ಕಬ್ಬು

ಇಂಟರ್ನೋಡ್ ಬೋರರ್

Chilo sacchariphagus indicus

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳಲ್ಲಿ ಶಾಟ್ ಹೋಲ್ ಗಳು.
  • ಸಣ್ಣ ಇಂಟರ್ನೋಡ್‌ಗಳು.
  • ಕಾಂಡಗಳು ಮತ್ತು ತೊಟ್ಟುಗಳ ಒಳಗೆ ಹುಳು ತಿಂದಿರುತ್ತದೆ.
  • ಲಾರ್ವಾಗಳು ಬಿಳಿಯಾಗಿರುತ್ತವೆ, ಉದ್ದನೆಯ ಪಟ್ಟಿಗಳು ಇರುತ್ತವೆ, ಹಿಂದಿನ ಭಾಗದಲ್ಲಿ ಕಪ್ಪು ಕಲೆಗಳು ಮತ್ತು ಕಂದು ಬಣ್ಣದ ತಲೆ ಇರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಕಬ್ಬು

ರೋಗಲಕ್ಷಣಗಳು

ಮರಿಹುಳುಗಳು ಮೊದಲು ಎಳೆಯ ಸುತ್ತಿಕೊಂಡ ಎಲೆಗಳನ್ನು ತಿಂದುಶಾಚ್ ಹೋಲ್ ಗಳನ್ನು ಸೃಷ್ಚಿಸುತ್ತದೆ. ಸಸ್ಯ ಬೆಳವಣಿಗೆಯ ಆರಂಭಿಕ ಹಂತದಲ್ಲಿ ಅವು ಬೆಳೆಯುವ ಬಿಂದುಗಳನ್ನು ತಿನ್ನುವ ಮೂಲಕ ಡೆಡ್ ಹಾರ್ಟ್ ಗೆ ಕಾರಣವಾಗುತ್ತವೆ. ಇಂಟರ್ನೋಡ್‌ಗಳು ಹಲವಾರು ಬೋರ್‌ಹೋಲ್‌ಗಳಿಂದಾಗಿ ಸಂಕುಚಿತಗೊಳ್ಳುತ್ತವೆ ಮತ್ತು ಸಣ್ಣದಾಗುತ್ತವೆ. ಕಾಂಡಗಳನ್ನು ಪ್ರವೇಶಿಸುವಾಗ ಮತ್ತು ಒಳಭಾಗವನ್ನು ತಿನ್ನುವಾಗ ಅವುಗಳ ಮಲ ವಿಸರ್ಜನೆ ಪ್ರವೇಶ ರಂಧ್ರಗಳನ್ನು ಮುಚ್ಚುತ್ತವೆ. ಲಾರ್ವಾಗಳು ಕಾಂಡದ ಅಂಗಾಂಶಗಳ ಒಳಗೆ ಚಲಿಸುತ್ತವೆ, ಇದು ಕೆಂಪು ಬಣ್ಣಕ್ಕೆ ಕಾರಣವಾಗುತ್ತದೆ ಮತ್ತು ಗೆಣ್ಣುಗಳಿಗೆ ಹಾನಿಮಾಡುತ್ತದೆ. ಸಸ್ಯದ ತೊಟ್ಟುಗಳು ದುರ್ಬಲಗೊಳ್ಳುತ್ತವೆ ಮತ್ತು ಗಾಳಿಯಿಂದ ಸುಲಭವಾಗಿ ಮುರಿಯಲ್ಪಡುತ್ತವೆ. ಕುಂಠಿತ ಬೆಳವಣಿಗೆ ಇತರ ಲಕ್ಷಣಗಳಾಗಿವೆ,

