಉದುರಿ ಹೋಗುತ್ತದೆ. ಪ್ರಬುದ್ಧ ಲಾರ್ವಾದ ದೇಹವು ಕೆಂಪುಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ. ತಲೆಯು ಕೆಂಪು ಬಣ್ಣದಲ್ಲಿದ್ದು, ಸುತ್ತಲೂ ಬಿಳಿ ಕೂದಲಿರುತ್ತದೆ. ತಲೆಯಲ್ಲಿ ಮತ್ತು ಹಿಂಬದಿಯಲ್ಲಿ ಜುಟ್ಟಿನಂತೆ ಕೂದಲಿರುತ್ತದೆ. ಎಲೆಗಳು ಅಥವಾ ಕೊಂಬೆಗಳ ಮೇಲೆ ಕೂದಲುಗಳ ಗೂಡಿನಲ್ಲಿ ಲಾರ್ವಾವು ಪ್ಯೂಪಾ ಹಂತಕ್ಕೆ ಬೆಳೆಯುತ್ತದೆ. ಪತಂಗವು ಹಳದಿ ಬಣ್ಣದಲ್ಲಿದ್ದು, ಮುಂದಿನ ರೆಕ್ಕೆಗಳಲ್ಲಿ ಅಡ್ಡಕ್ಕೆ ಮತ್ತು ಉದ್ದಕ್ಕೆ ಗಾಢವಾದ ಗೆರೆಗಳೂ, ರೆಕ್ಕೆಯ ಅಂಚಿಗೆ ಕಪ್ಪು ಚುಕ್ಕೆಗಳೂ ಇರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಲಾರ್ವಾಗಳು ಒತ್ತೊತ್ತಾಗಿ ಗುಂಪಿನಲ್ಲಿ ಎಲೆ ತಿನ್ನುತ್ತಿರುವ ಸಮಯದಲ್ಲಿ ಉರಿಯುವ ಪಂಜುಗಳನ್ನು ಬಳಸಿ ನಾಶ ಮಾಡಬಹುದು. ಬೇವಿನ (ಆಝಾಡಿರಾಕ್ಟ ಇಂಡಿಕಾ ಎಲ್.) ಮತ್ತು ಧತ್ತುರ (ಡಟುರಾ ಸ್ಟ್ರಾಮೋನಿಯಮ್ ಎಲ್.) ಸಾರಗಳ ಸಿಂಪಡಣೆಗಳು ಕಂಬಳಿಹುಳಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ. ಬ್ಯಾಸಿಲಸ್ ತುರಿಂಗೈನ್ಸಿಸ್ ಬ್ಯಾಕ್ಟೀರಿಯಂ ಸೂಕ್ಷ್ಮಾಣುಜೀವಿಗಳ ಕೀಟನಾಶಕವಾಗಿದ್ದು, ಕರುಳನ್ನು ಬಲಹೀನ ಮಾಡುವ ಮೂಲಕ ಕಂಬಳಿಹುಳಗಳನ್ನು ಕೊಲ್ಲುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಸೈಫರ್ಮೆಥ್ರಿನ್, ಡೆಲ್ಟಾಮೆಥ್ರಿನ್, ಫ್ಲುವಲಿನಟ್ ಮತ್ತು ಫೆನ್ವಾಲೆರೇಟ್ ಹೊಂದಿರುವ ಕೀಟನಾಶಕ ಸಿಂಪಡಣೆಗಳು ಮಾವಿಗೆ ಎರಗುವ ಕಂಬಳಿ ಹುಳಗಳ ಎದುರು ಪರಿಣಾಮಕಾರಿಯಾಗುತ್ತವೆ.

ಅದಕ್ಕೆ ಏನು ಕಾರಣ

ಎಲೆಗಳ ಹಾನಿ ಮತ್ತು ಎಲೆಯುದುರುವಿಕೆಯು ಒಂದೇ ಲಕ್ಷಣವಿರುವ ಕಂಬಳಿಹುಳದ ಎರಡು ಬೇರೆ ಪ್ರಭೇದಗಳಿಂದ ಉಂಟಾಗುತ್ತದೆ. ಹೆಣ್ಣು ಕೀಟವು ಹಳದಿ ಬಣ್ಣದ, ಚಪ್ಪಟೆಯಾದ, ವೃತ್ತಾಕಾರದ ಮೊಟ್ಟೆಗಳನ್ನು ಎಲೆಗಳ ಕೆಳ ಭಾಗದಲ್ಲಿ ಗುಂಪಾಗಿ ಇಡುತ್ತದೆ. ಮೊಟ್ಟೆಯ ಗೂಡುಗಳು ಎದ್ದುಕಾಣುವಂತಿರುತ್ತವೆ, ಏಕೆಂದರೆ ಅವು ಹಳದಿ ಕಂದು ಬಣ್ಣದ ಕೂದಲು ಮತ್ತು ಪೊರೆಗಳಿಂದ ಮುಚ್ಚಲ್ಪಟ್ಟಿರುತ್ತವೆ. 4-10 ದಿನಗಳ ನಂತರ ಲಾರ್ವಾ ಹೊರ ಬರುತ್ತದೆ. ಅವು ಗೂಡು ರೂಪಿಸುವ ತನಕ, 13 ರಿಂದ 29 ದಿನಗಳ ಕಾಲ ಮರದ ಎಲೆಗಳನ್ನು ತಿನ್ನುತ್ತವೆ. ಪ್ರೌಢ ಕೀಟವು 9-25 ದಿನಗಳ ಕಾಲ ರೇಷ್ಮೆಯ ಗೂಡಿನಲ್ಲಿದ್ದು ಹೊರ ಬರುತ್ತದೆ. ಚಳಿಗಾಲದಲ್ಲಿ ಲಾರ್ವಾ ಸುಪ್ತಾವಸ್ಥೆಯಲ್ಲಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಮೊಟ್ಟೆ, ಲಾರ್ವಾ, ಪತಂಗ ಮತ್ತು ಹುಳದ ಗೂಡುಗಳ ಇರುವಿಕೆಗೆ ನಿಯಮಿತವಾಗಿ ಹೊಲದ ಮೇಲ್ವಿಚಾರಣೆ ಮಾಡಿ.
  • ಸೋಂಕು ಸಣ್ಣ ಮಟ್ಟದಲ್ಲಿದ್ದರೆ ಮರಿಹುಳುಗಳು, ಹುಳದ ಗೂಡುಗಳು ಮತ್ತು ಮೊಟ್ಟೆ ಸಮೂಹಗಳನ್ನು ಸಂಗ್ರಹಿಸಿ ನಾಶ ಮಾಡಿ.
  • ಪ್ರೌಢ ಪತಂಗಗಳನ್ನು ನಿಯಂತ್ರಿಸಲು ಬೆಳಕನ್ನು ಉಪಯೋಗಿಸಿ ಹಿಡಿಯಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