ದ್ರಾಕ್ಷಿ

ದ್ರಾಕ್ಷಿ ಬಳ್ಳಿಯ ಫಿಲೋಕ್ಸೆರಾ

Daktulosphaira vitifoliae

ಕೀಟ

ಸಂಕ್ಷಿಪ್ತವಾಗಿ

  • ಎಳೆಯ ಎಲೆಗಳು ಮತ್ತು ಎಲೆಗಳ ಕೆಳಭಾಗದಲ್ಲಿ ಹಸಿರು ತಿರುಳು ಅಥವಾ ಕೆಂಪು ಗಂಟುಗಳು.
  • ಅಸಹಜವಾಗಿ ಎಲೆ ಉದುರುವುದು.
  • ಬೇರುಗಳ ಮೇಲೆ ಗಂಟುಗಳು.
  • ಬೇರಿನ ವ್ಯವಸ್ಥೆಯ ಬೆಳವಣಿಗೆ ಕಡಿಮೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ಡಕ್ಟುಲೋಸ್ಫೈರಾ ವಿಟಿಫೋಲಿಯಾ ಎರಡು ಗಂಟು-ಉತ್ಪಾದಿಸುವ ಹಂತಗಳನ್ನು ಹೊಂದಿದೆ; ಒಂದು ಎಲೆಯಲ್ಲಿ ಗಂಟಾಗುವ ಹಂತ ಮತ್ತೊಂದು ಬೇರಿನಲ್ಲಿ ಗಂಟಾಗುವ ಹಂತ. ಎಲೆಯ ಕೆಳಗಿನ ಮೇಲ್ಮೈಯಲ್ಲಿ ಸಣ್ಣ ಗಂಟುಗಳು ಬೆಳೆಯುತ್ತವೆ. ಗಂಟುಗಳ ಗಾತ್ರವು ಅರ್ಧ ಬಟಾಣಿ ಗಾತ್ರದಲ್ಲಿರುತ್ತವೆ. ಕೆಲವೊಮ್ಮೆ, ಇಡೀ ಎಲೆ ಗಂಟುಗಳಿಂದ ಆವೃತವಾಗಬಹುದು. ದ್ರಾಕ್ಷಿ ಉತ್ಪಾದನೆಯಲ್ಲಿ ಎಲೆಯ ಗಂಟುಗಳು ಸಾಮಾನ್ಯವಾಗಿ ಗಮನಾರ್ಹ ನಷ್ಟವನ್ನು ಉಂಟುಮಾಡುವುದಿಲ್ಲ. ಆದಾಗ್ಯೂ, ತೀವ್ರವಾದ ಮುತ್ತಿಕೊಳ್ಳುವಿಕೆಗಳು ಋತುವಿನ ಕೊನೆಯಲ್ಲಿ ಪೀಡಿತ ಎಲೆಗಳನ್ನು ಗಣನೀಯವಾಗಿ ವಿರೂಪಗೊಳಿಸುತ್ತವೆ ಮತ್ತು ಎಲೆ ಉದುರುವುದಕ್ಕೆ ಕಾರಣವಾಗುತ್ತವೆ. ಕೆಲವು ದೇಶಗಳಲ್ಲಿ ಫಿಲೋಕ್ಸೆರಾದ ಎಲೆ-ಗಂಟು ರೂಪಗಳು ವಿರಳವಾಗಿ ಕಂಡುಬರುತ್ತವೆ. ಬೇರಿನ ಗಂಟುಗಳಿಲ್ಲದೆ ಎಲೆಗಳ ಮೇಲೆ ದಾಳಿಮಾಡುವ ಗಂಟು ರೂಪಗಳು ಸಂಭವಿಸುವುದಿಲ್ಲ ಎಂಬುದನ್ನು ಗಮನಿಸಿ. ಮತ್ತೊಂದು ವಿಷಯವೆಂದರೆ ಬೇರುಗಳ ಮೇಲಿನ ಆಕ್ರಮಣವನ್ನು ನಿಯಂತ್ರಿಸಲು ಕಷ್ಟವಾಗಬಹುದು ಮತ್ತು ಅದು ಬೇರುಗಳ ಊತ ಮತ್ತು ಬಳ್ಳಿಗಳು ಸಾಯುವುದಕ್ಕೆ ಕಾರಣವಾಗಬಹುದು. ಬೇರಿನ ವ್ಯವಸ್ಥೆ ಸತ್ತಾಗದು ದ್ವಿತೀಯಕ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಬೇರಿನಲ್ಲಿ ತೀವ್ರ ಮುತ್ತಿಕೊಳ್ಳುವಿಕೆಗಳು ಎಲೆ ಉದುರುವುದಕ್ಕೆ ಕಾರಣಬಹುದು ಮತ್ತು ಚಿಗುರಿನ ಬೆಳವಣಿಗೆಯನ್ನು ಕಡಿಮೆ ಮಾಡಬಹುದು. ದಾಳಿಗೆ ಒಳಗಾಗುವ ಬಳ್ಳಿಗಳು 3-10 ವರ್ಷಗಳಲ್ಲಿ ಸಾಯಬಹುದು. ಸಾಮಾನ್ಯವಾಗಿ, 10 ವರ್ಷಕ್ಕಿಂತ ಮೇಲ್ಪಟ್ಟ ಸದೃಢ ಬಳ್ಳಿಗಳಲ್ಲಿ ರೋಗಲಕ್ಷಣಗಳು ಕಡಿಮೆಯಾಗಿರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ದ್ರಾಕ್ಷಿ ಫಿಲೋಕ್ಸೆರಾದ ಜೈವಿಕ ನಿಯಂತ್ರಣದ ಬಗ್ಗೆ ಸ್ವಲ್ಪ ಮಾತ್ರವೇ ಮಾಹಿತಿ ಲಭ್ಯವಿದೆ; ನೈಸರ್ಗಿಕ ಶತ್ರುಗಳಿಗಿಂತ ಪರಿಸರ ಮತ್ತು ಬೇರಿನ ಪರಿಸ್ಥಿತಿಗಳು ಹೆಚ್ಚು ಮುಖ್ಯ.

