Manduca sexta
ಕೀಟ
ಮರಿಹುಳುಗಳು ಎಳೆಯ ಎಲೆಗಳು ಮತ್ತು ಚಿಗುರುಗಳನ್ನು ತಿನ್ನುತ್ತವೆ. ಇದರಿಂದ ತೂತುಗಳು ಮತ್ತು ಹೊರಭಾಗದಲ್ಲಿ ಹಾನಿ ಕಾಣುತ್ತವೆ. ಅವುಗಳ ಉಪಸ್ಥಿತಿಯನ್ನು ಎಲೆಗಳ ಮೇಲಿರುವ ಕಪ್ಪು ಹಿಕ್ಕೆಗಳಿಂದ ಗುರುತಿಸಬಹುದು. ನೀವು ಸಸ್ಯವನ್ನು ಹತ್ತಿರದಿಂದ ಗಮನಿಸಿದರೆ, ನೀವು ಹಸಿರು ಅಥವಾ ಕಂದು ಬಣ್ಣದ ಮರಿಹುಳುಗಳನ್ನು ನೋಡಬಹುದು. ಮರಿಹುಳುಗಳು ತಂಬಾಕು ಸಸ್ಯದ ಎಲ್ಲಾ ಎಲೆಗಳನ್ನು ತಿನ್ನುತ್ತವೆ. ಕಾಂಡ ಮತ್ತು ಮಧ್ಯ ಸಿರೆಗಳನ್ನು ಮಾತ್ರ ಬಿಡುತ್ತವೆ. ಕೀಟಬಾಧೆ ಅತೀ ಹೆಚ್ಚಾದ ಸಮಯದಲ್ಲಿ, ಸಂಪೂರ್ಣ ಕೃಷಿಭೂಮಿಯಲ್ಲಿನ ಸಸ್ಯಗಳ ಎಲೆಗಳು ಉದುರಬಹುದು. ಟೊಮೆಟೊಗಳಲ್ಲಿ, ಕೀಟಬಾಧೆ ಹಚ್ಚಾದಾಗ ಮರಿಹುಳುಗಳು ಬೆಳೆಯುತ್ತಿರುವ ಹಣ್ಣನ್ನು ತಿನ್ನುತ್ತವೆ ಮತ್ತು ಹಣ್ಣಿನ ಮೇಲೆ ದೊಡ್ಡದಾದ, ತೆರೆದ ಗುರುತುಗಳನ್ನು ಬಿಡುತ್ತವೆ.
ಲೇಬಲ್ ಮತ್ತು ಸ್ಥಳೀಯ ಮಾರ್ಗಸೂಚಿಗಳ ಪ್ರಕಾರ ಬ್ಯಾಸಿಲಸ್ ತುರಿಂಜಿಯೆನ್ಸಿಸ್ (Bt) ಉತ್ಪನ್ನಗಳನ್ನು ಬಳಸಿ. Bt ಒಂದು ಬ್ಯಾಕ್ಟೀರಿಯಂ ಆಗಿದ್ದು ಅದನ್ನು ಬಳಸಿದಾಗ ಅದು ಮರಿಹುಳುಗಳನ್ನು ಕೊಲ್ಲುತ್ತದೆ ಮತ್ತು ಸಾವಯವ ಕೃಷಿಗೆ ಸುರಕ್ಷಿತವಾಗಿದೆ. ಹೆಚ್ಚುವರಿಯಾಗಿ, ಪಕ್ಷಿಗಳು, ಸಣ್ಣ ಸಸ್ತನಿಗಳು, ಲೇಡಿಬಗ್‌ಗಳು, ಲೇಸ್‌ವಿಂಗ್‌ಗಳು ಮತ್ತು ಪ್ಯಾರಾಸಿಟಾಯ್ಡ್ ಕಣಜಗಳಂತಹ ನೈಸರ್ಗಿಕ ಪರಭಕ್ಷಕಗಳು ಹಾರ್ನ್‌ವರ್ಮ್ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನಿಮ್ಮ ಸಸ್ಯಗಳಲ್ಲಿ ಯಾವುದೇ ತಂಬಾಕಿನ ಹಾರ್ನ್‌ವರ್ಮ್‌ಗಳನ್ನು ನೀವು ಕಂಡರೆ, ಕೈಗವಸುಗಳನ್ನು ಧರಿಸಿ ಅವುಗಳನ್ನು ಕೈಯಿಂದ ತೆಗೆದುಹಾಕಿ ಮತ್ತು ಅವುಗಳನ್ನು ಕೊಲ್ಲಲು ಸಾಬೂನು ನೀರಿನ ಬಕೆಟ್‌ನಲ್ಲಿ ಹಾಕಿ.
