Magnesium Deficiency
ಕೊರತೆ
ಮೆಗ್ನೀಸಿಯಮ್-ಕೊರತೆಯಿರುವ ಸಸ್ಯಗಳಲ್ಲಿ ಬೆಳೆದ ಎಲೆಗಳ ನಾಳಗಳ ನಡುವಿನ ಅಂಗಾಂಶಗಳಲ್ಲಿ ನಸು ಹಸಿರು ಮಿಶ್ರಿತ ಅಥವಾ ಕ್ಲೋರೋಟಿಕ್ ಮಾದರಿಯ ಕಲೆಗಳು ಆರಂಭವಾಗುತ್ತವೆ ಮತ್ತು ಅವು ಸಾಮಾನ್ಯವಾಗಿ ಅಂಚಿನಿಂದ ಪ್ರಾರಂಭವಾಗುತ್ತವೆ. ಏಕದಳ ಸಸ್ಯಗಳಲ್ಲಿ, ಅಲ್ಪ ಕೊರತೆಯಿರುವ ಎಲೆಗಳಲ್ಲಿ ಹಸಿರಾದ ಉದ್ದನೆಯ ಕಲೆಗಳು ಕಾಣಿಸಿಕೊಂಡು, ನಂತರ ಇವು ಅಂತರನಾಳ ಕ್ಲೋರೋಸಿಸ್ ಆಗಿ ಬೆಳೆಯುತ್ತವೆ. ರೋಗ ತೀವ್ರಗೊಂಡರೆ, ಕ್ಲೋರೋಸಿಸ್ ಎಲೆಯ ಮಧ್ಯಭಾಗದವರೆಗೂ ಮುಂದುವರೆಯುತ್ತದೆ ಮತ್ತು ಸಣ್ಣ ನಾಳಗಳು ಕೂಡ ಹಾನಿಗೊಳಗಾಗುತ್ತವೆ. ಎಲೆಯ ಮುಖ್ಯಭಾಗದಲ್ಲಿ ಕೆಂಪು ಅಥವಾ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ, ಹೆಚ್ಚು ಕ್ಲೋರೋಟಿಕ್ ಆಗಿರುವ ಅಂಗಾಂಶಗಳು ಕೊಳೆತು ಎಲೆ ಹೆಚ್ಚು ಒರಟಾಗುತ್ತದೆ ಮತ್ತು ವಿರೂಪಗೊಳ್ಳುತ್ತದೆ. ಅಂತಿಮವಾಗಿ, ಹಳದಿ ಬಣ್ಣವು ಇಡೀ ಎಲೆಯನ್ನು ಆವರಿಸಿ, ಕೊನೆಗೆ ಎಲೆಗಳು ಅಕಾಲಿಕವಾಗಿ ಸಾಯುತ್ತವೆ ಮತ್ತು ಬೇಗ ಉದುರುತ್ತವೆ. ಬೇರಿನ ಬೆಳವಣಿಗೆಗೆ ತಡೆ ಉಂಟಾಗಿ ಸಸ್ಯದ ಚಟುವಟಿಕೆ ಕಡಿಮೆಯಾಗುತ್ತದೆ.
ಆಲ್ಗಲ್ ಸುಣ್ಣದ ಕಲ್ಲು, ಡೋಲಮೈಟ್ ಅಥವಾ ಲೈಮ್ ಸ್ಚೋನ್ ಮೆಗ್ನೀಸಿಯಮ್ ನಂತಹ, ಮೆಗ್ನೀಸಿಯಮ್ ಅನ್ನು ಒಳಗೊಂಡಿರುವ ಪದಾರ್ಥಗಳನ್ನು ಮಣ್ಣಿಗೆ ಸೇರಿಸಿ. ಮಣ್ಣಿನ ಪೋಷಕಾಂಶವನ್ನು ಸಮತೋಲನಗೊಳಿಸಲು ಗೊಬ್ಬರ, ಜೈವಿಕ ಗೊಬ್ಬರ ಅಥವಾ ಮಿಶ್ರಗೊಬ್ಬರವನ್ನು ಬಳಸಿ. ಇವುಗಳು ಸಾವಯವ ಪದಾರ್ಥವನ್ನು ಹೊಂದಿವೆ ಮತ್ತು ಮಣ್ಣಿನೊಳಗೆ ನಿಧಾನವಾಗಿ ಬಿಡುಗಡೆಯಾಗುವ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ.
