ಮಾವು

ಟೀ ಫ್ಲಶ್ ಹುಳು

Cricula trifenestrata

ಕೀಟ

ಸಂಕ್ಷಿಪ್ತವಾಗಿ

  • ಸಸ್ಯಗಳಲ್ಲಿ ಎಲೆ ಉದುರುವುದು.
  • ಕೀಟ ಎಲೆಗಳ ಹೊರಭಾಗವನ್ನು ತಿನ್ನುವುದು.
  • ಮರಿಹುಳುಗಳ ಉಪಸ್ಥಿತಿ.

ಇವುಗಳಲ್ಲಿ ಸಹ ಕಾಣಬಹುದು


ಮಾವು

ರೋಗಲಕ್ಷಣಗಳು

ಮರಿಹುಳುಗಳು ಮರದಲ್ಲಿರುವ ಎಲ್ಲಾ ಎಲೆಗಳನ್ನು ಹಾಳುಮಾಡಬಹುದು ಮತ್ತು ಅದು ಉತ್ಪಾದಿಸುವ ಹೂವುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಕೀಟ ತಿನ್ನುವುದರಿಂದಾದ ಹಾನಿ ಮರದ ಹೊರ ಭಾಗಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ನಂತರ ಮಧ್ಯ ಹಾಗೂ ಮೇಲ್ಭಾಗಕ್ಕೆ ಹರಡುತ್ತದೆ. ಹೆಚ್ಚು ಬಾಧಿತ ಮರಗಳು ದುರ್ಬಲವಾಗುತ್ತವೆ ಮತ್ತು ಹೂವುಗಳು ಅಥವಾ ಹಣ್ಣುಗಳನ್ನು ಉತ್ಪಾದಿಸುವುದಿಲ್ಲ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಯಾಟರ್‌ಪಿಲ್ಲರ್ ಬಾಧೆಯನ್ನು ಕೈಯಿಂದ ಕಡಿಮೆ ಮಾಡಲು, ಮರಿಹುಳುಗಳ ಸಮೂಹವಿರುವ ಪ್ರದೇಶಗಳನ್ನು ಬಿಸಿಮಾಡಲು ಉದ್ದವಾದ ಹಿಡಿ ಇರುವ ಟಾರ್ಚ್ಅನ್ನು ಬಳಸಿ. ಇದರಿಂದ ಕೀಟ ಕೆಳಗೆ ಬೀಳುತ್ತದೆ. ಕೈಗವಸುಗಳನ್ನು ಧರಿಸಿಕೊಂಡು ಬಿದ್ದ ಮರಿಹುಳುಗಳನ್ನು ಸಂಗ್ರಹಿಸಿ, ಅವುಗಳನ್ನು ಹೂತುಹಾಕಿ. ಎಳೆಯ ಮರಿಹುಳುಗಳ ಸಮೂಹಗಳು ಮತ್ತು ಮೊಟ್ಟೆಗಳು ಇರುವ ಎಲೆಗಳನ್ನು ಕಿತ್ತು ನಾಶಮಾಡಿ. ಜೈವಿಕ ನಿಯಂತ್ರಣಕ್ಕಾಗಿ, ಮೊಟ್ಟೆಗಳು ಮತ್ತು ಪ್ಯೂಪೆಗಳ ವಿರುದ್ಧ ಪರಿಣಾಮಕಾರಿಯಾದ ಟೆಲಿನೊಮಸ್ ಎಸ್ಪಿ, ಮತ್ತು ವಯಸ್ಕ ಪತಂಗಗಳನ್ನು ಗುರಿಯಾಗಿಸುವ ಬ್ಯೂವೇರಿಯಾ ಬಾಸ್ಸಿಯಾನದಂತಹ ಪರಾವಲಂಬಿಗಳನ್ನು ಬಳಸಿ. ನೈಸರ್ಗಿಕ ಪರಭಕ್ಷಕಗಳು ಸಹ ಕೀಟ ಬಾಧೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೆಚ್ಚುವರಿಯಾಗಿ, ಅಜಾಡಿರಾಕ್ಟಿನ್‌ನಂತಹ ಬೇವು ಆಧಾರಿತ ಕೀಟನಾಶಕಗಳು ಈ ಕೀಟಗಳನ್ನು ನಿರ್ವಹಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ.

ರಾಸಾಯನಿಕ ನಿಯಂತ್ರಣ

ಪತಂಗಗಳನ್ನು ಸಾಮಾನ್ಯವಾಗಿ ರಾಸಾಯನಿಕ ಕೀಟನಾಶಕಗಳನ್ನು ಆಶ್ರಯಿಸದೆ ನಿಯಂತ್ರಿಸಬಹುದು, ವಿಶೇಷವಾಗಿ ಬಾಧೆಯನ್ನು ಮೊದಲೇ ಪತ್ತೆ ಮಾಡಿದರೆ. ಕೊನೆಯ ಉಪಾಯವಾಗಿ, ಮೀಥೈಲ್ ಪ್ಯಾರಾಥಿಯಾನ್ ಮತ್ತು ಎಂಡೋಸಲ್ಫಾನ್ ನಂತಹ ರಾಸಾಯನಿಕ ವಿಧಾನಗಳನ್ನು ಪರಿಗಣಿಸುವುದು ಉತ್ತಮ ಎಂದು ವರದಿಯಾಗಿದೆ. ಕೀಟನಾಶಕಗಳು ಅಥವಾ ಯಾವುದೇ ರಾಸಾಯನಿಕ ಉತ್ಪನ್ನವನ್ನು ಬಳಸುವಾಗ, ರಕ್ಷಣಾತ್ಮಕ ಉಡುಪುಗಳನ್ನು ಧರಿಸುವುದು ಮತ್ತು ಲೇಬಲ್ ಮೇಲಿನ ಸೂಚನೆಗಳನ್ನು ಎಚ್ಚರಿಕೆಯಿಂದ ಓದುವುದು ಮುಖ್ಯ. ನಿಯಮಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ. ಆದ್ದರಿಂದ ನಿಮ್ಮ ಪ್ರದೇಶಕ್ಕೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಮರೆಯದಿರಿ. ಇದು ಸುರಕ್ಷತೆಯನ್ನು ಖಾತರಿಪಡಿಸುತ್ತದೆ ಮತ್ತು ಯಶಸ್ವಿ ಬಳಕೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಅದಕ್ಕೆ ಏನು ಕಾರಣ

