ಇತರೆ

ಪೊಟ್ಯಾಸಿಯಮ್ ಕೊರತೆ

Potassium Deficiency

ಕೊರತೆ

ಸಂಕ್ಷಿಪ್ತವಾಗಿ

  • ಎಲೆಗಳು ಹಳದಿಯಾಗುವುದು - ಅಂಚುಗಳಿಂದ ಪ್ರಾರಂಭವಾಗುತ್ತದೆ.
  • ಮುಖ್ಯ ನಾಳಗಳು ಕಡು ಹಸಿರು ಬಣ್ಣದಲ್ಲಿರುತ್ತವೆ.
  • ಸುರುಳಿಯಾಗುವ ಎಲೆಗಳು.
  • ಕುಂಠಿತ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು

58 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಬಾಳೆಹಣ್ಣು
ಇನ್ನಷ್ಟು

ಇತರೆ

ರೋಗಲಕ್ಷಣಗಳು

ರೋಗಲಕ್ಷಣಗಳು ಮುಖ್ಯವಾಗಿ ಹಳೆಯ ಎಲೆಗಳಲ್ಲಿ ಗೋಚರಿಸುತ್ತವೆ ಮತ್ತು ತೀವ್ರವಾದ ಕೊರತೆಗಳ ಸಂದರ್ಭದಲ್ಲಿ ಮಾತ್ರ ಹೊಸ ಎಲೆಗಳ ಮೇಲೆ ಕಾಣಲು ಪ್ರಾರಂಭಿಸುತ್ತವೆ. ಅಲ್ಪ ಪೊಟ್ಯಾಸಿಯಮ್ ಕೊರತೆಯ ಲಕ್ಷಣವೆಂದರೆ ಎಲೆಗಳ ಅಂಚು ಮತ್ತು ಕುಡಿಗಳು ಸ್ವಲ್ಪ ಹಳದಿಯಾಗುವುದು. ನಂತರ ಎಲೆಯ ತುದಿ ಸುಟ್ಟಂತಾಗುತ್ತದೆ. ಎಲೆ ಸ್ವಲ್ಪ ಬಿಳುಚಿದಂತಾಗುತ್ತದೆ ಆದರೆ ಮುಖ್ಯ ನಾಳಗಳು ಗಾಢ ಹಸಿರು (ಅಂತರ್ನಾಳ ಕ್ಲೋರೋಸಿಸ್) ಬಣ್ಣದಲ್ಲೇ ಇರುತ್ತವೆ. ಇದನ್ನು ತಡೆಯದೇ ಇದ್ದರೆ, ಈ ಕ್ಲೋರೋಟಿಕ್ ತೇಪೆಗಳು ಒಣಗಿ, ಚರ್ಮದ ಕಂದು ಬಣ್ಣಕ್ಕೆ ಅಥವಾ ಸುಟ್ಟಂತಹ ಗಾಢ ಕಂದು ಬಣ್ಣಕ್ಕೆ (ನೆಕ್ರೋಸಿಸ್) ತಿರುಗುತ್ತವೆ. ಇದು ಸಾಮಾನ್ಯವಾಗಿ ಎಲೆಯ ಅಂಚಿನಿಂದ ಮಧ್ಯಭಾಗಕ್ಕೆ ಮುಂದುವರಿಯುತ್ತದೆ. ಹಾಗಿದ್ದೂ, ಮುಖ್ಯ ನಾಳಗಳು ಹಸಿರಾಗಿ ಉಳಿಯುತ್ತವೆ. ಎಲೆಗಳು ಸುರುಳಿ ಸುತ್ತಿ, ಮುರುಟಿ ಅಕಾಲಿಕವಾಗಿ ಉದುರುತ್ತವೆ. ಹೊಸ ಎಲೆಗಳು ಸಣ್ಣದಾಗಿ ಮತ್ತು ಮಂಕಾಗಿರುತ್ತವೆ ಹಾಗು ಬಟ್ಟಲಿನ ಆಕಾರ ಪಡೆಯುತ್ತವೆ. ಪೊಟ್ಯಾಸಿಯಮ್-ಕೊರತೆಯಿರುವ ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ ಹಾಗು ರೋಗಗಳು ಮತ್ತು ಬರ, ಹಿಮದಂತಹ ಹವಾಮಾನ ವೈಪರೀತ್ಯಗಳಿಗೆ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಕೆಲವು ಸಂದರ್ಭಗಳಲ್ಲಿ, ಹಣ್ಣುಗಳು ತೀವ್ರವಾಗಿ ವಿರೂಪಗೊಳ್ಳಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕನಿಷ್ಠ ವರ್ಷಕ್ಕೊಮ್ಮೆಯಾದರೋ ಸಾವಯವ ವಸ್ತುವನ್ನು ಬೂದಿ ಅಥವಾ ಹಸಿರು ಗೊಬ್ಬರಗಳ ರೂಪದಲ್ಲಿ ಮಣ್ಣಿಗೆ ಸೇರಿಸಿ. ಮರದ ಬೂದಿ ಕೂಡ ಹೆಚ್ಚು ಪೊಟ್ಯಾಸಿಯಮ್ ಅಂಶವನ್ನು ಹೊಂದಿದೆ. ಆಮ್ಲೀಯ ಮಣ್ಣುಗಳಿಗೆ ಸುಣ್ಣ ಸೇರಿಸಿ ಸವೆತ ಕಡಿಮೆ ಮಾಡುವ ಮೂಲಕ ಕೆಲವು ಮಣ್ಣುಗಳಲ್ಲಿ ಪೊಟ್ಯಾಸಿಯಮ್ ಧಾರಣವನ್ನು ಹೆಚ್ಚಿಸಬಹುದು.

