ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಜೈಂಟ್ ಸ್ವಾಲೋಟೇಲ್ ಕ್ಯಾಟರ್ಪಿಲ್ಲರ್

Papilio cresphontes

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳ ಉದುರುವಿಕೆ.
  • ಎಲೆಗಳ ದೊಡ್ಡ ಭಾಗಗಳಲ್ಲಿ ಕ್ಯಾಟರ್ಪಿಲ್ಲರ್/ಕಂಬಳಿಹುಳ ತಿಂದ ಲಕ್ಷಣಗಳು.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ತಿಂದುದರಿಂದ ಹಾನಿಗೊಂಡ ಎಲೆಗಳು ತೇಪೆಗಳು ಅಥವಾ ರಂಧ್ರಗಳ ರೂಪವನ್ನು ಪಡೆಯುತ್ತದೆ. ಮರಿಹುಳುಗಳು ಎಳೆಯ ಎಲೆಗಳನ್ನು ತಮ್ಮ ಆಹಾರದ ಮೂಲವಾಗಿ ಮಾಡಿಕೊಳ್ಳುತ್ತವೆ. ಕ್ಯಾಟರ್ಪಿಲ್ಲರ್ ಕೆನೆ ಬಿಳಿ ಗುರುತುಗಳೊಂದಿಗೆ ಪಕ್ಷಿ ಹಿಕ್ಕೆಯ ಮಾದರಿಯನ್ನು ಹೊಂದಿದೆ ಮತ್ತು ಇದು ದುರ್ವಾಸನೆಯನ್ನು ಉಂಟುಮಾಡುತ್ತದೆ. ವಯಸ್ಕ ಹುಳಗಳು ಹೂವುಗಳ ಮಕರಂದವನ್ನು ತಿನ್ನುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಪರಾವಲಂಬಿ ಕೀಟಗಳಾದ ಲೆಸ್ಪೆಸಿಯಾರಿಲೆಯಿ (ವಿಲ್ಲಿಸ್ಟನ್), ಬ್ರಾಕಿಮೆರಿಯೊರೊಬಸ್ಟಾ, ಸ್ಟೆರೊಮಾಲಸ್ ಕ್ಯಾಸೊಟಿಸ್ ವಾಕರ್ ಮತ್ತು ಸ್ಟೆರೋಮಾಲುಸ್ ವೆನೆಸ್ಸೇ ಹೊವಾರ್ಡ್ ಗಳನ್ನು ಪರಿಚಯಿಸಿ. ಬ್ಯಾಸಿಲಸ್ ಥುರಿಂಜಿಯೆನ್ಸಿಸ್‌ನೊಂದಿಗೆ ನರ್ಸರಿ ಸ್ಟಾಕ್ ಮತ್ತು ಎಳೆಯ ತೋಪು ಮರಗಳನ್ನು ರಕ್ಷಿಸಿ. ಸಾಬೂನು ನೀರನ್ನು ಎಲೆಗಳಿಗೆ ಸಿಂಪಡಿಸಿ. ಪ್ರಬುದ್ಧ ಸಿಟ್ರಸ್ ಮರಗಳು ಕೆಲವು ಎಲೆಗಳ ನಷ್ಟವನ್ನು ಸುಲಭವಾಗಿ ತಡೆದುಕೊಳ್ಳಬಲ್ಲವು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಪ್ರಬುದ್ಧ ವಾಣಿಜ್ಯ ಸಿಟ್ರಸ್ ಮರಗಳು ಲಾರ್ವಾಗಳ ಮುತ್ತಿಕೊಳ್ಳುವಿಕೆಯನ್ನು ತಡೆದುಕೊಳ್ಳಬಲ್ಲವು, ಆದ್ದರಿಂದ ರಾಸಾಯನಿಕ ನಿಯಂತ್ರಣ ವಿಧಾನಗಳ ಅಗತ್ಯವಿಲ್ಲ ಅಥವಾ ಹೆಚ್ಚಿನ ರಾಸಾಯನಿಕ ನಿಯಂತ್ರಣ ಅಗತ್ಯವಿಲ್ಲ.

