ಮಾವು

ಆಲ್ಗಲ್ ಲೀಫ್ ಸ್ಪಾಟ್

Cephaleuros virescens

ಇತರೆ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ರೋಮದ ರೀತಿಯ, ಹಸಿರು ಅಥವಾ ಕಿತ್ತಳೆ ಬಣ್ಣದ ಕಲೆಗಳು.
  • ಎಳೆ ಕಾಂಡಗಳ ತೊಗಟೆಯಲ್ಲಿ ಬಿರುಕುಗಳು.
  • ಎಲೆಗಳಚುವಿಕೆ.

ಇವುಗಳಲ್ಲಿ ಸಹ ಕಾಣಬಹುದು


ಮಾವು

ರೋಗಲಕ್ಷಣಗಳು

C. ವೈರ್ಸ್ಸೆನ್ಸ್ ಎಂಬ ಪರಾವಲಂಬಿ ಆಲ್ಗಾ ಮಾವು ಮತ್ತು ಇತರ ಹೋಸ್ಟ್ ಗಳ ಎಲೆಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ, ಆದರೆ ಕೆಲವೊಮ್ಮೆ ಶಾಖೆಗಳು ಮತ್ತು ಕಾಂಡಗಳನ್ನು ಗುರಿಯಾಗಿಸಬಹುದು. ಸೋಂಕಿತ ಎಲೆಗಳಲ್ಲಿ ಗುಂಡಾಕಾರದ, ಸ್ವಲ್ಪಮಟ್ಟಿಗೆ ಊದಿದ, 2-4 ಮಿಮೀ ವ್ಯಾಸದ ಕಿತ್ತಳೆ ಅಥವಾ ಹಸಿರು ಬಣ್ಣದ ಕಲೆಗಳು ಕಂಡುಬರುತ್ತವೆ. ಅವುಗಳ ಮೇಲೆ ರೋಮದ ರೀತಿಯ ಬೆಳವಣಿಗೆಯಾಗುತ್ತದೆ (ಆಲ್ಗೇ ಗಳ ಬೀಜಕಗಳು) ಮತ್ತು ಅವುಗಳು ಅಸ್ಪಷ್ಟವಾದ ಅಂಚುಗಳಿಂದ ಕೂಡಿರುತ್ತವೆ. ಅವು ತೇಪೆಯ ಭಾಗಗಳೊಳಗೆ ಸೇರಿಕೊಳ್ಳಬಹುದು. ರೋಗಕಾರಕಕ್ಕೆ ಹೆಚ್ಚು ಸೂಕ್ಷ್ಮವಾಗಿರುವ ಎಳೆ ಕಾಂಡಗಳಲ್ಲಿ C. ವೈರೆಸೆನ್ಗಳು ತೊಗಟೆಯಲ್ಲಿ ಬಿರುಕುಗಳನ್ನು ಉಂಟುಮಾಡಬಹುದು, ಇದು ಡೈಬ್ಯಾಕ್ ಗೆ (ನಿರ್ಜೀವಗೊಳ್ಳುವುದು) ಕಾರಣವಾಗುತ್ತದೆ. ಅನೇಕ ಮರಗಳಲ್ಲಿ, ಕೆಳಗೆ ನೇತಾಡುವ ಶಾಖೆಗಳ ಎಲೆಗಳು ಅತ್ಯಂತ ಕೆಟ್ಟ ಲಕ್ಷಣಗಳನ್ನು ತೋರಿಸುತ್ತವೆ. ಅಲ್ಗಾಲ್ ಲೀಫ್ ಸ್ಪಾಟ್ ಸಾಮಾನ್ಯವಾಗಿ ಹೆಚ್ಚಿನ ಉಷ್ಣತೆ ಮತ್ತು ಮಳೆ ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ದುರ್ಬಲ ಬೆಳವಣಿಗೆಯಿರುವ ಸಸ್ಯಗಳಲ್ಲಿ ಕಂಡುಬರುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ರೋಗವು ಕಡಿಮೆಯಿದ್ದಾಗ, ಕಲೆಗಳು ಇರುವ ಎಲೆಗಳು ಮತ್ತು ರೋಗಪೀಡಿತ ಶಾಖೆಗಳನ್ನು ತೆಗೆದುಹಾಕಿ ನಾಶಮಾಡಿ. ಇದರ ಜೊತೆ, ನೆಲದ ಮೇಲಿರುವ ಬಾಧಿತ ಎಲೆಗಳನ್ನು ಕೆತ್ತಿಹಾಕಿ ನಾಶಮಾಡಿ. ಆಲ್ಗಲ್ ಲೀಫ್ ಸ್ಪಾಟ್ ತೀವ್ರವಾಗಿದ್ದಾಗ, ಬೋರ್ಡೆಕ್ಸ್ ಮಿಶ್ರಣ ಅಥವಾ ಇತರ ತಾಮ್ರ-ಆಧಾರಿತ ಉತ್ಪನ್ನಗಳನ್ನು ಸಿಂಪಡಿಸಿ. ಬೇಸಿಗೆಯ ಆರಂಭದಿಂದ ಶರತ್ಕಾಲದ ಅಂತ್ಯದವರೆಗೂ ಪ್ರತಿ 2 ವಾರಗಳಿಗೊಮ್ಮೆ ಸಿಂಪಡಣೆ ಮಾಡಬೇಕು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ರಾಸಾಯನಿಕ ನಿಯಂತ್ರಣ ಅಗತ್ಯವಿದ್ದರೆ ತಾಮ್ರವನ್ನು ಹೊಂದಿರುವ ಶಿಲೀಂಧ್ರನಾಶಕ ದ್ರವಗಳನ್ನು ಬಳಸಿ.