ರಾಸಾಯನಿಕ ನಿಯಂತ್ರಣ

  • ಪೊಟ್ಯಾಸಿಯಮ್ (K) ಹೊಂದಿರುವ ರಸಗೊಬ್ಬರಗಳನ್ನು ಬಳಸಿ.
  • ಉದಾಹರಣೆಗಳು: ಮುರಿಯೇಟ್ ಆಫ್ ಪೊಟ್ಯಾಶ್ (MOP), ಪೊಟ್ಯಾಸಿಯಮ್ ನೈಟ್ರೇಟ್ (KNO3).
  • ನಿಮ್ಮ ಮಣ್ಣು ಮತ್ತು ಬೆಳೆಗೆ ಸೂಕ್ತವಾದ ಉತ್ಪನ್ನ ಮತ್ತು ಪ್ರಮಾಣವನ್ನು ತಿಳಿಯಲು ನಿಮ್ಮ ಕೃಷಿ ಸಲಹೆಗಾರರನ್ನು ಸಂಪರ್ಕಿಸಿ.

ಹೆಚ್ಚಿನ ಶಿಫಾರಸುಗಳು:

  • ನಿಮ್ಮ ಬೆಳೆ ಉತ್ಪಾದನೆಯನ್ನು ಉತ್ತಮಗೊಳಿಸಲು ಬೆಳೆ ಋತು ಪ್ರಾರಂಭಕ್ಕೂ ಮೊದಲೇ ಮಣ್ಣಿನ ಪರೀಕ್ಷೆ ಮಾಡಲು ಶಿಫಾರಸು ಮಾಡಲಾಗಿದೆ.
  • ಹೊಲ ಸಿದ್ಧಗೊಳಿಸುವ ಸಮಯದಲ್ಲಿ ಮತ್ತು ಹೂಬಿಡುವ ಸಮಯದಲ್ಲಿ ರಸಗೊಬ್ಬರಗಳನ್ನು ಹಾಕುವುದು ಉತ್ತಮ.
  • ಎಲೆಗಳ ಸಿಂಪಡಿಸುವಿಕೆಗಿಂತ ಮಣ್ಣಿನ ರಸಗೊಬ್ಬರಗಳ ಮೂಲಕ ಬೆಳೆಗಳು ಪೊಟ್ಯಾಸಿಯಮ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ತೆಗೆದುಕೊಳ್ಳುತ್ತವೆ.

