ಹತ್ತಿ

ಹತ್ತಿಯ ಕಾಂಡ ವಾಡೆ ಹುಳು

Pempherulus affinis

ಕೀಟ

ಸಂಕ್ಷಿಪ್ತವಾಗಿ

  • ಹತ್ತಿ ಕಾಂಡದ ವಾಡೆ ಹುಳುವಿನ ಲಾರ್ವಾವು ಸಸ್ಯದ ತಳದಲ್ಲಿ ಕಾಂಡವನ್ನು ಭೇದಿಸಿ ಒಳಗಿನಿಂದ ಅದನ್ನು ತಿನ್ನುತ್ತದೆ.
  • ಇದು ನಾಳೀಯ ಅಂಗಾಂಶದ ಹಾನಿ ಮತ್ತು ಕಾಂಡದ ವಿರೂಪತೆಗೆ ಕಾರಣವಾಗುತ್ತದೆ.
  • ಇಳುವರಿಯ ಮೇಲೆ ಇದು ತೀವ್ರ ಪರಿಣಾಮ ಬೀರಬಹುದು ಮತ್ತು ಗಾಳಿ ಬೀಸಿದಾಗ ಸಸ್ಯಗಳು ಗೆಣ್ಣುಗಳಲ್ಲಿ ಮುರಿಯಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹತ್ತಿ

ರೋಗಲಕ್ಷಣಗಳು

ಹತ್ತಿ ಕಾಂಡದ ವಾಡೆ ಹುಳುವಿನ ಮುತ್ತಿವಿಕೆಯ ಅತ್ಯಂತ ವಿಶಿಷ್ಟವಾದ ರೋಗಲಕ್ಷಣವೆಂದರೆ ನೆಲದ ಮೇಲೆ ಕಾಂಡದಲ್ಲಿ ಗಂಟುಗಳಂತಹ ಊತ. ಕಾಂಡದೊಳಗೆ ಮರಿಹುಳುಗಳು ತಿನ್ನುವುದರಿಂದ ನಾಳೀಯ ಅಂಗಾಂಶಗಳಿಗೆ ಹಾನಿಯಾಗುವ ಕಾರಣದಿಂದಾಗಿ ಇದು ಸಂಭವಿಸುತ್ತದೆ. ಹಾನಿಯ ಪರಿಣಾಮವಾಗಿ ಎಳೆಯ ಸಸ್ಯಗಳು ಸಾಯುತ್ತವೆ. ಬೆಳೆದ ಸಸ್ಯಗಳು ಬಾಡುವ ಲಕ್ಷಣಗಳನ್ನು ಮೊದಲು ತೋರಿಸುತ್ತವೆ ಮತ್ತು ಕ್ರಮೇಣ ಒಣಗುತ್ತವೆ. ಅವು ಬದುಕುಳಿಯುವ ಸಾಧ್ಯತೆ ಹೆಚ್ಚಾದರೂ, ಕಳಪೆ ಚಟುವಟಿಕೆ ಮತ್ತು ಕುಂಠಿತಗೊಂಡ ಬೆಳವಣಿಗೆಯನ್ನು ಹೊಂದಿರುತ್ತವೆ. ಬಲವಾದ ಗಾಳಿ ಬೀಸಿದಾಗ ಅಥವಾ ಬೀಜಕೋಶಗಳ ಭಾರಕ್ಕೆ ತೊಂದರೆಗೊಳಗಾದ ಕಾಂಡಗಳು ಸುಲಭವಾಗಿ ನೆಲಕ್ಕೆ ಬಾಗಬಹುದು. ಮತ್ತಷ್ಟು ರೋಗಲಕ್ಷಣಗಳೆಂದರೆ ಕಡಿಮೆ ಬೀಜಗಳು ಮತ್ತು ನಾರಿನ ಕಳಪೆ ಗುಣಮಟ್ಟ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಮೂಲ ರಸಗೊಬ್ಬರ ಬಳಕೆ ಸಮಯದಲ್ಲಿ ಹಟ್ಟಿ ಗೊಬ್ಬರ (ಎಫ್ ವೈ ಎಮ್) ಜೊತೆಗೆ ಬೆರೆಸಿದ ಮಣ್ಣಿನಲ್ಲಿ ಬೇವಿನ ಬೀಜದ ಕೇಕ್ ಬೆರೆಸುವುದರಿಂದ ಕಾಂಡದ ಮತ್ತು ಚಿಗುರಿನ ವಾಡೆಹುಳುಗಳ ಮುತ್ತುವಿಕೆಯನ್ನು ಕಡಿಮೆಗೊಳಿಸಬಹುದು. (10 ಟನ್ FYM + 250 ಕೆ.ಜಿ. ಬೇವಿನ ಕೇಕ್/ ಹೆ). ವಯಸ್ಕ ಹುಳುಗಳು ಸಸ್ಯಗಳ ಎಲೆಗಳ ಮೇಲೆ ಮೊಟ್ಟೆಗಳನ್ನು ಇಡುವುದನ್ನು ತಪ್ಪಿಸಲು ಬೇವಿನ ಎಣ್ಣೆಯ ದ್ರಾವಣದಲ್ಲಿ ಎಳೆಯ ಸಸಿಗಳನ್ನು ಮುಳುಗಿಸಬಹುದು. ಫೆರೋಮೋನ್ ಬಲೆಗಳನ್ನು ವಾಡೆ ಹುಳು ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕಾಗಿ ಬಳಸಬಹುದು (ಜೈವಿಕ ಕೀಟನಾಶಕದೊಂದಿಗೆ ಸಂಯೋಜಿಸಿ)

