Aonidiella aurantii
ಕೀಟ
ಅನೇಕ, ಸಣ್ಣ ಗಾಢ- ಕಂದು ಬಣ್ಣದಿಂದ ಕೆಂಪು ಬಣ್ಣದ ಸ್ಕೇಲ್ಗಳು ಎಲೆಗಳ ಮೇಲೆ (ಸಾಮಾನ್ಯವಾಗಿ ಮುಖ್ಯವಾದ ಸಿರೆಯ ಉದ್ದಕ್ಕೂ), ಸಣ್ಣ ರೆಂಬೆಗಳು, ಕೊಂಬೆಗಳು ಮತ್ತು ಹಣ್ಣುಗಳ ಮೇಲೆ ಕಂಡು ಬರುತ್ತವೆ. ಅವು ಹೆಚ್ಚು ಕಡಿಮೆ ಸ್ಪಷ್ಟವಾದ ಕೇಂದ್ರವುಳ್ಳ (ವಾಲ್ಕೆನೊ-ರೀತಿಯ ಆಕಾರ), ಉಬ್ಬಿದ, ಶಂಕುವಿನಾಕಾರದ ಕಲೆಗಳಂತೆ ಕಾಣುತ್ತವೆ. ಅವು ಆಹಾರ ಸೇವಿಸುವ ಜಾಗದ ಬಳಿ ಹಳದಿ ಪ್ರಭಾವಲಯವನ್ನು ಕಾಣಬಹುದು. ತೀವ್ರವಾದ ಮುತ್ತುವಿಕೆಗಳಲ್ಲಿ, ಎಲೆಗಳು ಬಾಡುತ್ತವೆ, ಅಕಾಲಿಕವಾಗಿ ಉದುರುತ್ತವೆ ಮತ್ತು ನಂತರ ಎಲೆಗಳಚುವಿಕೆ ಉಂಟಾಗುತ್ತದೆ. ಮುತ್ತುವಿಕೆಯುಳ್ಳ ಸಣ್ಣ ರೆಂಬೆಗಳಲ್ಲಿ ಡೈ ಬ್ಯಾಕ್ ಉಂಟಾಗುತ್ತದೆ ಮತ್ತು ತೀವ್ರವಾದ ಮುತ್ತುವಿಕೆಗಳಲ್ಲಿ ಇದು ದೊಡ್ಡ ರೆಂಬೆಗಳಲ್ಲೂ ಉಂಟಾಗಬಹುದು. ಹಣ್ಣುಗಳನ್ನು ಹಲವಾರು ಸ್ಕೇಲ್ಗಳು ಮುತ್ತಬಹುದು ಮತ್ತು ಹಣ್ಣುಗಳು ವಿಕೃತಗೊಂಡು ಬೆಳೆದು ಅಂತಿಮವಾಗಿ ಒಣಗುತ್ತವೆ ಮತ್ತು ಮರದಿಂದ ಉದುರುತ್ತವೆ. ಎಳೆಯ ಮರಗಳು ತೀವ್ರವಾಗಿ ಕುಂಠಿತಗೊಳ್ಳಬಹುದು ಅಥವಾ ಹಲವಾರು ರೆಂಬೆಗಳಲ್ಲಿ ಡೈ ಬ್ಯಾಕ್ ಉಂಟಾದರೆ ಅವು ಸಾಯಲೂ ಬಹುದು. ಸಿಹಿಅಂಟನ್ನು ರೆಡ್ ಸ್ಕೇಲ್ಗಳೂ ಸಹ ವಿಸರ್ಜಿಸುತ್ತವೆ ಮತ್ತು ಇದು ಎಲೆಗಳ ಹಾಗು ಹಣ್ಣುಗಳ ಮೇಲೆ ಮಸಿಯಾದ ಬೂಷ್ಟುಗಳ ರಚನೆಗೂ ದಾರಿಯಾಗಬಹುದು.
ಓನಿಡಿಯೆಲ್ಲ ಓರಂಟಿಯ ಸ್ವಾಭಾವಿಕ ಶತ್ರುಗಳಲ್ಲಿ, ಪಾರಸೈಟಿಕ್ ಕಣಜಗಳಾದ ಅಫಿಟಿಸ್ ಮೆಲಿನಸ್ ಮತ್ತು ಕಂಪೇರಿಯೆಲ್ಲ ಬೈಫಾಶಿಯೇಟ ಮತ್ತು ಪರಭಕ್ಷಕ ಮೈಟಾದ ತೆವಳುವ ಕೀಟಗಳ ಮೇಲೆ ದಾಳಿ ಮಾಡುವ ಹೆಮಿಸಾರ್ಕೋಪ್ಟಸ್ ಮಲಸ್ ಸೇರಿವೆ. ಇರುವೆಗಳು ಸ್ಕೇಲ್ಗಳನ್ನು ಸ್ವಾಭಾವಿಕ ಶತ್ರುಗಳಿಂದ ರಕ್ಷಿಸುವ ಕಾರಣ, ರೆಡ್ ಸ್ಕೇಲ್ಗಳ ಜೈವಿಕ ನಿಯಂತ್ರಣಕ್ಕೆ ಇರುವೆಗಳ ನಿಯಂತ್ರಣವು ಮುಖ್ಯವಾಗಿದೆ. ಸಾವಯವವಾಗಿ ಪ್ರಮಾಣಿತವಾದ ಪೆಟ್ರೋಲಿಯಂ ಎಣ್ಣೆಯ ಸಿಂಪರಣೆಯನ್ನು ಸಹ ಎಲೆಗಳು ಮತ್ತು ಹಣ್ಣುಗಳನ್ನು ಸ್ಕೇಲ್ಗಳಿಂದ ಮುಕ್ತಗೊಳಿಸಲು ಬಳಸಬಹುದು. ಕೊಯ್ಲಿನ ನಂತರ ನಿಮ್ಮ ಹಣ್ಣುಗಳ ಮೇಲಿನ ಸ್ಕೇಲ್ಗಳನ್ನು ತೊಲಗಿಸಲು ಅತಿ ಹೆಚ್ಚು ಒತ್ತಡದ ತೊಳೆಯುವಿಕೆಯನ್ನು ಬಳಸಿ.
