Sulfur Deficiency
ಕೊರತೆ
ಗಂಧಕದ ಕೊರತೆಯಿರುವ ಎಲೆಗಳು ಸಾಮಾನ್ಯವಾಗಿ ಮೊದಲು ತಿಳಿ ಹಸಿರು, ನಂತರ ಹಳದಿ ಮಿಶ್ರಿತ ಹಸಿರು ಬಣ್ಣಕ್ಕೆ ತಿರುಗುತ್ತದೆ. ಬಳಿಕ ಸಂಪೂರ್ಣ ಹಳದಿಯಾಗುತ್ತದೆ. ಸಾಮಾನ್ಯವಾಗಿ ಕಾಂಡಗಳು ಕೆನ್ನೇರಳೆ ಬಣ್ಣ ಪಡೆಯುತ್ತವೆ. ಈ ಗುಣಲಕ್ಷಣಗಳು ಸಾಮಾನ್ಯವಾಗಿ ಸಾರಜನಕ-ಕೊರತೆಯಿರುವ ಸಸ್ಯಗಳಲ್ಲಿ ಕಂಡುಬರುವಂತೆಯೇ ಇರುತ್ತವೆ. ಇದರಿಂದ ಗೊಂದಲ ಉಂಟಾಗಬಹುದು. ಗಂಧಕದ ವಿಷಯದಲ್ಲಿ, ಮೊದಲಿಗೆ ಹೊಸದಾದ ಮೇಲಿನ ಎಲೆಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ಬೆಳೆಗಳಲ್ಲಿ (ಗೋಧಿ ಮತ್ತು ಆಲೂಗಡ್ಡೆ) ಈ ಲಕ್ಷಣಗಳ ಬದಲಿಗೆ, ಎಲೆಗಳ ಮುಖ್ಯಭಾಗದಲ್ಲಿ ಚುಕ್ಕೆಗಳು ಅಥವಾ ಅಂತರ್ ನಾಳದ ಕ್ಲೋರೋಸಿಸ್ ಕಾಣಬಹುದು. ಎಲೆಗಳು ಸಣ್ಣಗೆ ಮತ್ತು ತೆಳ್ಳಗೆ ಬೆಳೆಯುತ್ತವೆ ಮತ್ತು ಅದರ ಕುಡಿ ಕೊಳೆತಂತಾಗಬಹುದು. ಗೆದ್ದೆಯಲ್ಲಿನ ಬಾಧಿತ ಪ್ರದೇಶಗಳು ದೂರದಿಂದ ನೋಡಿದಾಗ ತಿಳಿ ಹಸಿರು ಅಥವಾ ಪ್ರಕಾಶಮಾನವಾದ ಹಳದಿ ಬಣ್ಣದಲ್ಲಿ ಕಾಣಿಸುತ್ತವೆ. ಕಾಂಡಗಳು ಎತ್ತರ ಬೆಳೆಯಲು ತಡೆಯಾಗುತ್ತದೆ ಮತ್ತು ತೆಳ್ಳಗೆ ಇರುತ್ತವೆ. ಈ ಕೊರತೆ ಋತುವಿನ ಆರಂಭದಲ್ಲಿಯೇ ಕಂಡುಬಂದರೆ, ಸಸ್ಯದ ಬೆಳವಣಿಗೆ ಕುಂಠಿತವಾಗುತ್ತದೆ. ಕಡಿಮೆ ಹೂವು ಬಿಡುತ್ತದೆ. ಮತ್ತು ಹಣ್ಣುಗಳು/ಧಾನ್ಯಗಳ ಮಾಗುವಿಕೆ ವಿಳಂಬವಾಗುತ್ತದೆ. ಕಸಿ ಮಾಡಿದ ನಂತರ, ಗಂಧಕ ಕಡಿಮೆ ಇರುವ ಮಣ್ಣಿನಲ್ಲಿ ಬೆಳೆಯುವ ಗಿಡಗಳ ಸಾವಿನ ಪ್ರಮಾಣ ಇತರ ಮಣ್ಣಿನಲ್ಲಿರುವುದಕ್ಕಿಂತ ಹೆಚ್ಚಾಗಿರುತ್ತದೆ.
