ಎಲೆಕೋಸು

ಎಲೆಕೋಸು ಎಲೆ ವೆಬ್ಬರ್

Crocidolomia binotalis

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳಲ್ಲಿ ರಂಧ್ರಗಳು.
  • ಎಲೆಕೋಸಿನ ಎಲೆಗಳು ಮತ್ತು ಕೇಂದ್ರ ಭಾಗದಲ್ಲಿ ಮೇಲೆ ಮರಿಹುಳುಗಳ ಮಲಗಳು.
  • ಕಪ್ಪು ಚುಕ್ಕೆ ಮತ್ತು ಮುಂಭಾಗದ ರೆಕ್ಕೆ ಮೇಲೆ ತಿಳಿ ಕಂದು ಬಣ್ಣದ ಅಂಕುಡೊಂಕಾದ ರೇಖೆಗಳಿರುವ ಬೂದು-ಕಂದು ಬಣ್ಣದ ಪತಂಗಗಳು.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಎಲೆಕೋಸು
ಹೂಕೋಸು

ಎಲೆಕೋಸು

ರೋಗಲಕ್ಷಣಗಳು

ಎಲೆಗಳ ಸುತ್ತಲೂ ಸುತ್ತಿರುವ ರೇಷ್ಮೆಯಂತಹ ಬಲೆಗಳು ಆರಂಭಿಕ ರೋಗಲಕ್ಷಣಗಳಾಗಿವೆ. ಆಹಾರದ ಹಾನಿಯನ್ನು ಎಲೆಗಳ ಮೇಲೆ ಕಾಣಬಹುದು. ಎಲೆಗಳು ಅಸ್ಥಿಪಂಜರವಾಗಿರುತ್ತವೆ. ಎಲೆಕೋಸುಗಳ ಒಳ ಎಲೆಗಳು ಹೆಚ್ಚಾಗಿ ಹಾನಿಗೊಳಗಾಗುತ್ತವೆ. ಅವು ಹೂವಿನ ಮೊಗ್ಗುಗಳನ್ನು ತಿನ್ನುತ್ತವೆ ಮತ್ತು ಬೀಜಕೋಶಗಳಲ್ಲಿ ಕೊರೆದ ರಂರ್ಧ್ರಗಳನ್ನು ಉಳಿಸುತ್ತವೆ. ಎಲೆಕೋಸುಗಳ ಎಲೆಗಳು ಮತ್ತು ಕೇಂದ್ರಭಾಗದ ಮೇಲೆ ಮರಿಹುಳುಗಳ ಮಲಗಳನ್ನು ನೋಡಬಹುದು. ಮೊಟ್ಟೆಗಳನ್ನು ಎಲೆಗಳ ಕೆಳಗಿನ ಭಾಗದಲ್ಲಿ ಕಾಣಬಹುದು. ಎಲೆಗಳ ಹಾನಿಯಿಂದಾಗಿ ಪೀಡಿತ ಸಸ್ಯಗಳ ಆರೋಗ್ಯ ಹದಗೆಡುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಹಾನಿ ಕಂಡುಬಂದ ತಕ್ಷಣ ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಬಳಸಿ (ಸಂಜೆ ಬಳಸಬೇಕು). ಮರಿಹುಳುಗಳು ಕೀಟನಾಶಕವನ್ನು ಸೇವಿಸಿ ಸಾಯುವಂತೆ ಮಾಡಲು ಸಸ್ಯಗಳ ಮೇಲೆ ಎಚ್ಚರಿಕೆಯಿಂದ ಸಿಂಪಡಿಸುವ ಮೂಲಕ ಸಂಪೂರ್ಣವಾಗಿ ಆವರಿಸುವಂತೆ ನೋಡಿಕೊಳ್ಳಿ. ಮೊಟ್ಟೆಗಳು ಬಿಟಿಗೆ ತುತ್ತಾಗುವುದಿಲ್ಲ, ಆದರೆ ಸಣ್ಣ ಲಾರ್ವಾಗಳು ಸಂಪೂರ್ಣವಾಗಿ ಬೆಳೆದವುಗಳಿಗಿಂತ ಹೆಚ್ಚಾಗಿ ಒಳಗಾಗುತ್ತವೆ. ತಾಜಾ ಬೇವು, ಮಜ್ಜಿಗೆ ಹುಲ್ಲು, ಶುಂಠಿ ಅಥವಾ ಇತರ ಸಸ್ಯಶಾಸ್ತ್ರೀಯ ಕೀಟನಾಶಕಗಳನ್ನು @ 1 ಲೀ / 15 ಲೀ ನೀರಲ್ಲಿ ಬಳಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ವಿಶಾಲ ರೋಹಿತ ಕೀಟನಾಶಕಗಳನ್ನು (ಪೈರೆಥ್ರಾಯ್ಡ್ ಗಳು ಮತ್ತು ಆರ್ಗನೋಫಾಸ್ಫೇಟ್ ಗಳಂತಹ) ಬಳಸುವುದನ್ನು ತಪ್ಪಿಸಿ. ಏಕೆಂದರೆ ಅವು ನೈಸರ್ಗಿಕ ಪರಭಕ್ಷಕಗಳನ್ನು ಕೊಲ್ಲುತ್ತವೆ. ಕೀಟನಾಶಕಗಳಾದ ಫೋಸಲೋನ್, ಫೆನ್ವಾಲೆರೇಟ್, ಸೈಪರ್‌ಮೆಥ್ರಿನ್ ಅಥವಾ ಡೆಲ್ಟಾಮೆಥ್ರಿನ್ ಸಿಂಪಡಿಸಿ. ಕೀಟನಾಶಕಗಳನ್ನು ಒಂದೇ ರೀತಿಯ ಕ್ರಮದಿಂದ ಪುನರಾವರ್ತಿಸಬೇಡಿ.

