ಉದ್ದಿನ ಬೇಳೆ & ಹೆಸರು ಬೇಳೆ

ಮ್ಯಾಂಗನೀಸ್ ಕೊರತೆ

Manganese Deficiency

ಕೊರತೆ

ಸಂಕ್ಷಿಪ್ತವಾಗಿ

  • ಎಳೆಯ ಎಲೆಗಳ ಮೇಲೆ ಹರಡಿದ ಚುಕ್ಕೆಯಂತೆ ತಿಳಿ ಹಸಿರಿನಿಂದ ಹಳದಿ ಬಣ್ಣದ ಅಂತರ್ ನಾಳ ಕ್ಲೋರೋಸಿಸ್.
  • ಕ್ಲೋರೋಟಿಕ್ ಪ್ರದೇಶದಲ್ಲಿ ಸಣ್ಣ ಕೊಳೆತಂತಹ ಗಾಯಗಳು ಬೆಳೆಯುತ್ತವೆ.
  • ಇದನ್ನು ಸರಿಪಡಿಸದೇ ಇದ್ದರೆ, ಕಂದು ಚುಕ್ಕೆಗಳು ಎಲೆಯ ಮೇಲ್ಮೈಯಲ್ಲಿ ಕಂಡು ಬರಬಹುದು ಮತ್ತು ತೀವ್ರವಾಗಿ ಬಾಧಿತವಾದ ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಉದುರಿ ಹೋಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

