Leucoptera sp.
ಕೀಟ
ಮೊದಲು ಕೊರೆತ ಉಂಟಾಗಿ ನಂತರ ವಿಶಾಲವಾಗಿ ಹರಡಿಕೊಂಡು ದೊಡ್ಡ ಕೊಳೆತ ಕಲೆಗಳಾಗಿ ಮಾರ್ಪಾಡಾಗುತ್ತದೆ. ಮರಿಹುಳಗಳು (ಲಾರ್ವಾ) ಕೊರೆತದಲ್ಲಿ ಇದ್ದು ಎಲೆಯೊಳಗಿನ ಮೆಸೊಫಿಲ್ ಅನ್ನು ತಿಂದುಕೊಂಡು ಇರುತ್ತವೆ. ಎಲೆಗಳು ದುರ್ಬಲಗೊಳ್ಳುವುದರಿಂದ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುವುದಿಲ್ಲ. ಗಿಡಗಳು ಎಲೆ ಕಳಚಿಕೊಂಡು ಕೊನೆಗೆ ಸತ್ತು ಹೋಗುತ್ತವೆ.
ಬೆಳೆ ನಿರ್ವಹಣಾ ವಿಧಾನಗಳು ಮತ್ತು ಭೌಗೋಳಿಕ ರಚನೆ ಕೀಟ ಸಮೂಹದ ಮೇಲೆ ಮತ್ತು ಪರಿಸರ ಒದಗಿಸುವ ಸ್ವಾಭಾವಿಕ ವೈರಿಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದ ಅವುಗಳ ವಿವಿಧತೆ ಮತ್ತು ಸಂಖ್ಯೆ ದೊಡ್ಡದಾಗುತ್ತದೆ. ಪಾರಿಸರಿಕವಾಗಿ ಜಟಿಲವಾದ ಕಾಫಿ ವ್ಯವಸ್ಥೆಯ ಜೊತೆಗೆ ಅತಿ ಹೆಚ್ಚಿನದಾಗಿ ಜೀವವೈವಿಧ್ಯತೆ ಹೊಂದಿರುವ ಪರಾವಲಂಬಿ ಕಣಜಗಳು, ಇರುವೆಗಳು ಮತ್ತು ಇತರೆ ಪರಭಕ್ಷಕಗಳು ಸೇರಿವೆ. ಆದರೆ ಈ ಸ್ವಾಭಾವಿಕ ವೈರಿಗಳನ್ನ ಜೈವಿಕ ನಿಯಂತ್ರಣಕ್ಕೆ ಬಳಸಿಕೊಳ್ಳುವಲ್ಲಿ ಅಷ್ಟಾಗಿ ಪ್ರಯತ್ನ ನಡೆದಿಲ್ಲ. ಕೀಟಗಳ ವರ್ತನೆಯ ಸಮತೋಲನ ತಪ್ಪಿಸಲು ಮತ್ತು ಅವುಗಳ ಸಂಖ್ಯೆಯನ್ನ ನಿಯಂತ್ರಿಸಲು ಫೆರೊಮೋನ್‌ಗಳನ್ನ (pheromones) ಆಯುಧವಾಗಿ ಬಳಸಿಕೊಳ್ಳಬಹುದು.
ಯಾವಾಗಲೂ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಲಭ್ಯವಿರುವ ಜೈವಿಕ ಚಿಕಿತ್ಸೆಯ ಜೊತೆಗೆ ಸಮಗ್ರವಾದ ಮಾರ್ಗವನ್ನು ಆಯ್ದುಕೊಳ್ಳಿ. ಈಗ ಕಾಫಿ ಬೆಳೆಗಾರರು ಆರ್ಗ್ಯಾನೋಫಾಸ್ಫೇಟ್ಸ್, ಕಾರ್ಬಮೇಟ್ಸ್ ಪೈರೆಥ್ರಾಯ್ಡ್ಸ್ (pyrethroids), ನಿಯೋನಿಕೋಟಿನಾಯ್ಡ್ಸ್ (neonicotinoids) ಮತ್ತು ಡಯಮಿಡೀಸ್ (diamedes)ಗಳಂತಹ ನ್ಯೂರೋಟಾಕ್ಸಿಕ್ ಕೀಟನಾಶಕಗಳನ್ನ ಬಳಸುತ್ತಿದ್ದಾರೆ. ಆದರೆ ರಸಾಯನಿಕ ನಿಯಂತ್ರಣ ಸಾಕಾಗುವುದಿಲ್ಲ ಜೊತೆಗೆ ಬಳಸುತ್ತಾ ಬಳಸುತ್ತಾ ಕೀಟಗಳು ಪ್ರತಿರೋಧಕ ಶಕ್ತಿ ಬೆಳೆಸಿಕೊಂಡು ಅವು ಪರಿಣಾಮ ಕಳೆದುಕೊಳ್ಳಬಹುದು.
