ಬದನೆ

ಹೂವಿನ ರೆಕ್ಕೆ ಹುಳ

Oxycetonia versicolor

ಕೀಟ

ಸಂಕ್ಷಿಪ್ತವಾಗಿ

  • ಜಖಂ ಆದ ಹೂವುಗಳು ಮತ್ತು ಮೊಗ್ಗುಗಳು.
  • ತೀವ್ರ ಬಾಧೆಗೊಳಗಾದ ಗಿಡಗಳು ಹುಳ ತಿಂದು ಚಿಂದಿ ಚಿಂದಿಯಾಗಿ ಕಾಣಬಹುದು.


ಬದನೆ

ರೋಗಲಕ್ಷಣಗಳು

ಸಂತಾನೋತ್ಪತ್ತಿ ಅಂಗಗಳಿಗೆ ಹಾನಿ ಉಂಟಾಗುವುದರಿಂದ ಈ ಕೀಟದಿಂದ ಗಣನೀಯವಾಗಿ ಇಳುವರಿ ಕಡಿಮೆಯಾಗಬಹುದು. ವಯಸ್ಕ ಹುಳಗಳು ಹೂವು ಮತ್ತು ಮೊಗ್ಗನ್ನು ತಿನ್ನುತ್ತವೆ. ಹೂವುಗಳ ಒಳಗಿರುವ ಪರಾಗಗಳು ಮತ್ತಿತರೆ ಸಂತಾನೋತ್ಪತ್ತಿ ಅಂಗಗಳನ್ನು ತಿನ್ನುತ್ತವೆ. ಹತ್ತಿಯಲ್ಲಿ ಎಳೆ ಹತ್ತಿ ಉಂಡೆಗಳಿಗೂ ಇವು ದಾಳಿ ಇಡುತ್ತವೆ. ಬದನೆಯಲ್ಲಿ‌ ಚಿಗುರುಗಳನ್ನು ಗಿಡದ ಮತ್ತಿತರೆ ಎಳೆ ಅಂಗಾಂಶಗಳನ್ನು ಇವು ಕಚ್ಚುವುದು ಕಂಡುಬಂದಿದೆ, ಅದರಲ್ಲೂ ಅಪ್ರಬುದ್ಧ ಹಂತದಲ್ಲಿ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸದ್ಯಕ್ಕೆ ಯಾವುದೇ ಜೈವಿಕ ಚಿಕಿತ್ಸೆಗಳು ಲಭ್ಯವಿಲ್ಲ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಲಭ್ಯವಿರುವ ಜೈವಿಕ ಚಿಕಿತ್ಸೆಗಳ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನೊಳಗೊಂಡ ಸಮಗ್ರ ಮಾರ್ಗವನ್ನು ಆಯ್ದುಕೊಳ್ಳಿ. ಸದ್ಯಕ್ಕೆ ಯಾವುದೇ ರಾಸಾಯನಿಕ ಚಿಕಿತ್ಸೆಗಳು ಲಭ್ಯವಿಲ್ಲ.

ಅದಕ್ಕೆ ಏನು ಕಾರಣ

ಈ ತೊಂದರೆಗೆ ಕಾರಣ ವಯಸ್ಕ ರೆಕ್ಕೆ ಹುಳುಗಳು. ಹೂವಿನ ರೆಕ್ಕೆ ಹುಳುಗಳು ಹಗಲು ಹೊತ್ತಿನಲ್ಲಿ ಹಾರುವ ಕೀಟಗಳಾಗಿದ್ದು ಪ್ರಮುಖವಾಗಿ ಪರಾಗವನ್ನು ತಿಂದಿ ಬದುಕುತ್ತವೆ. ಮರಿದುಂಬಿಗಳು ಸ್ವಾಭಾವಿಕವಾಗಿ ಮಣ್ಣಿನಲ್ಲಿ ಮತ್ತು ಕೆಲವು ಸೋಂಕಿತ ಬೇರುಗಳಲ್ಲಿ ಗಮನಾರ್ಹ ತೊಂದರೆ ಉಂಟು ಮಾಡದೆ ಬೆಳೆಯುತ್ತವೆ. ವಯಸ್ಕ ಹುಳುಗಳು 7-15 ಮಿಲಿಮೀಟರ್ ಉದ್ದ ಮತ್ತು 5-7 ಮಿಲಿಮೀಟರ್ ಅಗಲ ಇರುತ್ತವೆ. ಗಂಡು-ಹೆಣ್ಣು ಒಂದೇ ತರ ಇರುತ್ತವೆ. ಮೈ ದಟ್ಟವಾಗಿ, ಮೊಟ್ಟೆಯಾಕಾರದಲ್ಲಿ, ಒಂದು ರೀತಿಯಲ್ಲಿ ಚಪ್ಪಟೆಯಾಗಿ, ಹೊಳೆಯುವ ಬಣ್ಣದಲ್ಲಿದ್ದು ಬಹುತೇಕವಾಗಿ ಮಂದ ಕೆಂಪಿನ ಜೊತೆಗೆ ಕಪ್ಪುಬಿಳಿ ಗುರುತುಗಳು ಇರುತ್ತವೆ.


ಮುಂಜಾಗ್ರತಾ ಕ್ರಮಗಳು

  • ರೆಕ್ಕೆ ಹುಳಗಳು ಗಿಡದಿಂದ ಗಿಡಕ್ಕೆ ವಲಸೆ ಹೋಗುತ್ತವೆ ಮತ್ತು ವಿವಿಧ ಬಗೆಯ ಆಶ್ರಯ ಪ್ರಭೇದಗಳನ್ನು ಹೊಂದಿವೆ.
  • ಬೆಳೆಯ ಮಾದರಿಯನ್ನು ಬದಲಾವಣೆ ಮಾಡುವುದು ಮತ್ತು ಸತತ ಕೀಟನಾಶಕಗಳನ್ನು ಬಳಸುವುದರಿಂದ ಚಿಕ್ಕ ಕೀಟದಿಂದ ದೊಡ್ಡ ಕೀಟದ ಸ್ವರೂಪಕ್ಕೆ ತಿರುಗಬಹುದು.
  • ಎಚ್ಚರಿಕೆಯಿಂದ ನೋಡಿಕೊಳ್ಳುವುದು ಮತ್ತು ಸಮಯಕ್ಕೆ ಸರಿಯಾಗಿ ಈ ರೆಕ್ಕೆ ಹುಳವನ್ನ ವರದಿ ಮಾಡುವುದು ಭವಿಷ್ಯದಲ್ಲಿ ಕೀಟ ಹಬ್ಬುವುದನ್ನು ತಡೆಯಲು ಅವಶ್ಯಕ.
  • ಬದನೆ ಗಿಡದಲ್ಲಿ ಆಗಾಗ ಚಿಗುರು ಮತ್ತು ಕಾಯಿಕೊರಕಕ್ಕೆ ಕೀಟನಾಶಕ ಸಿಂಪಡಿಸುವುದು ಕೀಟಗಳ ಸಂಖ್ಯೆಯನ್ನ ಹದ್ದುಬಸ್ತಿನಲ್ಲಿ ಇಡುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