ಬದನೆ

ಟಸಾಕ್ ಪತಂಗಗಳು

Lymantriinae

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಕೀಟ ತಿನ್ನುವುದರಿಂದಾದ ಹಾನಿ.
  • ಕೀಟಬಾಧೆ ಹೆಚ್ಚಾದಾಗ ಎಲೆಗಳು ಉದುರುತ್ತವೆ.
  • ಈ ಕೀಟಗಳ ಮರಿಹುಳುಗಳಿಂದ ಹಾನಿ ಉಂಟಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಬದನೆ

ರೋಗಲಕ್ಷಣಗಳು

ಮರಿಹುಳುಗಳು ಎಲೆಗಳನ್ನು ಅಗಿಯುತ್ತವೆ. ಇದರಿಂದ ಸಸ್ಯಗಳು ಕತ್ತರಿಸಿದಂತೆ ಕಾಣುತ್ತವೆ. ಅವು ಅನೇಕ ಜಾತಿಯ ಬೆಳೆಗಳು ಮತ್ತು ಮರಗಳನ್ನು ತಿನ್ನುತ್ತವೆ. ಹೆಚ್ಚಿನ ಸಂಖ್ಯೆಯ ಲಾರ್ವಾಗಳು ಎಲೆಗಳು ಉದುರುವುದಕ್ಕೆ ಕಾರಣವಾಗಬಹುದು. ಲಾರ್ವಾಗಳು ಎಳೆಯ ಹಣ್ಣುಗಳನ್ನು ಸ್ವಲ್ಪ ಕಚ್ಚಿ ಹೋಗಬಹುದು. ಇದರಿಂದ ಹಣ್ಣುಗಳ ಬಣ್ಣ ಬದಲಾಗಬಹುದು ಮತ್ತು ಸಿಪ್ಪೆಯೂ ಒರಟಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬಾಸಿಲಸ್ ತುರಿಂಜಿಯೆನ್ಸಿಸ್ ಅನ್ನು ಟಸಾಕ್ ಚಿಟ್ಟೆ ಕೀಟಗಳನ್ನು ತೊಡೆದುಹಾಕಲು ಬಳಸಬಹುದು, ವಿಶೇಷವಾಗಿ ಅವು ಇನ್ನೂ ಚಿಕ್ಕವಿದ್ದಾಗ. ಬಿಟಿಯು ಸಿಂಪಡಿಸಿದ ಎಲೆಗಳನ್ನು ತಿನ್ನುವ ಮರಿಹುಳುಗಳನ್ನು ಮಾತ್ರ ಕೊಲ್ಲುತ್ತದೆ ಮತ್ತು ಸಿಂಪಡಿಸಿದ ನಂತರ ಅದರ ಕಡಿಮೆ ಅವಧಿಯ ಕಾರಣದಿಂದಾಗಿ 7 ರಿಂದ 10 ದಿನಗಳ ನಂತರ ಎರಡನೇ ಸಿಂಪಡಣೆಯನ್ನು ಶಿಫಾರಸು ಮಾಡಲಾಗುತ್ತದೆ. ಸ್ಪಿನೋಸಾಡ್ ಸಹ ಪರಿಣಾಮಕಾರಿಯಾಗಿದೆ. ಆದರೆ ಇದು ಜೇನುನೊಣಗಳು ಮತ್ತು ನೈಸರ್ಗಿಕ ಶತ್ರುಗಳಿಗೆ ಹಾನಿ ಮಾಡಬಹುದು. ಒಣಗಿದ ನಂತರ ಹಲವಾರು ಗಂಟೆಗಳ ಕಾಲ ಇದು ಜೇನುನೊಣಗಳಿಗೆ ವಿಷಕಾರಿಯಾಗಿದೆ. ಹೂಬಿಡುವ ಸಸ್ಯಗಳಿಗೆ ಸ್ಪಿನೋಸಾಡ್ ಅನ್ನು ಹಾಕಬಾರದು.

