Retithrips syriacus
ಕೀಟ
ಥ್ರಿಪ್ಸ್ ಹೋಸ್ಟ್ ಎಲೆಗಳಿಂದ ರಸವನ್ನು ಹೀರುತ್ತದೆ, ಇದು ಎಲೆ ಉದುರುವುದಕ್ಕೆ ಮತ್ತು ಬಾಡುವುದಕ್ಕೆ ಕಾರಣವಾಗುತ್ತದೆ. ಕೀಟವು ಎಲೆಯ ಮೇಲೆ ಸ್ಟೈಲೆಟ್‌ಗಳನ್ನು ಚುಚ್ಚುವುದರಿಂದ ಬೆಳ್ಳಿ ಬಣ್ಣದ ತೇಪೆಗಳು ಕಾಣಿಸಿಕೊಳ್ಳುತ್ತವೆ. ಅವು ತಿನ್ನುವ ಸ್ಥಳಗಳಲ್ಲಿ, ಹಣ್ಣು ಬೂದು ಬಣ್ಣಕ್ಕೆ ತಿರುಗುತ್ತದೆ. ಮುತ್ತಿಕೊಳ್ಳುವಿಕೆ ತೀವ್ರವಾಗಿದ್ದಾಗ ಹಣ್ಣು ವಿಕಾರವಾಗುತ್ತದೆ ಮತ್ತು ಸಾಮಾನ್ಯವಾಗಿ ಬೆಳೆವಣಿಗೆಯಲ್ಲಿ ವಿಫಲವಾಗುತ್ತವೆ.
ಜಿಯೋಕೋರಿಸ್ ಓಕ್ರೊಪ್ಟೆರಸ್ ಮತ್ತು ಮೆಟಾಸಿಯುಲಸ್ ಆಕ್ಸಿಡೆಂಟಲಿಸ್ (ಪರಭಕ್ಷಕ) ನಂತಹ ನೈಸರ್ಗಿಕ ಶತ್ರುಗಳನ್ನು ಪರಿಚಯಿಸಿ. ಪರಭಕ್ಷಕ ಥ್ರಿಪ್ಸ್, ಹಸಿರು ಲೇಸ್ವಿಂಗ್‌ಗಳು, ಮೈನ್ಯೂಟ್ ಪೈರೇಟ್ ಬಗ್‌ಗಳು ಮತ್ತು ಹಲವಾರು ಫೈಟೊಸೈಡ್ ಹುಳಗಳು ಸಸ್ಯ-ತಿನ್ನುವ ಥ್ರಿಪ್ಸ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳೊಂದಿಗೆ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಥ್ರಿಪ್ಸ್‌ಅನ್ನು ಕೀಟನಾಶಕಗಳಿಂದ ಪರಿಣಾಮಕಾರಿಯಾಗಿ ನಿಯಂತ್ರಿಸಲು ಕಷ್ಟವಾಗಬಹುದು. ಭಾಗಶಃ ಅವುಗಳ ಚಲನಶೀಲತೆ, ಆಹಾರದ ನಡವಳಿಕೆ ಮತ್ತು ಸಂರಕ್ಷಿತ ಮೊಟ್ಟೆ ಮತ್ತು ಪ್ಯೂಪಲ್ ಹಂತಗಳಿಂದಾಗಿ (ಲಾರ್ವಾ ಮತ್ತು ಬೆಳೆದ ಹಂತಗಳ ನಡುವೆ ಸಂಭವಿಸುವ ಸಂಪೂರ್ಣ ರೂಪಾಂತರವನ್ನು ಪ್ರದರ್ಶಿಸುವ ಕೀಟಗಳ ಬೆಳವಣಿಗೆಯಲ್ಲಿನ ಜೀವನ ಹಂತಗಳು). ಕೆಳಗಿನವುಗಳು ಪ್ರಪಂಚದ ಒಂದು ಅಥವಾ ಹೆಚ್ಚಿನ ಭಾಗಗಳಲ್ಲಿ ಬಳಸಲಾಗುವ ಕೀಟನಾಶಕಗಳಾಗಿವೆ: ಡೈಮಿಥೋಯೇಟ್ ಮತ್ತು ಬೈಫೆಂತ್ರಿನ್. ಸ್ಪಿನೋಸ್ಯಾಡ್ ಆಧಾರಿತ ಉತ್ಪನ್ನಗಳನ್ನು ಸಾವಯವ ನಿಯಂತ್ರಣ ಸಾಧನವೆಂದು ಪರಿಗಣಿಸಲಾಗುತ್ತದೆ. ಯಾವಾಗಲೂ, ಕೀಟ ನಿರ್ವಹಣೆಯಲ್ಲಿ ಪ್ರಾದೇಶಿಕ ನಿಯಂತ್ರಣವನ್ನು ಅನುಸರಿಸಿ.
