ಸಾರಜನಕ ಕೊರತೆ - ಮೆಕ್ಕೆ ಜೋಳ

ಮೆಕ್ಕೆ ಜೋಳಮೆಕ್ಕೆ ಜೋಳ

ಸಾರಜನಕ ಕೊರತೆ

Nitrogen Deficiency


ಸಂಕ್ಷಿಪ್ತವಾಗಿ

  • ಎಲೆಗಳು ಬಣ್ಣಗೆಡುವುದು - ತೆಳು ಹಸಿರು, ತಿಳಿ ಕೆಂಪು ಬಣ್ಣದ ತೊಟ್ಟುಗಳು ಮತ್ತು ನಾಳಗಳು.
  • ಲೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
  • ಸಸ್ಯದ ಉದ್ದ ಮತ್ತು ತೆಳ್ಳೆನಯ ರೂಪ.

ರೋಗಲಕ್ಷಣಗಳು

ರೋಗಲಕ್ಷಣಗಳು ಹಳೆಯ ಎಲೆಗಳಲ್ಲಿ ಮೊದಲಿಗೆ ಕಾಣಿಸಿಕೊಳ್ಳುತ್ತವೆ. ಮತ್ತು ಕ್ರಮೇಣವಾಗಿ ಹೊಸ ಎಲೆಗಳತ್ತ ಸಾಗುತ್ತವೆ. ಅಲ್ಪ ಕೊರತೆಯ ಸಂದರ್ಭಗಳಲ್ಲಿ, ಹಳೆಯ, ಬೆಳೆದ ಎಲೆಗಳು ತಿಳಿ ಹಸಿರು ಬಣ್ಣವನ್ನು ಹೊಂದಿರುತ್ತವೆ. ಸರಿಪಡಿಸದೇ ಇದ್ದರೆ, ಅವು ನಂತರ ಏಕರೂಪವಾಗಿ ಕ್ಲೋರೋಟಿಕ್ ಆಗುತ್ತವೆ. ತೊಟ್ಟು ಮತ್ತು ನಾಳಗಳು ನಸುಗೆಂಪು ಬಣ್ಣವನ್ನು ಹೊಂದಿರುತ್ತವೆ. ಕೊರತೆಯು ಮುಂದುವರಿದಂತೆ, ಈ ಎಲೆಗಳು ಹಳದಿಮಿಶ್ರಿತ ಬಿಳುಪು (ನಾಳಗಳು ಸೇರಿದಂತೆ) ಬಣ್ಣಕ್ಕೆ ತಿರುಗುತ್ತವೆ, ಮುರುಟುತ್ತವೆ ಅಥವಾ ವಿರೂಪಗೊಳ್ಳಬಹುದು. ಹೊಸ ಎಲೆಗಳು ತಿಳಿ ಹಸಿರು ಬಣ್ಣದಲ್ಲಿರುತ್ತವೆ ಆದರೆ, ಸಾಮಾನ್ಯಕ್ಕಿಂತ ಸಣ್ಣದಾಗಿ ಬೆಳೆಯುತ್ತವೆ. ಸಸ್ಯವು ಕಡಿಮೆ ಕವಲೊಡೆಯುವುದರಿಂದ ಸುರುಳಿಯಾಕಾರ ಪಡೆಯುತ್ತವೆ. ಆದರೆ ಅವುಗಳ ಎತ್ತರ ಸಾಮಾನ್ಯವಾಗಿ ಸರಿಯಾಗಿರುತ್ತದೆ. ಸಸ್ಯಗಳು ನೀರಿನ ಒತ್ತಡಕ್ಕೆ ಸುಲಭವಾಗಿ ಒಳಗಾಗುತ್ತವೆ ಮತ್ತು ಎಲೆಗಳು ಬಾಡುವುದು ಸಾಮಾನ್ಯವಾದುದು. ಎಲೆಗಳ ಅಕಾಲಿಕ ಸಾವು ಮತ್ತು ಉದುರುವಿಕೆ ಸಂಭವಿಸಬಹುದು. ರಸಗೊಬ್ಬರದ ರೂಪದಲ್ಲಿ ಸಾರಜನಕವನ್ನು ಹಾಕಿದ ಕೆಲ ದಿನಗಳ ನಂತರ ಪರಿಸ್ಥಿತಿ ಸುಧಾರಿಸಿರುವುದು ಗಮನಕ್ಕೆ ಬರುತ್ತದೆ.