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ಕೀಟಕ್ಕೆ ಬಳಸಬಹುದಾದ ಯಾವುದೇ ಜೈವಿಕ ಕೀಟನಾಶಕಗಳು ತಿಳಿದಿಲ್ಲ. ಆದರೆ ಪರಾವಲಂಬಿಗಳು ಇಂಟರ್ನೋಡ್ ಬೋರರ್ ಕೊರೆಯುವಿಕೆಯನ್ನು ಕಡಿಮೆ ಮಾಡಲು ಸಮರ್ಥವಾಗಿವೆ. ಟ್ರೈಕೊಗ್ರಾಮಾ ಆಸ್ಟ್ರೇಲಿಯಾಕಮ್ ಅನ್ನು ವಾರಕ್ಕೆ 50,000 / ಹೆಕ್ಟೇರ್ ನಂತೆ ಬಿಡುಗಡೆ ಮಾಡಿ. ಮೊಟ್ಟೆಯ ಪರಾವಲಂಬಿ ಟ್ರೈಕೊಗ್ರಾಮಾ ಚಿಲಿಯೋನಿಸ್ ಅನ್ನು 2.5 ಎಂ. ಏಲ್/ ಹೆ 4 ನೇ ತಿಂಗಳಿನಿಂದ 15 ದಿನಗಳ ಅಂತರದಲ್ಲಿ 6 ಬಾರಿ ಬಿಡುಗಡೆ ಮಾಡಿ. ಲಾರ್ವಾ ಪರಾವಲಂಬಿಗಳೆಂದರೆ ಸ್ಟೆನೋಕ್ರಾಕನ್ ಡೀಸೆ ಮತ್ತು ಅಪಾಂಟೆಲೆಸ್ ಫ್ಲೇವಿಪ್ಸ್. ಪ್ಯೂಪಲ್ ಹಂತಕ್ಕೆ ಪರಾವಲಂಬಿಗಳಾದ ಟೆಟ್ರಾಸ್ಟಿಚಸ್ ಅಯಾರಿ ಮತ್ತು ಟ್ರೈಕೊಸ್ಪಿಲಸ್ ಡಯಾಟ್ರೇ ಗಳನ್ನು ಬಿಡುಗಡೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಬೆಳೆಯುವ ಋತುಗಳಲ್ಲಿ ಹದಿನೈದು ದಿನಗಳವರೆಗೆ ಸಂಪರ್ಕ ಕೀಟನಾಶಕವಾದ ಮೊನೊಕ್ರೊಟೊಫಾಸ್ ಅನ್ನು ಸಿಂಪಡಿಸಿ. ಹಾನಿ ತೀವ್ರವಾಗಿದ್ದರೆ ಕಾರ್ಬೊಫುರಾನ್ 3 ಜಿ ಕಣಗಳನ್ನು ಹೆಕ್ಟೇರಿಗೆ 30 ಕೆ.ಜಿ.ಯಂತೆ ಹಾಕಿ.

ಅದಕ್ಕೆ ಏನು ಕಾರಣ

ಚಿಲೋ ಸ್ಯಾಕ್ರಿಫಾಗಸ್ ಇಂಡಿಕಸ್‌ನ ಲಾರ್ವಾಗಳಿಂದ ಸಸ್ಯಕ್ಕೆ ಹಾನಿ ಉಂಟಾಗುತ್ತದೆ. ವಯಸ್ಕ ಪತಂಗಗಳು ಸಣ್ಣ, ಒಣಹುಲ್ಲಿನ ಬಣ್ಣದ್ದಾಗಿದ್ದು, ಬಿಳಿ ಹಿಂಭಾಗದ ರೆಕ್ಕೆಗಳನ್ನು ಹೊಂದಿದ್ದು ಮುಂದಿನ ರೆಕ್ಕೆಯ ಅಂಚಿನಲ್ಲಿ ಕಪ್ಪು ರೇಖೆಯನ್ನು ಹೊಂದಿರುತ್ತವೆ. ಅವು ವರ್ಷದುದ್ದಕ್ಕೂ ಸಕ್ರಿಯವಾಗಿರುತ್ತವೆ. ಒಂದು ವರ್ಷದಲ್ಲಿ ಸುಮಾರು 5-6 ತಲೆಮಾರುಗಳು ಪೂರ್ಣಗೊಳ್ಳುತ್ತವೆ. ಸಸ್ಯಗಳು ಸಾಮಾನ್ಯವಾಗಿ ಆರಂಭಿಕ ಹಂತದಿಂದ ಸುಗ್ಗಿಯವರೆಗೆ ಪರಿಣಾಮ ಎದುರಿಸುತ್ತವೆ. ಲಾರ್ವಾಗಳು ಸಸ್ಯದ ಗೆಣ್ಣಿನ ಪ್ರದೇಶದೊಳಗೆ ಸುರಂಗ ಕೊರೆದು, ಕಾಂಡದೊಳಗೆ ಪ್ರವೇಶಿಸಿ ಮೇಲಕ್ಕೆ ಕೊರೆತ ಮುಂದುವರಿಸುತ್ತದೆ. ಕಬ್ಬಿನ ಚಿಗುರುಗಳ ಸುತ್ತಲೂ ನೀರು ತುಂಬಿದ ಪರಿಸ್ಥಿತಿಗಳು ಇಂಟರ್ನೋಡ್ ಬೋರರ್ ಗೆ ಅನುಕೂಲಕರವಾಗಿದೆ. ಹೆಚ್ಚಿನ ಪ್ರಮಾಣದ ಸಾರಜನಕ ಮತ್ತು ಕಡಿಮೆ ತಾಪಮಾನ ಮತ್ತು ಹೆಚ್ಚಿನ ಆರ್ದ್ರತೆ ಕೂಡ ಇದಕ್ಕೆ ಅನುಕೂಲಕರ. ಇತರ ಆತಿಥೇಯ ಸಸ್ಯಗಳೆಂದರೆ ಮೆಕ್ಕೆ ಜೋಳ ಮತ್ತು ಹುಲ್ಲುಜೋಳ.