ಸಸ್ಯದ ರಸವನ್ನು ತಿನ್ನುವ ಬೆಳೆದ ಕೀಟಗಳು ಮತ್ತು ಲಾರ್ವಾ (ಸಣ್ಣ ಥ್ರಿಪ್ಸ್) ಕೀಟಗಳು ಎರಡರಿಂದಲೂ ಹಾನಿ ಉಂಟಾಗುತ್ತದೆ. ಥ್ರಿಪ್ಸ್ ಮೊಟ್ಟೆಯಿಂದ ಹೊರಬರುತ್ತದೆ ಮತ್ತು ಸಸ್ಯವನ್ನು ತಿನ್ನುವ ಎರಡು ಸಕ್ರಿಯವಾದ ಲಾರ್ವಾ ಹಂತಗಳ ಮೂಲಕ ಬೆಳವಣಿಗೆಯಾಗುತ್ತದೆ. ಬೆಳೆದ ಹೆಣ್ಣು ಕೀಟ 1.4 ರಿಂದ 1.5 ಮಿಮೀ ಉದ್ದವಿರುತ್ತದೆ ಮತ್ತು ಗಂಡು ಕೀಟ 1.3 ಮಿಮೀ ಇರುತ್ತದೆ. ಇದು ಕಪ್ಪು ಬಣ್ಣದಿಂದ ಕಪ್ಪು-ಕಂದು ಬಣ್ಣದ ಜಾತಿಯಾಗಿದೆ. ಮೊಟ್ಟೆಯೊಡೆದ ಲಾರ್ವಾಗಳು ಸಾಮಾನ್ಯವಾಗಿ ಗುಂಪುಗಳಲ್ಲಿ ತಕ್ಷಣವೇ ತಿನ್ನುವುದನ್ನು ಪ್ರಾರಂಭಿಸುತ್ತವೆ. ಹೊಸದಾಗಿ ಹೊರಹೊಮ್ಮಿದ ಬೆಳೆದ ಕೀಟಗಳು ಹಗುರವಾಗಿದ್ದು ಕೆಂಪು ಬಣ್ಣವನ್ನು ಹೊಂದಿರುತ್ತವೆ. ಥ್ರಿಪ್ಸ್ ಎಲೆಯ ಕೆಳಭಾಗವನ್ನು ತಿನ್ನುತ್ತದೆ ಆದರೆ ಮುತ್ತಿಕೊಳ್ಳುವಿಕೆ ಅಧಿಕವಾಗಿದ್ದಾಗ, ವಿಶೇಷವಾಗಿ ತಂಪಾದ ತಿಂಗಳುಗಳಲ್ಲಿ ಮೇಲಿನ ಭಾಗದ ಮೇಲೆ ಕೂಡ ದಾಳಿ ಮಾಡುತ್ತದೆ. ಬೆಚ್ಚಗಿನ ಪರಿಸ್ಥಿತಿಗಳಲ್ಲಿ, ಮೊಟ್ಟೆಯಿಂದ ಬೆಳೆದ ಕೀಟಗಳ ಜೀವನ ಚಕ್ರವು 2 ವಾರಗಳಲ್ಲಿ ಪೂರ್ಣಗೊಳ್ಳುತ್ತದೆ.