ರಾಸಾಯನಿಕ ನಿಯಂತ್ರಣ

ರಾಸಾಯನಿಕ ಸಾಧನಗಳೊಂದಿಗೆ ಫಿಲೋಕ್ಸೆರಾಕ್ಕೆ ಚಿಕಿತ್ಸೆ ಮಾಡುವುದು ಯಾವಾಗಲೂ ಸಾಧ್ಯವಿಲ್ಲ. ಬಹಳ ಸೂಕ್ಷ್ಮ ತಳಿಗಳ ಮೇಲೆ, ವಿಶೇಷವಾಗಿ ಎಳೆಯ ಸಸ್ಯಗಳ ಮೇಲೆ. ವಸಂತಕಾಲದಲ್ಲಿ ಮೊದಲ ಗಂಟುಗಳು ಬೆಳೆದ ತಕ್ಷಣ ಚಿಕಿತ್ಸೆ ನೀಡುವುದು ಅವಶ್ಯಕ. ಗಂಟು ಕಾಣಿಸಿಕೊಂಡ ತಕ್ಷಣ, ಮೊಟ್ಟೆಗಳು ಹೊರಬರಲು ಪ್ರಾರಂಭಿಸಿವೆಯೇ ಎಂಬುದನ್ನು ಪತ್ತೆಹಚ್ಚಲು ರೇಜರ್ ಬ್ಲೇಡ್ನಿಂದ ಅವುಗಳನ್ನು ಪ್ರತಿದಿನ ಕತ್ತರಿಸಿ ತೆರೆಯಬೇಕು. ಸಣ್ಣ ಲಾರ್ವಾಗಳು ಗಮನಕ್ಕೆ ಬಂದ ತಕ್ಷಣ ರಾಸಾಯನಿಕ ನಿಯಂತ್ರಣವನ್ನು ಬಳಸಬೇಕು. ವಿವಿಧ ಜೀವನ ಚಕ್ರಗಳು ಸಹ-ಅಸ್ತಿತ್ವದಲ್ಲಿರುವ ಅನೇಕ ತಲೆಮಾರುಗಳ ಹಂತವನ್ನು ತಲುಪದಂತೆ ಕಣ್ಗಾವಲು ಮತ್ತು ಆರಂಭಿಕ ಚಿಕಿತ್ಸೆಯ ಬಳಕೆಯನ್ನು ಖಾತರಿಪಡಿಸಿಕೊಳ್ಳಬೇಕು. ಈ ಸಂದರ್ಭಗಳಲ್ಲಿ ಕೀಟನಾಶಕಗಳು ಬಹಳ ಕಡಿಮೆ ಪರಿಣಾಮ ಬೀರುತ್ತವೆ. ನಿಮ್ಮ ಪ್ರದೇಶದಲ್ಲಿ ನಿಯಂತ್ರಿಸಲಾಗಿರುವ ಉತ್ಪನ್ನಗಳನ್ನೇ ಯಾವಾಗಲೂ ಬಳಸಿ.

