Aulacophora foveicollis
ಕೀಟ
ಪ್ರೌಢ ಕೀಟಗಳು ಎಲೆಗಳು, ಹೂಗಳು ಮತ್ತು ಹಣ್ಣುಗಳನ್ನು ತಿನ್ನುತ್ತವೆ. ಜೀರುಂಡೆ, ಸಸ್ಯದ ಅಂಗಾಂಶಗಳಲ್ಲಿ (ಸಿರೆಗಳ ನಡುವೆ) ದೊಡ್ಡ ರಂಧ್ರಗಳನ್ನು ಮಾಡುತ್ತದೆ. ಇದು ಬೆಳವಣಿಗೆಯಲ್ಲಿ ಕುಂಠಿತತೆಯನ್ನುಂಟುಮಾಡುತ್ತದೆ ಮತ್ತು ಅಂತಿಮವಾಗಿ ಸಸ್ಯದ ಸಾವಿಗೆ ಕಾರಣವಾಗುತ್ತದೆ. ಬೆಳೆಯ ಪಕ್ವತೆಯನ್ನು ವಿಳಂಬಗೊಳಿಸುವುದರಿಂದ ಎಳೆಯ ಸಸಿಗಳಿಗಾಗುವ ಹಾನಿ ಹೆಚ್ಚಾಗಿ ವಿನಾಶಕಾರಿಯಾಗಿರುತ್ತದೆ. ಹೂವುಗಳ ಮೇಲೆ ಪರಿಣಾಮವಾದರೆ, ಹಣ್ಣು ಬಿಡುವುದು ಕಡಿಮೆಯಾಗುತ್ತದೆ. ಈ ಕೀಟದ ಗ್ರಬ್‌ಗಳು ಮಣ್ಣಿನಲ್ಲಿ ಉಳಿದು ಸಸ್ಯಗಳ ಬೇರುಗಳು ಮತ್ತು ನೆಲದಡಿಯಲ್ಲಿರುವ ಕಾಂಡವನ್ನು ತಿನ್ನುತ್ತವೆ. ಇದು ಕಾಂಡಗಳು ಮತ್ತು ಬೇರುಗಳು ಕೊಳೆಯಲು ಮತ್ತು ಒಣಗಲು ಕಾರಣವಾಗುತ್ತದೆ. ಪ್ರೌಢ ಕೀಟಗಳು ಸಸಿಗಳನ್ನು ತಿನ್ನುವುದರಿಂದ ಬೆಳವಣಿಗೆ ವಿಳಂಬವಾಗಬಹುದು ಮತ್ತು ಸಸ್ಯದ ಸಾವಿಗೆ ಕಾರಣವಾಗಬಹುದು. ಇದರಿಂದಾಗಿ ಹೊಲದಲ್ಲಿ ಖಾಲಿ ಜಾಗಗಳಿರುತ್ತವೆ. ಜೀರುಂಡೆಗಳು ಕೆಲವೊಮ್ಮೆ ಒಂದಾಗಿ ಹಳೆಯ ಸಸ್ಯಗಳ ಎಲೆಗಳನ್ನು ಕೊರಕುತ್ತವೆ. ಹೂವಿನ ಭಾಗಗಳಿಗೂ ಸಹ ಸ್ವಲ್ಪ ಹಾನಿಯಾಗಬಹುದು. ಇದರ ಪರಿಣಾಮವಾಗಿ ಹಣ್ಣು ಬಿಡುವುದು ಕಡಿಮೆಯಾಗುತ್ತದೆ. ಎಳೆಯ ಹಣ್ಣುಗಳ ಕೆಳಗಿನ ಭಾಗಗಳ ಮೇಲೆ ಪ್ರೌಢ ಕೀಟಗಳು ತಿಂದಿರುವುದರಿಂದ ಕೆರೆತದ ಗೆರೆಗಳು ಕಾಣುತ್ತವೆ. ಇದರಿಂದ ಕೊಳೆತವು ಉಂಟಾಗಿ ಸೂಕ್ಷ್ಮ ಜೀವಿಗಳ ಆಕ್ರಮಣಕ್ಕೆ ಕಾರಣವಾಗುತ್ತವೆ.
