ತೊಗರಿ ಬೇಳೆ & ಮಸೂರ್ ಬೇಳೆ

ಕುಡ್ಜು ಕೀಟ

Megacopta cribraria

ಕೀಟ

ಸಂಕ್ಷಿಪ್ತವಾಗಿ

  • ಸಣ್ಣ, ಅಂಡಾಕಾರದ, ತಿಳಿ ಕಂದು ಬಣ್ಣದ ಕೀಟಗಳು.
  • ಒಣಗುತ್ತಿರುವ ಎಲೆಗಳು.
  • ಕಾಯಿಗಳ ಅಸಹಜ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು


ತೊಗರಿ ಬೇಳೆ & ಮಸೂರ್ ಬೇಳೆ

ರೋಗಲಕ್ಷಣಗಳು

ನೀವು ಕಪ್ಪು ಕಲೆಗಳೊಂದಿಗೆ ಸಣ್ಣ, ಅಂಡಾಕಾರದ, ತಿಳಿ ಕಂದು ಕೀಟಗಳನ್ನು ನೋಡುತ್ತೀರಿ. ಕಾಂಡಗಳ ಮೇಲೆ ಗುಂಪುಗೂಡಿರುವ ಕೀಟಗಳಿಗಾಗಿ ಪರಿಶೀಲಿಸಿ. ಕೀಟಗಳು ಸಸ್ಯಗಳನ್ನು ತಿನ್ನುವುದು ಮತ್ತು ಅವುಗಳ ಗುಂಪುಗೂಡುವಿಕೆಯು ಸಸ್ಯದ ಕಾಂಡಗಳ ಮೇಲೆ ಭಾರ ಹೇರುತ್ತದೆ. ಕಾಯಿಗಳ ಅನಿಯಮಿತ ಬೆಳವಣಿಗೆ ಮತ್ತು ಎಲೆಗಳ ಮೇಲೆ ನೆಕ್ರೋಟಿಕ್ ಕಲೆಗಳಿಗಾಗಿ ಸಸ್ಯಗಳನ್ನು ಪರೀಕ್ಷಿಸಿ. ಕಾಯಿಗಳು ಸರಿಯಾಗಿ ಬೆಳೆಯುವುದಿಲ್ಲ ಮತ್ತು ಬೀಜಗಳು ಚಿಕ್ಕದಾಗಿರುತ್ತವೆ ಮತ್ತು ಹಗುರವಾಗಿರುತ್ತವೆ. ಪ್ರತಿ ಕಾಯಿಗೆ ಕಡಿಮೆ ಬೀಜಗಳು ಇರುತ್ತವೆ. ಸಸ್ಯಗಳಿಂದ ಪೋಷಕಾಂಶಗಳನ್ನು ಹೀರುವ ಕೀಟಗಳು: ಎಲೆಗಳು ಮತ್ತು ಕಾಂಡಗಳು ಒಣಗಲು ಕಾರಣವಾಗುತ್ತವೆ. ಸಸ್ಯಗಳ ಮೇಲಿನ ಕಪ್ಪು, ನಿರ್ಜೀವ ಕಲೆಗಳು ಕೀಟಗಳು ಸಸ್ಯವನ್ನು ಎಲ್ಲಿ ಚುಚ್ಚುತ್ತಿವೆ ಮತ್ತು ಪೋಷಕಾಂಶಗಳನ್ನು ಹೀರುತ್ತಿವೆ ಎಂಬುದನ್ನು ತೋರಿಸುತ್ತದೆ. ವಯಸ್ಕ ಕೀಟಗಳು ಕಾಂಡಗಳನ್ನು ತಿನ್ನುತ್ತವೆ. ಆದರೆ ಸಣ್ಣ ತಲೆಮಾರುಗಳು ಎಲೆಯ ನಾಳಗಳನ್ನು ತಿನ್ನುತ್ತವೆ. ಅವುಗಳಿಗೆ ತೊಂದರೆ ಮಾಡಿದಾಗ ಅಥವಾ ಹಿಚುಕಿದಾಗ ಅವು ಬಿಡುಗಡೆ ಮಾಡುವ ವಾಸನೆಯನ್ನು ಗಮನಿಸಿ. ಕುಡ್ಜು ಕೀಟಗಳು ಎಲೆಗಳ ಮೇಲೆ ಜಿಗುಟಾದ, ಸಕ್ಕರೆಯಂತಹ ದ್ರವವನ್ನು ಬಿಡುತ್ತವೆ. ಈ ದ್ರವವು ಒಂದು ರೀತಿಯ ಶಿಲೀಂಧ್ರವನ್ನು ಪೋಷಿಸುತ್ತದೆ. ಅದು ಎಲೆಗಳ ಮೇಲೆ ಕಪ್ಪು ಲೇಪನವನ್ನು ರೂಪಿಸುತ್ತದೆ, ಸೂರ್ಯನ ಬೆಳಕನ್ನು ತಡೆಯುತ್ತದೆ ಮತ್ತು ದ್ಯುತಿಸಂಶ್ಲೇಷಣೆಗೆ ಅಡ್ಡಿಯಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬ್ಯೂವೇರಿಯಾ ಬಾಸ್ಸಿಯಾನಾ ಒಂದು ಶಿಲೀಂಧ್ರವಾಗಿದ್ದು ಅದು ಕುಡ್ಜು ಕೀಟಗಳಲ್ಲಿ ಸೋಂಕು ಉಂಟು ಮಾಡುತ್ತದೆ ಮತ್ತು ಈ ಕೀಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕವಾಗಿ ಸಂಭವಿಸುತ್ತಿದೆಯೇ ಎಂದು ಪರಿಶೀಲಿಸಿ: ಸೋಂಕಿತ ಕಂದು ಕುಡ್ಜು ಕೀಟಗಳು ಬಿಳಿ, ನೊರೆಯಿಂದ ಕೂಡಿದ ಶಿಲೀಂಧ್ರದ ಲೇಪನವನ್ನು ಹೊಂದಿರುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ವಯಸ್ಕ ಕೀಟಗಳಿಗೆ ಸಿಂಪಡಣೆ ಮಾಡಬೇಡಿ. ಏಕೆಂದರೆ ಇದು ಪರಿಣಾಮಕಾರಿಯಲ್ಲ: ಹೊಸ ಪೀಳಿಗೆಗಳಿಗೆ ಸಿಂಪಡಿಸಲು ಮರೆಯದಿರಿ. ಪ್ರತಿ ಸಸ್ಯಕ್ಕೆ 5 ಅಥವಾ ಅದಕ್ಕಿಂತ ಹೆಚ್ಚು ವಯಸ್ಕ ಕೀಟಗಳು ಋತುವಿನ ಆರಂಭದಲ್ಲಿ ಕಂಡುಬಂದಾಗ ಮಾತ್ರ ಸಿಂಪಡಿಸಿ. ವಯಸ್ಕ ಕೀಟಗಳನ್ನು ಬಿಟ್ಟು ಮೊಟ್ಟೆಗಳಿಂದ ಹೊರಬರುವ ಮರಿ ಕೀಟಗಳಿಗೆ ಸಿಂಪಡಣೆ ಮಾಡಿ. ಪರಿಣಾಮಕಾರಿ ಕೀಟನಾಶಕಗಳಲ್ಲಿ ಪೈರೆಥ್ರಾಯ್ಡ್‌ಗಳು (β-ಸೈಪರ್‌ಮೆಥ್ರಿನ್, ಡೆಲ್ಟಾಮೆಥ್ರಿನ್, ಸುಮಿಸಿಡಿನ್) ಮತ್ತು ಆರ್ಗನೋಫಾಸ್ಫೇಟ್‌ಗಳು ಸೇರಿವೆ. ಇಮಿಡಾಕ್ಲೋಪ್ರಿಡ್ ಅನ್ನು ಕೀಟಗಳ ಸಂಭವನೀಯತೆಯನ್ನು ಕಡಿಮೆ ಮಾಡಲು ಸಹ ಬಳಸಲಾಗುತ್ತದೆ. ಕಾಯಿ ರಚನೆಯ ಪ್ರಾರಂಭದಲ್ಲಿ ಶಿಫಾರಸು ಮಾಡಿದ ಸಿಂಪರಣೆಯು ಕೀಟಗಳ ಸಂಖ್ಯೆಯನ್ನು ನಿರ್ವಹಿಸಬಹುದು ಮತ್ತು ಬೇಕಾಗಿರುವ ಸಿಂಪಡಣೆಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಸಿಂಪಡಣೆ ಮಾಡುವ ಮೊದಲು ಎಚ್ಚರಿಕೆಯಿಂದ ನೋಡಿ. ಏಕೆಂದರೆ ಬ್ಯೂವೇರಿಯಾ ಬಾಸ್ಸಿಯಾನಾ ಪ್ರಯೋಜನಕಾರಿ ಶಿಲೀಂಧ್ರವಾಗಿದ್ದು ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿರಬಹುದು. ಇದು ನಿಮ್ಮ ಸಮಯ ಮತ್ತು ಹಣವನ್ನು ಉಳಿಸುತ್ತದೆ!