ಅದಕ್ಕೆ ಏನು ಕಾರಣ

ಡಕ್ಟುಲೋಸ್ಫೈರಾ ವಿಟಿಫೋಲಿಯ ಜೀವನ ಚಕ್ರವು ಸಂಕೀರ್ಣವಾಗಿದೆ. ಈ ಕೀಟವು ಭಾರವಾದ ಜೇಡಿ ಮಣ್ಣು ಮತ್ತು ಒಣ ಪರಿಸ್ಥಿತಿಗಳಿಗೆ ಆದ್ಯತೆ ನೀಡುತ್ತದೆ. ವಸಂತ ಋತುವಿನಲ್ಲಿ, ಹೆಣ್ಣು ಕೀಟವು ದ್ರಾಕ್ಷಿಯ ಬಳ್ಳಿಯ ತೊಗಟೆ ಮೇಲೆ ಇಡಲಾದ ಮೊಟ್ಟೆಯಿಂದ ಹೊರಬರುತ್ತದೆ ಮತ್ತು ಎಲೆಗಳಿಗೆ ವಲಸೆ ಹೋಗುತ್ತದೆ, ಅಲ್ಲಿ ಅವು ಗಂಟುಗಳನ್ನು ಉತ್ಪಾದಿಸುತ್ತವೆ. 15 ದಿನಗಳಲ್ಲಿ, ಹೆಣ್ಣು ಪ್ರೌಢಾವಸ್ಥೆಯನ್ನು ತಲುಪುತ್ತದೆ, ಗಂಟುಗಳಲ್ಲಿ ಮೊಟ್ಟೆಗಳನ್ನು ತುಂಬುತ್ತದೆ ಮತ್ತು ಶೀಘ್ರದಲ್ಲೇ ಸಾಯುತ್ತವೆ. ಈ ಮೊಟ್ಟೆಗಳಿಂದ ಹೊರಬರುವ ಮರಿಹುಳುಗಳು ಗಂಟುಗಳಿಂದ ತಪ್ಪಿಸಿಕೊಳ್ಳುತ್ತವೆ ಮತ್ತು ಹೊಸ ಎಲೆಗಳೆಡೆಗೆ ಚಲಿಸುತ್ತವೆ. ಅವು ಹೊಸ ಗಂಟು ಮತ್ತು ಮೊಟ್ಟೆಗಳನ್ನು ಉತ್ಪಾದಿಸುತ್ತವೆ. ಬೇಸಿಗೆಯಲ್ಲಿ, 6 ಅಥವಾ 7 ತಲೆಮಾರುಗಳು ಇರಬಹುದು. ಶರತ್ಕಾಲದಲ್ಲಿ, ಮರಿಹುಳುಗಳು ಬೇರುಗಳಿಗೆ ವಲಸೆ ಹೋಗುತ್ತವೆ, ಅಲ್ಲಿ ಅವು ಚಳಿಗಾಲದುದ್ದಕ್ಕೂ ಹೈಬರ್ನೇಟ್ ಆಗುತ್ತವೆ. ಮುಂದಿನ ವಸಂತಕಾಲದಲ್ಲಿ ಅವು ಮತ್ತೆ ಸಕ್ರಿಯವಾಗುತ್ತವೆ ಮತ್ತು ಬೇರಿನಲ್ಲಿ ಗಂಟುಗಳನ್ನು ಉತ್ಪಾದಿಸುತ್ತವೆ. ರೆಕ್ಕೆಗಳಿಲ್ಲದ ಹೆಣ್ಣುಕೀಟಗಳು ವರ್ಷದಿಂದ ವರ್ಷಕ್ಕೆ ಬೇರುಗಳಲ್ಲಿ ಅನಿರ್ದಿಷ್ಟವಾಗಿ ಸಂತಾನೋತ್ಪತ್ತಿ ಮಾಡಬಹುದು. ಬೇಸಿಗೆಯ ಕೊನೆಯಲ್ಲಿ ಮತ್ತು ಶರತ್ಕಾಲದಲ್ಲಿ, ಬೇರಿನಲ್ಲಿ ವಾಸಿಸುವ ಕೆಲವು ಫಿಲೋಕ್ಸೆರಾಗಳು ಮೊಟ್ಟೆ ಇಡುತ್ತವೆ ಮತ್ತು ಅವು ರೆಕ್ಕೆಯಿರುವ ಹೆಣ್ಣುಕೀಟಗಳಾಗಿ ಬೆಳೆಯುತ್ತವೆ. ರೆಕ್ಕೆಯಿರುವ ಹೆಣ್ಣುಕೀಟಗಳು ಬೇರುಗಳಿಂದ ಕಾಂಡಗಳಿಗೆ ವಲಸೆ ಹೋಗುತ್ತವೆ, ಅಲ್ಲಿ ಅವು ಎರಡು ಗಾತ್ರದ ಮೊಟ್ಟೆಗಳನ್ನು ಇಡುತ್ತವೆ. ಚಿಕ್ಕವುಗಳು ಗಂಡು ಮತ್ತು ದೊಡ್ಡವುಗಳು ಹೆಣ್ಣುಗಳಾಗಿ ಬೆಳೆಯುತ್ತವೆ. ಸಂಯೋಗ ಸಂಭವಿಸುತ್ತದೆ ಮತ್ತು ಹೆಣ್ಣು ನಂತರ ಒಂದೇ ಒಂದು ಫಲವತ್ತಾದ ಮೊಟ್ಟೆಯನ್ನು ಇಡುತ್ತದೆ. ಅದು ದ್ರಾಕ್ಷಿಯ ಕಾಂಡದ ಮೇಲೆ ಚಳಿಗಾಲವನ್ನು ಕಳೆಯುತ್ತದೆ. ಈ ಮೊಟ್ಟೆಯೇ ಎಲೆಗಳಲ್ಲಿ ವಾಸಿಸುವ ಪೀಳಿಗೆಗೆ ಕಾರಣವಾಗುತ್ತದೆ. ಭೌಗೋಳಿಕ ಅಂಶಗಳ ಆಧಾರದ ಮೇಲೆ, ವಿಭಿನ್ನ ಜೀವನ ಚಕ್ರಗಳನ್ನು ಹೊಂದಿರುವ ಪೀಳಿಗೆಗಳು ಒಂದೇ ಸಮಯದಲ್ಲಿ ಬೆಳೆಯಬಹುದು.