ನೈಸರ್ಗಿಕ ಶತ್ರುಗಳು ಜೀರುಂಡೆ ಮೇಲೆ ದಾಳಿ ಮಾಡುತ್ತವೆ. ಇದರಲ್ಲಿ ಟಾಕಿನಿಡ್ ಕುಟುಂಬದ ಸದಸ್ಯ ಕೀಟಗಳು ಮತ್ತು ರಿಡ್ಯೂವಿಡ್ ರೈನೋಕೊರಿಸ್ ಫ್ಯೂಸಿಪ್‌ಗಳು ಸೇರಿವೆ. 4 ಲೀಟರ್ ನೀರಿನಲ್ಲಿ ಅರ್ಧ ಕಪ್ ಮರದ ಬೂದಿ ಮತ್ತು ಅರ್ಧ ಕಪ್ ಸುಣ್ಣವನ್ನು ಬೆರೆಸಿ, ಮತ್ತು ಕೆಲವು ಗಂಟೆಗಳ ಕಾಲ ನೆನೆಯಲು ಬಿಡಿ. ನಿಮ್ಮ ಹೊಲದಲ್ಲಿ ಇದನ್ನು ಬಳಸುವ ಮೊದಲು ಈ ಮಿಶ್ರಣವನ್ನು ಕೆಲವು ಸೋಂಕಿತ ಸಸ್ಯಗಳ ಮೇಲೆ ಹಚ್ಚಿ ಮತ್ತು ಪರೀಕ್ಷಿಸಿ. ಮಿಶ್ರಣವನ್ನು ನಿಮ್ಮ ಬೆಳೆಗೆ ಎಲೆಗಳ ಸಿಂಪಡಣೆಯ ರೂಪದಲ್ಲಿ ಬಳಸಿ. ಪರ್ಯಾಯವಾಗಿ, ನೀವು 7 ದಿನಗಳ ಮಧ್ಯಂತರದಲ್ಲಿ ಬೇವು (ಎನ್ಎಸ್ಕೆಇ 5%), ಡೆರಿಸ್ ಅಥವಾ ಪೈರೆಥ್ರಮ್ (ಅದರೊಂದಿಗೆ ಸಾಬೂನು ಸೇರಿಸಿ) ನಂತಹ ಸಸ್ಯ-ಉತ್ಪನ್ನಗಳನ್ನು ಬಳಸಬಹುದು. ಟ್ರೈಸಿಡರ್ಮಾ ಟ್ರೈಕೊಡರ್ಮಾವನ್ನು ಬೀಜ ಮತ್ತು ನರ್ಸರಿ ಚಿಕಿತ್ಸೆಯಾಗಿ ಮತ್ತು ಸ್ಯೂಡೋಮೊನಾಸ್ ಫ್ಲೋರೊಸೆನ್‌ಗಳನ್ನು ಬೀಜ, ನರ್ಸರಿ ಚಿಕಿತ್ಸೆ ಮತ್ತು ಮಣ್ಣಿಗೆ ಹಾಕಲು ಬಳಸಬಹುದು. ಪ್ರೌಢ ಜೀರುಂಡೆಗಳನ್ನು ಆಕರ್ಷಿಸಲು ಮತ್ತು ಕೊಲ್ಲಲು ಬಲವಾದ ಕೀಟನಾಶಕ ಸಿಂಪಡಣೆಯೊಂದಿಗೆ ಚಿಕಿತ್ಸೆ ನೀಡಿದ ಬಲೆ ಬೆಳೆಗಳನ್ನು ಬಳಸಿ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ನರ್ಸರಿಯಲ್ಲಿ 1 ಪ್ರೌಢ ಕೀಟ/ 10 ಸಸ್ಯಗಳಷ್ಟು ಪತ್ತೆಯಾದಾಗ 250 ಮಿಲಿ / ಎಕರೆಯಷ್ಟು ಡೆಲ್ಟಾಮೆಥ್ರಿನ್ ಬಳಸಬಹುದು. ಸಂಶ್ಲೇಷಿತ ಪೈರೆಥ್ರಾಯ್ಡ್‌ಗಳು ಪರಿಣಾಮಕಾರಿಯಾಗಬಹುದು ಆದರೆ ಅದು ಅದೇ ಸಮಯದಲ್ಲಿ ಅವು ನೈಸರ್ಗಿಕ ಶತ್ರುಗಳಿಗೆ ಹಾನಿಕಾರಕವಾಗಿರುತ್ತವೆ. ಬಲವಾದ ಕೀಟನಾಶಕ ಸಿಂಪಡಣೆಯೊಂದಿಗೆ ಚಿಕಿತ್ಸೆ ಪಡೆದ ಬಲೆ ಬೆಳೆಗಳ ಬಳಕೆಯು ಪ್ರೌಢ ಜೀರುಂಡೆಗಳನ್ನು ಆಕರ್ಷಿಸುತ್ತದೆ ಮತ್ತು ಕೊಲ್ಲುತ್ತದೆ. ಕೀಟ ಪತ್ತೆಯಾದ ತಕ್ಷಣ ಫೆನಿಟ್ರೋಥಿಯಾನ್ ಅನ್ನು ಸಿಂಪಡಿಸಿ ಮತ್ತು ಈ ಪ್ರಕ್ರಿಯೆಯನ್ನು 15 ದಿನಗಳ ಮಧ್ಯಂತರದಲ್ಲಿ ಪುನರಾವರ್ತಿಸಿ.
