ಕಬ್ಬು

ವೈಟ್ ಟಾಪ್ ಬೋರರ್( ಬಿಳಿ ಮೇಲ್ಮೈ ಕೊರಕ)

Scirpophaga excerptalis

ಕೀಟ

ಸಂಕ್ಷಿಪ್ತವಾಗಿ

  • ಡೆಡ್ ಹಾರ್ಟ್.
  • ಎಲೆಯ ಉದ್ದಕ್ಕೂ ಸಮಾನಾಂತರ ರಂಧ್ರಗಳ ಸರಣಿ.
  • ಜಲ್ಲೆಗಳು, ಬೆಳವಣಿಗೆಯ ಬಿಂದುಗಳು ಮತ್ತು ಎಲೆಗಳನ್ನು ಒಳಗಿನಿಂದ ತಿನ್ನಲಾಗಿರುತ್ತದೆ.
  • ಬೆಳ್ಳಿಯ ಬಿಳಿ ಬಣ್ಣದ ಪತಂಗ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು

ಕಬ್ಬು

ರೋಗಲಕ್ಷಣಗಳು

ಎಲೆಯು ಬಿಚ್ಚಿಕೊಂಡಾಗ ಅದರಲ್ಲಿರುವ ಸಮಾನಾಂತರ ರಂಧ್ರಗಳು ಕೀಟ ಕೊರೆಯುವ ಚಟುವಟಿಕೆಯ ಸ್ಪಷ್ಟ ಲಕ್ಷಣವಾಗಿದೆ. ಎಲೆಯ ಮಧ್ಯನಾಳಗಳು ಕಂದು ಬಣ್ಣದ ಒಣಗಿದ ಸುರಂಗಗಳನ್ನು ಹೊಂದಿರುತ್ತವೆ. ಇದು ದಾಳಿಯ ಆರಂಭಿಕ ಹಂತವನ್ನು ಗುರುತಿಸಲು ಅತ್ಯಂತ ವಿಶಿಷ್ಟ ಲಕ್ಷಣವಾಗಿದೆ. ಮೊಟ್ಟೆಯ ಗೊಂಚಲುಗಳು ಎಲೆಯ ಮೇಲ್ಭಾಗದಲ್ಲಿ ಬೆಳೆಯುವ ತುದಿಯ ಹತ್ತಿರದಲ್ಲಿ ಇರುತ್ತವೆ. ಬೆಳೆಯುವ ತುದಿಗಳು ದಾಳಿಗೊಳಗಾಗುತ್ತವೆ. ಕಾಂಡವನ್ನು ಕೊಲ್ಲುತ್ತವೆ. ಜಲ್ಲೆಗಳು ಡೆಡ್ ಹಾರ್ಟ್ ಪಡೆಯುತ್ತವೆ ಮತ್ತು ಕೆಂಪು ಕಂದು ಬಣ್ಣವನ್ನು ಹೊಂದಿರುತ್ತವೆ. ಮೇಲಿನ ಚಿಗುರು ಒಣಗಿ, ಕುಂಠಿತವಾಗುತ್ತದೆ. ಅಡ್ಡ ಚಿಗುರುಗಳ ಬೆಳವಣಿಗೆಯಿಂದಾಗಿ ಸಸ್ಯವು ಗೊಂಚಲಿನಂತೆ ಕಾಣುತ್ತದೆ. ನೆಲದ ಮಟ್ಟದ ಬಳಿ ಕಾಂಡದಲ್ಲಿ ಸಣ್ಣ ರಂಧ್ರಗಳನ್ನು ಗಮನಿಸಬಹುದು. ಒಂದು ಟಿಲ್ಲರ್‌ನಲ್ಲಿ ಒಂದು ಲಾರ್ವಾ ಮಾತ್ರ ಒಳಗೆ ತಿನ್ನುತ್ತಿರುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