ಅದಕ್ಕೆ ಏನು ಕಾರಣ

ಕೀಟಗಳು ಎಲೆಯ ಕಸದಲ್ಲಿ ಅಥವಾ ಮರದ ತೊಗಟೆಯ ಕೆಳಗೆ ಚಳಿಗಾಲವನ್ನು ಕಳೆಯುತ್ತವೆ. ಹೆಣ್ಣು ಕೀಟಗಳು ತಮ್ಮ ಉದ್ದನೆಯ ಮೊಟ್ಟೆಗಳನ್ನು ಎಲೆಯ ಕೆಳಭಾಗದಲ್ಲಿ ಇಡುತ್ತವೆ. ಈ ಮೊಟ್ಟೆಗಳಿಂದ ಹೊರಬರುವ ಹೊಸ ಪೀಳಿಗೆಯು ವಯಸ್ಕ ಕೀಟಗಳಂತೆಯೇ ದೇಹದ ಆಕಾರವನ್ನು ಹೊಂದಿರುತ್ತದೆ. ಅವು ಗದ್ದೆಯ ಅಂಚುಗಳಿಂದ ಪ್ರಾರಂಭವಾಗಿ ಒಳಮುಖವಾಗಿ ಹರಡುತ್ತವೆ. ಕಡಿಮೆ ತಾಪಮಾನದಲ್ಲಿ ಮತ್ತು ಹಗಲಿನ ಅವಧಿ ಕಡಿಮೆಯಾದ ಸಮಯದಲ್ಲಿ, ಅವು ಮನೆಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ ಮತ್ತು ಮತ್ತು ಮುಂದಿನ ಬೇಸಿಗೆಯಲ್ಲಿ ಬೆಚ್ಚಗಿನ ತಾಪಮಾನದೊಂದಿಗೆ ಬೆಳೆಗಳಲ್ಲಿ ಹೊಸ ಜೀವನ ಚಕ್ರವನ್ನು ಪ್ರಾರಂಭಿಸುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ರೋಗ ತಡೆದುಕೊಳ್ಳುವ ಪ್ರಭೇದಗಳನ್ನು ಬಳಸಿ.
  • ಕೀಟಗಳು ಬಿಳಿ ಮೇಲ್ಮೈಗಳಿಗೆ ಆಕರ್ಷಿತವಾಗುತ್ತವೆ: ವಯಸ್ಕ ಕುಡ್ಜು ಕೀಟಗಳನ್ನು ಆಕರ್ಷಿಸಲು ಮತ್ತು ಸೆರೆಹಿಡಿಯಲು ಬಿಳಿ ಅಥವಾ ಹಳದಿ ಜಿಗುಟಾದ ಬಲೆಗಳನ್ನು ಬಳಸಿ.
  • ಕೊಯ್ಲಿನ ನಂತರ ನಿಮ್ಮ ಹೊಲದಿಂದ ಬೆಳೆ ಉಳಿಕೆಗಳನ್ನು ತೆಗೆದುಹಾಕಿ.
  • ಬಲೆ ಬೆಳೆಯಾಗಿ ಕಾರ್ಯನಿರ್ವಹಿಸಲು ಆರಂಭಿಕ-ಋತುವಿನ ಸೋಯಾಬೀನ್‌ಗಳನ್ನು ಗಡಿಗಳಲ್ಲಿ ನೆಡಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