ಸೇಬು

ಸ್ಯಾನ್ ಹೋಸ್ ಸ್ಕೇಲ್

Comstockaspis perniciosa

ಕೀಟ

ಸಂಕ್ಷಿಪ್ತವಾಗಿ

  • ಕೀಟ ತಿನ್ನುವ ಸ್ಥಳಗಳ ಸುತ್ತಲೂ ಕೆಂಪು ಬಣ್ಣದಿಂದ ನೇರಳೆ ಬಣ್ಣದ ಚುಕ್ಕೆ ಮತ್ತು ಸ್ವಲ್ಪ ನೆಗ್ಗು.
  • ಸಣ್ಣ, ವಿರೂಪಗೊಂಡ ಮತ್ತು ಮಂದ-ಬಣ್ಣದ ಹಣ್ಣುಗಳ ರಚನೆ.

ಇವುಗಳಲ್ಲಿ ಸಹ ಕಾಣಬಹುದು

4 ಬೆಳೆಗಳು
ಸೇಬು
ಜಲ್ದರು ಹಣ್ಣು
ಪೀಚ್
ಪೇರು ಹಣ್ಣು/ ಮರಸೇಬು

ಸೇಬು

ರೋಗಲಕ್ಷಣಗಳು

ಸ್ಕೇಲ್ ಕೀಟವು ಕೊಂಬೆಗಳು, ಎಲೆಗಳು ಮತ್ತು ಹಣ್ಣುಗಳಿಂದ ರಸವನ್ನು ಹೀರುತ್ತದೆ. ಈ ಆಹಾರ ಪದ್ಧತಿಯು ಹಣ್ಣಿನ ಮೇಲ್ಮೈಯಲ್ಲಿ ಕೆಂಪು ಬಣ್ಣದಿಂದ ನೇರಳೆ ಬಣ್ಣದವರೆಗಿನ ಕುಳಿ ಬೀಳಲು ಕಾರಣವಾಗುತ್ತದೆ. ಒಂದು ಸ್ಕೇಲ್ ಹೆಚ್ಚು ಹಾನಿಯನ್ನುಂಟುಮಾಡದಿದ್ದರೂ, ಒಂದು ಹೆಣ್ಣು ಮತ್ತು ಅವಳ ಸಂತತಿಯು ಒಂದು ಋತುವಿನಲ್ಲಿ ಹಲವಾರು ಸಾವಿರ ಸ್ಕೇಲ್ ಗಳನ್ನು ಉತ್ಪಾದಿಸಬಹುದು. ಈ ಕೀಟಗಳು ವಿಶೇಷವಾಗಿ ದೊಡ್ಡ ಹಳೆಯ ಮರಗಳಲ್ಲಿ ವಾಸಿಸುತ್ತವೆ ಮತ್ತು ಅಂತಹ ಮರಗಳಲ್ಲಿ ಉತ್ತಮವಾಗಿ ಸ್ಪ್ರೇ ಮಾಡುವುದು ಕಷ್ಟ. ಆದರೆ ಎಳೆಯ, ಸಿಂಪಡಿಸಿದ ಮರಗಳು ಸಹ ದುರ್ಬಲವಾಗಬಹುದು. ಅವು ಪ್ರಾಥಮಿಕವಾಗಿ ಮರದ ತೊಗಟೆಗಳಲ್ಲಿ ವಾಸಿಸುತ್ತಿದ್ದರೂ, ತೊಗಟೆಗಳ ಅಡಿಯಲ್ಲಿ ಮತ್ತು ಬಿರುಕುಗಳಲ್ಲಿ ಉಳಿದುಕೊಂಡಿರುತ್ತವೆಯಾದರೂ, ಹಣ್ಣಿನ ತೋಟದಲ್ಲಿನ ಅವುಗಳ ಬಗ್ಗೆ ಮೊದಲ ಸೂಚನೆಯು ಹಣ್ಣುಗಳು ಮತ್ತು ಎಲೆಗಳ ಮೇಲಿನ ಸಣ್ಣ ಕೆಂಪು ಚುಕ್ಕೆಗಳಾಗಿರಬಹುದು. ಹಣ್ಣಿನ ಹಾನಿ ಸಾಮಾನ್ಯವಾಗಿ ಹಣ್ಣಿನ ಕೆಳಭಾಗದಲ್ಲಿ ಕೇಂದ್ರೀಕೃತವಾಗಿರುತ್ತದೆ. ಋತುವಿನ ಆರಂಭದಲ್ಲಿ ಸೋಂಕು ಸಂಭವಿಸಿದಲ್ಲಿ, ಹಣ್ಣುಗಳು ಚಿಕ್ಕದಾಗಬಹುದು ಅಥವಾ ವಿರೂಪಗೊಳ್ಳಬಹುದು. ಇದು ಒಟ್ಟಾರೆ ಸಸ್ಯದ ಶಕ್ತಿ, ಬೆಳವಣಿಗೆ ಮತ್ತು ಇಳುವರಿಯ ಕುಸಿತಕ್ಕೆ ಕಾರಣವಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸ್ಯಾನ್ ಹೇಸ್ ಸ್ಕೇಲ್‌ಗಳನ್ನು ತಿನ್ನುವ ನೈಸರ್ಗಿಕ ಶತ್ರುಗಳಾದ, ಟ್ವೈಸ್ ಸ್ಟಾಬ್ಡ್ ಲೇಡಿ ಬೀಟಲ್ ಅಥವಾ ಸೈಬೋಸೆಫಾಲಸ್ ಕ್ಯಾಲಿಫೋರ್ನಿಕಸ್ ಗಳನ್ನು ಪರಿಚಯಿಸಿ. ಅಲ್ಲದೆ, ಕೆಲವು ಸಣ್ಣ ಕ್ಯಾಲ್ಸಿಡ್‌ಗಳು ಮತ್ತು ಅಫೆಲಿನಿಡ್ ಕಣಜಗಳು ಇವುಗಳ ಪರಾವಲಂಬಿಗಳಾಗಿವೆ. 2% ತೋಟಗಾರಿಕಾ ಎಣ್ಣೆಯನ್ನು ಮೊಗ್ಗು ಮೊಳೆಯುವ ಮೊದಲು ಅಥವಾ ನಂತರ ಸರಿಯಾಗಿ ಸಿಂಪಡಿಸಿ. ಆದರೆ, ಹೂವುಗಳು ಮೊಗ್ಗು ಮಾಡಲು ಪ್ರಾರಂಭಿಸುವ ಮೊದಲೇ ಬಳಸಬೇಕು. ಅಫಿಟಿಸ್ ಎಸ್ಪಿಪಿ., ಎನ್ಕಾರ್ಸಿಯಾ ಪೆರ್ನಿಸಿಯೋಸಿ ಮತ್ತು ಕೊಕ್ಸಿನೆಲ್ಲಾ ಇನ್ಫರ್ನಾಲಿಸ್ ಮುಲ್ಸಾಂಟ್ ಪರಭಕ್ಷಕ ಎಂದು ಜೈವಿಕ ನಿಯಂತ್ರಣ ಏಜೆಂಟ್ ಲಾಭದಾಯಕವೆಂದು ಗುರುತಿಸಲಾಗಿದೆ. ಎನ್ಕಾರ್ಸಿಯಾ ಪೆರ್ನಿಸಿಯೋಸಿ 2000 ನಂತಹ ಪರಾವಲಂಬಿಗಳನ್ನು ಸೋಂಕು ಕಂಡುಬರುವ ಪ್ರದೇಶಗಳಲ್ಲಿ ವಸಂತಕಾಲದಲ್ಲಿ ಒಮ್ಮೆ ಸೋಂಕಿತ ಮರಗಳಿಗೆ ಬಿಡುಗಡೆ ಮಾಡಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ವಿಳಂಬವಾದ ಸುಪ್ತ ಅವಧಿಯಲ್ಲಿ ಒಂದು ಕೀಟನಾಶಕ ಮತ್ತು ಎಣ್ಣೆ ಸಿಂಪಡಿಸುವುದರ ಮೂಲಕ ಬೆಳವಣಿಗೆಯನ್ನು ನಿಯಂತ್ರಿಸಬಹುದು. ಕೀಟಗಳ ಬೆಳವಣಿಗೆಯ ನಿಯಂತ್ರಕಗಳಾದ ಪೈರಿಪ್ರಾಕ್ಸಿಫೆನ್ ಅಥವಾ ಬುಪ್ರೊಫೆಜಿನ್, ನಿಯೋನಿಕೋಟಿನಾಯ್ಡ್‌ಗಳು, ಆರ್ಗನೋಫಾಸ್ಫೇಟ್‌ಗಳು ಅಥವಾ ಸ್ಪೈರೊಟೆಟ್ರಾಮ್ಯಾಟ್‌ಗಳನ್ನು ಒಳಗೊಂಡಿರುವ ಕೀಟನಾಶಕಗಳನ್ನು, ಫೆರೋಮೋನ್ ಬಲೆಗಳಲ್ಲಿ ಮೊದಲ ವಯಸ್ಕ ಕೀಟವನ್ನು ಅಥವಾ ಜಿಗುಟಾದ ಟೇಪ್‌ಗಳಲ್ಲಿ ಮೊದಲ ಕ್ರಾಲರ್‌ಗಳನ್ನು ಕಂಡಾಗ ಬಳಸಿ. ಸಕ್ರಿಯ ಕ್ರಾಲರ್‌ಗಳು ಮತ್ತೆ ಕಂಡುಬಂದಲ್ಲಿ, 10 ದಿನಗಳ ಅಂತರದಲ್ಲಿ ನಂತರ ಮತ್ತೆ ಸ್ಪ್ರೇ ಮಾಡುತ್ತಿರಿ.

