ಕಬ್ಬು

ಪ್ಲಾಸಿ ಬೋರರ್

Chilo tumidicostalis

ಕೀಟ

ಸಂಕ್ಷಿಪ್ತವಾಗಿ

  • ಮೇಲ್ಭಾಗದ ಗೆಣ್ಣುಗಳಲ್ಲಿ ರಂಧ್ರಗಳು.
  • ಟೊಳ್ಳಾದ ಜಲ್ಲೆಗಳು.
  • ಒಣಗಿದ ಸುಳಿ ಮತ್ತು ತುದಿ ಎಲೆಗಳು.
  • ಹಿಂಭಾಗದಲ್ಲಿ ಉದ್ದಕ್ಕೂ ಕಪ್ಪು ಪಟ್ಟೆಗಳು ಅಥವಾ ಕಲೆಗಳನ್ನು ಹೊಂದಿರುವ ಬಿಳಿಯ ಲಾರ್ವಾಗಳು.
  • ಕಪ್ಪು ತಲೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಕಬ್ಬು

ರೋಗಲಕ್ಷಣಗಳು

ಸೋಂಕಿತ ಕಬ್ಬಿನ ಒಣಗಿದ ಕುಚ್ಚಿನ ಉಪಸ್ಥಿತಿಯಿಂದ ಕೊರಕಗಳಿರುವುದನ್ನು ಸುಲಭವಾಗಿ ಗುರುತಿಸಬಹುದು. ಹೊಸದಾಗಿ ಮೊಟ್ಟೆಯೊಡೆದ ಲಾರ್ವಾಗಳಿಂದ ಪ್ರಾಥಮಿಕ ಸೋಂಕು ಉಂಟಾಗುತ್ತದೆ. ಮೇಲಿನ ಮೂರರಿಂದ ಐದು ಗೆಣ್ಣುಗಳಲ್ಲಿ ಒಂದೇ ಕಾಂಡದಲ್ಲಿ 50 ರಿಂದ 180 ಲಾರ್ವಾಗಳ ಒಟ್ಟುಗೂಡಿರುತ್ತವೆ. ಮೇಲಿನ ಗೆಣ್ಣುಗಳ ನಡುವೆ ಹಲವಾರು ರಂಧ್ರಗಳು ಗೋಚರಿಸುತ್ತವೆ. ಪೀಡಿತ ಕಾಂಡಗಳು ಕೆಂಪು ಬಣ್ಣದ ಮಲದಿಂದ ತುಂಬಿರುತ್ತವೆ. ಕಬ್ಬು ಟೊಳ್ಳಾಗಿರುತ್ತದೆ ಮತ್ತು ಮಧ್ಯದ ಸುಳಿ ಮತ್ತು ತುದಿಯ ಎಲೆಗಳನ್ನು ಒಣಗಿಸುತ್ತದೆ ಮತ್ತು ಹೆಚ್ಚು ಸುಲಭವಾಗಿ ಒಡೆಯುತ್ತವೆ. ಸೋಂಕಿತ ಗೆಣ್ಣಿನ ಮಧ್ಯಭಾಗದ ಪಕ್ಕದಲ್ಲಿರುವ ಗೆಣ್ಣುಗಳು ಕಾಂಡವನ್ನು ಸಂಪೂರ್ಣವಾಗಿ ಆವರಿಸುವ ಬೇರುಗಳನ್ನು ಹೊಂದುತ್ತವೆ.; ಗೆಣ್ಣಿನ ಕಣ್ಣುಗಳು ಮೊಳಕೆಯೊಡೆಯುತ್ತವೆ. ದ್ವಿತೀಯಕ ಸೋಂಕಿನ ಸಂದರ್ಭದಲ್ಲಿ, ಬೆಳೆದ ಲಾರ್ವಾಗಳು ಪಕ್ಕದ ಕಬ್ಬಿನ ಮೇಲೆ ಪ್ರಾಥಮಿಕ ದಾಳಿಯನ್ನು ತೋರಿಸುವ ಕಬ್ಬಿನ ಕೆಳಗಿನ ಆರೋಗ್ಯಕರ ಭಾಗಕ್ಕೆ ಹರಡುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕೋಟೇಸಿಯಾ ಫ್ಲೇವಿಪ್ಸ್ ಮತ್ತು ಟ್ರೈಕೊಗ್ರಾಮಾ ಚಿಲೋನಿಸ್ ಕಣಜಗಳು ಸಿ.ಟ್ಯೂಮಿಡಿಕೋಸ್ಟಾಲಿಸ್‌ನ ಪರಿಣಾಮಕಾರಿ ನೈಸರ್ಗಿಕ ಶತ್ರುಗಳಾಗಿವೆ. ಸೌಮ್ಯವಾದ ಹವಾಮಾನ ಪರಿಸ್ಥಿತಿಗಳಲ್ಲಿ ಹೊಲಗಳಲ್ಲಿ ಬಿಡುಗಡೆ ಮಾಡಲು ಟ್ರೈಕೊ ಕಾರ್ಡ್‌ಗಳು ಅಥವಾ ಬಾಟಲುಗಳನ್ನು ಬಳಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಈ ಕೀಟದ ವಿರುದ್ಧ ಲಭ್ಯವಿರುವ ಯಾವುದೇ ರಾಸಾಯನಿಕ ನಿಯಂತ್ರಣ ವಿಧಾನದ ಬಗ್ಗೆ ಇಂದಿಗೂ ನಮಗೆ ತಿಳಿದಿಲ್ಲ. ಸಾಮಾನ್ಯವಾಗಿ, ರಾಸಾಯನಿಕ ನಿಯಂತ್ರಣ ಕ್ರಮಗಳು ಪರಿಣಾಮಕಾರಿಯಾಗಿರುವುದಿಲ್ಲ. ರೋಗಲಕ್ಷಣಗಳ ಸಂಭವನೀಯತೆ ಅಥವಾ ಗುರುತ್ವವನ್ನು ಕಡಿಮೆ ಮಾಡುವ ಯಾವುದೇ ಯಶಸ್ವಿ ವಿಧಾನ ನಿಮಗೆ ತಿಳಿದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಅದಕ್ಕೆ ಏನು ಕಾರಣ

