ಉದ್ದಿನ ಬೇಳೆ & ಹೆಸರು ಬೇಳೆ

ಬೋರಾನ್ ಕೊರತೆ

Boron Deficiency

ಕೊರತೆ

ಸಂಕ್ಷಿಪ್ತವಾಗಿ

  • ಎಲೆಗಳು ಹಳದಿಯಾಗುವುದು ಮತ್ತು ದಪ್ಪವಾಗುವುದು.
  • ಚಿಗುರಿನ ತುದಿಗಳ ಬಳಿ ಎಲೆಗಳು ಮತ್ತು ಕಾಂಡ ಗಡಸಾಗುವುದು.

ಇವುಗಳಲ್ಲಿ ಸಹ ಕಾಣಬಹುದು

59 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಬಾಳೆಹಣ್ಣು
ಇನ್ನಷ್ಟು

ಉದ್ದಿನ ಬೇಳೆ & ಹೆಸರು ಬೇಳೆ

ರೋಗಲಕ್ಷಣಗಳು

ಬೆಳೆಗಳು ಮತ್ತು ಬೆಳವಣಿಗೆಯ ಪರಿಸ್ಥಿತಿಗಳ ಆಧಾರದ ಮೇಲೆ ರೋಗಲಕ್ಷಣಗಳು ಬದಲಾಗುತ್ತವೆ. ಆದರೆ ಸಾಮಾನ್ಯವಾಗಿ ಅವುಗಳು ಹೊಸ ಬೆಳವಣಿಗೆಯಲ್ಲಿ ಮೊದಲು ಗೋಚರಿಸುತ್ತವೆ. ಮೊದಲ ಚಿಹ್ನೆಯೆಂದರೆ ಸಾಮಾನ್ಯವಾಗಿ ಎಳೆಯ ಎಲೆಗಳು ಬಣ್ಣಗೆಡುವುದು ಮತ್ತು ಅವು ದಪ್ಪವಾಗುವುದು. ಎಲೆಗಳ ಹಳದಿಯಾಗುವಿಕೆ ಏಕರೂಪವಾಗಿರಬಹುದು, ಅಥವಾ ಅಂತರ ನಾಳಗಳಲ್ಲಿ ವೈವಿಧ್ಯಮಯವಾಗಿ ಬರಬಹುದು. ಅದು ಮುಖ್ಯ ನಾಳಗಳಿಂದ ನಿಧಾನವಾಗಿ ಬಣ್ಣಗುಂದುತ್ತಾ ಹೋಗುತ್ತದೆ. ಚಿಗುರಿನ ತುದಿಯಲ್ಲಿರುವ ಎಲೆಗಳು ಮತ್ತು ಕಾಂಡಗಳು ಗಡಸಾಗುತ್ತವೆ ಮತ್ತು ಅವುಗಳನ್ನು ಬಾಗಿಸಿದರೆ ಸುಲಭವಾಗಿ ಮುರಿಯುತ್ತವೆ. ಎಲೆಗಳು ಸುಕ್ಕಾಗಬಹುದು (ನಾಳಗಳ ಮಧ್ಯದ ಭಾಗಗಳಲ್ಲಿ ಸ್ವಲ್ಪ ಊದಿರುತ್ತದೆ) ಮತ್ತು ಅವುಗಳ ತುದಿ ಮತ್ತು ಪಾರ್ಶ್ವದ ಹಾಲೆಗಳು ಕೆಳಕ್ಕೆ ಸುರುಳಿಯಾಗಿರುತ್ತವೆ. ಕೆಲವು ಸಂದರ್ಭಗಳಲ್ಲಿ, ಎಲೆ ನಾಳಗಳು ದಪ್ಪವಾಗುತ್ತವೆ ಮತ್ತು ಉಬ್ಬಿರುತ್ತವೆ ಮತ್ತು ತೊಟ್ಟುಗಳು ತಿರುಚಿಕೊಂಡಂತಿರುತ್ತವೆ. ಗೆಣ್ಣುಗಳ ನಡುವಣ ಅಂತರ ಚಿಕ್ಕದಾಗುತ್ತವೆ, ತುದಿಯ ಹತ್ತಿರ ಹೆಚ್ಚಿನ ಎಲೆಗಳು ಬೆಳೆಯುತ್ತವೆ. ತೀವ್ರತೆ ಹೆಚ್ಚಾದಾಗ, ಕೊರತೆಯ ಕಾರಣದಿಂದ ಬೆಳೆಯುತ್ತಿರುವ ಬಿಂದುಗಳಲ್ಲಿ ನೆಕ್ರೋಸಿಸ್ ಉಂಟಾಗುತ್ತದೆ. ಶೇಖರಣಾ ಬೇರುಗಳು ಸಾಮಾನ್ಯವಾಗಿ ಚಿಕ್ಕದಾಗಿರುತ್ತವೆ ಮತ್ತು ಅವುಗಳ ತುದಿ ಮೊಂಡಾಗಿರುತ್ತದೆ ಮತ್ತು ಕೊರತೆ ಹೆಚ್ಚಾದಂತೆ ಅವು ಸೀಳಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕೊಟ್ಟಿಗೆ ಗೊಬ್ಬರವನ್ನು ಹಾಕುವ ಮೂಲಕ, ಉತ್ತಮ ಸಾವಯವ ವಸ್ತು ಮತ್ತು ಉತ್ತಮ ನೀರು ಧಾರಣ ಸಾಮರ್ಥ್ಯವಿರುವ ಆರೋಗ್ಯಕರ ಮಣ್ಣುಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ.