ರಾಸಾಯನಿಕ ನಿಯಂತ್ರಣ

ಟಸಾಕ್ ಚಿಟ್ಟೆ ಬಾಧೆಯನ್ನು ಸಾಮಾನ್ಯವಾಗಿ ನೈಸರ್ಗಿಕ ಶತ್ರುಗಳಿಂದ ನಿಯಂತ್ರಿಸಲಾಗುತ್ತದೆ, ಆದ್ದರಿಂದ ಸಸ್ಯಗಳು ಚಿಕ್ಕದಾಗಿದ್ದಾಗ ಮತ್ತು ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ತೋರಿಸದ ಹೊರತು ಕೀಟನಾಶಕಗಳನ್ನು ಬಳಸುವುದು ಸಾಮಾನ್ಯವಾಗಿ ಅಗತ್ಯವಿಲ್ಲ. ಎಲೆ ಉದುರುವುದು ಹೆಚ್ಚಿದ್ದರೆ, ರಾಸಾಯನಿಕ ನಿಯಂತ್ರಣವು ಏಕೈಕ ಪರಿಹಾರವಾಗಿದೆ. ನಿಮ್ಮ ಪ್ರದೇಶದಲ್ಲಿ ಈ ಬಳಕೆಗೆ ಯಾವ ರೀತಿಯ ಕೀಟನಾಶಕಗಳನ್ನು ಅನುಮತಿಸಲಾಗಿದೆ ಎಂಬುದನ್ನು ಕಂಡುಹಿಡಿಯುವುದು ಮುಖ್ಯವಾಗಿದೆ. ಟಸಾಕ್ ಪತಂಗಗಳನ್ನು ನಿಯಂತ್ರಿಸಲು ಉಲ್ಲೇಖಿಸಲಾಗಿರುವ ಕೆಲವು ಸಕ್ರಿಯ ಪದಾರ್ಥಗಳೆಂದರೆ ಕ್ಲೋರಂಟ್ರಾನಿಲಿಪ್ರೋಲ್, ಮೆಥಾಕ್ಸಿಫೆನೊಜೈಡ್ ಮತ್ತು ಫಾಸ್ಮೆಟ್. ಇತರ ಸ್ಪ್ರಿಂಗ್ ಕ್ಯಾಟರ್ಪಿಲ್ಲರ್ ಸಮಸ್ಯೆಗಳನ್ನು ನಿಯಂತ್ರಿಸಲು ಬಳಸುವ ಸ್ಪ್ರೇಗಳು ಟಸಾಕ್ ಪತಂಗಗಳನ್ನು ಸಹ ನಿಯಂತ್ರಿಸಬಹುದು ಎಂಬುದನ್ನು ಗಮನಿಸಿ.

