ಕಲ್ಲಂಗಡಿ

ಕುಂಬಳಕಾಯಿ ಕ್ಯಾಟರ್ಪಿಲ್ಲರ್

Diaphania indica

ಕೀಟ

ಸಂಕ್ಷಿಪ್ತವಾಗಿ

  • ರೇಷ್ಮೆಯಂತಹ ಎಳೆಗಳೊಂದಿಗೆ ಸುತ್ತಿಕೊಂಡ ಎಲೆಗಳು.
  • ಬೆಳೆಯುತ್ತಿರುವ ಹಣ್ಣುಗಳಲ್ಲಿ ರಂಧ್ರಗಳು.

ಇವುಗಳಲ್ಲಿ ಸಹ ಕಾಣಬಹುದು

7 ಬೆಳೆಗಳು
ಹುರುಳಿ
ಹಾಗಲಕಾಯಿ
ಸೌತೆಕಾಯಿ
ಕಲ್ಲಂಗಡಿ
ಇನ್ನಷ್ಟು

ಕಲ್ಲಂಗಡಿ

ರೋಗಲಕ್ಷಣಗಳು

ಎಳೆಯ ಲಾರ್ವಾಗಳು ಎಲೆಗಳಿಂದ ಕ್ಲೋರೊಫಿಲ್ ಅಂಶವನ್ನು ಕೆರೆದು ತಿನ್ನುತ್ತವೆ. ನಂತರ, ಅದು ಎಲೆಗಳನ್ನು ಮಡಚಿ ಮತ್ತು ಬಲೆಯಾಗಿ ಹಣೆಯುತ್ತವೆ. ಮರಿಹುಳುಗಳು ಹೂವುಗಳು ಮತ್ತು ಬೆಳೆಯುತ್ತಿರುವ ಹಣ್ಣುಗಳ ಮೇಲೂ ಧಾಳಿ ಮಾಡುತ್ತವೆ. ಅವು ಸಿಪ್ಪೆಯನ್ನು ಹಾನಿಗೊಳಿಸುತ್ತವೆ ಮತ್ತು ಇದರಿಂದ ಹಣ್ಣುಗಳು ಕೊಳೆಯುತ್ತವೆ. ಕೆರೆತದ ಕಾರಣ, ಎಲೆಗಳು ನಂತರದ ಹಂತಗಳಲ್ಲಿ ಒಣಗುತ್ತವೆ. ತೀವ್ರವಾದ ಮುತ್ತುವಿಕೆ ಸಂದರ್ಭದಲ್ಲಿ ಬೆಳೆಯುತ್ತಿರುವ ಹಣ್ಣುಗಳಲ್ಲಿ ರಂಧ್ರಗಳನ್ನು ಗಮನಿಸಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಜೈವಿಕ ಕೀಟನಾಶಕಗಳಾದ ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಮತ್ತು ಬ್ಯೂವೇರಿಯಾ ಬಾಸ್ಸಿಯಾನಾವನ್ನು ಬಳಸಿ. ಸಸ್ಯಜನ್ಯ ಉತ್ಪನ್ನಗಳಾದ ಬೇವು, ಡೆರಿಸ್, ಪೈರೆಥ್ರಮ್ ಮತ್ತು ಮೆಣಸಿನಕಾಯಿಯನ್ನು ಬಳಸಿ. ಅಪಾಂಟೆಲೆಸ್ ಎಸ್‌ಪಿಪಿಯಂತಹ ಪರಾವಲಂಬಿಗಳ ಚಟುವಟಿಕೆಯನ್ನು ಪ್ರೋತ್ಸಾಹಿಸಿ. ಕೀಟಗಳನ್ನು ನಿವಾರಿಸಲು ನೀರು ಮತ್ತು ಹಸುವಿನ ಮೂತ್ರದ ದುರ್ಬಲಗೊಳಿಸಿದ ಮಿಶ್ರಣವನ್ನು ಸಿಂಪಡಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕೀಟನಾಶಕಗಳಾದ ಮಾಲಾಥಿಯಾನ್ (50 ಇಸಿ @ 500 ಮಿಲಿ / ಹೆಕ್ಟೇರ್), ಡೈಮಿಥೊಯೇಟ್ (30 ಇಸಿ @ 500 ಮಿಲಿ / ಹೆಕ್ಟೇರ್) ಅಥವಾ ಮೀಥೈಲ್ ಡಿಮೆಟನ್ (25 ಇಸಿ @ 500 ಮಿಲಿ / ಹೆಕ್ಟೇರ್) ಸಿಂಪಡಿಸಿ. ಸೈಂಟ್ರಾನಿಲಿಪ್ರೊಲ್ ಹೊಂದಿರುವ ಕೀಟನಾಶಕಗಳನ್ನು ಬಳಸುವುದು ಇನ್ನೊಂದು ಆಯ್ಕೆಯಾಗಿದೆ.

