ಸೋಯಾಬೀನ್

ಬೀಟ್ ಆರ್ಮಿವರ್ಮ್

Spodoptera exigua

ಕೀಟ

ಸಂಕ್ಷಿಪ್ತವಾಗಿ

  • ಮರಿಹುಳುಗಳು ನಿಶಾಚರಿ ಸ್ವಭಾವವನ್ನು ಹೊಂದಿರುತ್ತವೆ ಮತ್ತು ಎಲೆಗಳನ್ನು ಗುಂಪಿನಲ್ಲಿ ತಿನ್ನುತ್ತವೆ.
  • ಎಳೆಯ ಸಸಿಗಳು ಸಾಯಬಹುದು.
  • ಆದರೆ, ಸೋಂಕು ತುಂಬಾ ತೀವ್ರವಾಗಿರದಿದ್ದರೆ, ಬೆಳೆದ ಸಸ್ಯಗಳಿಗೆ ಚೇತರಿಸಿಕೊಳ್ಳಲು ಉತ್ತಮ ಅವಕಾಶವಿರುತ್ತದೆ.
  • ಅನೇಕ ನೈಸರ್ಗಿಕ ಶತ್ರುಗಳು ಈ ಕೀಟದ ಮುತ್ತುವಿಕೆಯ ವಿರುದ್ಧ ಸಹಾಯ ಮಾಡಬಲ್ಲವು.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಮೊದಲಿಗೆ, ಕೆಳ ಮೇಲಾವರಣದ, ಹಳೆಯ ಎಲೆಗಳ ಕೆಳಭಾಗವನ್ನು ಎಳೆಯ ಮರಿಹುಳುಗಳು ಗುಂಪಿನಲ್ಲಿ ತಿನ್ನುತ್ತವೆ. ದೊಡ್ಡ ಮರಿಹುಳುಗಳು ಹೆಚ್ಚು ಒಂಟಿಯಾಗಿರುತ್ತವೆ ಮತ್ತು ಇಡೀ ಬೆಳೆಗಳ ಮೇಲೆ ಹರಡಿಕೊಂಡು ಎಲೆಗಳ ಮೇಲೆ ಅನಿಯಮಿತ ರಂಧ್ರಗಳನ್ನು ಉಳಿಸುತ್ತವೆ. ಪ್ರಬುದ್ಧ ಲಾರ್ವಾಗಳು ಸಣ್ಣ ಸಸ್ಯಗಳ ಎಲ್ಲಾ ಎಲೆಗಳನ್ನು ತೆಗೆದುಹಾಕಬಲ್ಲವು ಅಥವಾ ಎಲೆಗಳ ಅಸ್ಥಿಪಂಜರೀಕರಣಕ್ಕೆ ಕಾರಣವಾಗುತ್ತವೆ. ಅಂದರೆ, ನಾಳಗಳನ್ನು ಹೊರತುಪಡಿಸಿ ಎಲ್ಲಾ ಅಂಗಾಂಶಗಳನ್ನು ತಿಂದು ಹಾಕುತ್ತವೆ. ಎಲೆಗಳು ಕಡಿಮೆಯಾದರೆ, ಮರಿಹುಳುಗಳು ಬೀಜಕೋಶಗಳನ್ನು ಸಹಾ ಆಕ್ರಮಿಸಬಹುದು. ಆದರೆ ಕಾಂಡಗಳು ಅವುಗಳ ಆಹಾರಕ್ರಮದಲ್ಲಿರುವುದಿಲ್ಲ. ಸಾಮಾನ್ಯವಾಗಿ, ಅವು ರಾತ್ರಿಯಲ್ಲಿ ಆಹಾರ ತಿನ್ನುತ್ತವೆ ಮತ್ತು ಹಗಲಿನ ಸಮಯದಲ್ಲಿ ನೆಲದಲ್ಲಿ ಅಥವಾ ಸಸ್ಯದ ನೆರಳಿನಲ್ಲಿ ಮತ್ತು ಒದ್ದೆಯಾದ ಭಾಗಗಳಲ್ಲಿ ಮರೆಯಾಗಿರುತ್ತವೆ. ಸ್ಪೊಡೋಪ್ಟೆರಾ ಎಕ್ಸಿಗುವಾದ ಆಹಾರ ಚಟುವಟಿಕೆಯಿಂದಾಗಿ ಎಳೆಯ ಸಸಿಗಳು ಸಾಯಿಸಬಹುದು. ಆದರೆ ಮುತ್ತುವಿಕೆಯು ತುಂಬಾ ತೀವ್ರವಾಗಿರದಿದ್ದರೆ ಹಳೆಯ ಸಸ್ಯಗಳು ಹೆಚ್ಚಾಗಿ ಚೇತರಿಸಿಕೊಳ್ಳುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಎಸ್. ಎಕ್ಸಿಗುವಾವನ್ನು ಕಡಿಮೆ ಮಾಡಲು ಒಂದು ಪ್ರಮುಖ ನಿಯಮವೆಂದರೆ ನೈಸರ್ಗಿಕ ಶತ್ರುಗಳನ್ನು ಉತ್ತೇಜಿಸುವುದು. ಹೂವಿನ ತಿಗಣೆ (ಆಂಥೋಕೊರಿಡೇ), (ಫೈರ್) ಇರುವೆಗಳು, ಪರಾವಲಂಬಿ ಕಣಜಗಳು (ಹೈಪೋಸೋಟರ್ ಡಿಡಿಮಾಟರ್), ನೊಣಗಳು ಮತ್ತು ಜೇಡಗಳು ಮೊಟ್ಟೆಗಳು ಅಥವಾ ಲಾರ್ವಾಗಳ ಮೇಲೆ ಧಾಳಿ ಮಾಡುತ್ತವೆ. ಎಂಟೋಮೊಪಾಥೋಜೆನಿಕ್ ಶಿಲೀಂಧ್ರಗಳು, ಬ್ಯಾಸಿಲಸ್ ಥುರಿಂಜಿಯೆನ್ಸಿಸ್, ಎನ್ ಪಿ ವಿ ಮತ್ತು ನೆಮಟೊಡ್ ಗಳು ಲಾರ್ವಾ ಮತ್ತು ವಯಸ್ಕ ಕೀಟಗಳಿಗೆ ಸೋಂಕು ತರುತ್ತವೆ. ತಾಜಾ ಬೇವು, ಮಜ್ಜಿಗೆ ಹುಲ್ಲು ಮತ್ತು ಶುಂಠಿಯನ್ನು ಆಧರಿಸಿದ ಸಸ್ಯಜನಕ ಕೀಟನಾಶಕಗಳು ಸಹ ಪರಿಣಾಮಕಾರಿ. ಅಂತೆಯೇ, ಮೊಟ್ಟೆ ಮತ್ತು ಎಳೆಯ ಲಾರ್ವಾಗಳೆರಡನ್ನೂ, 5% ಹತ್ತಿಕಾಳಿನ ಎಣ್ಣೆಯನ್ನು ಎಲೆಗಳ ಮೇಲೆ ಸಿಂಪಡಿಸುವ ಮೂಲಕ ನಿಯಂತ್ರಿಸಬಹುದು. ಫೆರೋಮನ್ ಬಲೆಗಳನ್ನು ಕೀಟಗಳ ಸಂಯೋಗ ಮತ್ತು ಸಂತಾನಾಭಿವೃದ್ಧಿ ತಡೆಗಟ್ಟಲು ಅಥವಾ ತೊಡೆದುಹಾಕಲು ಬಳಸಬಹುದು (ಸುಮಾರು 97% ದಕ್ಷತೆ).