ಆಶ್ರಯದಾತ ಸಸ್ಯಗಳು

ಪ್ರಚೋದಕ

ಸಸ್ಯದ ಆರಂಭಿಕ ಬೆಳವಣಿಗೆಯ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಸಾರಜನಕದ ಅಗತ್ಯವಿರುತ್ತದೆ. ಅನುಕೂಲಕರ ಹವಾಮಾನದ ಅವಧಿಯಲ್ಲಿ, ವೇಗವಾಗಿ ಬೆಳೆಯುವ ಬೆಳೆಗಳಿಗೆ ಉತ್ತಮ ಸಾರಜನಕ ಸರಬರಾಜನ್ನು ಒದಗಿಸುವುದು ಮುಖ್ಯವಾಗಿದೆ. ಇದರಿಂದ ಅವು ತಮ್ಮ ಗರಿಷ್ಟ ಸಸ್ಯೀಯ ಬೆಳವಣಿಗೆ ಸಾಧಿಸಿ ಹಣ್ಣು / ಧಾನ್ಯಗಳ ಉತ್ಪಾದನೆಗೆ ಉತ್ತಮ ಸಾಮರ್ಥ್ಯವನ್ನು ಪಡೆಯುತ್ತವೆ. ಕಡಿಮೆ ಸಾವಯವ ವಸ್ತುಗಳಿರುವ ಮರಳು ಮಣ್ಣು, ಚೆನ್ನಾಗಿ ಒಣಗಿದ ಮಣ್ಣಿನಲ್ಲಿ ಸಾರಜನಕದ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಏಕೆಂದರೆ, ಇಂತಹ ಮಣ್ಣುಗಳಿಂದ ಪೋಷಕಾಂಶಗಳು ಸವೆದು ಹೋಗುವ ಸಾಧ್ಯತೆ ಹೆಚ್ಚು. ಆಗಿಂದಾಗ್ಗೆ ಮಳೆ ಬೀಳುವುದು, ಪ್ರವಾಹ ಅಥವಾ ಅತಿ ನೀರಾವರಿ ಮಣ್ಣಿನಲ್ಲಿರುವ ಸಾರಜನಕವನ್ನು ತೊಳೆದುಹಾಕಿ ಕೊರತೆಗೆ ಕಾರಣವಾಗಬಹುದು. ಬರ ಒತ್ತಡದ ಅವಧಿಗಳು ನೀರು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವುದಕ್ಕೆ ತಡೆಯಾಗಬಹುದು. ಇದು ಅಸಮತೋಲಿತ ಪೋಷಕಾಂಕಗಳ ಪೂರೈಕೆಗೆ ಕಾರಣವಾಗುತ್ತದೆ. ಅಂತಿಮವಾಗಿ, ಮಣ್ಣಿನ pH ಕೂಡ ಸಸ್ಯಗಳಿಗೆ ಸಾರಜನಕದ ಲಭ್ಯತೆಯಲ್ಲಿ ಪಾತ್ರ ವಹಿಸುತ್ತದೆ. ಕಡಿಮೆ ಅಥವಾ ಹೆಚ್ಚು ಮಣ್ಣಿನ pH ಸಸ್ಯ ಸಾರಜನಕವನ್ನು ಹೀರಿಕೊಳ್ಳುವುದರ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತವೆ.

ಜೈವಿಕ ನಿಯಂತ್ರಣ

ಮಣ್ಣಿನಲ್ಲಿ ಸಾವಯವ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿದ್ದರೆ ಅದು ಮಣ್ಣಿನ ರಚನೆಯನ್ನು ಉತ್ತಮಗೊಳಿಸುತ್ತದೆ ಮತ್ತು ನೀರು ಹಾಗು ಪೋಷಕಾಂಶಗಳನ್ನು ಉಳಿಸಿಕೊಳ್ಳುವ ಮಣ್ಣಿನ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಗೊಬ್ಬರ, ಕಾಂಪೋಸ್ಟ್, ಪೀಟ್ ರೂಪದಲ್ಲಿ ಸಾವಯವ ಪದಾರ್ಥಗಳನ್ನು ಮಣ್ಣುಗಳಿಗೆ ಸೇರಿಸಬಹುದು. ಅಥವಾ ಗಿಡದ ಬೂದಿ, ಗ್ವಾನೊ, ಹಾರ್ನ್ ಮೀಲ್ ಅಥವಾ ನೈಟ್ರೊಲೈಮ್ ಸೇರಿಸಬಹುದು. ಬೂದಿಯನ್ನು ನೇರವಾಗಿ ಎಲೆಗಳ ಮೇಲೆ ಸಿಂಪಡಿಸಬಹುದಾಗಿದೆ.