ಅದಕ್ಕೆ ಏನು ಕಾರಣ

ಕ್ರೋಸಿಡೋಲೋಮಿಯಾ ಬೈನಾಟಲಿಸ್‌ನ ಲಾರ್ವಾಗಳಿಂದ ಹಾನಿ ಉಂಟಾಗುತ್ತದೆ. ಲಾರ್ವಾಗಳು ಸಸಿಗಳನ್ನು ಅಪರೂಪಕ್ಕೆ ಆಕ್ರಮಿಸುತ್ತವೆ ಆದರೆ ಸಸ್ಯಗಳ ಎಲ್ಲಾ ಹಂತಗಳನ್ನು ತಿನ್ನುತ್ತವೆ. ಹೊರಗಿನ ಎಲೆಗಳ ಕೆಳಭಾಗದಲ್ಲಿ 40 ರಿಂದ 100 ಕ್ಲಸ್ಟರ್‌ಗಳಲ್ಲಿ ಮೊಟ್ಟೆಗಳನ್ನು ಇಡಲಾಗುತ್ತದೆ. ಅವು ಮೊದಲಿಗೆ ಮಸುಕಾದ ಹಸಿರು ಬಣ್ಣದಲ್ಲಿರುತ್ತವೆ ಮತ್ತು ನಂತರ ಅವು ಮೊಟ್ಟೆಯೊಡೆಯುವ ಮೊದಲು ಪ್ರಕಾಶಮಾನವಾದ ಹಳದಿ ಮತ್ತು ಕಂದು ಬಣ್ಣಕ್ಕೆ ತಿರುಗುತ್ತವೆ. ಹೊಸದಾಗಿ ಮೊಟ್ಟೆಯೊಡೆದ ಕ್ಯಾಟರ್ಪಿಲ್ಲರ್ ಲಾರ್ವಾಗಳು ಸುಮಾರು 2 ಮಿ.ಮೀ ಉದ್ದವಿರುತ್ತವೆ ಮತ್ತು ಅವು ಪ್ರಬುದ್ಧವಾದಾಗ ಉದ್ದನೆಯ ಕೂದಲಿನೊಂದಿಗೆ 20 ಮಿ.ಮೀ.ವರೆಗೆ ಬೆಳೆಯುತ್ತವೆ. ನಂತರದ ಹಂತಗಳಲ್ಲಿ, ಅವು ಎಲೆಗಳ ಮೇಲೆ ದಪ್ಪವಾದ ಬಲೆಗಳನ್ನು ತಯಾರಿಸುತ್ತವೆ ಮತ್ತು ಮರಿಹುಳುಗಳು ಅವುಗಳ ಕೆಳಗೆ ತಿನ್ನುತ್ತವೆ. ಪತಂಗಗಳು ಸಾಮಾನ್ಯವಾಗಿ ರಾತ್ರಿಯಲ್ಲಿ ಸಕ್ರಿಯವಾಗಿರುತ್ತವೆ ಮತ್ತು ಆರಂಭಿಕ ಹಂತಗಳಿಂದ ಕೊಯ್ಲಿನ ಅವಧಿಯವರೆಗೆ ಬೆಳೆಗಳನ್ನು ಮುತ್ತಿಕೊಳ್ಳುತ್ತವೆ. ಇದು ಮೂಲಂಗಿ, ಸಾಸಿವೆ, ಟರ್ನಿಪ್ ಮತ್ತು ಇತರ ಕ್ರೂಸಿಫೆರಸ್ ಗಳಿಗೂ ಸೋಂಕು ತಗಲಿಸುತ್ತದೆ. ಕೀಟಗಳ ಮಲವು ತರಕಾರಿಯನ್ನು ತಿನ್ನಲಾರದಂತೆ ಮಾಡುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಾಟಿ ಮಾಡಲು ಕೀಟರಹಿತ ಬೀಜಗಳನ್ನು ಮಾತ್ರ ಬಳಸಿ.
