Fertilizer Burn
ಇತರೆ
ವಿಪರೀತ ರಸಗೊಬ್ಬರ ಹಾಕುವುದರಿಂದಾಗುವ ಹಾನಿ ಸಾಮಾನ್ಯವಾಗಿ ಎಲೆಯ ಅಂಚುಗಳು ಕಂದು ಬಣ್ಣಕ್ಕೆ ತಿರುಗುವುದು ಅಥವಾ ಎಲೆ ಸುಟ್ಟಂತೆ ಆಗುವ ಮೂಲಕ ಕಾಣಿಸಿಕೊಳ್ಳುತ್ತದೆ. ರಸಗೊಬ್ಬರಗಳಲ್ಲಿರುವ ಕರಗಬಲ್ಲ ಲವಣಗಳು ಬೇರಿನ ಅಂಗಾಂಶಗಳಿಂದ ತೇವಾಂಶವನ್ನು ಹೊರಗೆಳೆದು ಗಿಡ ಸೊರಗುವಂತೆ, ಎಲೆಗಳು ಹಳದಿ ಬಣ್ಣಕ್ಕೆ ತಿರುಗುವಂತೆ ಮತ್ತು ಸಸ್ಯಗಳ ಬೆಳವಣಿಗೆ ಕುಂಠಿತವಾಗುವಂತೆ ಮಾಡಬಹುದು. ಕೆಲವು ರಸಗೊಬ್ಬರಗಳ ಜೊತೆ - ದ್ರವವಾದರೆ ಸಿಂಪಡಿಸುವಿಕೆಯಿಂದ ಅಥವಾ ಹರಳಾದರೆ ಹರಡುವುದರಿಂದ - ಎಲೆಗಳು ನೇರ ಸಂಪರ್ಕಕ್ಕೆ ಬರುವುದರಿಂದಲೂ ಸುಟ್ಟ ಎಲೆ ಅಥವಾ ಒಣ ಎಲೆ ಉಂಟಾಗಬಹುದು. ಮಣ್ಣಿನ ವಿಧ, ನೀರಾವರಿ ಅಭ್ಯಾಸಗಳು, ಉಪ್ಪಿನ ಮಟ್ಟ ಮತ್ತು ನಿರ್ದಿಷ್ಟ ಸಸ್ಯಗಳ ಸೂಕ್ಷ್ಮತೆಯಂತಹ ಅಂಶಗಳು ಹಾನಿಯ ಪ್ರಮಾಣವನ್ನು ಪ್ರಭಾವಿಸುತ್ತವೆ.
ರಸಗೊಬ್ಬರ ಸುಡುಗಾಯಕ್ಕೆ ಯಾವುದೇ ಜೈವಿಕ ನಿಯಂತ್ರಣ ಆಯ್ಕೆಗಳು ಲಭ್ಯವಿಲ್ಲ.
ರಸಗೊಬ್ಬರ ಸುಡುಗಾಯಕ್ಕೆ ಯಾವುದೇ ರಾಸಾಯನಿಕ ನಿಯಂತ್ರಣ ಆಯ್ಕೆಗಳು ಲಭ್ಯವಿಲ್ಲ.
ಹೆಚ್ಚು ರಸಗೊಬ್ಬರ ಬಳಕೆಯಿಂದಈ ಹಾನಿಯಾಗುತ್ತದೆ. ಮಣ್ಣಿನ ವಿಧ, ನೀರಾವರಿ ವ್ಯವಸ್ಥೆ, ಉಪ್ಪಿನ ಮಟ್ಟ ಮತ್ತು ಪ್ರತೀ ಸಸ್ಯದ ಸೂಕ್ಷ್ಮತೆಯಂತಹ ಅಂಶಗಳ ಹಾನಿಯ ಮಟ್ಟವನ್ನು ನಿರ್ಧರಿಸುತ್ತವೆ. ತರಕಾರಿ ಸಸ್ಯಗಳಲ್ಲಿ ಉಷ್ಣಾಂಶ ಹೆಚ್ಚಿರುವ ಶುಷ್ಕ ವಾತಾವರಣದಲ್ಲಿ ಹಾನಿಯಾಗುವುದು ಜಾಸ್ತಿ. ಬರ ಪರಿಸ್ಥಿತಿಗಳಲ್ಲಿ ಗೊಬ್ಬರದಲ್ಲಿರುವ ಲವಣಗಳು ಮಣ್ಣಿನಲ್ಲಿ ಹೆಚ್ಚು ಕೇಂದ್ರೀಕೃತವಾಗಿರುತ್ತವೆ. ಇದು ನೇರವಾಗಿ ಬೇರಿನ ಗಾಯಕ್ಕೆ ಕಾರಣವಾಗಬಹುದು ಮತ್ತು ಸಸ್ಯದ ಮೇಲಿನ ಭಾಗಗಳಲ್ಲಿ ಒಣ ಎಲೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಕರಗಬಲ್ಲ ಲವಣಗಳು ಸಸ್ಯದ ನೀರಿನ ಚಲನೆಯನ್ನು ಅನುಸರಿಸಿ, ಎಲೆಗಳಲ್ಲಿ ಕೇಂದ್ರೀಕೃತವಾಗುತ್ತವೆ. ಮತ್ತು ಅಲ್ಲಿ ಉಷ್ಣಾಂಶ ಹೆಚ್ಚಿರುವ, ಶುಷ್ಕ ದಿನಗಳಲ್ಲಿ ತೇವಾಂಶವು ಆವಿಯಾಗುವ ಮೂಲಕ ಅಥವಾ ಬಾಷ್ಪೀಕರಣದ ಮೂಲಕ ವೇಗವಾಗಿ ಕಳೆದುಹೋಗುತ್ತದೆ. ತಂಪಾದ, ಮೋಡದ ವಾತಾವರಣದಲ್ಲಿ, ಮಣ್ಣಿನಲ್ಲಿ ಸಾಕಷ್ಟು ತೇವಾಂಶವು ಇದ್ದಾಗ, ಎಲೆಗಳಿಂದ ತೇವಾಂಶ ನಷ್ಟವಾಗುವುದು ನಿಧಾನವಾಗಿರುತ್ತದೆ. ಇದರಿಂದ ವಸಂತ ಮಾಸದಲ್ಲಿ ಹೆಚ್ಚಿನ ಲವಣ ಮಟ್ಟವನ್ನು ಸಹಿಸಿಕೊಳ್ಳುವುದು ಸಸ್ಯಗಳಿಗೆ ಸಾಧ್ಯವಾಗುತ್ತದೆ. ಆದರೆ ಬೇಸಿಗೆಯ ತಿಂಗಳುಗಳಲ್ಲಿ ಇದು ಸಾಧ್ಯವಿಲ್ಲ.