ಮುಂಜಾಗ್ರತಾ ಕ್ರಮಗಳು

  • ರೋಗ ನಿರೋಧಕ ಬೇರುಕಾಂಡಗಳು (ಅಮೆರಿಕನ್ ಬೇರುಕಾಂಡಗಳು) ಹಲವು ದಶಕಗಳಿಂದ ಈ ರೋಗಕ್ಕೆ ಮುಖ್ಯ ಮತ್ತು ಅತ್ಯಂತ ಯಶಸ್ವಿ ನಿಯಂತ್ರಣ ಕ್ರಮವಾಗಿದೆ.
  • ಎಲ್ಲಾ ವಿಟಿಸ್ ವಿನಿಫೆರಾ ಪ್ರಭೇದಗಳು ಮತ್ತು ಫ್ರೆಂಚ್ ಹೈಬ್ರಿಡ್ ತಳಿಗಳು ಬೇರು ಗಂಟು ಕೀಟದಿಂದ ಗಾಯಕ್ಕೆ ಒಳಗಾಗುತ್ತವೆ.
  • ಸಾಮಾನ್ಯವಾಗಿ, ವಿನಿಫೆರಾ ಮೂಲವನ್ನು ಹೊಂದಿರದ ಬೇರುಕಾಂಡಗಳು ತಮ್ಮ ಪ್ರತಿರೋಧವನ್ನು ಗಮನಾರ್ಹವಾಗಿ ಉಳಿಸಿಕೊಂಡಿವೆ.
  • ಹಿಂದೆ, ಹಲವಾರು ವಾರಗಳವರೆಗೆ ದ್ರಾಕ್ಷಿತೋಟಗಳಲ್ಲಿ ನೀರು ನಿಲ್ಲಿಸುವ ಕ್ರಮವನ್ನು ಶಾಸ್ತ್ರೀಯವಾಗಿ ಬಳಸಲಾಗುತ್ತಿತ್ತು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