ಟೀ ಫ್ಲಶ್ ಹುಳು ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಭಾರತದಲ್ಲಿ ಮಾವಿನ ಮರಗಳಿಗೆ ಬರುವ ಗಮನಾರ್ಹವಾದ ಕೀಟವಾಗಿದೆ. ಆದರೆ ಇದು ರೇಷ್ಮೆ ಉತ್ಪಾದನೆಗೆ ಅವಕಾಶವನ್ನು ಒದಗಿಸುತ್ತದೆ. ಎಳೆಯ ಮರಿಹುಳುಗಳು ಗುಂಪುಗಳಲ್ಲಿ ಒಟ್ಟಿಗೆ ತಿನ್ನುತ್ತವೆ ಮತ್ತು ಅವು ಬೆಳೆದಂತೆ ಹರಡುತ್ತಾ ಹೋಗುತ್ತವೆ. ಸಾಕಷ್ಟು ಆಹಾರವಿಲ್ಲದಿದ್ದಾಗ, ದೊಡ್ಡ ಲಾರ್ವಾಗಳು ತಮ್ಮ ಮರದಿಂದ ಬಿದ್ದು, ಹೆಚ್ಚಿನ ಆಹಾರವನ್ನು ಹುಡುಕಲು ಹೊಸ ಮರಗಳಿಗೆ ತೆವಳಿ ಹೋಗಬಹುದು. ಈ ಕೀಟದ ಜೀವನ ಚಕ್ರವು ಹಲವಾರು ಹಂತಗಳನ್ನು ಒಳಗೊಂಡಿದೆ. ಸಂಪೂರ್ಣವಾಗಿ ತಿಂದ ನಂತರ, ಕ್ಯಾಟರ್ಪಿಲ್ಲರ್ ಎಲೆ ಸಮೂಹಗಳಲ್ಲಿ ಅಥವಾ ಕಾಂಡಗಳ ಮೇಲೆ ಕೋಶವನ್ನು (ಕಕೂನ್) ಕಟ್ಟುತ್ತದೆ. ಬೆಳೆದ ಪತಂಗಗಳು ಇರುಳು ಪ್ರಾಣಿಗಳಾಗಿದ್ದು ಬಣ್ಣ ಬೇರೆ ಬೇರೆ ಇರುತ್ತವೆ. ಗಂಡಿಗೆ ತಮ್ಮ ಮುಂದಿನ ರೆಕ್ಕೆಗಳ ಮೇಲೆ ಎರಡು ಕಪ್ಪು ಚುಕ್ಕೆಗಳಿರುತ್ತದೆ. ಆದರೆ ಹೆಣ್ಣಿಗೆ ದೊಡ್ಡ ಮತ್ತು ಹೆಚ್ಚು ಅನಿಯಮಿತ ಚುಕ್ಕೆಗಳಿರುತ್ತವೆ. ವರ್ಷಕ್ಕೆ ನಾಲ್ಕು ತಲೆಮಾರುಗಳವರೆಗೂ ಇರಬಹುದು. ಕೀಟವಾಗಿದ್ದರೂ, ಈ ಪತಂಗವು ಉತ್ತಮ ಗುಣಮಟ್ಟದ ರೇಷ್ಮೆಯನ್ನು ಉತ್ಪಾದಿಸುತ್ತದೆ. ಇಂಡೋನೇಷ್ಯಾದಲ್ಲಿ, ಈ ಕೀಟವನ್ನು ದೊಡ್ಡ ಪ್ರಮಾಣದಲ್ಲಿ ರೇಷ್ಮೆಗಾಗಿ ಬಳಸುವುದರಿಂದ ಉಪಯುಕ್ತವಾಗಿದೆ. ಇದು ಗ್ರಾಮೀಣ ಸಮುದಾಯಗಳಿಗೆ ಸಂಭಾವ್ಯ ಆದಾಯದ ಮೂಲವನ್ನು ಒದಗಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಮರಗಳ ಸುತ್ತಲಿನ ಕಳೆಗಳನ್ನು ತೆಗೆದುಹಾಕಿ ಮತ್ತು ಬೆಳೆದ ಪತಂಗಗಳನ್ನು ಆಕರ್ಷಿಸಲು ಮತ್ತು ಕೊಲ್ಲಲು ನಿಮ್ಮ ಹೊಲಗಳಲ್ಲಿ ಬೆಳಕಿನ ಬಲೆಗಳನ್ನು ಸ್ಥಾಪಿಸಿ.
  • ಹೆಚ್ಚುವರಿಯಾಗಿ, ಕೀಟ ಹಾನಿಯ ಯಾವುದೇ ಚಿಹ್ನೆಗಳಿಗಾಗಿ ನಿಯಮಿತವಾಗಿ ನಿಮ್ಮ ಸಸ್ಯಗಳನ್ನು ಪರೀಕ್ಷಿಸಿ.
  • ಇದರಿಂದ ನೀವು ಬೇಗನೆ ಮತ್ತು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