ಚಿಲೋ ಟ್ಯೂಮಿಡಿಕೋಸ್ಟಾಲಿಸ್‌ನ ಲಾರ್ವಾಗಳು ಗುಂಪು ಗುಂಪಾಗಿ ತಿನ್ನುವುದರಿಂದ ಹಾನಿ ಉಂಟಾಗುತ್ತದೆ. ಪತಂಗಗಳು ದಾಲ್ಚಿನ್ನಿ ಕಂದು ಬಣ್ಣದಲ್ಲಿರುತ್ತವೆ ಮತ್ತು ಕಪ್ಪು ಅಂಚಿನ ಚುಕ್ಕೆಗಳ ಸರಣಿ ಸಣ್ಣ ಬೆಳ್ಳಿ ಬಣ್ಣದ ಬಿಳಿ ಬಿಂದುಗಳಿಂದ ಬಾಹ್ಯವಾಗಿ ಭೇದಿಸಿರುತ್ತದೆ. ಗಂಡು ಪತಂಗಗಳ ಮುಂಭಾಗದಲ್ಲಿ ಕೆಲವು ತಿಳಿ ಕಂದು ಪದರಗಳನ್ನು ಹೊರತುಪಡಿಸಿ ಹಿಂಗಾಲು ರೆಕ್ಕೆಗಳು ಬಿಳಿಯಾಗಿರುತ್ತವೆ. ಹೆಣ್ಣುಗಳ ಗುದದ ಭಾಗಗಳಲ್ಲಿ ದಪ್ಪ ಕೂದಲು ಕಾಣಬಹುದು. ಹೆಣ್ಣುಗಳು ಎಲೆಯ ಕೆಳಭಾಗದಲ್ಲಿ 4 ರಿಂದ 5 ಸಾಲುಗಳಲ್ಲಿ 500 ರಿಂದ 800ರ ಗುಂಪಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳು ತಿಳಿ ಹಸಿರು ಬಣ್ಣದ ಛಾಯೆಯೊಂದಿಗೆ ಕೊಳಕು ಬಿಳಿ ಬಣ್ಣದಲ್ಲಿರುತ್ತವೆ. ಆದರೆ ಮೊಟ್ಟೆಯೊಡೆಯುವ ಸಮಯದಲ್ಲಿ ಇವು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಲಾರ್ವಾಗಳು ಗುಂಪಾಗಿರುತ್ತವೆ, ನಿಧಾನವಾಗಿರುತ್ತವೆ, ಕಪ್ಪು/ಕಿತ್ತಳೆ ತಲೆಯೊಂದಿಗೆ ಬಿಳಿಯಾಗಿರುತ್ತವೆ. ಇದು ನಂತರದ ಹಂತದಲ್ಲಿ ಕೆನೆ ಬಣ್ಣಕ್ಕೆ ತಿರುಗುತ್ತದೆ. ಕೋಶಾವಸ್ಥೆಯು ಗೆಣ್ಣುಗಳ ಮಧ್ಯ ಜಾಗದಲ್ಲಿ ನಡೆಯುತ್ತದೆ. ಕೀಟಗಳ ಸಂಖ್ಯೆಗೆ ಆರ್ದ್ರ ವಾತಾವರಣ ಅನುಕೂಲಕರವಾಗಿದೆ. ಬಾರವಾದ ಮಣ್ಣು ಮತ್ತು ನೀರಿನಿಂದ ತುಂಬಿರುವ ಅಥವಾ ಪ್ರವಾಹಕ್ಕೆ ಒಳಗಾದ ಹೊಲಗಳು ಇವುಗಳ ತೀವ್ರ ಮುತ್ತಿಗೆಗೆ ಹೆಚ್ಚು ಅನುಕೂಲಕರವಾಗಿವೆ.