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಕೀಟಗಳ ಹರಡುವಿಕೆಯನ್ನು ಸೀಮಿತಗೊಳಿಸಲು ಬೀಜಗಳ ನಿಯಂತ್ರಣ ಚಿಕಿತ್ಸೆ (10 ಮಿ.ಗ್ರಾಂ ಕ್ಲೋರಿಪಿರಫೊಸ್ 20 ಇಸಿ / ಕೆಜಿ ಬೀಜ) ಯನ್ನು ಬಳಸಬಹುದು. ಕಾಂಡದ ಕಾಲರ್ ಗೆ ಕ್ಲೋರಿಪಿರಿಫೊಸ್ 20 ಇಸಿ ಸಿಂಪಡಿಸುವ ಚಿಕಿತ್ಸೆ ಸಹ ಕಾಂಡ ಮತ್ತು ಚಿಗುರು ವಾಡೆ ಹುಳುಗಳ ವಿರುದ್ಧ ಪರಿಣಾಮಕಾರಿ. (2.5 ಮಿಲಿ / ಲೀ ಗೆ ದುರ್ಬಲಗೊಳಿಸಿ). ಮೊಳಕೆಯೊಡೆದ 15-20 ದಿನಗಳ ನಂತರ ಆರಂಭಿಸಿ, 15 ದಿನಗಳ ಅಂತರದಲ್ಲಿ ಸಸ್ಯಗಳನ್ನು ಮುಳುಗಿಸಿ. ವಾಡೆ ಹುಳದ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕಾಗಿ ಪೆರೋಮನ್ ಬಲೆಗಳನ್ನು ಬಳಸಬಹುದು (ಕೀಟನಾಶಕದೊಂದಿಗೆ ಸಂಯೋಜಿಸಿ)

ಅದಕ್ಕೆ ಏನು ಕಾರಣ

ಹತ್ತಿ ಕಾಂಡದ ವಾಡೆಹುಳು, ಪೆಂಪೆರುಲುಸ್ ಅಫಿನಿಸ್ ನಿಂದ ಹಾನಿ ಉಂಟಾಗುತ್ತದೆ. ವಯಸ್ಕ ವಾಡೆಹುಳುಗಳು ಚಿಕ್ಕದಾಗಿರುತ್ತವೆ, ಕಡು ಕಂದು ಬಣ್ಣದಲ್ಲಿರುತ್ತವೆ, ರೆಕ್ಕೆಗಳ ಮೇಲೆ ಮತ್ತು ತಲೆಯ ಮೇಲೆ ಬಿಳಿ ಬಣ್ಣ ಇರುತ್ತವೆ. ಎಳೆಯ ಸಸ್ಯಗಳ ಬೆಳೆಯುತ್ತಿರುವ ಚಿಗುರುಗಳಲ್ಲಿ ಹೆಣ್ಣು ಕೀಟ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯೊಡೆದು ಹೊರ ಬಂದ ನಂತರ, ತೊಗಟೆ ಮತ್ತು ಕಾಂಡದ ನಡುವಿನ ಪ್ರದೇಶದೊಳಗೆ ಕೊರೆದು ಬಿಳಿಯ ಗ್ರಿಬ್ಗಳು ಒಳನುಸುಳುತ್ತವೆ ಮತ್ತು ನಾಳೀಯ ಅಂಗಾಂಶಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಇದರಿಂದಾಗಿ ನೆಲದ ಮಟ್ಟಕ್ಕಿಂತ ಕೊಂಚವೇ ಮೇಲಿರುವ ಕಾಂಡದ ಮೇಲೆ ವಿಶಿಷ್ಟ ಉಬ್ಬುವಿಕೆ ಉಂಟಾಗುತ್ತದೆ. ಹತ್ತಿ ಚಿಗುರು ವಾಡೆಹುಳು (ಆಲ್ಸಿಡೋಡ್ಸ್ ಅಫೇಬರ್) ಕೂಡ ಇದೇ ರೀತಿ ವರ್ತಿಸುತ್ತದೆ. ಆದ್ದರಿಂದ, ಅದೇ ಚಿಕಿತ್ಸೆ ಮತ್ತು ತಡೆಗಟ್ಟುವಿಕೆ ಕ್ರಮಗಳನ್ನು ಬಳಸಬಹುದು. ಆದರೆ, ಹತ್ತಿ ಚಿಗುರು ವಾಡೆಹುಳುಗಳು ಗಾಢ ಕಂದು ಬೂದುಬಣ್ಣದಲ್ಲಿದ್ದು, ತಮ್ಮ ಮುಂದಿನ ರೆಕ್ಕೆಗಳಲ್ಲಿ ತೆಳುವಾದ ಪಟ್ಟಿಗಳನ್ನು ಹೊಂದಿರುತ್ತವೆ. ಹತ್ತಿ ಕಾಂಡದ ವಾಡೆ ಹುಳುಗಳು ಕೆಲವೊಮ್ಮೆ ದಕ್ಷಿಣ ಭಾರತದ ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ ಗಂಭೀರ ಕೀಟ ಭಾದೆ ಉಂಟುಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ಕೀಟವನ್ನು ತಡೆಯಲು ಸಸ್ಯಗಳನ್ನು ದಟ್ಟವಾಗಿ ನೆಡಿ.
  • ವಾಡೆ ಹುಳುವನ್ನು ತಡೆಗಟ್ಟಲು ಸಸಿಗಳ ಸಾಲುಗಳ ಉದ್ದಕ್ಕೂ ಭೂಮಿಯನ್ನು ಅಗೆಯಿರಿ.
  • ಬೆಳೆಯ ತೀವ್ರತೆಯನ್ನು ಕಡಿಮೆ ಮಾಡಿ.
  • ಉದಾ.
  • ಭೂಮಿ ಖಾಲಿ ಬಿಡುವ ಮೂಲಕ ಅಥವಾ ಬೆಳೆ ಸರದಿ ಯೋಜನೆ ಮಾಡುವ ಮೂಲಕ.
  • ಹೊಲದಲ್ಲಿ ಮತ್ತು ಸುತ್ತಮುತ್ತಲಿನಲ್ಲಿರುವ ಪರ್ಯಾಯ ಆಶ್ರಯದಾತ ಸಸ್ಯಗಳನ್ನು ತೆಗೆದುಹಾಕಿ (ದಾಸವಾಳ, ಇಂಡಿಯನ್ ಮ್ಯಾಲೋ).
  • ಹೊಲಗಳ ಮೇಲ್ವಿಚಾರಣೆ ಮಾಡಿ ಮತ್ತು ತೊಂದರೆಗೆ ಒಳಗಾದ ಸಸ್ಯಗಳನ್ನು ತೆಗೆದುಹಾಕಿ.
  • ಸುಗ್ಗಿಯ ನಂತರ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಸುಟ್ಟು ಹಾಕಿ.
  • ವಾಡೆ ಹುಳುವಿನ ಇರುವಿಕೆಯನ್ನು ಮೇಲ್ವಿಚಾರಣೆ ಮಾಡಲು ಫೆರೋಮೋನ್ ಬಲೆಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