ಅದಕ್ಕೆ ಏನು ಕಾರಣ

ಕ್ಯಾಟರ್ಪಿಲ್ಲರ್ ನ ಎಳೆಯ ಲಾರ್ವಾಗಳಿಂದ ಹಾನಿ ಉಂಟಾಗುತ್ತದೆ. ವಯಸ್ಕ ಪತಂಗವು ಗಾಢ ವಿಶಾಲ ಅಂಚಿನ ತೇಪೆಗಳೊಂದಿಗೆ ಪಾರದರ್ಶಕ ಬಿಳಿ ರೆಕ್ಕೆಗಳನ್ನು ಹೊಂದಿರುತ್ತದೆ ಮತ್ತು ಹೆಣ್ಣು ಗುದದ್ವಾರದ ತುದಿಯಲ್ಲಿ ಕಿತ್ತಳೆ ಬಣ್ಣದ ಕೂದಲಿನ ತೇಪೆಯನ್ನು ಹೊಂದಿರುತ್ತವೆ. ಮೊಟ್ಟೆಗಳನ್ನು ಪ್ರತ್ಯೇಕವಾಗಿ ಅಥವಾ ಗುಂಪುಗಳಾಗಿ ಎಲೆಗಳ ಕೆಳಭಾಗದಲ್ಲಿ 3-4 ದಿನಗಳವರೆಗೆ ಇಡಲಾಗುತ್ತದೆ. ಕ್ಯಾಟರ್ಪಿಲ್ಲರ್ ಸಾಮಾನ್ಯವಾಗಿ ಮಧ್ಯದ ಡಾರ್ಸಲ್ ರೇಖೆಯ ಉದ್ದಕ್ಕೂ ಉದ್ದನೆಯ ಜೋಡಿ ಗೆರೆಗಳೊಂದಿಗೆ ಉದ್ದವಾಗಿ ಕಾಣುತ್ತದೆ. ಮರಿಹುಳು ಸುಮಾರು 10 ದಿನಗಳಲ್ಲಿ ಪ್ರೌಢಾವಸ್ಥೆಯನ್ನು ತಲುಪುತ್ತದೆ.


ಮುಂಜಾಗ್ರತಾ ಕ್ರಮಗಳು

  • ಎಳೆಯ ಎಲೆಗಳಲ್ಲಿ ನಾಳಗಳ ಉಪಸ್ಥಿತಿಗಾಗಿ ಪರಿಶೀಲನೆ ಮಾಡಿ.
  • ಆದರೆ ಮಧ್ಯದ ಭಾಗಗಳನ್ನು ಕೀಟಗಳು ತಿಂದಿರುತ್ತವೆ.
  • ಎಲೆಗಳ ನಡುವೆ ಹಿಕ್ಕೆಗಳನ್ನು ನೋಡಿ.
  • ಆರಂಭಿಕ ಹಂತದಲ್ಲಿರುವ ಮರಿಹುಳುಗಳನ್ನು ಸಂಗ್ರಹಿಸಿ ನಾಶಮಾಡಿ.
  • ಸುತ್ತಿಕೊಂಡ ಎಲೆಗಳನ್ನು ಪರಿಶೀಲಿಸಿ, ಅವುಗಳನ್ನು ತೆಗೆದುಹಾಕಿ ಅಥವಾ ಒಳಗೆ ಮರಿಹುಳುಗಳನ್ನು ಕೊಲ್ಲಲು ಅವುಗಳನ್ನು ಹಿಸುಕಿ ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