Miridae
ಕೀಟ
ಮಿರಿಡ್ ತಿಗಣೆಗಳು ಸಸ್ಯದ ತುದಿಯ ಮೊಗ್ಗುಗಳು, ಹೂವುಗಳು ಮತ್ತು ಹಣ್ಣುಗಳ ಮೇಲೆ ಹಾನಿ ಉಂಟುಮಾಡುತ್ತವೆ. ಹಣ್ಣು ಮೂಡುವ ಮೊದಲು ದಾಳಿ ಮಾಡಿದರೆ, ಸಸ್ಯಗಳು ತಮ್ಮ ತುದಿ ಮೊಗ್ಗುಗಳನ್ನು ಕಳೆದುಕೊಳ್ಳಬಹುದು. ಇದು ಕುಂಠಿತಗೊಂಡ ಮತ್ತು ಹೆಚ್ಚಿನ ರೆಂಬೆಯ ಬೆಳವಣಿಗೆಗೆ ಕಾರಣವಾಗುತ್ತದೆ. ಎಳೆಯ ಹೂವುಗಳು, ತಿನ್ನುವುದರಿಂದ ಉಂಟಾದ ಹಾನಿಯಿಂದಾಗಿ 3-4 ದಿನಗಳಲ್ಲಿ ಒಣಗುತ್ತವೆ ಮತ್ತು ಸ್ಫೋಟಗೊಳ್ಳುತ್ತವೆ. ಸಣ್ಣ ಮತ್ತು ಮಧ್ಯಮ ಗಾತ್ರದ ಹೂವುಗಳು ವಿಶೇಷವಾಗಿ, ಸರಿಪಡಿಸಲಾರದ ಹಾನಿಗೆ ಒಳಗಾಗುತ್ತವೆ. ಹೂವುಗಳು ಅಭಿವೃದ್ಧಿ ಹೊಂದಿದರೂ, ಅವು ಸುಕ್ಕುಗಟ್ಟಿದ ಮತ್ತು ತಿರುಚಿದ ದಳಗಳು ಮತ್ತು ಕಪ್ಪು ಪರಾಗಗಳನ್ನು ಹೊಂದಿರುತ್ತವೆ. ಬೀಜಕೋಶಗಳನ್ನು ತಿನ್ನುವುದರಿಂದ ಹಾನಿ ಉಂಟಾಗಿ ಹೊರಭಾಗದಲ್ಲಿ ಕಪ್ಪು ಕಲೆಗಳು ಮತ್ತು ಒಳಭಾಗದಲ್ಲಿ ಬೀಜಗಳು ಕುಗ್ಗಿರುತ್ತವೆ ಮತ್ತು ಅವುಗಳ ಮೇಲೆ ಕಲೆಗಳು ಇರುತ್ತವೆ. ತೀವ್ರ ಮುತ್ತುವಿಕೆಯ ಸಂದರ್ಭದಲ್ಲಿ ಇಳುವರಿ ಮತ್ತು ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು.
ಮುತ್ತಿಕೊಂಡ ಕ್ಷೇತ್ರದಲ್ಲಿ ಮಿರಿಡ್ ಸಂಖ್ಯೆಯನ್ನು ಕಡಿಮೆ ಮಾಡಲು ನೈಸರ್ಗಿಕ ಪರಭಕ್ಷಕಗಳನ್ನು ಬಳಸಬಹುದು. ಡ್ಯಾಮ್ಮೆಲ್ ತಿಗಣೆಗಳು, ಬಿಗ್ ಐಯಡ್ ತಿಗಣೆಗಳು, ಅಸಾಸಿನ್ ತಿಗಣೆಗಳು, ಇರುವೆಗಳು ಮತ್ತು ಕೆಲವು ಜೇಡ ಜಾತಿಗಳು ಮಿರಿಡ್ ತಿಗಣೆಗಳನ್ನು ತಿನ್ನುತ್ತವೆ. ಇದಲ್ಲದೆ, ಬೆವೇರಿಯಾ ಬಾಸ್ಸಿಯಾನದ ಶಿಲೀಂಧ್ರವನ್ನು ಆಧರಿಸಿ ಜೈವಿಕ ಕೀಟನಾಶಕಗಳು ಮತ್ತು ದುರ್ಬಲಗೊಳಿಸಿದ ಬೇವಿನ ಎಣ್ಣೆಯನ್ನು ಅವುಗಳ ಸಂಖ್ಯೆಯನ್ನು ಮಿತಿಗೊಳಿಸಲು ಬಳಸಬಹುದು. ಕೀಟವನ್ನು ಗುರುತಿಸಿದ ತಕ್ಷಣವೇ ಜೈವಿಕ ಚಿಕಿತ್ಸೆಯನ್ನು ಬಳಸಲು ಪ್ರಾರಂಭಿಸಿ.
ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಡಿಮೆಥೊಯೇಟ್, ಇಂಡೊಕ್ಸಾಕಾರ್ಬ್ ಅಥವಾ ಫಿಪ್ರೋನಿಲ್ ಗಳನ್ನು ಒಳಗೊಂಡಿರುವ ಕೀಟನಾಶಕಗಳು ಮಿರಿಡ್ ತಿಗಣೆಗಳ ವಿರುದ್ಧ ಪರಿಣಾಮ ಬೀರುತ್ತವೆ ಮತ್ತು ತೀವ್ರವಾದ ಮುತ್ತುವಿಕೆಯನ್ನು ಕಡಿಮೆ ಮಾಡಲು ಬಳಸಬಹುದು.
ಬೆಳೆ ಅವಲಂಬಿಸಿ ಹಲವಾರು ಜಾತಿಯ ಮಿರಿಡ್ ತಿಗಣೆಗಳು ಹಾನಿ ಉಂಟು ಮಾಡುತ್ತವೆ. ಹತ್ತಿಯಲ್ಲಿ, ಅಪರಾಧಿಗಳೆಂದರೆ ಕ್ಯಾಂಪಿಲೋಮಾ ಲಿವಿಡಾ, ಇದನ್ನು ಡಿಂಪಲ್ ಬಗ್ (ಕೇಂದ್ರ ಮತ್ತು ಉತ್ತರ ಭಾರತ) ಎಂದು ಕರೆಯಲಾಗುತ್ತದೆ ಮತ್ತು ಕ್ರೆಯೋಂಟಿಯೆಡ್ ಜಾತಿಯ ಹಲವಾರು ತಿಗಣೆಗಳು ಮತ್ತು ವಿಶೇಷವಾಗಿ ಸಿ. ಬೈಸೆರಟೆನ್ಸ್ (ದಕ್ಷಿಣ ಭಾರತ) ರೋಗ ಉಂಟು ಮಾಡುತ್ತವೆ. ವಯಸ್ಕ ತಿಗಣೆಗಳು ಹಸಿರು-ಹಳದಿ ಬಣ್ಣದಿಂದ ಕಂದು ಬಣ್ಣದ ಅಂಡಾಕಾರದ , ಚಪ್ಪಟೆ ದೇಹವನ್ನು ಹೊಂದಿರುತ್ತವೆ. ವಿಶಿಷ್ಟವಾದ ತ್ರಿಕೋನವೊಂದು ಹಿಂಭಾಗದಲ್ಲಿ ಇರುತ್ತದೆ. ಮೊಟ್ಟೆಗಳನ್ನು ಪ್ರತ್ಯೇಕವಾಗಿ ಎಲೆಯ ತೊಟ್ಟುಗಳ ಮೇಲೆ ಇಡುತ್ತವೆ ಮತ್ತು 4-5 ದಿನಗಳ ನಂತರ ಇವು ಒಡೆದು ಮರಿ ಹೊರಬರುತ್ತದೆ. ಗಾತ್ರ ಮತ್ತು ಆಕಾರದಿಂದಾಗಿ ಎಳೆಯ ಮರಿಹುಳುಗಳನ್ನು ಸುಲಭವಾಗಿ ಗಿಡಹೇನುಗಳೆಂದು ತಪ್ಪಾಗಿ ತಿಳಿಯುವ ಸಾಧ್ಯತೆ ಇದೆ. ಆದರೆ, ಮಿರಿಡ್ ತಿಗಣೆಗಳು ಗಿಡಹೇನುಗಳಿಗಿಂತ ವೇಗವಾಗಿ ಚಲಿಸುತ್ತವೆ. ಸಿ ಲಿವಿಡಾ ಸುಮಾರು 30-32 ° C ಆದ್ಯತೆಯ ಉಷ್ಣಾಂಷವಾಗಿದೆ. ಉಷ್ಣಾಂಶವು ಈ ಸೂಕ್ತ ಮಟ್ಟದಿಂದ ಬೇರೆಯಾದಾಗ, ಆವುಗಳ ಜೀವನ ಚಕ್ರವು ನಿಧಾನಗೊಳ್ಳುತ್ತದೆ. ವಿಶೇಷವಾಗಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕಿಂತ ಹೆಚ್ಚಿನ ಉಷ್ಣತೆ ಮತ್ತು ಅಧಿಕ ಮಳೆ ಕೀಟ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆಗೊಳಿಸುತ್ತವೆ.