ಪ್ರಾಣಿಗೊಬ್ಬರ ಹಾಗು ಎಲೆ ಅಥವಾ ಸಸ್ಯದ ಗೊಬ್ಬರಗಳ ಕಾಂಪೋಸ್ಟ್ ಮಿಶ್ರಣವು ಸಸ್ಯಗಳಿಗೆ ಬೇಕಾದ ಉತ್ತಮ ಸಾವಯವ ವಸ್ತುವಾಗಿದೆ. ಮತ್ತು ಸಲ್ಫರ್ ಮತ್ತು ಬೊರಾನ್ ಗಳಂತಹ ಪೋಷಕಾಂಶಗಳನ್ನು ಒದಗಿಸುವುದಕ್ಕೆ ಸೂಕ್ತವಾಗಿದೆ. ಗಂಧಕದ ಕೊರತೆಯನ್ನು ಪರಿಹರಿಸಲು ಇದು ದೀರ್ಘಕಾಲಿಕ ವಿಧಾನವಾಗಿದೆ.
ಹೆಚ್ಚಿನ ಶಿಫಾರಸುಗಳು:
ಗಂಧಕದ ಕೊರತೆ ನಿಸರ್ಗಲ್ಲಿ ಅಥವಾ ಕೃಷಿಯಲ್ಲಿ ಸಾಮಾನ್ಯವೇನಲ್ಲ. ಗಂಧಕ ಮಣ್ಣಿನಲ್ಲಿ ಚಲಿಸುತ್ತಿರುತ್ತದೆ ಮತ್ತು ನೀರಿನ ಚಲನೆಯೊಂದಿಗೆ ಸುಲಭವಾಗಿ ಕೆಳಗೆ ಹರಿದು ಹೋಗುತ್ತದೆ. ಕಡಿಮೆ ಸಾವಯವ ವಸ್ತುಗಳಿರುವ ಮಣ್ಣಿನಲ್ಲಿ, ಹೆಚ್ಚು ಸವೆದ ಮಣ್ಣಿನಲ್ಲಿ, ಮರಳು ಮಣ್ಣಿನಲ್ಲಿ ಅಥವಾ ಹೆಚ್ಚು ಪಿಎಚ್ ಇರುವ ಮಣ್ಣಿನಲ್ಲಿಯೇ ಏಕೆ ಗಂಧಕದ ಕೊರತೆ ಕಂಡುಬರುತ್ತದೆ ಎಂಬುದನ್ನು ಇದು ವಿವರಿಸುತ್ತದೆ. ಮಣ್ಣಿನಲ್ಲಿರುವ ಬಹುತೇಕ ಗಂಧಕವು ಮಣ್ಣಿನ ಸಾವಯವ ಪದಾರ್ಥದಲ್ಲಿರುತ್ತದೆ ಅಥವಾ ಮಣ್ಣಿನ ಖನಿಜಗಳೊಳಗೆ ಇರುತ್ತದೆ. ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳು ಖನಿಜೀಕರಣ ಪ್ರಕ್ರಿಯೆ ಮೂಲಕ ಇದನ್ನು ಸಸ್ಯಗಳಿಗೆ ಲಭ್ಯವಾಗುವಂತೆ ಮಾಡುತ್ತವೆ. ಈ ಪ್ರಕ್ರಿಯೆಯು ಅಧಿಕ ತಾಪಮಾನದಲ್ಲಿ ಉತ್ತಮವಾಗಿರುತ್ತದೆ ಏಕೆಂದರೆ ಅಧಿಕ ತಾಪಮಾನ ಈ ಸೂಕ್ಷ್ಮಜೀವಿಗಳ ಚಟುವಟಿಕೆ ಮತ್ತು ಸಂಖ್ಯೆಯನ್ನು ಹೆಚ್ಚಿಸುತ್ತದೆ. ಗಂಧಕ ಸಸ್ಯಗಳಲ್ಲಿ ಚಲಿಸುವುದಿಲ್ಲ ಮತ್ತು ಹಳೆಯ ಎಲೆಗಳಿಂದ ಹೊಸ ಎಲೆಗಳಿಗೆ ಸುಲಭವಾಗಿ ಸಾಗುವುದಿಲ್ಲ. ಆದ್ದರಿಂದಲೇ, ಕೊರತೆಯ ಲಕ್ಷಣಗಳು ಮೊದಲು ಹೊಸ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ.