Ophiomyia phaseoli
ಕೀಟ
ಎಳೆಯ ಎಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ತೂತುಗಳನ್ನು ಮತ್ತು ಹಳದಿ ಬಣ್ಣದ ಚುಕ್ಕೆಗಳನ್ನು ಮೇಲಿನ ಭಾಗದಲ್ಲಿ ತೋರಿಸುತ್ತದೆ. ಅದರಲ್ಲೂ ವಿಶೇಷವಾಗಿ ಎಲೆಗಳ ತಳದಲ್ಲಿ. ಎಲೆಯ ತೊಟ್ಟು ಮತ್ತು ಕಾಂಡಗಳ ಮೂಲಕ ಲಾರ್ವಾ ಸುರಂಗ ಕೊರೆಯುತ್ತದೆ. ಇವು ನಂತರ ಬೆಳ್ಳಿ ಬಣ್ಣದ, ಬಾಗಿದ ಪಟ್ಟೆಗಳಂತೆ ಕಾಣುತ್ತವೆ. ಎಲೆಯ ಮೇಲಿನ ಭಾಗದಲ್ಲಿ ಕೆಲವೇ ಸುರಂಗಗಳು ಗೋಚರಿಸುತ್ತವೆ. ಇವು ನಂತರ ಗಾಢ ಕಂದು ಬಣ್ಣಕ್ಕೆ ತಿರುಗಿ ಸ್ಪಷ್ಟವಾಗಿ ಗೋಚರವಾಗುತ್ತವೆ. ಈ ಎಲೆಗಳು ಒಣಗಬಹುದು ಮತ್ತು ಉದುರಬಹುದು. ಮುತ್ತಿಗೆಗೆ ಒಳಗಾದ ಬೆಳೆದ ಸಸ್ಯಗಳಲ್ಲಿ ತೊಟ್ಟುಗಳು ಊದಿಕೊಳ್ಳುತ್ತದೆ ಮತ್ತು ಕೆಲವೊಮ್ಮೆ ಎಲೆಗಳು ಒಣಗಬಹುದು. ಆಹಾರಕ್ಕಾಗಿ ಕೊರೆದ ಸುರಂಗಗಳು ಕಾಂಡಗಳ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತವೆ. ಲಾರ್ವಾಗಳು ತಿನ್ನುವುದರಿಂದ ಬೇರು-ಚಿಗುರು ಕೂಡುವಲ್ಲಿ ಆಂತರಿಕ ಅಂಗಾಂಶಗಳು ನಾಶವಾಗುತ್ತದೆ. ಇದು ಎಲೆಗಳು ಹಳದಿಯಾಗಲು, ಸಸ್ಯದ ಬೆಳವಣಿಗೆ ಸ್ಥಗಿತವಾಗಲು ಮತ್ತು ಸಸ್ಯದ ಸಾವಿಗೂ ಕೂಡಾ ಕಾರಣವಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಸಸ್ಯವು ಹೊರಹೊಮ್ಮಿದ 10-15 ದಿನಗಳಲ್ಲಿ ಸಾಯುತ್ತದೆ.
ಹುರುಳಿ ನೊಣಕ್ಕೆ ಹಲವಾರು ನೈಸರ್ಗಿಕ ಶತ್ರುಗಳು ಇವೆ. ಓಪಿಯಸ್ ಪ್ರಭೇದಗಳ ಹಲವಾರು ಬ್ರಕೊನಿಡ್ ಕಣಜ ಲಾರ್ವಾ ಪ್ಯಾರಾಸಿಟೈಡ್ ಗಳನ್ನು ಏಷ್ಯಾ ಮತ್ತು ಆಫ್ರಿಕಾ ಎರಡೂ ಕಡೆ ವ್ಯಾಪಕವಾಗಿ ಬಳಸಲಾಗುತ್ತದೆ. ಓಪಿಯಸ್ ಫೊಸಿಯೊಲಿ ಮತ್ತು ಆಪಿಯಸ್ ಇಂಪಾರ್ಟಟಸ್ ಎಂಬ ಎರಡು ಜಾತಿಗಳನ್ನು ಹವಾಯಿಗೆ 1969 ರಲ್ಲಿ ಪೂರ್ವ ಆಫ್ರಿಕಾದಿಂದ ಪರಿಚಯಿಸಲಾಯಿತು. ಆದರೆ ಹುರುಳಿ ನೊಣಗಳ ಸಾಂದರ್ಭಿಕ ಮುತ್ತುವಿಕೆ ಸಂಭವಿಸುತ್ತಲೇ ಇರುತ್ತದೆ. ಕೆಲವು ಪ್ರದೇಶಗಳಲ್ಲಿ ಕೀಟ ಮರಣವು 90% ವರೆಗೆ ತಲುಪುತ್ತದೆ. ನೊಣದ ವಿರುದ್ಧ ಶಿಲೀಂಧ್ರ ರೋಗಕಾರಕಗಳನ್ನು ಆಧರಿಸಿದ ಉತ್ಪನ್ನಗಳನ್ನು ಪೂರ್ವ ಆಫ್ರಿಕಾದಲ್ಲಿ ಸಂಭಾವ್ಯ ಕೀಟ ನಿರ್ವಹಣೆ ಸಾಧನವಾಗಿ ಪರೀಕ್ಷಿಸಲಾಗಿದೆ.