10 ದಿನಗಳ ಅಂತರದಲ್ಲಿ 2-3 ಬಾರಿ ಮೊಟ್ಟೆಯ ಪರಾವಲಂಬಿಗಳಾದ ಟ್ರೈಕೊಗ್ರಾಮಾ ಚಿಲೋನಿಸ್ ಅನ್ನು@ 10,000/ಹೆಕ್ಟೇರ್ ಬಿಡುಗಡೆ ಮಾಡಿ. ಅಥವಾ ಇಕ್ನ್ಯೂಮೋನಿಡ್ ಪ್ಯಾರಾಸಿಟೈಸ್ಡ್ ಗ್ಯಾಂಬ್ರೊಯಿಡ್ಸ್ (ಐಸೊಟಿಮಾ) ಜಾವೆನ್ಸಿಸ್ (100 ಜೋಡಿಗಳು/ಹೆ) ಅನ್ನು ಶಾಶ್ವತ ಪರಾವಲಂಬಿಯಾಗಿ ಪರಿಚಯಿಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕಾರ್ಬೋಫ್ಯೂರಾನ್ 5% G (33.3 kg/ha), ಅಥವಾ ಕ್ಲೋರಂಟ್ರಾನಿಲಿಪ್ರೋಲ್ 18.5% SC (375 ml/ha) ನಂತಹ ಕೀಟನಾಶಕಗಳನ್ನು ಬಳಸಿ. ಬೇರಿನ ವಲಯದ ಬಳಿ ಸಣ್ಣ ಗೂಡು ತೆರೆಯುವ ಮೂಲಕ, ಕಾರ್ಬೋಫ್ಯೂರಾನ್ ಗ್ರ್ಯಾನ್ಯೂಲ್ ಅನ್ನು ಇರಿಸಿ, ನಂತರ ಲಘುವಾಗಿ ನೀರಾವರಿ ಮಾಡುವ ಮೂಲಕ ಇದನ್ನು ಹಾಕಬಹುದು. ಆದಾಗ್ಯೂ, ಎಳೆಯ ಬಾಧಿತ ಚಿಗುರುಗಳನ್ನು ಕೈಗಳಿಂದ ಕತ್ತರಿಸುವುದೇ ಅತ್ಯಂತ ಪರಿಣಾಮಕಾರಿ ಕಾರ್ಯಾಚರಣೆಯಾಗಿದೆ.