ತಂಬಾಕು ಹಾರ್ನ್‌ವರ್ಮ್ ಮತ್ತು ಇತರ ಮರಿಹುಳುಗಳ ನಿರ್ವಹಣೆಗಾಗಿ ಹಲವಾರು ರಾಸಾಯನಿಕ ಕೀಟನಾಶಕಗಳು ಲಭ್ಯವಿವೆ. ಮಲಾಥಿಯಾನ್, ಡಯಾಜಿನಾನ್, ಕಾರ್ಬರಿಲ್ ಮತ್ತು ಫೆನಿಟ್ರೋಥಿಯಾನ್ ಕೀಟನಾಶಕಗಳನ್ನು ಕೀಟಗಳ ಬೆಳವಣಿಗೆಯ ವಿವಿಧ ಹಂತಗಳನ್ನು ಗುರಿಯಾಗಿಸಿ ಬಳಸಲಾಗುತ್ತದೆ. ಆದರೆ ಅವು ಸಕ್ರಿಯವಾಗಿ ಗಿಡ ತಿನ್ನುವ ಮರಿಹುಳುಗಳ ಹಂತದಲ್ಲಿ ವಿಶೇಷವಾಗಿ ಪರಿಣಾಮಕಾರಿಯಾಗಿವೆ. ಕೀಟನಾಶಕಗಳು ಅಥವಾ ಯಾವುದೇ ರಾಸಾಯನಿಕ ಉತ್ಪನ್ನವನ್ನು ಬಳಸುವಾಗ, ಕಣ್ಣಿನ ರಕ್ಷಣೆ ಸೇರಿದಂತೆ ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸುವುದು ಮುಖ್ಯವಾಗಿದೆ ಮತ್ತು ಲೇಬಲ್ ಮೇಲಿನ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ. ನಿಯಮಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ, ಆದ್ದರಿಂದ ನಿಮ್ಮ ಪ್ರದೇಶಕ್ಕೆ ನಿರ್ದಿಷ್ಟವಾದ ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಇದು ಸುರಕ್ಷತೆಯನ್ನು ಖಾತರಿಪಡಿಸುತ್ತದೆ ಮತ್ತು ಯಶಸ್ವಿ ಬಳಕೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ರೋಗಲಕ್ಷಣಗಳು ಕೀಟಗಳಿಂದ ಉಂಟಾಗುತ್ತವೆ. ಈ ಕೀಟಗಳು ಸೋಲಾನೇಶಿಯಸ್ ಸಸ್ಯಗಳನ್ನು ಮಾತ್ರ ತಿನ್ನುತ್ತವೆ. ಸಾಮಾನ್ಯವಾಗಿ ತಂಬಾಕು ಮತ್ತು ಟೊಮೆಟೊಗಳನ್ನು. ಮರಿಹುಳುಗಳು ನಮ್ಮ ತೋರುಬೆರಳಿನ ಉದ್ದದಷ್ಟು ಬೆಳೆಯಬಹುದು ಮತ್ತು ಅದರ ದೇಹದ ಕೊನೆಯಲ್ಲಿ ಕೆಂಪು ಅಥವಾ ಕಪ್ಪು "ಕೊಂಬು" ಇರುತ್ತದೆ. ಮರಿಹುಳುಗಳು ಸಾಮಾನ್ಯವಾಗಿ ಹಸಿರು ಬಣ್ಣದಲ್ಲಿರುತ್ತವೆ. ಆದರೆ ಕೆಲವೊಮ್ಮೆ ಕಂದು ಬಣ್ಣದ್ದಾಗಿರಬಹುದು ಮತ್ತು ಅದರ ದೇಹದ ಪ್ರತಿ ಬದಿಯಲ್ಲಿ ಏಳು ಕರ್ಣೀಯ ಬಿಳಿ ಪಟ್ಟೆಗಳು ಮತ್ತು ಅದರ ದೇಹದ ಪ್ರತಿ ಬದಿಯಲ್ಲಿ ನೀಲಿ-ಕಪ್ಪು ಕಣ್ಣುಗುಡ್ಡೆಯನ್ನು ಹೊಂದಿರುತ್ತದೆ. ಹೆಣ್ಣು ತಂಬಾಕು ಹಾರ್ನ್ ವರ್ಮ್ ಪತಂಗವು ಆಶ್ರಯದಾತ ಸಸ್ಯದ ಎಲೆಗಳ ಮೇಲೆ ತನ್ನ ಮೊಟ್ಟೆಗಳನ್ನು ಇಡುತ್ತದೆ. ಮರಿಹುಳುಗಳು ಈಗಾಗಲೇ ತಿಂದಿರುವ ಸಸ್ಯಗಳ ಮೇಲೆ ಸಾಮಾನ್ಯವಾಗಿ ಮೊಟ್ಟೆಗಳನ್ನು ಇಡುವುದಿಲ್ಲ. ಮೊಟ್ಟೆಯೊಡೆದು ಬಂದ ಮರಿಹುಳು ಸಸ್ಯದ ಎಲೆಗಳು ಮತ್ತು ಕಾಂಡಗಳನ್ನು ತಿನ್ನುತ್ತದೆ. ಮರಿಹುಳು ತನ್ನ ವಿಶ್ರಾಂತಿ ಹಂತದವರೆಗೆ ಚರ್ಮವನ್ನು ಹಲವಾರು ಬಾರಿ ಮೌಲ್ಟ್ ಮಾಡುತ್ತದೆ. ಈ ಸಮಯದಲ್ಲಿ ಮರಿಹುಳು ದೊಡ್ಡ ಚಿಟ್ಟೆಯಾಗಿ ರೂಪಾಂತರಗೊಳ್ಳುತ್ತದೆ. ವಿಶ್ರಾಂತಿಯ ಹಂತವು ನೆಲದಡಿಯಲ್ಲಿ ಅಥವಾ ಎಲೆಯ ಕಸದ ಆಳದಲ್ಲಿ ಕಂಡುಬರುತ್ತದೆ.