ಅದಕ್ಕೆ ಏನು ಕಾರಣ

ಹೆಚ್ಚಿನ ತಾಪಮಾನ ಮತ್ತು ಮಳೆಯಿರುವ ಸ್ಥಳಗಳಲ್ಲಿ, ಮತ್ತು ಹೋಸ್ಟ್ ಸಸ್ಯಗಳು ಸರಿಯಾಗಿ ಬೆಳೆಯದ ಸ್ಥಳಗಳಲ್ಲಿ ಆಲ್ಗಲ್ ಲೀಫ್ ಸ್ಪಾಟ್ ಅತಿ ಸಾಮಾನ್ಯವಾಗಿ ಕಂಡುಬರುತ್ತವೆ. ಕಳಪೆ ಪೌಷ್ಟಿಕಾಂಶ, ಕಳಪೆ ಮಣ್ಣಿನ ಒಳಚರಂಡಿ ವ್ಯವಸ್ಥೆ ಮತ್ತು ಅತೀ ಹೆಚ್ಚು ಅಥವಾ ಅತೀ ಕಡಿಮೆ ಇರುವ ನೆರಳು ಈ ರೋಗಕ್ಕೆ ಅನುಕೂಲವಾಗುವ ಸ್ಥಿತಿಗಳನ್ನು ಸೃಷ್ಟಿಸುತ್ತವೆ. ಬೀಜಕಗಳು ಕುಡಿಯೊಡೆಯಲು ನೀರು ಅವಶ್ಯಕ. ಮಳೆಯ ಎರಚಲು ಅಥವಾ ಗಾಳಿಯ ಮೂಲಕ ಅವು ಇತರ ಮರಗಳಿಗೆ ಹರಡುತ್ತವೆ. C. ವೈರೆಸೆನ್ಗಳು ಅದರ ಹೋಸ್ಟ್ ಗಳ ನೀರಿನ ಮತ್ತು ಖನಿಜ ಲವಣಗಳನ್ನು ತೆಗೆದುಕೊಳ್ಳುತ್ತವೆ, ಇದರಿಂದಲೇ ಅವನ್ನು 'ನೀರಿನ ಪರಾವಲಂಬಿ' ಎಂದು ಕರೆಯಲಾಗುತ್ತದೆ. ಎಲೆಗಳು ಉದುರುವವರೆಗೂ ಆಲ್ಗಾ ಬೆಳವಣಿಗೆ ಎಲೆಗಳನ್ನು ಮುಚ್ಚಿಕೊಳ್ಳುತ್ತದೆ. ಆಗಾಗ್ಗೆ ಬೀಳುವ ಮಳೆಯಿಂದ ಎಳೆಯದಾದ ಹೊರಗಿನ ವಸಾಹತುಗಳು ಕೊಚ್ಚಿಹೋಗಬಹುದು. ಬಿರುಕುಗಳ ಮೂಲಕ ಎಲೆಗಳನ್ನು ಪ್ರವೇಶಿಸುವ ಬೀಜಕಗಳು ಮಾತ್ರ ಗಾಯಗಳನ್ನು ಉಂಟುಮಾಡುತ್ತವೆ. ಹಾನಿಗೊಳಗಾಗದ ಹೊರಪದರದೊಳಗೆ ಬೀಜಕಗಳು ಒಳಹೊಕ್ಕಿರುವ ಯಾವುದೇ ಪುರಾವೆಗಳಿಲ್ಲ.