ಅದಕ್ಕೆ ಏನು ಕಾರಣ

ಸ್ಯಾನ್ ಹೋಸ್ ಸ್ಕೇಲ್‌ನ ಫ್ರೂಟ್ ಟ್ರೀ ಕೀಟದಿಂದ ಹಾನಿ ಉಂಟಾಗುತ್ತದೆ. ಹೆಣ್ಣುಗಳು ಹಳದಿ, ರೆಕ್ಕೆಗಳಿಲ್ಲದ ಮತ್ತು ಮೃದುವಾದ, ಗೋಳಾಕಾರದ ಆಕಾರವನ್ನು ಹೊಂದಿರುತ್ತವೆ. ಅವು ಸುಮಾರು 1.5-2.2 ಮಿಮೀ ಉದ್ದವಿದ್ದು ಹಿಂಭಾಗದಲ್ಲಿ ಗಾಢ ಪಟ್ಟಿ ಇರುತ್ತದೆ. ಕೀಟಗಳು ಕ್ರಾಲರ್, ವೈಟ್ ಕ್ಯಾಪ್ ಮತ್ತು ಬ್ಲ್ಯಾಕ್ ಕ್ಯಾಪ್ ಎಂಬ ಮೂರು ಹಂತಗಳನ್ನು ಹಾದುಹೋಗುತ್ತದೆ. ಪ್ರತಿ ವರ್ಷ ಎರಡು ತಲೆಮಾರುಗಳ ಕೀಟಗಳೊಂದಿಗೆ ಇದು ತನ್ನ ಜೀವನ ಚಕ್ರವನ್ನು ಸರಿಸುಮಾರು 37 ದಿನಗಳಲ್ಲಿ ಪೂರ್ಣಗೊಳಿಸಬಹುದು. ವಸಂತಕಾಲದಲ್ಲಿ ತಾಪಮಾನವು 51 °F ಅನ್ನು ಮೀರಿದಾಗ ಕೀಟಗಳ ಬೆಳವಣಿಗೆಯು ಪುನರಾರಂಭವಾಗುತ್ತದೆ. ಚಳಿಗಾಲದ ಕೀಟಗಳು ಮಾರ್ಚ್ ಮಧ್ಯದಲ್ಲಿ ಸಕ್ರಿಯವಾಗುತ್ತವೆ ಮತ್ತು ಗಂಡು ಕೀಟಗಳು ಏಪ್ರಿಲ್‌ನಲ್ಲಿ ಹೊರಹೊಮ್ಮುತ್ತವೆ. ಹೆಣ್ಣುಗಳು ಓವೋ-ವಿವಿಪಾರಸ್ ಆಗಿದ್ದು ಮೇ ಮಧ್ಯದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಒಂದು ತಿಂಗಳಲ್ಲಿ 200 ರಿಂದ 400 ಮರಿಗಳನ್ನು ಉತ್ಪಾದಿಸುತ್ತವೆ. ಸಾಮಾನ್ಯ ಜೀವನ ಚಕ್ರವು 35-40 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ ಮತ್ತು ಹೂಬಿಡುವ ಅವಧಿಯಲ್ಲಿ ಕೀಟಗಳು ಬೆಳೆಯಲು ಪ್ರಾರಂಭಿಸುತ್ತವೆ. ಹೆಣ್ಣು ಸ್ಕೇಲ್ ನ ಮೇಲ್ಮೈ ದುಂಡಾಗಿರುತ್ತದೆ, ಕಪ್ಪು ಗುಳ್ಳೆಯೊಂದಿಗೆ ಸ್ವಲ್ಪ ಉಬ್ಬಿರುತ್ತದೆ. ಆದರೆ ಗಂಡು ಕೀಟ ಉದ್ದವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ತೋಟದ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು.