ರಾಸಾಯನಿಕ ನಿಯಂತ್ರಣ

  • ಬೋರಾನ್ (B) ಹೊಂದಿರುವ ರಸಗೊಬ್ಬರಗಳನ್ನು ಬಳಸಿ.
  • ಉದಾಹರಣೆ: ಎಲೆಗಳ ಸಿಂಪಡಣೆಗಾಗಿ ಡಿಸೋಡಿಯಮ್ ಆಕ್ಟಬೊರೇಟ್ ಟೆಟ್ರಾಹೈಡ್ರೇಟ್ (ಬೋರಾನ್ 20%).
  • ನಿಮ್ಮ ಮಣ್ಣು ಮತ್ತು ಬೆಳೆಗೆ ಉತ್ತಮ ಉತ್ಪನ್ನ ಮತ್ತು ಪ್ರಮಾಣವನ್ನು ತಿಳಿಯಲು ನಿಮ್ಮ ಕೃಷಿ ಸಲಹೆಗಾರರನ್ನು ಸಂಪರ್ಕಿಸಿ.

ಹೆಚ್ಚಿನ ಶಿಫಾರಸುಗಳು:

  • ನಿಮ್ಮ ಬೆಳೆಯ ಉತ್ಪಾದನೆಯನ್ನು ಉತ್ತಮಗೊಳಿಸಲು ಬೆಳೆ ಋತುವಿನ ಪ್ರಾರಂಭದ ಮೊದಲು ಮಣ್ಣಿನ ಪರೀಕ್ಷೆ ಮಾಡಲು ಸೂಚಿಸಲಾಗುತ್ತದೆ.
  • ಅನೇಕ ಬೆಳೆಗಳಲ್ಲಿ ಎಲೆಗಳಿಗೆ ಸಿಂಪಡಿಸುವಿಕೆಯು ಎಲೆಗಳಿಗೆ ಹಾನಿಮಾಡುವುದರಿಂದ ಮಣ್ಣಿಗೆ ಬೋರಾನ್ ಹಾಕುವುದು ಉತ್ತಮ.