ಮುಂಜಾಗ್ರತಾ ಕ್ರಮಗಳು

  • ಸಸ್ಯಗಳ ಸಾಲುಗಳನ್ನು ಸೂಕ್ತವಾಗಿ ತಿರುಗಿಸುವ ಮೂಲಕ ಉತ್ತಮವಾದ ವಾತಾಯನವನ್ನು ಖಚಿತಪಡಿಸಿಕೊಳ್ಳಿ.
  • ಸಸ್ಯಕ್ಕಾಗುವ ಒತ್ತಡವನ್ನು ಕಡಿಮೆಮಾಡಲು ಬೆಳೆ ವ್ಯವಸ್ಥೆಗಳನ್ನು ಸುಧಾರಿಸಿ.
  • ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ನೀರು ಕುಡಿದು ನಿಷ್ಪ್ರಯೋಜಕವಾಗಿರುವ ಮಣ್ಣುಗಳನ್ನು ಸರಿಪಡಿಸಿ.
  • ಎಲೆಗೊಂಚಲುಗಳನ್ನು ವೇಗವಾಗಿ ಒಣಗಿಸುವ ಸಲುವಾಗಿ ದಿನದ ಆರಂಭದಲ್ಲಿ ನೀರಾವರಿ ಮಾಡಿ.
  • ಸಾಧ್ಯವಾದಾಗ ಓವರ್ಹೆಡ್ ನೀರಾವರಿ ಮಾಡಬೇಡಿ.
  • ಬೆಳವಣಿಗೆ ಕಳಪೆಯಾಗಿರುವಾಗ ಖನಿಜ ರಸಗೊಬ್ಬರವನ್ನು ಸೇರಿಸಿ.
  • ಪೊಟ್ಯಾಸಿಯಮ್ ಫಾಸ್ಫೇಟ್ ಅನ್ನು ಹೊಂದಿರುವ ದ್ರವೌಷಧಗಳನ್ನು ಬಳಸಿ.
  • ಎಲೆಗಳು ಮತ್ತು ಹಣ್ಣುಗಳು ಬೇಗ ಒಣಗುವ ಸಲುವಾಗಿ ಸಸ್ಯಗಳ ಮಧ್ಯದ ಅಡಕವು ಗಾಳಿಯ ಪ್ರಸರಣವನ್ನು ಅನುಮತಿಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಪೋಷಕಾಂಶಗಳು ಮತ್ತು ತೇವಾಂಶಕ್ಕಾಗಿ ಕಳೆಗಳು ನೀಡುವ ಸ್ಪರ್ಧೆಯನ್ನು ಕಡಿಮೆಮಾಡಲು ಮರಗಳ ಸುತ್ತಲೂ ಇರುವ ಕಳೆಗಳನ್ನು ತೆಗೆದುಹಾಕಿ.
  • ಯಾಂತ್ರಿಕ ಉಪಕರಣಗಳಿಂದ ಉಂಟಾಗಬಹುದಾದ ಗಾಯಗಳನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