Iron Deficiency
ಕೊರತೆ
ಕಬ್ಬಿಣದ ಕೊರತೆಯ ಲಕ್ಷಣಗಳು ಮೊದಲು ಎಳೆಯ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಮೇಲ್ಭಾಗದ ಎಲೆಗಳ ಕ್ಲೋರೋಸಿಸ್ (ಹಳದಿ ಬಣ್ಣ) ಮೂಲಕ ಮೊದಲ ಲಕ್ಷಣಗಳು ಕಂಡು ಬರುತ್ತವೆ. ಮಧ್ಯ ನಾಳ ಮತ್ತು ಎಲೆಯ ನಾಳಗಳು ಸ್ಪಷ್ಟ ಹಸಿರು ಬಣ್ಣದಲ್ಲೇ (ಅಂತರ್ ನಾಳ ಕ್ಲೋರೋಸಿಸ್) ಉಳಿದಿರುತ್ತವೆ. ನಂತರದ ಹಂತಗಳಲ್ಲಿ, ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಇಡೀ ಎಲೆಯು ಬಿಳಿ ಮಿಶ್ರಿತ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮತ್ತು ಕಂದು ಒಣ ಚುಕ್ಕೆಗಳು ಎಲೆಯ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದು ಅಂಚಿನಲ್ಲಿ ಒಣ ತೇಪೆಗಳಿಗೆ ಕಾರಣವಾಗುತ್ತದೆ. ಬಾಧಿತ ಭಾಗಗಳನ್ನು ಜಮೀನಿನಲ್ಲಿ ಸುಲಭವಾಗಿ ದೂರದಿಂದಲೇ ಗುರುತಿಸಬಹುದು. ಕಬ್ಬಿಣದ ಕೊರತೆಯಿರುವ ಸಸ್ಯದಲ್ಲಿ ಕುಂಠಿತ ಬೆಳವಣಿಗೆಯುಂಟಾಗುತ್ತದೆ ಮತ್ತು ಇಳುವರಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ಸಣ್ಣ ಹಿಡುವಳಿದಾರರು ನೆಟ್ಟಲ್ ಸ್ಲಾಗ್ ಮತ್ತು ಪಾಚಿಯ ಸಾರದಿಂದ ಮಾಡಿದ ಎಲೆಯ ರಸಗೊಬ್ಬರವನ್ನು ಬಳಸಬಹುದು. ಪ್ರಾಣಿ ಗೊಬ್ಬರ, ಪೀಟ್ ಮತ್ತು ಕಾಂಪೋಸ್ಟ್ ಗಳನ್ನು ಹಾಕುವುದರಿಂದ ಮಣ್ಣಿನಲ್ಲಿ ಕಬ್ಬಿಣ ಸೇರಿಸಿದಂತಾಗುತ್ತದೆ. ನಿಮ್ಮ ಬೆಳೆಗಳ ಹತ್ತಿರದಲ್ಲಿ ಡಂಡೇಲಿಯನ್ ಗಳನ್ನು ನೆಡಿ. ಏಕೆಂದರೆ ಇದು ಹತ್ತಿರದ ಬೆಳೆಗಳಿಗೆ, ವಿಶೇಷವಾಗಿ ಮರಗಳಿಗೆ ಕಬ್ಬಿಣ ಲಭ್ಯವಾಗುವಂತೆ ಮಾಡುತ್ತದೆ.
ಕಬ್ಬಿಣದ ಕೊರತೆಯು ಉಷ್ಣವಲಯದ ಮಣ್ಣಿನಲ್ಲಿ ಅಥವಾ ಬಸಿದ ಮಣ್ಣಿನಲ್ಲಿ ಗಂಭೀರವಾದ ಸಮಸ್ಯೆಯಾಗಿರಬಹುದು. ಅದರಲ್ಲೂ ಮುಖ್ಯವಾಗಿ ತಂಪಾದ, ಆರ್ದ್ರ ವಸಂತ ಕಾಲದಲ್ಲಿ. ಹುಲ್ಲುಜೋಳ, ಜೋಳ, ಆಲೂಗಡ್ಡೆ ಮತ್ತು ಬೀನ್ಸ್ ತೀವ್ರವಾಗಿ ಸೋಂಕಿಗೆ ಒಳಗಾಗುವ ಬೆಳೆಗಳಾಗಿದ್ದು, ಗೋಧಿ ಮತ್ತು ಕುದುರೆ ಮೇವು ಸೊಪ್ಪು ಕಡಿಮೆ ಸೂಕ್ಷ್ಮತೆ ಹೊಂದಿವೆ. ಸುಣ್ಣದ ಕಲ್ಲಿನಿಂದ ಉತ್ಪತ್ತಿಯಾದ ಕಲ್ಕಾರಿಯಸ್ ಮತ್ತು ಕ್ಷಾರೀಯ ಮಣ್ಣುಗಳು (pH 7.5 ಅಥವಾ ಹೆಚ್ಚು) ವಿಶೇಷವಾಗಿ ಕಬ್ಬಿಣದ ಕೊರತೆಗೆ ಒಳಗಾಗುತ್ತವೆ. ದ್ಯುತಿಸಂಶ್ಲೇಷಣೆಗೆ ಮತ್ತು ಲೆಗ್ಯೂಮ್ ಗಳಲ್ಲಿ ಬೇರು ಗಂಟುಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಕಬ್ಬಿಣ ಮುಖ್ಯವಾಗಿದೆ. ಆದ್ದರಿಂದ, ಕಬ್ಬಿಣದ ಕೊರತೆ ಬೇರು ಗಂಟಿನ ದ್ರವ್ಯರಾಶಿಯನ್ನು, ಸಾರಜನಕ ಸ್ಥಿರೀಕರಣ ಮತ್ತು ಬೆಳೆ ಇಳುವರಿಯನ್ನು ನಿಧಾನಗೊಳಿಸುತ್ತದೆ. ಅಂದಾಜು ನಿರ್ಣಾಯಕ ಮಟ್ಟವು ಸುಮಾರು 2.5 ಮಿಗ್ರಾಂ/ಕೆಜಿ ಸಸ್ಯ ಒಣ ಅಂಗಾಂಶವಾಗಿದೆ. ಕಬ್ಬಿಣದ ಕೊರತೆಯು ಸಸ್ಯಗಳಲ್ಲಿ ಕ್ಯಾಡ್ಮಿಯಮ್ ನ ಹೆಚ್ಚಳ ಮತ್ತು ಶೇಖರಣೆಯನ್ನೂ ಹೆಚ್ಚಿಸುತ್ತದೆ.