ಅದಕ್ಕೆ ಏನು ಕಾರಣ

ಬೋರಾನ್ ಕೊರತೆಯು ಸಾಮಾನ್ಯವಾಗಿ ಹೆಚ್ಚು ಪಿಹೆಚ್ ಇರುವ ಮಣ್ಣಿನಲ್ಲಿ ಕಂಡುಬರುತ್ತದೆ. ಏಕೆಂದರೆ ಈ ಸ್ಥಿತಿಯಲ್ಲಿ ಈ ಅಂಶವು ಸಸ್ಯಕ್ಕೆ ಲಭ್ಯವಾಗದ ರಾಸಾಯನಿಕ ರೂಪದಲ್ಲಿರುತ್ತದೆ. ಸಾವಯವ ವಸ್ತುಗಳು ಕಡಿಮೆ ಇರುವ ಮಣ್ಣು (<1.5%) ಅಥವಾ ಮರಳು ಮಣ್ಣು (ಪೌಷ್ಟಿಕಾಂಶ ಸವೆದು ಹೋಗುವ ಸಾಧ್ಯತೆ) ಸಹ ಬೋರಾನ್ ಕೊರತೆಗೆ ಒಳಗಾಗುತ್ತದೆ. ಆ ಸಂದರ್ಭಗಳಲ್ಲಿ ಬೋರಾನನ್ನು ಮಣ್ಣಿಗೆ ಸೇರಿಸಿದರೂ ಕೊರತೆ ಸರಿಹೋಗುವುದಿಲ್ಲ ಏಕೆಂದರೆ ಅದು ಸಸ್ಯವು ಹೀರಿಕೊಳ್ಳಲು ಲಭ್ಯವಿಲ್ಲದಿರಬಹುದು. ಎಲೆಗೊಂಚಲುಗಳ ಮೇಲೆ ಕಂಡುಬರುವ ರೋಗಲಕ್ಷಣಗಳು ಇತರ ರೋಗಗಳನ್ನು ಹೋಲುತ್ತವೆ: ಫಾಲ್ಸ್ ಜೇಡ ಮಿಟೆ, ಸತು ಕೊರತೆ ಅಥವಾ ಅಲ್ಪ ಕಬ್ಬಿಣದ ಕೊರತೆ ಇತ್ಯಾದಿ. ಶೇಖರಣಾ ಬೇರುಗಳಲ್ಲಿ, ಬೊಬ್ಬೆಗಳ-ತರಹದ ಉಬ್ಬುಗಳು ಮತ್ತು ಬಿರುಕುಗಳು ಬರುವುದು ಸಹ ಬೇರು-ಗಂಟು ನೆಮಟೋಡ್ ಅಥವಾ ಮಣ್ಣಿನ ತೇವಾಂಶದಲ್ಲಿ ತ್ವರಿತ ಬದಲಾವಣೆಗಳ ಲಕ್ಷಣಗಳಾಗಿರಬಹುದು. ಕ್ಯಾಲ್ಸಿಯಂ ಕೊರತೆಯು ಚಿಗುರು ಮತ್ತು ಬೇರು ತುದಿಗಳ ಸಾವಿಗೆ ಕೂಡ ಕಾರಣವಾಗಬಹುದು. ಆದರೆ ಚಿಗುರಿನ ತುದಿಯ ಕೆಳಗಿರುವ ಎಳೆಯ ಎಲೆಗಳು ದಪ್ಪವಾಗಿರುವುದಿಲ್ಲ ಮತ್ತು ಅಂತರ ನಾಳೀಯ ಹಳದಿಯಾಗುವಿಕೆ ಕಾಣಿಸಿಕೊಳ್ಳುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ಹೆಚ್ಚಿನ ಪಿಹೆಚ್ ಮತ್ತು ಅಧಿಕ ಮಣ್ಣಿನ ಖನಿಜಗಳು, ಕಬ್ಬಿಣ ಅಥವಾ ಅಲ್ಯೂಮಿನಿಯಂ ಆಕ್ಸೈಡ್ಗಳೊಂದಿಗೆ ಸಮೃದ್ಧವಾಗಿರುವ ಮಣ್ಣನ್ನು ಬಳಸಬೇಡಿ.
  • ಗಾಳಿಯಲ್ಲಿ ಅಧಿಕ ಆರ್ದ್ರತೆ ಮತ್ತು ಮಣ್ಣಿನಲ್ಲಿ ಕಡಿಮೆ ತೇವಾಂಶವನ್ನು ತಡೆಗಟ್ಟಿ.
  • ಅತಿಯಾಗಿ ರಸಗೊಬ್ಬರ ಬಳಕೆಯನ್ನು ಮಾಡಬೇಡಿ ಅಥವಾ ಮಣ್ಣಿಗೆ ಅತಿಯಾಗಿ ಸುಣ್ಣ ಹಾಕಬೇಡಿ.
  • ಬೆಳೆಗಳಿಗೆ ಅತಿಯಾಗಿ ನೀರು ಹಾಕಬೇಡಿ.
  • ನಿಮ್ಮ ಜಮೀನಿನ ಪೋಷಕಾಂಶದ ಮಟ್ಟವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಮಣ್ಣನ್ನು ನಿಯಮಿತವಾಗಿ ಪರೀಕ್ಷಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