ಮರಗೆಣಸು

ಕಸಾವ ಗಾಲ್ ಮಿಡ್ಜ್

Jatrophobia brasiliensis

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಗುಳ್ಳೆಗಳಂತಹ ರಚನೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಮರಗೆಣಸು

ಮರಗೆಣಸು

ರೋಗಲಕ್ಷಣಗಳು

ಲಾರ್ವಾಗಳ ಆಹಾರ ಚಟುವಟಿಕೆಗಳಿಂದ ಸಸ್ಯಗಳ ಮೇಲೆ ಗುಳ್ಳೆಗಳು ರೂಪುಗೊಳ್ಳುತ್ತವೆ. ಗುಳ್ಳೆಗಳು ಹೆಚ್ಚಾಗಿ ಎಲೆಗಳ ಮೇಲ್ಭಾಗದಲ್ಲಿ ಕಂಡುಬರುತ್ತವೆ. ಅಲ್ಲಿ ನೊಣಗಳು ತಮ್ಮ ಮೊಟ್ಟೆಗಳನ್ನು ಇಡುತ್ತವೆ ಮತ್ತು ಕೆಲವೊಮ್ಮೆ ಮಾತ್ರ ಮೊಗ್ಗುಗಳು ಮತ್ತು ಕಾಂಡಗಳ ಮೇಲೆ ಕಂಡ ಬರುತ್ತವೆ. ಗುಳ್ಳೆಗಳು ಹಳದಿ-ಹಸಿರು ಕೆಂಪು ಬಣ್ಣದಲ್ಲಿರುತ್ತವೆ ಮತ್ತು ಶಂಕುವಿನ ಆಕಾರದಲ್ಲಿರುತ್ತವೆ. ಗುಳ್ಳೆಗಳು ತೆರೆದಾಗ, ಲಾರ್ವಾ ಇರುವ ಅಥವಾ ಇಲ್ಲದಿರುವ ಸಿಲಿಂಡರಾಕಾರದ ಸುರಂಗವು ಗುಳ್ಳೆಗಳ ಒಳಗೆ ಕಂಡುಬರುತ್ತದೆ. ಎಲೆಯ ಕೆಳಗಿನಿಂದ ಗುಳ್ಳೆಗಳನ್ನು ಗಮನಿಸಿದರೆ, ಒಂದು ಸಣ್ಣ ರಂಧ್ರವನ್ನು ನೋಡಬಹುದು. ಅವುಗಳ ಮೂಲಕ ವಯಸ್ಕ ಮಿಡ್ಜ್ ಹೊರಹೊಮ್ಮುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಮೇಲ್ವಿಚಾರಣೆ ಅಥವಾ ಕೀಟ ಸಂಯೋಗದ ತಡೆಗಾಗಿ ಬಣ್ಣದ ಬಲೆಗಳನ್ನು ಬಳಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿರುವ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ.

ಅದಕ್ಕೆ ಏನು ಕಾರಣ

ಜಟ್ರೊಫೋಬಿಯಾ ಬ್ರೆಸಿಲಿಯೆನ್ಸಿಸ್‌ನಿಂದ ಹಾನಿ ಉಂಟಾಗುತ್ತದೆ. ಈ ನೊಣಗಳು ಎಲೆಯ ಮೇಲ್ಮೈಯಲ್ಲಿ ತಮ್ಮ ಮೊಟ್ಟೆಗಳನ್ನು ಇಡುವ ಚಿಕ್ಕ ಹಾರುವ ಕೀಟಗಳಾಗಿವೆ. ಮೊಟ್ಟೆಗಳು ಹೊರಬಂದಾಗ, ಹೊಸದಾಗಿ ಹೊರಬಂದ ಲಾರ್ವಾಗಳು ಅಸಹಜ ಜೀವಕೋಶದ ಬೆಳವಣಿಗೆಯನ್ನು ಪ್ರೇರೇಪಿಸುತ್ತವೆ. ಇದು ಎಲೆಯ ಮೇಲಿನ ಮೇಲ್ಮೈಯಲ್ಲಿ ರೂಪುಗೊಳ್ಳುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸಾಧ್ಯವಾದರೆ, ಒಣ ಪ್ರದೇಶಗಳಲ್ಲಿ ನೆಡಬೇಕು.
  • ಸಾಕಷ್ಟು ಗಾಳಿಯಾಡುವಿಕೆಯನ್ನು ಅನುಮತಿಸಲು ತೆರೆದ ಸ್ಥಳಗಳು ಮತ್ತು ಜಾಗಗಳಲ್ಲಿ ಹೊಲಗಳನ್ನು ಮಾಡಿ.
  • ಸಸ್ಯಗಳ ಕೆಳಗೆ ಮತ್ತು ಸುತ್ತಲೂ ಕಳೆಗಳನ್ನು ನಿಯಂತ್ರಿಸಿ.
  • ಹೊಲಗಳಿಂದ ಬಿದ್ದ ಎಲ್ಲಾ ಎಲೆಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಸುಟ್ಟು ಅಥವಾ ಹೂತುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