ಅದಕ್ಕೆ ಏನು ಕಾರಣ

ಮಣ್ಣಿನಲ್ಲಿ ಕಡಿಮೆ ಪ್ರಮಾಣದ ಪೊಟ್ಯಾಸಿಯಮ್ ಅಥವಾ ಸಸ್ಯಕ್ಕೆ ಸೀಮಿತ ಲಭ್ಯತೆಯ ಕಾರಣದಿಂದ ಈ ಕೊರತೆ ಉಂಟಾಗಬಹುದು. ಕಡಿಮೆ ಪಿಹೆಚ್ ಇರುವ ಮತ್ತು ಸಾವಯವ ಅಂಶ ಕಡಿಮೆ ಇರುವ ಮರಳು ಮಣ್ಣು ಅಥವಾ ಅರೆ ಮಣ್ಣುಗಳು ಪೌಷ್ಠಿಕಾಂಶ ಸವೆತ ಮತ್ತು ಬರಗಳಿಗೆ ಒಳಗಾಗುತ್ತವೆ. ಇದರಿಂದಾಗಿ ಸಮಸ್ಯೆಗಳು ಉಂಟಾಗಬಹುದು. ಅಧಿಕ ನೀರಾವರಿ ಮತ್ತು ಅಧಿಕ ಮಳೆ, ಬೇರಿನ ಸ್ಥಳದಿಂದ ಪೋಷಕಾಂಶಗಳನ್ನು ಕೊಚ್ಚಿಕೊಂಡು ಹೋಗುವಂತೆ ಮಾಡುತ್ತವೆ. ಮತ್ತು ಇದು ಸಹ ಕೊರತೆಗೆ ಕಾರಣವಾಗಬಹುದು. ಅತಿ ಉಷ್ಣತೆ ಅಥವಾ ಬರ ಪರಿಸ್ಥಿತಿಗಳು ಸಸ್ಯಗಳಿಗೆ ನೀರು ಮತ್ತು ಪೋಷಕಾಂಶಗಳ ಸಾಗಣಿಕೆಯನ್ನು ನಿರ್ಬಂಧಿಸುತ್ತವೆ. ರಂಜಕ, ಮೆಗ್ನೀಸಿಯಮ್ ಮತ್ತು ಕಬ್ಬಿಣದ ಮಟ್ಟಗಳು ಹೆಚ್ಚಾಗಿದ್ದರೂ ಸಹ ಅವು ಪೊಟ್ಯಾಸಿಯಮ್ ಜೊತೆ ಸ್ಪರ್ಧಿಸಬಹುದು. ನೀರಿನ ಸಾಗಣೆ, ಅಂಗಾಂಶಗಳ ದೃಢತೆ ಮತ್ತು ವಾತಾವರಣದೊಂದಿಗೆ ಅನಿಲಗಳ ವಿನಿಮಯದಲ್ಲಿ ಪೊಟ್ಯಾಸಿಯಮ್ ಪ್ರಮುಖ ಪಾತ್ರವಹಿಸುತ್ತದೆ. ಪೊಟ್ಯಾಸಿಯಮ್ ಅನ್ನು ನಂತರ ಸಸ್ಯಗಳಿಗೆ ಸೇರಿಸಿದರೂ ಕೂಡ, ಪೊಟ್ಯಾಸಿಯಮ್ ಕೊರತೆಯ ಲಕ್ಷಣಗಳನ್ನು ಬದಲಾಯಿಸಲಾಗುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ಅತಿ ಆಮ್ಲೀಯ ಅಥವಾ ಅತಿ ಕ್ಷಾರೀಯ ಮಣ್ಣುಗಳು ಸಾಮಾನ್ಯವಾಗಿ ಪ್ರಮುಖ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಗೆ ಕಾರಣವಾಗುತ್ತವೆ.
  • ಮಣ್ಣಿನ pH ಅನ್ನು ಪರಿಶೀಲಿಸಿ ಮತ್ತು ಸೂಕ್ತ ಶ್ರೇಣಿ ಪಡೆಯಲು ಅಗತ್ಯವಿದ್ದಲ್ಲಿ ಸುಣ್ಣ ಬೆರೆಸಿ.
  • ಪೊಟ್ಯಾಸಿಯಂ ಅನ್ನು ಸರಿಯಾಗಿ ಹೀರಬಲ್ಲ ಸಾಮರ್ಥ್ಯವಿರುವ ಪ್ರಭೇದಗಳನ್ನು ಬೆಳೆಸಿ.
  • ಗಿಡಗಳಿಗೆ ಸರಿಯಾದ ಪೋಷಕಾಂಶಗಳನ್ನು ಪೂರೈಸಲು ರಸಗೊಬ್ಬರಗಳ ಸಮತೋಲಿತ ಬಳಕೆಯನ್ನು ಖಚಿತಪಡಿಸಿಕೊಳ್ಳಿ. ಗೊಬ್ಬರ ಅಥವಾ ಎಲೆಗೊಬ್ಬರ ರೂಪದಲ್ಲಿ ಮಣ್ಣಿಗೆ ಸಾವಯವ ಪದಾರ್ಥವನ್ನು ಸೇರಿಸಿ.
  • ಸಸಿಗೆ ನಿಯಮಿತವಾಗಿ ನೀರುಣಿಸಿ ಮತ್ತು ಕೃಷಿ ಭೂಮಿಯಲ್ಲಿ ಹೆಚ್ಚು ನೀರು ನಿಲ್ಲುವುದನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