ಮಾವು

ಮಾವಿನ ಮಿಡ್ಜ್

Procontarinia

ಕೀಟ

ಸಂಕ್ಷಿಪ್ತವಾಗಿ

  • ಸಣ್ಣ, ನರಹುಲಿ ತರಹದ ತೇಪೆಗಳು ಎಲೆಗಳು, ಮೊಗ್ಗುಗಳು, ಚಿಗುರುಗಳು ಮತ್ತು ಎಳೆಯ ಹಣ್ಣುಗಳನ್ನು ಆವರಿಸುತ್ತವೆ.
  • ನಿರ್ಗಮನ ರಂಧ್ರಗಳು ಎಲೆಗಳ ಕೆಳಗೆ ಮತ್ತು ಹಣ್ಣಿನ ಕಾಂಡಗಳ ಮೇಲೆ ಗೋಚರಿಸುತ್ತವೆ.
  • ಅಕಾಲಿಕವಾಗಿ ಉದುರಿಹೋಗುವ ವಿರೂಪಗೊಂಡ ಎಲೆಗಳು ಕಂಡುಬರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮಾವು

ರೋಗಲಕ್ಷಣಗಳು

ರೋಗಲಕ್ಷಣಗಳು ಪ್ರಧಾನವಾಗಿ ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ, ಆದರೆ ಸಾಂದರ್ಭಿಕವಾಗಿ ಮೊಗ್ಗುಗಳು, ಹೂಗೊಂಚಲುಗಳು ಮತ್ತು ಮಾವಿನ ಮರಗಳ ಎಳೆಯ ಹಣ್ಣುಗಳ ಮೇಲೂ ಕಂಡುಬರುತ್ತವೆ. ಈ ಮಿಡ್ಜ್‌ನಿಂದ ಮುತ್ತಿಕೊಂಡಿರುವ ಭಾಗಗಳು ಅನೇಕ ಸಣ್ಣ, ಉಬ್ಬಿದ ಗಾಯಗಳು ಅಥವಾ ಗುಳ್ಳೆಗಳಿಂದ ಆವೃತವಾಗಿರುತ್ತವೆ. ಪ್ರತಿಯೊಂದು ನರಹುಲಿ ತರಹದ ಗುಳ್ಳೆ ಅಥವಾ ಗಾಯ ಗಾತ್ರದಲ್ಲಿ 3-4 ಮಿಮೀ ಇರುತ್ತವೆ ಮತ್ತು ಮರದ ಅಂಗಾಂಶಗಳನ್ನು ತಿನ್ನುವ ಹಳದಿ ಲಾರ್ವಾವನ್ನು ಹೊಂದಿರುತ್ತವೆ. ಆರಂಭಿಕ ಹಂತಗಳಲ್ಲಿ, ಮೊಟ್ಟೆ ಇಡುವ ಸ್ಥಳವು ಸಣ್ಣ ಕೆಂಪು ಚುಕ್ಕೆಗಳಾಗಿ ಗೋಚರಿಸುತ್ತದೆ. ಹೆಚ್ಚು ಬಾಧಿತ ಎಲೆಗಳು ವಿರೂಪಗೊಳ್ಳಬಹುದು. ಕಡಿಮೆ ದ್ಯುತಿಸಂಶ್ಲೇಷಣೆಯನ್ನು ತೋರಿಸಬಹುದು ಮತ್ತು ಅಕಾಲಿಕವಾಗಿ ಉದುರಬಹುದು. ಮುತ್ತಿಕೊಂಡಿರುವ ಹೂಗೊಂಚಲುಗಳು ತೆರೆಯದೇ ಇರಬಹುದು. ಎಲೆಗಳ ಕೆಳಭಾಗದಲ್ಲಿರುವ ಸಣ್ಣ ನಿರ್ಗಮನ ರಂಧ್ರಗಳು ಲಾರ್ವಾಗಳ ಇರುವಿಕೆಯ ಅವಶೇಷಗಳಾಗಿರುತ್ತವೆ. ಈ ನಿರ್ಗಮನ ಗಾಯಗಳು ದ್ವಿತೀಯಕ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಎಳೆಯ ಹಣ್ಣುಗಳು ಸಹ ಕಾಂಡದ ಬುಡದಲ್ಲಿ ನಿರ್ಗಮನ ರಂಧ್ರಗಳನ್ನು ತೋರಿಸುತ್ತವೆ. ತೀವ್ರವಾಗಿ ಸೋಂಕಿತವಾದ ಮಾವಿನ ಚಿಗುರುಗಳು ಯಾವುದೇ ಹೂಗೊಂಚಲುಗಳನ್ನು ಹೊಂದಿರುವುದಿಲ್ಲ. ಇದು ಇಳುವರಿಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಫಾಲ್ ವೆಬ್‌ವರ್ಮ್, ಟೆಟ್ರಾಸ್ಟಿಕಸ್ ಎಸ್ ಪಿ ಗಳು, ಪ್ರೊಕೊಂಟಾರಿನಿಯಾ ಎಸ್ ಪಿ ಲಾರ್ವಾಗಳ ಪರಾವಲಂಬಿ. ಆದ್ದರಿಂದ ಕೀಟವನ್ನು ನಿಯಂತ್ರಿಸಲು ಬಳಸಬಹುದು. ಇತರ ಪರಾವಲಂಬಿಗಳು ಪ್ಲ್ಯಾಟಿಗ್ಯಾಸ್ಟರ್ ಎಸ್ ಪಿ, ಅಪ್ರೋಸ್ಟೊಸೆಟಸ್ ಎಸ್ ಪಿ ಪಿ., ಮತ್ತು ಸಿಸ್ಟಾಸಿಸ್ ಡಾಸ್ನ್ಯುರೇ. ಮರದ ಮೇಲಾವರಣದ ಮೇಲೆ ಬೇವಿನ ಬೀಜದ ಕರ್ನಲ್ ಸಾರವನ್ನು ಹಾಕಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕೀಟನಾಶಕಗಳ ಅತಿಯಾದ ಬಳಕೆಯು ಪ್ರತಿರೋಧವನ್ನು ಉಂಟುಮಾಡಬಹುದು ಮತ್ತು ನೈಸರ್ಗಿಕ ಶತ್ರುಗಳನ್ನು ಕೊಲ್ಲಬಹುದು. ಪುಷ್ಪಮಂಜರಿಯ ಮೊಗ್ಗು ಬಿರಿಯುವ ಹಂತದಲ್ಲಿ 0.05% ಫೆನಿಟ್ರೋಥಿಯಾನ್, 0.045% ಡೈಮಿಥೊಯೇಟ್ ಸಿಂಪಡಿಸುವುದು ಕೀಟವನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿದೆ. ನೀರಿನೊಂದಿಗೆ ಬೆರೆಸಿದ ಬೈಫೆಂತ್ರಿನ್ (70 ಮಿಲಿ / 100 ಲೀ) ನ ಎಲೆಗಳ ಸಿಂಪಡಿಕೆಯು ತೃಪ್ತಿದಾಯಕ ಫಲಿತಾಂಶವನ್ನು ನೀಡಿದೆ. ಹೂಬಿಡುವ ಋತುವಿನಲ್ಲಿ 7-10 ದಿನಗಳ ಅಂತರದಲ್ಲಿ ಹಣ್ಣುಗಳು ಬಟಾಣಿ ಗಾತ್ರವನ್ನು ತಲುಪುವವರೆಗೂ ಸಿಂಪಡಿಸುವಿಕೆಯನ್ನು ಪುನರಾವರ್ತಿಸಬೇಕು. ಪ್ರೊಕೊಂಟಾರಿನಿಯಾ ಎಸ್‌ಪಿ ಸಂಖ್ಯೆ ಕಡಿಮೆ ಮಾಡಲು ಡೈಮಿಥೊಯೇಟ್ ಹೊಂದಿರುವ ದ್ರವೌಷಧಗಳನ್ನು ಸಹ ಬಳಸಲಾಗುತ್ತದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ವಿವಿಧ ಜಾತಿಯ ಮಿಡ್ಜಸ್, ಪ್ರೊಕೊಂಟಾರಿನಿಯಾ ಎಸ್ ಪಿಯಿಂದ ಉಂಟಾಗುತ್ತವೆ. ವಯಸ್ಕ ಮಿಡ್ಜಸ್ ಗಾತ್ರವು 1-2 ಮಿಮೀ ಇರುತ್ತದೆ. ಮತ್ತು ಸಂಯೋಗ, ಮೊಟ್ಟೆ ಇಡುವಿಕೆ ಮುಗಿಸಿ, ಹೊರಹೊಮ್ಮಿದ 24 ಗಂಟೆಗಳ ಒಳಗೆ ಸಾಯುತ್ತವೆ. ಮೊಟ್ಟೆಗಳನ್ನು ಬಹುತೇಕ ಎಲ್ಲಾ ಮರದ ಭಾಗಗಳಲ್ಲಿ ಇಡುತ್ತವೆ. ಆದರೆ ಅವು ಪ್ರಧಾನವಾಗಿ ಎಲೆಗಳಲ್ಲಿ ಕಂಡುಬರುತ್ತವೆ. ಮೊಟ್ಟೆಯೊಡೆದು ಹುಳ ಹೊರಬಂದಾಗ, ಲಾರ್ವಾಗಳು ಅಂಗಾಂಶಗಳೊಳಗೆ ತೂರಿಕೊಳ್ಳುತ್ತವೆ ಮತ್ತು ಅವು ಪರಿಣಾಮ ಬೀರುವ ಅಂಗಗಳನ್ನು ಅವಲಂಬಿಸಿ ಹಾನಿಯನ್ನುಂಟುಮಾಡುತ್ತವೆ. ಹುಳಗಳು ಹೆಚ್ಚಾಗಿ ತಿನ್ನುವ ಕಾರಣದಿಂದಾಗಿ ಹೂವಿನ ಭಾಗಗಳು ಒಣಗಬಹುದು ಮತ್ತು ನೆಲಕ್ಕೆ ಬೀಳಬಹುದು. ವಯಸ್ಕ ಲಾರ್ವಾಗಳು ವಲಸೆ ಹೋಗುತ್ತವೆ ಅಥವಾ ಮಣ್ಣಿನ ಮೇಲಿನ ಪದರಗಳ ಮೇಲೆ ಬೀಳುತ್ತವೆ. ಅಲ್ಲಿ ಅವು ಕೋಶ ಹಂತವನ್ನು ಪ್ರವೇಶಿಸುತ್ತವೆ. ವಯಸ್ಕ ಕೀಟಗಳ ಹೊರಹೊಮ್ಮುವಿಕೆ ಸಾಮಾನ್ಯವಾಗಿ ಮಧ್ಯಾಹ್ನ ನಡೆಯುತ್ತದೆ ಮತ್ತು ತಂಪಾದ ತಾಪಮಾನ (20 °C) ಮತ್ತು 60-82% ಸಾಪೇಕ್ಷ ಆರ್ದ್ರತೆಯ ಬಗ್ಗೆ ಒಲವು ತೋರುತ್ತದೆ. ಉತ್ತರ ಗೋಳಾರ್ಧದಲ್ಲಿ ಜನವರಿಯಿಂದ ಮಾರ್ಚ್ ಅವಧಿಯೊಳಗೆ 3-4 ಕೀಟ ತಲೆಮಾರುಗಳು ಆಗಿ ಹೋಗಬಹುದು.