ಅದಕ್ಕೆ ಏನು ಕಾರಣ

ಕಬ್ಬಿನ ವೈಟ್ ಟಾಪ್ ಬೋರರ್, ಸ್ಕಿರ್ಪೋಫಾಗ ಎಕ್ಸೆರ್ಪ್ಟಾಲಿಸ್ ನಿಂದ ಹಾನಿಯಾಗುತ್ತದೆ. ವಯಸ್ಕ ಪತಂಗವು ಗರಿಗಳ ತುದಿಗಳೊಂದಿಗೆ ಬೆಳ್ಳಿಯ ಬಿಳಿ ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತದೆ. ಹೆಣ್ಣು ಹಳದಿ-ಕಂದು ಬಣ್ಣದ ಕೂದಲು ಅಥವಾ ಪಫ್‌ಗಳಿಂದ ಮುಚ್ಚಲ್ಪಟ್ಟ ಮೊಟ್ಟೆಗಳನ್ನು ಇಡುತ್ತದೆ. ಲಾರ್ವಾಗಳು ಸುತ್ತಿಕೊಂಡಿರುವ ಎಲೆಗಳ ಮೂಲಕ ಸುರಂಗ ಕೊರೆದು, ಮೇಲೆ ವಿವರಿಸಿದ ಹಾನಿಯನ್ನು ಉಂಟುಮಾಡುತ್ತವೆ. ಲಾರ್ವಾಗಳು ಸುಮಾರು 35 ಮಿಮೀ ಉದ್ದವಿರುತ್ತವೆ, ಕೆನೆ ಬಿಳಿ ಅಥವಾ ಹಳದಿ ಬಣ್ಣದಲ್ಲಿರುತ್ತವೆ ಮತ್ತು ಕಂದು ಬಣ್ಣದ ತಲೆ ಇರುತ್ತದೆ. ಪಟ್ಟೆಗಳಿರುವುದಿಲ್ಲ ಮತ್ತು ಕ್ಷೀಣಿಸಿದ ಕಾಲುಗಳನ್ನು ಹೊಂದಿರುತ್ತವೆ. ಅವು ಮಧ್ಯನಾಳದ ಉದ್ದಕ್ಕೂ ತಿಂದು ಸಸ್ಯದ ಹೃದಯಭಾಗಕ್ಕೂ ಹೋಗುತ್ತವೆ. ಮೂರನೇ ಪೀಳಿಗೆಯು ಕಬ್ಬಿನಲ್ಲಿ ಹೆಚ್ಚಿನ ನಷ್ಟವನ್ನು ಉಂಟುಮಾಡುತ್ತದೆ. ಎಳೆಯ ಸಸ್ಯಗಳು ವಿಶೇಷವಾಗಿ ಆರ್ದ್ರ ವಾತಾವರಣದಲ್ಲಿ ಕೀಟಭಾದೆಗೆ ಹೆಚ್ಚು ಒಳಗಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ CO 419, CO 745, CO 6516, CO 859, CO 1158 ಅಥವಾ CO 7224 ನಂತಹ ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ಬಳಸಿ.
  • ಜೋಡಿ ಸಾಲು ವ್ಯವಸ್ಥೆಗಳಲ್ಲಿ ನೆಡಲು ಆದ್ಯತೆ ಕೊಡಿ.
  • ಸಾಂಬಾರ ಪದಾರ್ಥಗಳು ಅಥವಾ ಬೇಳೆಕಾಳುಗಳಂತಹ ಅತಿಥೇಯವಲ್ಲದ ಬೆಳೆಗಳೊಂದಿಗೆ ಅಂತರ ಬೆಳೆ ಮಾಡಿ.
  • ಹುಲ್ಲುಜೋಳ, ಮೆಕ್ಕೆಜೋಳಗಳನ್ನು ಅಂತರ ಬೆಳೆಯಾಗಿ ಬಳಸಬೇಡಿ.
  • ವಯಸ್ಕ ಪತಂಗಗಳ ಮೇಲ್ವಿಚಾರಣೆ ಮಾಡಲು ನಿಮ್ಮ ಹೊಲದಲ್ಲಿ ಪ್ರತಿ ಹೆಕ್ಟೇರ್‌ಗೆ 2-3 ಫೆರೋಮೋನ್ ಬಲೆಗಳನ್ನು ಇರಿಸಿ.
  • 5 ಹೆಕ್ಟೇರ್‌ಗೆ 2ರಂತೆ ನೈಸರ್ಗಿಕ ಶತ್ರುಗಳಿಗೆ ಹೊರಹೋಗಲು ಆಯ್ಕೆಯಿರುವಂತೆ ಬೆಳಕು ಅಥವಾ ಫೆರೋಮೋನ್ ಬಲೆಗಳನ್ನು ಸ್ಥಾಪಿಸಿ.
  • ಪರ್ಯಾಯವಾಗಿ ಬೆಳಿಗ್ಗೆ ಅಥವಾ ಸಂಜೆಯ ಸಮಯದಲ್ಲಿ ಸಸ್ಯದ ಮೇಲೆ ಬಲೆಗಳನ್ನು ಹಾಕಿ.
  • ಸಸ್ಯದ ಪೀಡಿತ ಭಾಗಗಳನ್ನು ತೆಗೆದುಹಾಕಿ.
  • ಮೊಟ್ಟೆಯಿಡುವ ಸಮಯದಲ್ಲಿ ಮೊಟ್ಟೆಯ ರಾಶಿಗಳನ್ನು ತೆಗೆಯಿರಿ.
  • ಅಲ್ಲದೆ, 2 ನೇ ಸಂತತಿಯ ಅವಧಿಯಲ್ಲಿ ಡೆಡ್ ಹಾರ್ಟ್ ಗಳನ್ನುನಾಶಮಾಡಿ.
  • ನೈಸರ್ಗಿಕ ಪರಭಕ್ಷಕ ಮತ್ತು ಪರಾವಲಂಬಿಗಳನ್ನು ಸಂರಕ್ಷಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