Zinc Deficiency
ಕೊರತೆ
ಸತುವಿನ ಕೊರತೆಯ ರೋಗಲಕ್ಷಣಗಳು ಸಸ್ಯಗಳ ಜಾತಿಯಿಂದ ಜಾತಿಗೆ ಬದಲಾಗುತ್ತವೆ ಆದರೆ ಹಲವಾರು ಲಕ್ಷಣಗಳು ಸಾಮಾನ್ಯವಾಗಿವೆ. ಹಲವು ಜಾತಿಗಳಲ್ಲಿ ಎಲೆಗಳು ಹಳದಿಯಾಗುತ್ತವೆ. ಹೆಚ್ಚಾಗಿ ಅಂತರ್ ನಾಳ ಕ್ಲೊರೋಸಿಸ್ ಕಾಣಿಸಿಕೊಳ್ಳುತ್ತದೆ. ( ಎಲೆಯ ಮುಖ್ಯ ನಾಳಗಳು ಹಸಿರು ಬಣ್ಣದಲ್ಲಿಯೇ ಇರುತ್ತವೆ). ಕೆಲವು ಜಾತಿಗಳಲ್ಲಿ, ಚಿಗುರು ಎಲೆಗಳು ಹೆಚ್ಚು ತೊಂದರೆಗೆ ಒಳಗಾಗುತ್ತವೆ. ಆದರೆ, ಇನ್ನೂ ಕೆಲವು ಜಾತಿಗಳಲ್ಲಿ ಹಳೆಯ ಮತ್ತು ಹೊಸ ಎಲೆಗಳೆರಡರಲ್ಲೂ ರೋಗಲಕ್ಷಣಗಳು ಕಾಣುತ್ತವೆ. ಹೊಸ ಎಲೆಗಳು ಸಾಮಾನ್ಯವಾಗಿ ಚಿಕ್ಕದಾಗಿ ಮತ್ತು ಕಿರಿದಾಗಿರುತ್ತವೆ ಮತ್ತು ಎಲೆಗಳ ಅಂಚು ವಕ್ರವಾಗಿರುತ್ತದೆ. ಕಾಲಾನಂತರದಲ್ಲಿ, ಕ್ಲೋರೊಟಿಕ್ ಚುಕ್ಕೆಗಳು ಕಂಚಿನ ಬಣ್ಣ ತಾಳುತ್ತವೆ ಮತ್ತು ಕೊಳೆತಂತೆ ಕಾಣುವ ಜಾಗಗಳು ಅಂಚಿನಿಂದ ಹರಡಲು ಪ್ರಾರಂಭಿಸಬಹುದು. ಇನ್ನೂ ಕೆಲವು ಬೆಳೆಗಳಲ್ಲಿ, ಸತು ಕೊರತೆಯಿರುವ ಎಲೆಗಳಲ್ಲಿ ತೊಟ್ಟುಗಳ ನಡುವಣ ಅಂತರ ಕಡಿಮೆಯಾಗುತ್ತದೆ. ಆದ್ದರಿಂದ ಎಲೆಗಳು ಕಾಂಡದ (ರೋಸೆಟಿಂಗ್) ಮೇಲೆ ಗುಂಪು ಗುಂಪಾಗಿರುತ್ತವೆ. ಹೊಸ ಎಲೆಗಳ ನಿರ್ಬಂಧಿತ ಬೆಳವಣಿಗೆಯಿಂದಾಗಿ ( ಕಿರು ಎಲೆಗಳು) ಎಲೆಯ ವಿರೂಪತೆ ಮತ್ತು ಕುಂಠಿತ ಬೆಳವಣಿಗೆ ಉಂಟಾಗಬಹುದು ಮತ್ತು ತೊಟ್ಟುಗಳ ನಡುವೆ ಆಂತರ ಕಡಿಮೆಯಾಗಬಹುದು.
ಬೀಜದ ಪಾತಿಗೆ ಅಥವಾ ಸಸಿ ನೆಟ್ಟ ಕೆಲವು ದಿನಗಳ ನಂತರ ಭೂಮಿಗೆ ಸಾವಯವ ಗೊಬ್ಬರವನ್ನು ಹಾಕುವುದರಿಂದ ಕೊರತೆಯಿಂದಾದ ಅವ್ಯವಸ್ಥೆಯನ್ನು ಕಡಿಮೆ ಮಾಡಬಹುದು.
ಹೆಚ್ಚಿನ ಶಿಫಾರಸುಗಳು:
ಸತುವಿನ ಕೊರತೆಯು ಮುಖ್ಯವಾಗಿ ಕ್ಷಾರೀಯ (ಹೆಚ್ಚು ಪಿಎಚ್), ಸಾವಯವ ಪದಾರ್ಥ ಕಡಿಮೆಯಿರುವ ಮರಳು ಮಣ್ಣುಗಳಲ್ಲಿ ಕಂಡುಬರುವ ಒಂದು ಸಮಸ್ಯೆಯಾಗಿದೆ. ಮಣ್ಣಿನಲ್ಲಿ ಹೆಚ್ಚಿನ ಮಟ್ಟದ ಫಾಸ್ಫರಸ್ ಮತ್ತು ಕ್ಯಾಲ್ಸಿಯಂ (ಕ್ಯಾಲ್ಯುರಿಯಸ್ ಮಣ್ಣು) ಇದ್ದರೂ, ಅದು ಸಸ್ಯಗಳಿಗೆ ಸತುವಿನ ಲಭ್ಯತೆ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಫಾಸ್ಫರಸ್ ಹಾಕುವುದರಿಂದ ಸತುವಿನ ಹೀರುವಿಕೆ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸುಣ್ಣದ ಕಲ್ಲು ಅಥವಾ ಚಾಕ್ (ಸುಣ್ಣ ಸೇರಿಸುವುದು) ನಂತಹ ಕ್ಯಾಲ್ಸಿಯಂ-ಸಮೃದ್ಧವಾದ ವಸ್ತುಗಳನ್ನು ಸೇರಿಸುವುದರಿಂದ ಕೂಡ ಮಣ್ಣಿನ ಆಮ್ಲೀಯತೆ ಹೆಚ್ಚಿ, ಸಸ್ಯಗಳಲ್ಲಿ ಸತುವಿನ ಹೀರುವಿಕೆಯನ್ನು ಕಡಿಮೆ ಮಾಡುತ್ತದೆ (ಮಣ್ಣಿನಲ್ಲಿನ ಮಟ್ಟಗಳು ಬದಲಾಗದೇ ಇದ್ದರೂ ಸಹ). ಸಸ್ಯಕ ಹಂತದಲ್ಲಿ ಮಣ್ಣು ತಂಪು ಮತ್ತು ಆರ್ದ್ರವಾಗಿದ್ದಾಗಲೂ ಸತುವಿನ ಕೊರತೆ ಒಂದು ಸಮಸ್ಯೆಯಾಗಬಹುದು.