ಎಲೆಗಳು, ಹೂಗಳು ಮತ್ತು ಹಣ್ಣುಗಳನ್ನು ತಿನ್ನುವ ಔಲಕೋಫೊರಾ ಫೊವಿಕೋಲಿಸ್‌ನ ಗ್ರಬ್ ಮತ್ತು ಪ್ರೌಢ ಜೀರುಂಡೆಯಿಂದ ಹಾನಿ ಉಂಟಾಗುತ್ತದೆ. ಪೂರ್ಣವಾಗಿ ಬೆಳೆದ ಲಾರ್ವಾಗಳು ಸಾಮಾನ್ಯವಾಗಿ ಕೆನೆ ಬಿಳಿ ಬಣ್ಣದಲ್ಲಿದ್ದು, ಮಾನವ ಬೆರಳಿನ ಉಗುರಿನ ಗಾತ್ರದಲ್ಲಿರುತ್ತವೆ. ಮೊಟ್ಟೆಗಳು ಸಾಮಾನ್ಯವಾಗಿ ಅಂಡಾಕಾರದ್ದಾಗಿದ್ದು, ಹಳದಿ ಬಣ್ಣದಲ್ಲಿರುತ್ತವೆ ಮತ್ತು ಸಸ್ಯದ ಬುಡದ ಬಳಿ ತೇವಾಂಶವುಳ್ಳ ಮಣ್ಣಿನಲ್ಲಿ ಮಾನವ ಬೆರಳಿನಷ್ಟು ಆಳದಲ್ಲಿ ಒಂದೊಂದಾಗಿ ಅಥವಾ 10 ಮೊಟ್ಟೆಗಳ ಒಂದು ಗುಂಪಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಪ್ರೌಢ ಕೀಟಗಳು ಕಿತ್ತಳೆ-ಕೆಂಪು ಬಣ್ನದಲ್ಲಿರುತ್ತವೆ ಮತ್ತು ನೊಣದ ಗಾತ್ರದಲ್ಲಿರುತ್ತವೆ. ಲಾರ್ವಾಗಳು 1 ಅಥವಾ 2 ವಾರಗಳ ನಂತರ ಹೊರಬರುತ್ತವೆ ಮತ್ತು ಮಣ್ಣಿನೊಳಗೆ ಹೋಗುವ ಮೊದಲು ಸಸ್ಯ ಮತ್ತು ಅದರ ಬೇರುಗಳ ಮೇಲೆ ದಾಳಿ ಮಾಡುತ್ತವೆ. 7 ರಿಂದ 17 ದಿನಗಳವರೆಗೆ ಮಣ್ಣಿನ ಕೋಶದಲ್ಲಿ ಕೋಶಾವಸ್ಥೆ ನಡೆಯುತ್ತದೆ. ತಾಪಮಾನವು 27-28°C ಇದ್ದಾಗ ಅದು ಕೋಶಾವಸ್ಥೆಗೆ ಸೂಕ್ತವಾದ ಪರಿಸರ ಪರಿಸ್ಥಿತಿಯಾಗಿದೆ.