ಹೆಚ್ಚಿನ ಶಿಫಾರಸುಗಳು:
ಕಡಿಮೆ ಪೋಷಕಾಂಶ ಮತ್ತು ಕಡಿಮೆ ಜಲಧಾರಣ ಸಾಮರ್ಥ್ಯ ಇರುವ ಹಗುರ ಮಣ್ಣು, ಮರಳು ಮಣ್ಣು ಅಥವಾ ಆಮ್ಲೀಯ ಮಣ್ಣುಗಳಲ್ಲಿ ಮೆಗ್ನೀಸಿಯಮ್ ಕೊರತೆ ಸಾಮಾನ್ಯ ಸಮಸ್ಯೆಯಾಗಿದೆ. ಆ ಮಣ್ಣಿನಲ್ಲಿ, ಪೋಷಕಾಂಶಗಳು ಸುಲಭವಾಗಿ ಸವೆದು ಹೋಗುತ್ತವೆ. ಪೊಟ್ಯಾಸಿಯಮ್ ಅಥವಾ ಅಮೋನಿಯಮ್ ಹೆಚ್ಚಿರುವ ಮಣ್ಣಿನಲ್ಲಿ ಅಥವಾ ಈ ಪೋಷಕಾಂಶಗಳನ್ನು ಹೆಚ್ಚಾಗಿ ಸೇರಿಸಿದಾಗ ಕೂಡ ಸಮಸ್ಯೆ ಉಂಟಾಗಬಹುದು. ಏಕೆಂದರೆ, ಇವು ಮಣ್ಣಿನಲ್ಲಿರುವ ಮೆಗ್ನೀಸಿಯಮ್ ಜೊತೆ ಸ್ಪರ್ಧಿಸುತ್ತವೆ. ಮೆಗ್ನೀಸಿಯಮ್ ಶರ್ಕರ ಸಾಗಣಿಕೆಗೆ ಮುಖ್ಯವಾಗಿದ್ದು, ಪತ್ರಹರಿತ್ತಿನ ಒಂದು ಪ್ರಮುಖ ಭಾಗವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಮೆಗ್ನೀಸಿಯಮ್ ಇಲ್ಲದೆ ಹೋದಾಗ, ಸಸ್ಯಗಳು ಹಳೆಯ ಎಲೆಗಳಲ್ಲಿನ ಪತ್ರಹರಿತ್ತನ್ನು, ಹೊಸ ಮತ್ತು ಬೆಳೆಯುತ್ತಿರುವ ಎಲೆಗಳಿಗೆ ವರ್ಗಾಯಿಸಲು ಪ್ರಾರಂಭಿಸುತ್ತವೆ. ಇದೇ ಅಂತರ್ನಾಳ ಕ್ಲೋರೋಸಿಸ್ ಬೆಳವಣಿಗೆಗೆ ಕಾರಣ. ಬೆಳಕಿನ ತೀವ್ರತೆಯು ರೋಗಲಕ್ಷಣಗಳು ಕಾಣಿಸಿಕೊಳ್ಳುವುದರ ಮೇಲೆ ಪ್ರಭಾವ ಬೀರುತ್ತದೆ. ಅಧಿಕ ಬೆಳಕು ಕೊರತೆಯ ಪರಿಣಾಮಗಳನ್ನು ಹೆಚ್ಚಿಸುತ್ತದೆ.