ಮುಂಜಾಗ್ರತಾ ಕ್ರಮಗಳು

  • CO 975, COJ 46 ಮತ್ತು CO 7304 ನಂತಹ ನಿರೋಧಕ ಪ್ರಭೇದಗಳನ್ನು ಬಳಸಿ.
  • ನಾಟಿ ಮಾಡಲು ಕೀಟ ಮುಕ್ತ ಸೆಟ್‌ಗಳನ್ನು ಆರಿಸಿ.
  • ಬೆಳೆಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ನಿಯತಕಾಲಿಕವಾಗಿ ಮೊಟ್ಟೆಗಳನ್ನು ಸಂಗ್ರಹಿಸಿ ನಾಶಮಾಡಿ.
  • ಕಬ್ಬಿನ ಹೊಲಗಳಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಕಳೆಗಳನ್ನು ತೆಗೆದುಹಾಕಿ ನಾಶಪಡಿಸುವ ಮೂಲಕ ಉತ್ತಮ ನೈರ್ಮಲ್ಯ ನಿರ್ವಹಣೆ ಮಾಡಿ.
  • ಜೊತೆಗೆ ನಿಮ್ಮ ಬೆಳೆಯನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ.
  • ನೆಟ್ಟ ನಂತರ 150 ಮತ್ತು 210 ನೇ ದಿನದಂದು ಒಣ ಕಬ್ಬಿನ ಎಲೆಗಳನ್ನು ತೆಗೆದು ನಿಮ್ಮ ಹೊಲವನ್ನು ಸ್ವಚ್ಛಗೊಳಿಸಿ.
  • ಮೇಲ್ವಿಚಾರಣೆಗಾಗಿ ಫೆರೋಮೋನ್ ಬಲೆಗಳನ್ನು 10 / ಹೆಕ್ಟೇರ್ ಹಾಕಿ.
  • ಮತ್ತು 45 ದಿನಗಳಿಗೊಮ್ಮೆ ಅವುಗಳನ್ನು ಬದಲಾಯಿಸಿ.
  • ಹೆಚ್ಚು ಕೀಟನಾಶಕಗಳನ್ನು ಬಳಸದೆ ಪ್ರಯೋಜನಕಾರಿ ಕೀಟಗಳು ಮತ್ತು ನೈಸರ್ಗಿಕ ಪರಭಕ್ಷಕಗಳಿಗೆ ಉತ್ತಮ ಪರಿಸ್ಥಿತಿಗಳನ್ನು ಒದಗಿಸಿ.
  • ಸುಗ್ಗಿಯ ನಂತರ, ತಡವಾಗಿ ಮೂಡಿದ ಚಿಗುರುಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