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಕೀಟನಾಶಕಗಳನ್ನು ಶಿಫಾರಸು ಮಾಡಲಾಗುವುದಿಲ್ಲ. ಏಕೆಂದರೆ ಎಸ್.ಎಕ್ಸಿಗುವಾದ ಪ್ರಯೋಜನಕಾರಿ ಕೀಟಗಳನ್ನು ಮತ್ತು ನೈಸರ್ಗಿಕ ವೈರಿಗಳನ್ನು ಅವು ನಾಶಪಡಿಸಬಹುದು. ಇದು ಕೀಟದ ಹೆಚ್ಚಿನ ಮುತ್ತುವಿಕೆಗೆ ಕಾರಣವಾಗಬಹುದು. ಇದಲ್ಲದೆ, ಈ ಕೀಟವು ಅನೇಕ ರಾಸಾಯನಿಕಗಳಿಗೆ ಹೆಚ್ಚಿನ ಪ್ರತಿರೋಧವನ್ನು ಬೆಳೆಸಿಕೊಳ್ಳುವ ಸಾಮರ್ಥ್ಯವನ್ನು ತೋರಿಸಿವೆ.

ಅದಕ್ಕೆ ಏನು ಕಾರಣ

ಬೀಟ್ ಸೈನ್ಯಕ ಹುಳ ಸ್ಪೊಡೋಪ್ಟೆರಾ ಎಕ್ಸಿಗುವಾದ ಲಾರ್ವಾಗಳಿಂದ ಹಾನಿ ಉಂಟಾಗುತ್ತದೆ. ಈ ಕೀಟವು ಏಷ್ಯಾ, ಆಫ್ರಿಕಾ, ಅಮೆರಿಕಾ ಮತ್ತು ಯುರೋಪ್ ನ ಬೆಚ್ಚಗಿನ ಪ್ರದೇಶಗಳಲ್ಲಿ ಮತ್ತು ತಂಪಾದ ವಾತಾವರಣದಲ್ಲಿ ಹಾಗು ಹಸಿರುಮನೆಗಳಲ್ಲಿ ಕಂಡುಬರುತ್ತದೆ. ಅವು ಹತ್ತಿ, ಬೀಟ್ ಮತ್ತು ಮೆಕ್ಕೆ ಜೋಳದಂತಹ ವಿವಿಧ ಬೆಳೆಗಳನ್ನು ಮುತ್ತುತ್ತವೆ. ವಯಸ್ಕ ಪತಂಗಗಳು ಬೂದು-ಕಂದು ಬಣ್ಣದಲ್ಲಿರುತ್ತವೆ. ಮುಂಗಾಲುಗಳು ಕಂದು ಮತ್ತು ಬೂದು ಬಣ್ಣವನ್ನು ಹೊಂದಿರುತ್ತವೆ. ಅನಿಯಮಿತ ಮಚ್ಚೆಗಳು ಮತ್ತು ಅವುಗಳ ಮಧ್ಯದಲ್ಲಿ ತಿಳಿ ಬಣ್ಣದ ಹುರುಳಿ-ಆಕಾರದ ಗುರುತು ಇರುತ್ತದೆ. ಹಿಂದಿನ ರೆಕ್ಕೆಗಳು ಬೂದು ಅಥವಾ ಬಿಳಿ ಬಣ್ಣದಲ್ಲಿರುತ್ತವೆ ಮತ್ತು ಅಂಚಿನ ಸಮೀಪ ಒಂದು ಕಪ್ಪು ರೇಖೆಯಿರುತ್ತದೆ. ಹೆಣ್ಣುಗಳು, ಎಲೆಗಳ ಕೆಳ ಮೇಲ್ಮೈಯಲ್ಲಿ, ಗುಂಪಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ ಮತ್ತು ಅವು ಬಿಳಿ ಅಥವಾ ಬೂದು ಬಣ್ಣದ ರೋಮಗಳಿಂದ ಮುಚ್ಚಿರುತ್ತವೆ. ಮರಿ ಲಾರ್ವಾಗಳು