59 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಬಾಳೆಹಣ್ಣು
ಇನ್ನಷ್ಟು

ಉದ್ದಿನ ಬೇಳೆ & ಹೆಸರು ಬೇಳೆ

ರೋಗಲಕ್ಷಣಗಳು

ರೋಗಲಕ್ಷಣಗಳು ಇತರ ಪೋಷಕಾಂಶ ಕೊರತೆಯ ಸಮಸ್ಯೆಗಳಷ್ಟು ಎದ್ದು ಕಾಣುವುದಿಲ್ಲ ಮತ್ತು ಸಂಬಂಧಿಸಿದ ಬೆಳೆಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಮ್ಯಾಂಗನೀಸ್-ಕೊರತೆಯಿರುವ ಸಸ್ಯಗಳ ಮಧ್ಯ ಮತ್ತು ಮೇಲ್ಭಾಗದ (ಹೊಸ) ಎಲೆಗಳ ನಾಳಗಳು ಹಸಿರು ಬಣ್ಣದಲ್ಲೇ ಉಳಿಯುತ್ತವೆ. ಎಲೆಗಳ ಉಳಿದ ಭಾಗಗಳು ಮೊದಲಿಗೆ ತಿಳಿ ಹಸಿರಾಗುತ್ತದೆ. ನಂತರ ಹರಡಿದ ಚುಕ್ಕೆಯಂತಹ ಆಕಾರಗಳ ಜೊತೆಗೆ, ತಿಳಿ ಹಸಿರಿನಿಂದ ಹಳದಿ ಬಣ್ಣದ ಕಲೆಗಳು (ಅಂತರ್ ನಾಳ ಕ್ಲೋರೋಸಿಸ್) ಕಂಡುಬರುತ್ತವೆ. ಕ್ರಮೇಣ ಕ್ಲೋರೋಟಿಕ್ ಅಂಗಾಶಗಳಲ್ಲಿ ಸಣ್ಣ ಕೊಳೆತಂತಹ ಗಾಯಗಳು ಬೆಳೆಯುತ್ತವೆ. ವಿಶೇಷವಾಗಿ ಅಂಚುಗಳು ಮತ್ತು ತುದಿಗಳಲ್ಲಿ (ಸುಟ್ಟ ತುದಿ). ಸಣ್ಣ ಗಾತ್ರದ ಎಲೆಗಳು, ಎಲೆಯ ಅಂಚುಗಳ ವಿರೂಪತೆ ಮತ್ತು ಮುರುಟುವುದು ಇತರ ಸಂಭವನೀಯ ಲಕ್ಷಣಗಳಾಗಿವೆ. ಇದನ್ನು ಸರಿಪಡಿಸದೇ ಇದ್ದರೆ, ಕಂದು ಚುಕ್ಕೆಗಳು ಎಲೆಯ ಮೇಲ್ಮೈಯಲ್ಲಿ ಕಂಡು ಬರಬಹುದು ಮತ್ತು ತೀವ್ರವಾಗಿ ಬಾಧಿತವಾದ ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಉದುರಿ ಹೋಗುತ್ತವೆ. ಮ್ಯಾಂಗನೀಸ್ ಕೊರತೆಯನ್ನು, ಮೆಗ್ನೀಸಿಯಮ್ ಕೊರತೆ ಎಂದು ತಪ್ಪಾಗಿ ಗುರುತಿಸಬೇಡಿ. ಅದರ ರೋಗಲಕ್ಷಣಗಳು ಇದೇ ರೀತಿಯದ್ದಾಗಿರುತ್ತವೆ. ಆದರೆ ಮೆಗ್ನೀಸಿಯಮ್ ಕೊರತೆ ಹಳೆಯ ಎಲೆಗಳಲ್ಲಿ ಮೊದಲು ಕಾಣಿಸುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಪೋಷಕಾಂಶ ಮತ್ತು ಮಣ್ಣಿನ ಪಿಎಚ್ ಅನ್ನು ಸಮತೋಲನಗೊಳಿಸಲು ಗೊಬ್ಬರ, ಜೈವಿಕ ಗೊಬ್ಬರ ಅಥವಾ ಮಿಶ್ರಗೊಬ್ಬರ ಬಳಸಿ. ಇವುಗಳು ಮಣ್ಣಿನ ಸಾವಯವ ಅಂಶವನ್ನು ಹೆಚ್ಚಿಸುತ್ತದೆ ಮತ್ತು ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಪಿಎಚ್ ಅನ್ನು ಸ್ವಲ್ಪ ಕಡಿಮೆ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ಮಣ್ಣಿನ ಪಿಎಚ್ ಗೆ ಸೂಕ್ತವಾದ ಮತ್ತು ಬೆಳೆಗೆ ಸರಿಹೊಂದುವ ಸಮತೋಲಿತ ರಸಗೊಬ್ಬರದ ಯೋಜನೆ ರೂಪಿಸಿ. ಸಸ್ಯಗಳು ತಮ್ಮ ಎಲೆಗಳು ಮತ್ತು ಬೇರುಗಳ ಮೂಲಕ ಮ್ಯಾಂಗನೀಸ್ ಅನ್ನು ಅಯಾನ್ ರೂಪದಲ್ಲಿ ಹೀರಿಕೊಳ್ಳುತ್ತವೆ. ಅತ್ಯಂತ ಸಾಮಾನ್ಯ ರಸಗೊಬ್ಬರವೆಂದರೆ ಮ್ಯಾಂಗನೀಸ್ ಸಲ್ಫೇಟ್. ಎಲೆಗಳ ದ್ರವೌಷಧಗಳು ಅಥವಾ ಮಣ್ಣಿನ ಗೊಬ್ಬರಗಳನ್ನು ಗಣನೆಗೆ ತೆಗೆದುಕೊಳ್ಳಬಹುದು. ಮಣ್ಣಿನ ಪಿಎಚ್ ನಲ್ಲಿ ಸಮಸ್ಯೆ ಇಲ್ಲದಿದ್ದರೆ ಮತ್ತು ಮಣ್ಣಿನಲ್ಲಿ ಯಾವುದೇ ಮ್ಯಾಂಗನೀಸ್ ಇಲ್ಲದಿದ್ದರೆ ಸಸ್ಯಕ್ಕೆ ಮ್ಯಾಂಗನೀಸ್ ನೀಡಲು ಎಲೆಗಳ ಸಿಂಪಡಣೆಯನ್ನು ಬಳಸಬಹುದು. ನಿಗದಿತ ಪ್ರಮಾಣ ಮತ್ತು ಸರಿಯಾದ ಬಳಕೆಯ ಬಗ್ಗೆ ಗಮನ ಹರಿಸಿ.

