Kophene cuprea
ಕೀಟ
ಲಾರ್ವಾಗಳು ಎಲೆಗಳಿಂದ ಕ್ಲೋರೊಫಿಲ್ ಅನ್ನು ಕೆರೆದು ತೆಗೆಯುತ್ತವೆ ಮತ್ತು ನಂತರ ಅನಿಯಮಿತ ರಂಧ್ರಗಳ ಮೂಲಕ ಎಲೆಯನ್ನು ಜರಡಿಯಂತೆ ಮಾಡುತ್ತವೆ. ಈ ರಂಧ್ರಗಳು ಪ್ರತ್ಯೇಕವಾದ ತೇಪೆಗಳಿಗೆ ಸೀಮಿತವಾಗಿರುತ್ತವೆ.
ಈ ಕೀಟದ ವಿರುದ್ಧ ಲಭ್ಯವಿರುವ ಯಾವುದೇ ರಾಸಾಯನಿಕ ನಿಯಂತ್ರಣ ವಿಧಾನದ ಬಗ್ಗೆ ನಮಗೆ ಇಂದಿಗೂ ತಿಳಿದಿಲ್ಲ. ರೋಗಲಕ್ಷಣಗಳ ಸಂಭವನೀಯತೆ ಅಥವಾ ಅದರ ಗುರುತ್ವವನ್ನು ಕಡಿಮೆ ಮಾಡಲು ಯಾವುದೇ ಯಶಸ್ವಿ ವಿಧಾನ ನಿಮಗೆ ತಿಳಿದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಈ ಕೀಟದ ವಿರುದ್ಧ ಲಭ್ಯವಿರುವ ಯಾವುದೇ ರಾಸಾಯನಿಕ ನಿಯಂತ್ರಣ ವಿಧಾನದ ಬಗ್ಗೆ ನಮಗೆ ಇಂದಿಗೂ ತಿಳಿದಿಲ್ಲ. ರೋಗಲಕ್ಷಣಗಳ ಸಂಭವನೀಯತೆ ಅಥವಾ ಅದರ ಗುರುತ್ವವನ್ನು ಕಡಿಮೆ ಮಾಡಲು ಯಾವುದೇ ಯಶಸ್ವಿ ವಿಧಾನ ನಿಮಗೆ ತಿಳಿದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಕೊಫೆನ್ ಕುಪ್ರಿಯಾದ ಲಾರ್ವಾಗಳಿಂದ ಹಾನಿ ಉಂಟಾಗುತ್ತದೆ. ವಯಸ್ಕ ಪತಂಗವು ಕಂದು ಬಣ್ಣದಲ್ಲಿರುತ್ತದೆ. ಹಿಂದಿನ ವರ್ಷ ಹೆಣ್ಣು ಹುಳುಗಳಿಗೆ ಕೋಶಗಳಾಗಿ ಕಾರ್ಯನಿರ್ವಹಿಸಿದ ಚೀಲಗಳಲ್ಲಿ, ಮೊಟ್ಟೆಗಳ ರೂಪದಲ್ಲಿ (300 ಅಥವಾ ಅದಕ್ಕಿಂತ ಹೆಚ್ಚು) ಬ್ಯಾಗ್ ವರ್ಮ್ ಗಳು ಚಳಿಗಾಲವನ್ನು ಕಳೆಯುತ್ತವೆ. ಮೊಟ್ಟೆಗಳು ಒಡೆದಾಗ ಲಾರ್ವಾಗಳು ಆಹಾರಕ್ಕಾಗಿ ತೆವಳುತ್ತಾ ಹೊರಬರುತ್ತವೆ. ಪ್ರತಿಯೊಂದು ಲಾರ್ವಾಗಳು ರೇಷ್ಮೆ ಮತ್ತು ಸಸ್ಯ ವಸ್ತುಗಳ ಚೂರುಗಳನ್ನು ಬಳಸಿ ಸಣ್ಣ ಚೀಲವನ್ನು ತಯಾರಿಸುತ್ತವೆ. ಇದು ಅವುಗಳ ಆಹಾರ ತಿನ್ನುವ ಮತ್ತು ಬೆಳವಣಿಗೆಯ ಸಮಯದಲ್ಲಿ ಅವುಗಳಿಗೆ ಅಡಗು ದಾಣವಾಗುತ್ತದೆ. ಚೀಲದ ಹುಳುಗಳ ಕ್ಯಾಟರ್ಪಿಲ್ಲರ್ ಸುಮಾರು ಆರು ವಾರಗಳವರೆಗೆ ಆಹಾರ ತಿನ್ನುತ್ತವೆ. ಅವು ಬೆಳೆದಂತೆ ಚೀಲಗಳನ್ನು ಹಿಗ್ಗಿಸುತ್ತದೆ ಮತ್ತು ತೊಂದರೆ ಕಂಡುಬಂದಾಗ ಚೀಲದೊಳಗೆ ಸೇರಿಕೊಳ್ಳುತ್ತವೆ. ಬೆಳೆದ ಲಾರ್ವಾಗಳು ಹಸಿರೆಲೆಗಳನ್ನು ಹಾಳುಮಾಡುತ್ತವೆ. ಸಂಪೂರ್ಣ ಎಲೆಗಳನ್ನು ತಿನ್ನುತ್ತವೆ ಮತ್ತು ದೊಡ್ಡ ನಾಳಗಳನ್ನು ಮಾತ್ರ ಬಿಡುತ್ತವೆ. ಕಂದು ಬಣ್ಣದ ಲಾರ್ವಾಗಳನ್ನು ಶಂಕುವಿನಾಕಾರದ ಚೀಲಗಳೊಳಗೆ ಮರೆಯಾಗಿರುತ್ತವೆ. ಶರತ್ಕಾಲದ ಆರಂಭದಲ್ಲಿ, ಪ್ರೌಢ ಲಾರ್ವಾಗಳು ತಮ್ಮ ಚೀಲವನ್ನು ಕೊಂಬೆಗಳಿಗೆ ಜೋಡಿಸುತ್ತವೆ ಮತ್ತು ವಯಸ್ಕ ಕೀಟವಾಗುವ ಮೊದಲು ಕೋಶಾವಸ್ಥೆ ಅಥವಾ ವಿಶ್ರಾಂತಿ ಹಂತವಾಗಿ ಕೋಶಗಳಾಗಿ ರೂಪಾಂತರಗೊಳ್ಳುತ್ತವೆ.