ರಾಸಾಯನಿಕ ನಿಯಂತ್ರಣ

- ಸಾರಜನಕ (ಎನ್) ಹೊಂದಿರುವ ರಸಗೊಬ್ಬರಗಳನ್ನು ಬಳಸಿ. - ಉದಾಹರಣೆಗಳು: ಯೂರಿಯಾ, ಎನ್‌ಪಿಕೆ, ಅಮೋನಿಯಂ ನೈಟ್ರೇಟ್. - ನಿಮ್ಮ ಮಣ್ಣು ಮತ್ತು ಬೆಳೆಗೆ ಉತ್ತಮ ಉತ್ಪನ್ನ ಮತ್ತು ಪ್ರಮಾಣವನ್ನು ತಿಳಿಯಲು ನಿಮ್ಮ ಕೃಷಿ ಸಲಹೆಗಾರರನ್ನು ಸಂಪರ್ಕಿಸಿ. ಹೆಚ್ಚಿನ ಶಿಫಾರಸುಗಳು: - ನಿಮ್ಮ ಬೆಳೆ ಉತ್ಪಾದನೆಯನ್ನು ಉತ್ತಮಗೊಳಿಸಲು ಬೆಳೆ ಋತುವಿನ ಪ್ರಾರಂಭದ ಮೊದಲು ಮಣ್ಣಿನ ಪರೀಕ್ಷೆ ಮಾಡಲು ಸೂಚಿಸಲಾಗುತ್ತದೆ. - ಋತುವಿನ ಉದ್ದಕ್ಕೂ ಅನೇಕ ವಿಭಜನೆಗಳಲ್ಲಿ ಸಾರಜನಕವನ್ನು ಬಳಸುವುದು ಉತ್ತಮ. - ನಿಮ್ಮ ಕೊಯ್ಲಿನ ಸಮಯ ಹತ್ತಿರದಲ್ಲಿದ್ದರೆ ಬಳಸಬೇಡಿ.

ಮುಂಜಾಗ್ರತಾ ಕ್ರಮಗಳು

  • ನಿಮ್ಮ ಬೆಳೆ ಉತ್ಪಾದನೆಯನ್ನು ಉತ್ತಮಗೊಳಿಸಲು ಬೆಳೆ ಋತುವಿನ ಪ್ರಾರಂಭದ ಮೊದಲು ಮಣ್ಣಿನ pH ಅನ್ನು ಪರಿಶೀಲಿಸಿ ಮತ್ತು ಸೂಕ್ತ ಶ್ರೇಣಿ ಪಡೆಯಲು ಅಗತ್ಯವಿದ್ದರೆ ಸುಣ್ಣವನ್ನು ಸೇರಿಸಿ.
  • ಕೃಷಿ ಭೂಮಿಯಲ್ಲಿ ನೀರು ಹರಿದು ಹೋಗಲು ಉತ್ತಮ ವ್ಯವಸ್ಥೆ ಒದಗಿಸಿ ಮತ್ತು ಅತಿಯಾಗಿ ನೀರನ್ನು ಹಾಕಬೇಡಿ.
  • ಬರಗಾಲದ ಅವಧಿಯಲ್ಲಿ ನಿಯಮಿತವಾಗಿ ಸಸ್ಯಗಳಿಗೆ ನೀರು ಹಾಕುವುದನ್ನು ಮರೆಯಬೇಡಿ.
  • ಸಾವಯವ ಪದಾರ್ಥವನ್ನು ಅಂದರೆ ಕಾಂಪೋಸ್ಟ್, ಗೊಬ್ಬರ ಅಥವಾ ಸಸ್ಯ ಗೊಬ್ಬರವನ್ನು ಸೇರಿಸಿ.
  • ತೊಟ್ಟುಗಳ ವಿಶ್ಲೇಷಣೆಯು ಬೆಳೆಗಾರರಿಗೆ ಬೆಳೆಯ ಸಾರಜನಕದ ಕೊರತೆಯ ಪ್ರಾರಂಭವನ್ನು ಕಂಡುಹಿಡಿಯಲು ಅನುವು ಮಾಡಿಕೊಡುತ್ತದೆ.