  • ಪರ್ಯಾಯ ಅತಿಥೇಯಗಳು, ಕಳೆಗಳು, ತಾವಾಗೇ ಬೆಳೆಯುವ ಸಸ್ಯಗಳು ಮತ್ತು ಬೆಳೆಗಳ ಉಳಿಕೆಗಳನ್ನು ತೆಗೆದುಹಾಕುವ ಸರಳ ವಿಧಾನದ ಮೂಲಕ ಮುತ್ತಿಕೊಳ್ಳುವಿಕೆಯ ಸಂಭಾವ್ಯವನ್ನು ಬಹಳವಾಗಿ ಕಡಿಮೆ ಮಾಡಬಹುದು.
  • ಹೆಚ್ಚು ಸೋಂಕಿತವಾಗಿರುವ ಕೊಂಬೆಗಳನ್ನು ಕತ್ತರಿಸಿ, ಸುಟ್ಟು ನಾಶಪಡಿಸಬೇಕು.
  • ಆವರಿಸಿರುವಿಕೆಯ ಮಟ್ಟವನ್ನು ನಿರ್ಧರಿಸಲು ಸುಪ್ತ ಅವಧಿಯಲ್ಲಿ ಮರಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿ.
  • ಚಳಿಗಾಲದಲ್ಲಿ ಎಲೆಗಳನ್ನು ಉಳಿಸಿಕೊಳ್ಳುವ ಮರಗಳನ್ನು ನೋಡಿಕೊಳ್ಳಿ.
  • ಏಕೆಂದರೆ ಇದು ಕೀಟಗಳ ಉಪಸ್ಥಿತಿಯ ಒಳ್ಳೆಯ ಸೂಚನೆಯಾಗಿರುತ್ತದೆ.
  • ಪುರುಷ ಕೀಟಗಳ ಉಪಸ್ಥಿತಿಯನ್ನು ಕಂಡುಹಿಡಿಯಲು ಫೆರೋಮೋನ್ ಬಲೆಗಳನ್ನು ಬಳಸಿ.
  • ಮರಗಳ ಉತ್ತರ ಮತ್ತು ಪೂರ್ವ ಭಾಗದಲ್ಲಿ ಆರರಿಂದ ಏಳು ಅಡಿ ಎತ್ತರದಲ್ಲಿ ಬಲೆಗಳನ್ನು ಇರಿಸಿ ಮತ್ತು ವಾರಕ್ಕೊಮ್ಮೆ ಪರಿಶೀಲಿಸಿ.
  • ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ದ್ರಾವಣ ಸಿಂಪಡಿಸುವಿಕೆಯನ್ನು ಸುಧಾರಿಸಲು ಸೋಂಕಿತ ಕೊಂಬೆಗಳನ್ನು ಕತ್ತರಿಸಬೇಕು.
  • ಮೊಗ್ಗುಗಳು ಗುಲಾಬಿ ಬಣ್ಣಕ್ಕೆ ತಿರುಗುವ ಮೊದಲು ಹಸಿರು ಭಾಗಗಳನ್ನು ತೋರಿಸುತ್ತಿರುವಾಗ ತಡವಾಗಿ ಹರಡುವ ತೋಟಗಾರಿಕಾ ತೈಲ (ಸುಪ್ತ ತೈಲ)ವನ್ನು ಸಿಂಪಡಿಸಿ.
  • ಕೀಟನಾಶಕ ಸಿಂಪಡಿಸುವುದರಿಂದ ಬೇಸಿಗೆಯ ಆರಂಭದಲ್ಲಿ ಹೊಸದಾಗಿ ಹೊರಹೊಮ್ಮುವ ತೆವಳು ಕೀಟಗಳನ್ನು ನಿಯಂತ್ರಿಸಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