ಮುಂಜಾಗ್ರತಾ ಕ್ರಮಗಳು

  • ರೋಗಲಕ್ಷಣಗಳಿಗಾಗಿ ನಿಮ್ಮ ಜಮೀನನ್ನು ನಿಯಮಿತವಾಗಿ ಪರಿಶೀಲಿಸಿ.
  • ನೀರು ನಿಲ್ಲುವುದನ್ನು ತಪ್ಪಿಸಿ.
  • ವಯಸ್ಕ ಪತಂಗಗಳನ್ನು ಬಲೆಗೆ ಬೀಳಿಸಲು ಬೆಳಕಿನ ಬಲೆಗಳನ್ನು ಸ್ಥಾಪಿಸಿ.
  • ಪ್ರಾಥಮಿಕ ಮುತ್ತಿಕೊಳ್ಳುವಿಕೆಯನ್ನು ತೋರಿಸುವ ಮೊಟ್ಟೆಯ ರಾಶಿಗಳು ಮತ್ತು ಕಬ್ಬಿನ ಮೇಲ್ಭಾಗಗಳನ್ನು ಸಂಗ್ರಹಿಸಿ ನಾಶಮಾಡಿ.
  • ಕೊರಕಗಳೊಂದಿಗೆ ಡೆಡ್ ಹಾರ್ಟ್ಸ್ ಗಳನ್ನು ತೆಗೆದುಹಾಕಿ, ಎರಡನ್ನೂ ನಾಶಮಾಡಿ.
  • ನೈಸರ್ಗಿಕ ಶತ್ರುಗಳನ್ನು ಸಂರಕ್ಷಿಸಿ ಏಕೆಂದರೆ ಅವರು ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