ಮುಂಜಾಗ್ರತಾ ಕ್ರಮಗಳು

  • ಸಹಿಷ್ಣು ಅಥವಾ ನಿರೋಧಕ ಮರದ ಪ್ರಭೇದಗಳನ್ನು ಬೆಳೆಸಿ.
  • ಮಿಡ್ಜ್ ಮುತ್ತುವಿಕೆಯ ಚಿಹ್ನೆಗಳಿಗಾಗಿ ನಿಯಮಿತವಾಗಿ ತೋಟದ ಮೇಲ್ವಿಚಾರಣೆ ಮಾಡಿ.
  • ಕೀಟವನ್ನು ಕೈಯಿಂದ ಆರಿಸಿ, ಅದರಲ್ಲೂ ವಿಶೇಷವಾಗಿ ಸಂಖ್ಯೆಯು ದಟ್ಟವಾಗಿಲ್ಲದಿದ್ದರೆ.
  • ತೋಟದಲ್ಲಿ ಅವಶೇಷಗಳು ಮತ್ತು ಮುರಿದ ಶಾಖೆಗಳು ಉಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ತೋಟ ಮತ್ತು ಸುತ್ತಮುತ್ತಲಿನಲ್ಲಿ ಕಳೆಗಳನ್ನು ನಿಯಮಿತವಾಗಿ ತೆಗೆದುಹಾಕಿ.
  • ಋತುವಿನಲ್ಲಿ ಮುತ್ತಿಕೊಂಡಿರುವ ಶಾಖೆಗಳನ್ನು ಸಮರಿ.
  • ಕೀಟ ಸಂಖ್ಯೆಯ ಮಟ್ಟವನ್ನು ಕಡಿಮೆ ಮಾಡಲು ನಿಮ್ಮ ಮಾವಿನ ತೋಟದಲ್ಲಿ ಅಂತರ ಬೆಳೆ ನೆಡಬೇಕು.
  • ನೊಣಗಳನ್ನು ಹಿಡಿಯಲು ಹಳದಿ ಜಿಗುಟಾದ ಬಲೆಗಳನ್ನು ಬಳಸಿ.
  • ಲಾರ್ವಾಗಳು ನೆಲಕ್ಕೆ ಇಳಿಯದಂತೆ ಅಥವಾ ಪ್ಯೂಪೆಗಳು ತಮ್ಮ ಗೂಡಿನಿಂದ ಹೊರಬರದಂತೆ ತಡೆಯಲು ಮಣ್ಣನ್ನು ಪ್ಲಾಸ್ಟಿಕ್ ಫಾಯಿಲ್ ನಿಂದ ಮುಚ್ಚಿ.
  • ಪ್ಯೂಪಾ ಮತ್ತು ಲಾರ್ವಾಗಳನ್ನು ಸೂರ್ಯನಿಗೆ ಒಡ್ಡಲು ನಿಯಮಿತವಾಗಿ ಮಣ್ಣನ್ನು ಉಳುಮೆ ಮಾಡಿ.
  • ಇದು ಅವುಗಳನ್ನು ಕೊಲ್ಲುತ್ತದೆ.
  • ಋತುವಿನಲ್ಲಿ ಮುತ್ತಿಕೊಂಡಿರುವ ಮರದ ವಸ್ತುಗಳನ್ನು ಸಂಗ್ರಹಿಸಿ ಸುಟ್ಟುಹಾಕಿ.
  • ಮುತ್ತಿಕೊಂಡಿರುವ ಸಸ್ಯಗಳು ಅಥವಾ ಹಣ್ಣುಗಳನ್ನು ಹೊಸ ಪ್ರದೇಶಗಳಿಗೆ ಅಥವಾ ಮಾರುಕಟ್ಟೆಗಳಿಗೆ ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