ಹಸಿರು-ಕಂದು ಬಣ್ಣದಲ್ಲಿರುತ್ತವೆ ಮತ್ತು ಹಿಂಭಾಗದಲ್ಲಿ ಕಪ್ಪನೆಯ ಉದ್ದದ ಪಟ್ಟೆಗಳನ್ನು ಹೊಂದಿರುತ್ತವೆ. ಪ್ರಬುದ್ಧ ಲಾರ್ವಾಗಳು ಹಸಿರು ಬಣ್ಣದ್ದಾಗಿರುತ್ತವೆ. ಪ್ರತಿಯೊಂದು ಪಾರ್ಶ್ವದ ಮೇಲೂ ಹಳದಿ ಬಣ್ಣದ ಗೆರೆಯೊಂದನ್ನು ಮತ್ತು ಹಿಂಭಾಗದಲ್ಲಿ ಹಳದಿ-ಹಸಿರು ಅಗಲ ಪಟ್ಟೆಯನ್ನು ಹೊಂದಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಶಕ್ತವಾದ ಎಲೆಯ ಅಂಗಾಂಶಗಳಿರುವ ನಿರೋಧಕ ಸಸ್ಯ ಪ್ರಭೇದಗಳನ್ನು ನೆಡಿ.
  • ಗರಿಷ್ಠ ಕೀಟಸಂಖ್ಯೆಯನ್ನು ತಪ್ಪಿಸಲು ಬಿತ್ತನೆ ಸಮಯವನ್ನು ಹೊಂದಿಸಿ.
  • ಕೀಟಗಳ ಚಿಹ್ನೆಗಳಿಗಾಗಿ, ವಿಶೇಷವಾಗಿ ಸಂಜೆ ಅಥವಾ ಮುಂಜಾನೆ ನಿಮ್ಮ ಸಸ್ಯಗಳನ್ನು ನಿಯಮಿತವಾಗಿ ಪರಿಶೀಲಿಸಿ.
  • ಮುತ್ತುವಿಕೆಯ ಮೇಲ್ವಿಚಾರಣೆ ಮಾಡಲು ಫೆರೋಮೋನ್ ಬಲೆಗಳನ್ನು ಬಳಸಿ.
  • ಹೊಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆಗಳು ಮತ್ತು ಕಸವನ್ನು ತೆಗೆದುಹಾಕಿ.
  • ಇವು ಕೀಟಗಳಿಗೆ ಆಶ್ರಯ ಮತ್ತು ಸಂಖ್ಯಾಭಿವೃದ್ಧಿಗೆ ತಾಣವನ್ನು ನೀಡುತ್ತವೆ.
  • ಆಳವಾದ ಕಂದಕವನ್ನು ಅಗೆಯಿರಿ ಮತ್ತು ಪಕ್ಕದ ಹೊಲದಿಂದ ವಲಸೆ ಬರುವ ಮರಿಹುಳುಗಳನ್ನು ಮುಳುಗಿಸಲು ಅದನ್ನು ನೀರಿನಿಂದ ತುಂಬಿ.
  • ವಿಶಾಲ-ರೋಹಿತ ಕೀಟನಾಶಕಗಳ ಸಮಂಜಸವಾದ ಬಳಕೆಯನ್ನು ಮಾಡಿ.
  • ಏಕೆಂದರೆ ಇದು ನೈಸರ್ಗಿಕ ಶತ್ರುಗಳನ್ನು ಕೊಲ್ಲಬಹುದು.
  • ಪರಭಕ್ಷಕಗಳಿಗೆ ಲಾರ್ವಾ ಮತ್ತು ಕೋಶವನ್ನು ಒಡ್ಡಲು ನಿಮ್ಮ ಹೊಲವನ್ನು ಚೆನ್ನಾಗಿ ಉಳುಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