ಅದಕ್ಕೆ ಏನು ಕಾರಣ

ಮುಖ್ಯವಾಗಿ ಓರ್ಗಿಯಾ, ಡೇಸಿಚಿರಾ ಮತ್ತು ಯುಪ್ರೊಕ್ಟಿಸ್ ಜಾತಿಗಳಲ್ಲಿ, ಟಸಾಕ್ ಪತಂಗಗಳು ಪ್ರಪಂಚದಾದ್ಯಂತ ಸಸ್ಯಗಳಿಗೆ ಹಾನಿಯನ್ನುಂಟುಮಾಡುತ್ತವೆ. ಬೆಳೆದ ಪತಂಗಗಳಿಗೆ ದೇಹದಲ್ಲೆಲ್ಲಾ ಕೂದಲಿರುತ್ತದೆ ಮತ್ತು ದೇಹ ಕಂದು, ಬೂದು ಅಥವಾ ಬಿಳಿ ಬಣ್ಣದ್ದಾಗಿರಬಹುದು. ಟುಸಾಕ್ ಪತಂಗವು ತನ್ನ ಜೀವನ ಚಕ್ರದಲ್ಲಿ ಹಲವಾರು ಹಂತಗಳನ್ನು ಹಾದುಹೋಗುತ್ತದೆ. ಪತಂಗಗಳು ಶರತ್ಕಾಲದಲ್ಲಿ ತಮ್ಮ ಮೊಟ್ಟೆಗಳನ್ನು ಸಾಮೂಹಿಕವಾಗಿ ಇಡುತ್ತವೆ ಮತ್ತು ಮುಂದಿನ ವಸಂತಕಾಲದವರೆಗೆ ಚಳಿಗಾಲವಿಡೀ ಮೊಟ್ಟೆಗಳು ಹಾಗೆಯೇ ಇರುತ್ತವೆ. ಹವಾಮಾನವು ಬೆಚ್ಚಗಾದಾಗ, ಮೊಟ್ಟೆಗಳು ಒಡೆದು, ಎಳೆ ಮರಿಹುಳುಗಳು ಹೊರಬರುತ್ತವೆ. ಮರಿಹುಳುಗಳು ಬೆಳೆಗಳು, ಮರಗಳು ಮತ್ತು ಪೊದೆಗಳ ಎಲೆಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಅವು ತಿನ್ನುತ್ತಾ ಬೆಳೆಯುತ್ತವೆ ಮತ್ತು ಮೌಲ್ಟ್ (ಕೂದಲು, ಚರ್ಮ ಬಿಡುವುದು) ಮಾಡುತ್ತವೆ. ಅವು ಬೆಳೆದಂತೆ, ಅವುಗಳಲ್ಲಿ ವಿಶಿಷ್ಟವಾದ ಕೂದಲಿನ ಗೆಡ್ಡೆಗಳು ಬೆಳೆಯುತ್ತವೆ, ಈ ಕಾರಣದಿಂದ ಟಸ್ಸಾಕ್ ಪತಂಗಕ್ಕೆ ಆ ಹೆಸರು ಬಂದಿದೆ. ಕೆಲವು ವಾರಗಳು ತಿಂದ ನಂತರ, ಮರಿಹುಳುಗಳು ಕೋಶವನ್ನು ರೂಪಿಸುತ್ತವೆ. ಕೋಶಾವಸ್ಥೆಯಿಂದ, ಕ್ಯಾಟರ್ಪಿಲ್ಲರ್ ಬೆಳೆದ ಚಿಟ್ಟೆಯಾಗಿ ರೂಪಾಂತರಗೊಳ್ಳುತ್ತದೆ. ಬೆಳೆದ ಪತಂಗವು ಕೋಶದಿಂದ ಹೊರಬಂದು, ಸಂಭೋಗಿಸುತ್ತದೆ ಮತ್ತು ಹೆಣ್ಣು ಪತಂಗ ಹೊಸದೊಂದು ಚಕ್ರವನ್ನು ಪ್ರಾರಂಭಿಸಲು ಮತ್ತೆ ಮೊಟ್ಟೆಗಳನ್ನು ಇಡುತ್ತದೆ. ಹೆಣ್ಣುಗಳು ಹಾರಲು ಸಾಧ್ಯವಾಗದ ಕಾರಣ ಸ್ಥಳೀಯವಾಗಿ ಪತಂಗಗಳ ಸಂಖ್ಯೆಯು ಹೆಚ್ಚಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಟಸಾಕ್ ಪತಂಗಗಳ ಬಗ್ಗೆ ಜಾಗರೂಕರಾಗಿರಬೇಕು.
  • ಏಕೆಂದರೆ ಅವುಗಳ ಮರಿಹುಳುಗಳು ಮಾನವ ಚರ್ಮಕ್ಕೆ ಕಿರಿಕಿರಿ ಉಂಟುಮಾಡುವ ಮತ್ತು ಮುಟ್ಟಿದಾಗ ಸುಲಭವಾಗಿ ಬೇರ್ಪಡುವ ಕೂದಲನ್ನು ಹೊಂದಿರುತ್ತವೆ.
  • ರಕ್ಷಣಾತ್ಮಕ ಉಡುಪುಗಳನ್ನು ಧರಿಸಿ ಮತ್ತು ಯಾವುದೇ ಕ್ಯಾಟರ್ಪಿಲ್ಲರ್ ಭಾಗಗಳು ಮೂಗಿನ ಒಳಗೆ ಹೋಗದಂತೆ ನೋಡಿಕೊಳ್ಳಿ.
  • ಮೊಟ್ಟೆಯ ರಾಶಿಗಳು ಮತ್ತು ಎಳೆಯ ಮರಿಹುಳುಗಳು ಕಂಡರೆ ಅವುಗಳನ್ನು ತೆಗೆದುಹಾಕಿ.
  • ಕೀಟವನ್ನು ಹೆಕ್ಕಿ ತೆಗೆಯುವುದು ಯಾವಾಗಲೂ ಒಂದು ಉತ್ತಮ ವಿಧಾನವಾಗಿದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