ಅದಕ್ಕೆ ಏನು ಕಾರಣ

ಮ್ಯಾಂಗನೀಸ್ (Mn) ಕೊರತೆ ಒಂದು ವ್ಯಾಪಕವಾದ ಸಮಸ್ಯೆಯಾಗಿದ್ದು, ಸಾಮಾನ್ಯವಾಗಿ ಮರಳು ಮಣ್ಣುಗಳಲ್ಲಿ, ಪಿಎಚ್ 6 ಕ್ಕಿಂತ ಹೆಚ್ಚಿರುವ ಸಾವಯವ ಮಣ್ಣುಗಳಲ್ಲಿ ಮತ್ತು ತುಂಬಾ ಸವೆದಿರುವ ಉಷ್ಣವಲಯದ ಮಣ್ಣುಗಳಲ್ಲಿ ಅಧಿಕವಾಗಿ ಕಂಡುಬರುತ್ತದೆ. ಇದಕ್ಕೆ ವಿರುದ್ಧವಾಗಿ, ಹೆಚ್ಚು ಆಮ್ಲೀಯವಾಗಿರುವ ಮಣ್ಣುಗಳು ಈ ಪೋಷಕಾಂಶದ ಲಭ್ಯತೆಯನ್ನು ಹೆಚ್ಚಿಸುತ್ತದೆ. ಅತಿಯಾದ ಅಥವಾ ಅಸಮತೋಲಿತ ರಸಗೊಬ್ಬರದ ಬಳಕೆಯಿಂದಲೂ ಕೆಲವು ಸೂಕ್ಷ್ಮಪೋಷಕಾಂಶಗಳು ಸಸ್ಯಕ್ಕೆ ಲಭ್ಯವಾಗುವಲ್ಲಿ ಪರಸ್ಪರ ಪೈಪೋಟಿ ಮಾಡಬಹುದು. ದ್ಯುತಿಸಂಶ್ಲೇಷಣೆ ಮತ್ತು ನೈಟ್ರೇಟ್ ಹೀರಿಕೆಯಲ್ಲಿ Mn ಪ್ರಮುಖ ಪಾತ್ರ ಹೊಂದಿದೆ. ಕಬ್ಬಿಣ, ಬೋರಾನ್ ಮತ್ತು ಕ್ಯಾಲ್ಸಿಯಂನಂತೆಯೇ, ಮ್ಯಾಂಗನೀಸ್ ಕೂಡ ಸಸ್ಯದೊಳಗೆ ಚಲನರಹಿತವಾಗಿದ್ದು, ಹೆಚ್ಚಾಗಿ ಕೆಳಗಿನ ಎಲೆಗಳಲ್ಲಿ ಸಂಗ್ರಹವಾಗುತ್ತದೆ. ಹೊಸ ಎಲೆಗಳಲ್ಲಿ ರೋಗಲಕ್ಷಣಗಳು ಮೊದಲಿಗೆ ಏಕೆ ಬೆಳೆಯುತ್ತವೆ ಎಂಬುದನ್ನು ಇದು ವಿವರಿಸುತ್ತದೆ. Mn ಕೊರತೆಗೆ ಹೆಚ್ಚು ಸ್ಪಂದಿಸುವ ಮತ್ತು ಈ ಪೋಷಕಾಂಶ ಇರುವ ರಸಗೊಬ್ಬರಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಬೆಳೆಗಳೆಂದರೆ : ಧಾನ್ಯಗಳು, ದ್ವಿದಳ ಧಾನ್ಯಗಳು, ಸ್ಟೋನ್ ಫ್ರೂಟ್ಸ್, ತಾಳೆ ಬೆಳೆಗಳು, ಸಿಟ್ರಸ್, ಶುಗರ್ ಬೀಟ್ಗಳು ಮತ್ತು ಕ್ಯಾನೋಲ, ಮುಂತಾದವು.


ಮುಂಜಾಗ್ರತಾ ಕ್ರಮಗಳು

  • ಪೋಷಕಾಂಶಗಳ ಉತ್ತಮ ಹೀರುವಿಕೆಗೆ ಬೇಕಾದ ಸೂಕ್ತ ವ್ಯಾಪ್ತಿಯನ್ನು ಪಡೆಯಲು ಅಗತ್ಯವಿದ್ದರೆ ಮಣ್ಣಿನ ಪಿಎಚ್ ಅನ್ನು ಸರಿಹೊಂದಿಸಿ.
  • ಕೃಷಿ ಭೂಮಿಯಲ್ಲಿ ಚೆನ್ನಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿ ಮತ್ತು ಬೆಳೆಗೆ ಅತಿಯಾಗಿ ನೀರು ಹಾಕಬೇಡಿ.
  • ಮಣ್ಣಿನ ತೇವಾಂಶವನ್ನು ಸ್ಥಿರವಾಗಿಡಲು ಸಾವಯವ ಗೊಬ್ಬರ ಬಳಸಿ.
  • ಸಮತೋಲಿತ ರಸಗೊಬ್ಬರ ಬಳಕೆಯಿಂದ ಮಾತ್ರ ಸಸ್ಯದ ಆರೋಗ್ಯ ಮತ್ತು ಇಳುವರಿ ಹೆಚ್ಚುತ್ತದೆ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