ಲಭ್ಯವಿದ್ದಲ್ಲಿ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮುತ್ತುವಿಕೆ ತೀವ್ರವಾಗಿದಲ್ಲಿ, ಹುರುಳಿ ನೊಣದ ನಿಯಂತ್ರಣಕ್ಕೆ ಕೀಟನಾಶಕಗಳನ್ನು ಪರಿಗಣಿಸಬಹುದು. ಹೇಗಾದರೂ, ಹಾನಿ ಮಾಡುವ ಮರಿಹುಳುಗಳು ಸಸ್ಯಗಳೊಳಗೆ ಚೆನ್ನಾಗಿ ರಕ್ಷಿಸಲ್ಪಟ್ಟಿರುತ್ತವೆ. ಮಣ್ಣಿನೊಳಗೆ ಇಮಿಡಾಕ್ಲೋಪ್ರಿಡ್ ಹೊಂದಿರುವ ರಾಸಾಯನಿಕ ಉತ್ಪನ್ನಗಳನ್ನು ಬೆಳೆಯ ಬಿತ್ತನೆ ಜೊತೆಗೆ ಹಾಕುವುದು ಅಥವಾ ಮೊಳಕೆಯೊಡೆದ ತಕ್ಷಣವೇ ಹಾಕುವುದು ಪರಿಣಾಮಕಾರಿಯಾಗಿದೆ. ಹುಳುಗಳು ಹುಟ್ಟಿದ 3-4 ದಿನಗಳ ನಂತರ ಮತ್ತು ಹುರುಳಿ ನೊಣದ ಮುತ್ತುವಿಕೆ ತೀವ್ರವಾಗಿದ್ದರೆ, 7 ದಿನಗಳಲ್ಲಿ ಸಸಿಗಳನ್ನು ಚಿಕಿತ್ಸೆಗೆ ಒಳಪಡಿಸಬೇಕು. 14 ದಿನಗಳ ನಂತರ ಮತ್ತೊಮ್ಮೆ ಚಿಕಿತ್ಸೆ ನೀಡಲಾಗುತ್ತದೆ. ಸಾಮಾನ್ಯವಾಗಿ ಬಳಸುವ ಇತರೆ ಸಕ್ರಿಯ ಪದಾರ್ಥಗಳೆಂದರೆ ಡಿಮಿಥೊಯೇಟ್, ಇದು ವ್ಯವಸ್ಥಿತ, ಮತ್ತು ಸಂಪರ್ಕ ಕೀಟನಾಶಕ. ಮತ್ತು ಮೆಥೊಮಿಲ್. ಪಟ್ಟಿ ಮಾಡಲಾದ ಎಲ್ಲ ರಾಸಾಯನಿಕಗಳನ್ನು ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ ಮತ್ತು ಅದನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು.
ರೋಗಲಕ್ಷಣಗಳು ಹುರುಳಿ ನೊಣದ ಮರಿಹುಳು ಮತ್ತು ವಯಸ್ಕ ಕೀಟಗಳಿಂದ ಉಂಟಾಗುತ್ತದೆ. ಒಫಿಯೊಮಿಯಾ ಫಸಿಯೋಲಿ, ವಿಶ್ವದ ಅತ್ಯಂತ ವಿನಾಶಕಾರಿ ಕೀಟಗಳಲ್ಲಿ ಒಂದಾಗಿದೆ. ಇದು ಏಷ್ಯಾ, ಆಫ್ರಿಕಾ, ಹವಾಯಿ ಮತ್ತು ಓಷಿಯಾನಿಯಾದಲ್ಲಿನ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿರುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು 30-50% ರಷ್ಟು ಇಳುವರಿ ನಷ್ಟಕ್ಕೆ ಕಾರಣವಾಗಬಹುದು. ಹಾನಿಯ ತೀವ್ರತೆ ಋತುಮಾನವನ್ನು ಅವಲಂಭಿಸಿರುವಂತೆ ತೋರುತ್ತದೆ. ಒಣ ಋತುವಿನಲ್ಲಿ ಆರ್ದ್ರ ಋತುವಿಗಿಂತ ಅತಿ ಹೆಚ್ಚು ಸಾವು ಸಂಭವಿಸುತ್ತದೆ. (ಅನುಕ್ರಮವಾಗಿ 80% ರಿಂದ 13%) ವಯಸ್ಕ ಕೀಟಗಳು ಮತ್ತು ಲಾರ್ವಾಗಳು ಹಾನಿಗೆ ಕಾರಣವಾಗುತ್ತವೆ ವಿಶೇಷವಾಗಿ ಸಸಿಗಳಲ್ಲಿ. ವಯಸ್ಕ ಕೀಟಗಳು ಎಳೆಯ ಎಲೆಗಳಲ್ಲಿ ರಂಧ್ರಗಳನ್ನು ಉತ್ಪಾದಿಸುತ್ತವೆ ಮತ್ತು ಎಲೆಯ ತೊಟ್ಟಿನ ಬಳಿ ತಮ್ಮ ಬಿಳಿ, ಅಂಡಾಕಾರದ ಮೊಟ್ಟೆಗಳನ್ನು ಇಡುತ್ತವೆ. ಬೆಳೆಯುತ್ತಿರುವ ಮರಿಹುಳು ಕಾಂಡದ ಮೂಲಕ ಕೆಳಭಾಗಕ್ಕೆ ಸುರಂಗ ಕೊರೆದು ಟ್ಯಾಪ್ ರೂಟ್ ಗೆ ಇಳಿಯುತ್ತದೆ ಮತ್ತು ಮಣ್ಣಿನ ಮೇಲ್ಮೈಗೆ ಹತ್ತಿರವಿರುವ ಕಾಂಡದ ತಳದಲ್ಲಿ ಕೋಶಾವಸ್ಥೆಗೆ ತಿರುಗಲು ಮರಳುತ್ತದೆ. ಉಷ್ಣತೆಗೆ ಅನುಗುಣವಾಗಿ 10-12 ದಿನಗಳವರೆಗೆ ಕೋಶಾವಸ್ಥೆ ಇರುತ್ತದೆ.