ಅದಕ್ಕೆ ಏನು ಕಾರಣ

ಜೈಂಟ್ ಸ್ವಾಲೋಟೇಲ್ ಕ್ಯಾಟರ್ಪಿಲ್ಲರ್ ಎಲೆ ತಿನ್ನುವಿಕೆಯಿಂದ ಹಾನಿ ಉಂಟಾಗುತ್ತದೆ. ಹೆಣ್ಣು ವಯಸ್ಕ ಹುಳುಗಳು ತಮ್ಮ ಮೊಟ್ಟೆಗಳನ್ನು ಆತಿಥೇಯ ಸಸ್ಯಗಳ ಎಲೆಗಳ ಮೇಲಿನ ಮೇಲ್ಮೈಯಲ್ಲಿ ಪ್ರತ್ಯೇಕವಾಗಿ ಇಡುತ್ತವೆ. ಮೊಟ್ಟೆಗಳು ಸಾಮಾನ್ಯವಾಗಿ ಸಣ್ಣ, ಗೋಳಾಕಾರದ ಮತ್ತು ಕೆನೆ ಬಣ್ಣದಿಂದ ಕೂಡಿದ ಕಂದು ಬಣ್ಣದಲ್ಲಿರುತ್ತವೆ. ಮರಿಹುಳುಗಳು ಪಕ್ಷಿ ಹಿಕ್ಕೆಗಳನ್ನು ಹೋಲುತ್ತವೆ ಮತ್ತು ಗಾಢ ಕಂದು ಬಣ್ಣದಲ್ಲಿರುತ್ತವೆ ಮತ್ತು ದೇಹದ ಮಧ್ಯಭಾಗದಲ್ಲಿ ಕೆನೆ ಬಿಳಿ ಗುರುತುಗಳಿರುತ್ತವೆ. ವಯಸ್ಕ ಚಿಟ್ಟೆ ತುಂಬಾ ದೊಡ್ಡದಾಗಿದ್ದು ಹಳದಿ ಗುರುತುಗಳೊಂದಿಗೆ ಗಾಢ ಕಂದು ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತದೆ, ಇದರಲ್ಲಿ ರೆಕ್ಕೆಗಳಿಗೆ ಅಡ್ಡಲಾಗಿ ದೊಡ್ಡ ಅಡ್ಡ ಹಳದಿ ಪಟ್ಟಿಯಿದೆ. ಅವು ಸಾಮಾನ್ಯವಾಗಿ 4 ರಿಂದ 6 ಇಂಚುಗಳಷ್ಟು ಗಾತ್ರದಲ್ಲಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಸಣ್ಣ ಮರಗಳಲ್ಲಿ ಕಂಡುಬಂದರೆ ಮೊಟ್ಟೆ ಮತ್ತು ಮರಿಹುಳುಗಳನ್ನು ನಾಶಮಾಡಿ.
  • ಹೂವುಗಳು ಮತ್ತು ಹಣ್ಣಿನ ಇಳುವರಿಯನ್ನು ಕಾಪಾಡಲು ಎಲೆಗಳಿಂದ ಲಾರ್ವಾಗಳನ್ನು ಕೈಯಿಂದ ತೆಗೆದು ಹಾಕಿ.
  • ಹೆಣ್ಣು ದೈತ್ಯ ಸ್ವಾಲೋಟೇಲ್‌ಗಳು ಅವುಗಳ ಮೇಲೆ ಮೊಟ್ಟೆಗಳನ್ನು ಇಡಲು ಆದ್ಯತೆ ನೀಡುವುದರಿಂದ ಹೊಸ ತಿಳಿ ಬಣ್ಣದ ಎಲೆಗಳನ್ನು ಪರಿಶೀಲಿಸಿ.
  • ಪ್ರಬುದ್ಧ ಸಿಟ್ರಸ್ ಮರಗಳು ಕೆಲವು ಎಲೆಗಳ ನಷ್ಟವನ್ನು ಸುಲಭವಾಗಿ ತಡೆದುಕೊಳ್ಳಬಲ್ಲವು, ಆದ್ದರಿಂದ, ಬೇಗ ನೆಡುವುವದನ್ನು ಶಿಫಾರಸು ಮಾಡಲಾಗುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