ಈ ತೊಂದರೆಗೆ ಕಾರಣ ಕಾಫಿ ಎಲೆಕೊರಕದ ಮರಿ ಹುಳ (ಲಾರ್ವಾ). ಇದು ಕಾಫಿ ಎಲೆಯನ್ನ ಮಾತ್ರ ತಿನ್ನುವಂತದ್ದು. ವಯಸ್ಕ ಹುಳಗಳು ರಾತ್ರಿ ಹೊತ್ತು ಕೂಡಿ ಹೆಣ್ಣು ಹುಳು ಕಾಫಿ ಎಲೆಯ ಮೇಲ್ಬಾಗದಲ್ಲಿ ಮೊಟ್ಟೆ ಇಡುತ್ತವೆ. ಮೊಟ್ಟೆ ಇಡುವ ಅವಧಿ 20° ತಾಪಮಾನದಲ್ಲಿ 3.6 ದಿನಗಳು. ಒಂದೊಂದು ಮೊಟ್ಟೆಯೂ ಸರಾಸರಿ 0.3 ಮಿಲಿಮೀಟರ್ ಇದ್ದು ಬರಿಗಣ್ಣಿಗೆ ಕಾಣಿಸುವುದು ಕಷ್ಟ. ಮೊಟ್ಟೆಯೊಡೆದ ಮೇಲೆ ಮರಿಹುಳ ಎಲೆಗಳ ಮೇಲ್ಭಾಗದಲ್ಲಿ ಅಂಟಿಕೊಂಡಿರುವ ಮೊಟ್ಟೆಯ ಕೆಳಗಿನಿಂದ ಹೊರಬಂದು ಎಲೆಯೊಳಗೆ ಸೇರಿಕೊಳ್ಳುತ್ತದೆ. ಮರಿಹುಳಗಳು ಪಾರದರ್ಶಕವಾಗಿದ್ದು 3.5 ಮಿಲಿಮೀಟರ್ ಉದ್ದದ ತನಕ ಬೆಳೆಯುತ್ತವೆ. ಮರಿಹುಳಗಳು ಎಲೆಯೊಳಗಿನ ಮೆಸೊಫಿಲ್ ಅನ್ನು ಸೇವಿಸುತ್ತವೆ ಮತ್ತು ಎಲೆಗಳ ಮೇಲೆ ಕೊರೆಯುತ್ತವೆ. ಕೊರೆತದಿಂದಾಗಿ ಎಲೆಯ ಆ ಭಾಗ ಸತ್ತು ದ್ಯುತಿಸಂಶ್ಲೇಷಣೆಗೆ ಬೇಕಾದ ಜಾಗ ಕಡಿಮೆಯಾಗುತ್ತದೆ. ಇದರಿಂದಾಗಿ ದ್ಯುತಿಸಂಶ್ಲೇಷಣೆಯ ದರ ಕಡಿಮಯಾಗಿ ನಂತರ ಆ ಗಿಡದ ಸವಕಳಿಯಾಗುತ್ತದೆ. ಮರಿಹುಳುವಿನ ಹಂತದಲ್ಲಿ ನಾಲ್ಕು ಹಂತ ಇರುತ್ತದೆ. ಮರಿಹುಳ ಕೊರೆತದಿಂದ ಹೊರಬಂದು 'X' ಆಕಾರದಲ್ಲಿ ನೂಲಿನ ಗೂಡನ್ನ ಹೆಣೆದು ಪ್ಯೂಪೆ ರಚಿಸುತ್ತದೆ. ಸಾಧಾರಣವಾಗಿ ಇದು ಎಲೆಯ ನಡುವಿನಲ್ಲಿರುತ್ತದೆ. ಸಾಮಾನ್ಯವಾಗಿ ತರಗೆಲೆಗಳು ರಾಶಿಯಾಗುವಂತ ಗಿಡದ ಕೆಳಭಾಗದಲ್ಲಿ ಪ್ಯೂಪೆಗಳು ಹೆಚ್ಚಾಗಿ ಕಾಣಸಿಗುತ್ತವೆ. ಪ್ಯೂಪೆಯೊಳಗಿಂದ ಸರಾಸರಿ 2 ಮಿಲಿಮೀಟರ್ ಉದ್ದದ ಮತ್ತು 6.5 ಮಿಲಿಮೀಟರ್ ಅಗಲ ರೆಕ್ಕೆಯ ವಯಸ್ಕ ಹುಳಗಳು ಹೊರಬರುತ್ತವೆ. ಗರಿಗರಿ ರೆಕ್ಕೆಯ ಜೊತೆ ಬಿಳಿ ಕೂದಲಿನ ಹುರುಪೆಗಳಿದ್ದು ಹೊಟ್ಟೆಯ ಕೊನೆಯವರೆಗೂ ಚಾಚುವ ಆಂಟೆನಾ ಕಂದು-ಬಿಳಿ ಬಣ್ಣದಲ್ಲಿರುತ್ತದೆ. ವಯಸ್ಕ ಹುಳಗಳು ಪ್ಯೂಪೆಯಿಂದ ಹೊರಬಂದ ಮೇಲೆ ಕೂಡಿ ಮೊಟ್ಟೆ ಇಡುವ ಮೂಲಕ ಈ ಚಕ್ರ ಮುಂದುವರೆಯುತ್ತದೆ. ಬೇಸಿಗೆ ಕಾಲದಲ್ಲಿ ಮತ್ತು ತಾಪಮಾನ ಜಾಸ್ತಿ ಇರುವ ಸಮಯದಲ್ಲಿ ಈ ಕೀಟಬಾಧೆ ಹೆಚ್ಚು.