Scrobipalpa sp.
ಕೀಟ
ಸಸ್ಯದ ಮೊಗ್ಗುಗಳು, ಹೂಗಳು ಮತ್ತು ಕಾಂಡಗಳ ಮೇಲೆ ರೋಗಲಕ್ಷಣಗಳನ್ನು ಗಮನಿಸಬಹುದು. ಆರಂಭಿಕ ಬೆಳವಣಿಗೆಯ ಹಂತದಲ್ಲಿ ಮುತ್ತಿಗೆಗೆ ಒಳಗಾದ ಸಸ್ಯಗಳ ತುದಿಯ ಚಿಗುರುಗಳು ಬಾಗುತ್ತವೆ ಮತ್ತು ಒಣಗುತ್ತವೆ. ಹಳೆಯ ಸಸ್ಯಗಳಲ್ಲಿ ಬೆಳವಣಿಗೆ ಕುಂಠಿತವಾಗುತ್ತದೆ. ಹೂವಿನ ಮೊಗ್ಗುಗಳು ಮುರುಟುವುದು ಮತ್ತು ಬೀಳುವುದರಿಂದ ಹಣ್ಣು ಮೂಡುವ ಪ್ರಕ್ರಿಯೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಎಲೆಗಳು ಬಾಡಿದಂತೆ ಮತ್ತು ಒಣಗಿದಂತೆ ತೋರುತ್ತವೆ. ಚಿಗುರುಗಳು ಮತ್ತು ಹಣ್ಣುಗಳ ಮೇಲೆ ಕೊರೆದ ರಂಧ್ರಗಳು ಕಾಣುತ್ತವೆ ಮತ್ತು ಅವುಗಳು ಕೀಟಗಳ ವಿಸರ್ಜನೆಯೊಂದಿಗೆ ಮುಚ್ಚಿರುತ್ತವೆ. ಚಿಗುರುಗಳನ್ನು ಕೊರೆಯುವ ಮೂಲಕ, ತುದಿಯ ಚಿಗುರುಗಳು ಒಣಗಲು ಮೊಗ್ಗು ಹುಳುಗಳು ಕಾರಣವಾಗುತ್ತದೆ. ಇದನ್ನು ಡೆಡ್ ಹಾರ್ಟ್ ಎಂದು ಕರೆಯಲಾಗುತ್ತದೆ.
ಮೈಕ್ರೊಗ್ಯಾಸ್ಟರ್ ಎಸ್ಪಿ., ಬ್ರಾಕಾನ್ ಕಿಚನೆರಿ, ಫಿಲೆಂಟಾ ರುಫಿಕಾಂಡಾ, ಚೆಲೋನಸ್ ಹೆಲಿಯೊಪಾ ಸೇರಿದಂತೆ ಹಲವು ಪರಾವಲಂಬಿಗಳನ್ನು ಮೊಗ್ಗು ಹುಳು ಮುತ್ತುವಿಕೆಯನ್ನು ಮಿತಿಗೊಳಿಸಲು ಬಳಸಬಹುದು. ಪ್ರಿಸೊಮೆರಸ್ ಟೆಸ್ಟಾಸಿಯಸ್ ಮತ್ತು ಕ್ರೆಮಾಸ್ಟಸ್ ಫ್ಲೇಕೂರ್ಬಿಟಲಿಸ್‌ನಂತಹ ಲಾರ್ವಾ ಪರಾವಲಂಬಿಗಳ ಚಟುವಟಿಕೆಯನ್ನು ಪ್ರೋತ್ಸಾಹಿಸಿ. ನೈಸರ್ಗಿಕ ಶತ್ರುಗಳಾದ ಬ್ರೋಸ್ಕಸ್ ಪಂಕ್ಟಾಟಸ್, ಲಿಯೋಗ್ರಿಲಸ್ ಬಿಮಾಕ್ಯುಲಟಸ್ ಅನ್ನು ಉತ್ತೇಜಿಸಬೇಕು. ಬೇವಿನ ಬೀಜದ ಸಾರ @ 5% ಅಥವಾ ಬೇವಿನ ಎಣ್ಣೆಯನ್ನು ಹೊಂದಿರುವ ಆಜಾದಿರಾಕ್ಟಿನ್ ಇಸಿ ಸಿಂಪಡಿಸಿ. ರೋಗಕಾರಕಗಳಾದ ಬ್ಯಾಸಿಲಸ್ ಥುರಿಂಜಿಯೆನ್ಸಿಸ್, ಬ್ಯೂವೇರಿಯಾ ಬಾಸ್ಸಿಯಾನಾ (ಎಂಟಮೊಪೆಥೋಜೆನಿಕ್ ಶಿಲೀಂಧ್ರ) ಆಧಾರಿತ ಉತ್ಪನ್ನಗಳನ್ನು ಕೀಟಗಳನ್ನು ಮೊದಲು ನೋಡಿದ ಕೂಡಲೇ ಬಳಸಬಹುದು ಮತ್ತು ಅಗತ್ಯವಿದ್ದರೆ ಅದನ್ನು ಪುನರಾವರ್ತಿಸಬೇಕು.
ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. 3 - 10% ಎಳೆಯ ಸಸ್ಯಗಳು ಹಾನಿಗೊಳಗಾದಾಗ ಕ್ರಮ ತೆಗೆದುಕೊಳ್ಳಿ. ಆದರೆ ಅನಗತ್ಯ ಸಿಂಪರಣೆ ಮತ್ತು ವಿಶಾಲರೋಹಿತ ಕೀಟನಾಶಕಗಳನ್ನು ತಪ್ಪಿಸಿ. ಏಕೆಂದರೆ ಅವು ಪ್ರಯೋಜನಕಾರಿ ಕೀಟಗಳನ್ನು ಕೊಲ್ಲುತ್ತವೆ. ಹಣ್ಣು ಪಕ್ವವಾಗುವ ಮತ್ತು ಸುಗ್ಗಿಯ ಸಮಯದಲ್ಲಿ ಇದನ್ನು ಸಿಂಪಡಿಸಬೇಡಿ. ಕೀಟವನ್ನು ನಿಯಂತ್ರಿಸಲು ಕ್ಲೋರ್ಪಿರಿಫೊಸ್, ಎಮಾಮೆಕ್ಟಿನ್ ಬೆಂಜೊಯೇಟ್, ಫ್ಲುಬೆಂಡಿಯಾಮೈಡ್, ಇಂಡೊಕ್ಸಾಕಾರ್ಬ್ ಆಧಾರಿತ ಕೀಟನಾಶಕಗಳನ್ನು ಬಳಸಬಹುದು.
ಮುಖ್ಯ ಹಾನಿಯು ಸ್ಕ್ರೋಬಿಪಾಲ್ಪಾ (ಬ್ಲಾಪ್ಸಿಗೋನಾ ಜಾತಿಗಳು) ದ ಲಾರ್ವಾಗಳಿಂದ ಉಂಟಾಗುತ್ತದೆ. ಪತಂಗಗಳು ಮಧ್ಯಮ ಗಾತ್ರದಲ್ಲಿದ್ದು ಬಿಳಿ ಮತ್ತು ತಾಮ್ರದ ಕೆಂಪು ಬಣ್ಣದ ಅಂಚಿನ ರೆಕ್ಕೆಗಳನ್ನು ಹೊಂದಿರುತ್ತವೆ. ಮುಂದಿನ ರೆಕ್ಕೆಗಳು ಬಿಳಿ ಕಂದು ಬಣ್ಣದ್ದಾಗಿರುತ್ತವೆ. ಹಿಂದಿನ ರೆಕ್ಕೆಗಳು ಮಸುಕಾದ ಬೂದು ಮತ್ತು ಹೆಚ್ಚು ಅಥವಾ ಕಡಿಮೆ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಆರಂಭದಲ್ಲಿ, ಅವುಗಳ ಲಾರ್ವಾಗಳು ಗುಲಾಬಿ ಬಣ್ಣದ ಕಡು ಕಂದು ತಲೆ ಮತ್ತು ಎದೆಯೊಂದಿಗೆ ಮಸುಕಾಗಿ ಕಾಣುತ್ತವೆ ಮತ್ತು ನಂತರ ಕಂದು ಮರಿಹುಳುಗಳಾಗಿ ಬೆಳೆಯುತ್ತವೆ. ಇವು ಸಸಿಗಳ ಕಾಂಡಗಳನ್ನು ಕೊರೆದು, ಆಂತರಿಕ ಅಂಗಾಂಶಗಳನ್ನು ತಿನ್ನುತ್ತವೆ ಇದು ಕಾಂಡದ ಉಜ್ಜುಗಾಯಕ್ಕೆ ಕಾರಣವಾಗುತ್ತದೆ. ಜೊತೆಗೆ ಮೊಳೆತ ಅಡ್ಡ ಶಾಖೆಗಳು, ಕುಂಠಿತಗೊಂಡ ಅಥವಾ ವಿಕೃತ ಬೆಳವಣಿಗೆ ಮತ್ತು ಒಣಗಿದ ಸಸ್ಯಗಳಿಗೂ ಕಾರಣವಾಗುತ್ತದೆ. ಮೊಗ್ಗು ಹುಳು ಹೂವಿನ ಮೊಗ್ಗುಗಳನ್ನು ಕೊರೆದಾಗ, ಅದು ಹೂವು ಉದುರಲು ಕಾರಣವಾಗುತ್ತದೆ. ಇದರಿಂದಾಗಿ ಸಸ್ಯವು ಹೆಚ್ಚು ಹಣ್ಣುಗಳನ್ನು ಉತ್ಪಾದಿಸುವುದಿಲ್ಲ. ಈ ಮರಿಹುಳುಗಳು ಸಾಮಾನ್ಯವಾಗಿ ತಡ ಹಗಲಿನಲ್ಲಿ ಆಹಾರ ತಿನ್ನುತ್ತವೆ ಮತ್ತು ಅವುಗಳನ್ನು ತಂಬಾಕಿನ ಪ್ರಮುಖ ಕೀಟವೆಂದು ಸಹ ಪರಿಗಣಿಸಲಾಗುತ್ತದೆ.