  • ಮೊಟ್ಟೆಯ ರಾಶಿ ಮತ್ತು ಎಳೆಯ ಮರಿಹುಳುಗಳಿಗಾಗಿ ನರ್ಸರಿಯಲ್ಲಿ ಸಸಿಗಳನ್ನು ಪರಿಶೀಲಿಸಿ.
  • ಕಂಡುಬಂದರೆ, ಎಲೆಗಳನ್ನು ಅಥವಾ ಸಂಪೂರ್ಣ ಸಸ್ಯವನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ.
  • ಸಾಸಿವೆ (ಬ್ರಾಸಿಕಾ ಜುನ್ಸಿಯಾ) ಅಥವಾ ಚೈನೀಸ್ ಎಲೆಕೋಸನ್ನು ಬಲೆ ಬೆಳೆಯಾಗಿ ಬಳಸಿ ಅದನ್ನು ಎಲೆಕೋಸುಗಳ ಸಾಲುಗಳ ನಡುವೆ ಸಹವರ್ತಿ ಬೆಳೆಯಾಗಿ ನೆಡಬೇಕು.
  • ಎಲೆಕೋಸುಗಳನ್ನು ನಾಟಿ ಮಾಡುವ ಸುಮಾರು 15 ದಿನಗಳ ಮೊದಲು ಸಾಸಿವೆಯ ಮೊದಲ ಸಾಲನ್ನು ಮತ್ತು ನಾಟಿ ಮಾಡಿದ 25 ದಿನಗಳ ನಂತರ ಎರಡನೇ ಸಾಲನ್ನು ನೆಡಬೇಕು.
  • ಬಲೆಗಳನ್ನು ಬಳಸಿ ಮತ್ತು ಕೀಟ-ನಿರೋಧಕ ಜಾಲರಿ ಅಥವಾ ಉಣ್ಣೆಯನ್ನು ಬಳಸಿ ಮುಚ್ಚಿಗೆ ಬೆಳೆಗಳ ಮೂಲಕ ಮರಿಹುಳುಗಳ ಪ್ರವೇಶವನ್ನು ತಡೆಯಿರಿ.
  • ಬೆಳವಣಿಗೆಯ ಋತುವಿನಲ್ಲಿ ಪ್ರತಿದಿನವೂ ರೋಗಕ್ಕೆ ಒಳಗಾಗುವ ಸಾಧ್ಯತೆ ಇರುವ ಸಸ್ಯಗಳ ಮೇಲ್ವಿಚಾರಣೆ ಮಾಡಿ ಮತ್ತು ಕಂಡುಬರುವ ಯಾವುದೇ ಮೊಟ್ಟೆಗಳು ಅಥವಾ ಮರಿಹುಳುಗಳನ್ನು ತೆಗೆದುಹಾಕಿ.
  • ಸಸ್ಯದೊಳಗೆ, ಮರಿಹುಳುಗಳೊಂದಿಗೆ ಇರುವ ಬಲೆಯ ಎಲೆಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.
  • ಸುಗ್ಗಿಯ ನಂತರ ಬೆಳೆ ಅವಶೇಷಗಳನ್ನು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