ಯಾವಾಗಲೂ ಲಭ್ಯವಿದ್ದಲ್ಲಿ, ಜೈವಿಕ ನಿಯಂತ್ರಣದ ಜೊತೆ, ನಿರೋಧಕ ಕ್ರಮಗಳೊಡನೆ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕಡಿಮೆ ವ್ಯಾಪ್ತಿಯುಳ್ಳ ಎಣ್ಣೆಯ ಸಿಂಪರಣೆಗಳು ಸ್ವಾಭಾವಿಕ ಶತ್ರುಗಳಿಗೆ ಕನಿಷ್ಠ ಹಾನಿ ಉಂಟುಮಾಡುತ್ತವೆ ಮತ್ತು ಇವನ್ನು ಬೇಸಿಗೆಯ ನಡುವಿನಲ್ಲಿ ಬಳಸುವುದು ಉತ್ತಮ. 25% ಗಿಂತ ಹಣ್ಣುಗಳು ಮುತ್ತುವಿಕೆಗೆ ಒಳಗಾಗಿದ್ದಲ್ಲಿ, ದೋಷಪರಿಹಾರಕ ರಾಸಾಯನಿಕ ಸಿಂಪರಣೆಗಳನ್ನು ಬಳಸಬೇಕು. ಸ್ಕೇಲ್ಗಳ ಸಂಖ್ಯೆಯು ಈ ಮಿತಿಯನ್ನು ಮೀರಿದ ಹಣ್ಣಿನ ತೋಟದ ಭಾಗಗಳಲ್ಲಿ, ಎಚ್ಚರಿಕೆಯಿಂದ ಕ್ಲೋರ್ಪೈರಿಫೋಸ್, ಕಾರ್ಬಾರಿಲ್, ಮಾಲಾಥಿಯೋನ್ ಅಥವಾ ಡೈಮಿಥೋಯೇಟ್ಗಳಿರುವ ಕೀಟನಾಶಕಗಳನ್ನು ಬಳಸಿ. ಪ್ರಯೋಜನಕಾರಿ ಕೀಟಗಳಿಗೆ ಹಾನಿಯೊಡ್ಡುವ ವಿಶಾಲ ವ್ಯಾಪ್ತಿ ಕೀಟನಾಶಕಗಳ ಬಳಕೆಯನ್ನು ತಪ್ಪಿಸಿ.
ಓನಿಡಿಯೆಲ್ಲ ಓರಂಟಿ ಎಂಬ ರೆಡ್ ಸ್ಕೇಲಿನ ಆಹಾರ ಸೇವನೆಯ ಚಟುವಟಿಕೆಯಿಂದ ರೋಗಲಕ್ಷಣಗಳು ಉಂಟಾಗುತ್ತವೆ. ವಿಶ್ವದಾದ್ಯಂತ ಇದು ನಿಂಬೆಯ ಪ್ರಮುಖ ಕೀಟವಾಗಿದೆ, ಇದು ಉಷ್ಣವಲಯಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಅವು ಕೊಯ್ಲಿನ ನಂತರ ಮರ ಮತ್ತು ಎಲೆಗಳ ಮೇಲೆ ಬದುಕುಳಿದು, ಮುಂದಿನ ಬೆಳೆಯುವ ಋತುವಿನ ಹೊಸ ಬೆಳವಣಿಗೆಯನ್ನೂ ಮುತ್ತುತ್ತವೆ. ಅವುಗಳ ಚಲನಾವಸ್ಥೆಯಲ್ಲಿ, ಹೆಣ್ಣು ಕೀಟಗಳು ಅವುಗಳ ಆಹಾರ ಸೇವನೆ ಜಾಗಗಳ ಹುಡುಕಾಟದಲ್ಲಿ ಬೆಳಕಿನಿಂದ ಹೆಚ್ಚು ಆಕರ್ಷಿತವಾಗುತ್ತವೆ. ಅವು ಮೊಟ್ಟೆಯಿಡುವುದಿಲ್ಲ ಆದರೆ ಬಹಳವಾಗಿ ಸಕ್ರಿಯವಾಗಿರುವ ತೆವಳುವ ಕೀಟಗಳಿಗೆ ಜನ್ಮ ನೀಡುತ್ತವೆ. ಒಂದು ಎಲೆಯ ಮೇಲ್ಭಾಗದಲ್ಲಿ ಅಥವಾ ಎಳೆಯ ಹಣ್ಣುಗಳ ಮೇಲಿನ ಕುಳಿಗಳಲ್ಲಿ ನೆಲೆಯೂರಿದ ಮೇಲೆ ಅವು ಅಚಲವಾಗುತ್ತವೆ. ಹತ್ತಿಯಂತಹ ಪದಾರ್ಥದಿಂದ ಅವು ಮುಚ್ಚಲ್ಪಟ್ಟ ಅಲ್ಪಾವಧಿಯ ನಂತರ ಅಂತಿಮವಾಗಿ ಅವು, ಅವುಗಳ ಗುಂಡಗಿನ ಚಪ್ಪಟೆಯಾದ ರೂಪವನ್ನು ಮತ್ತು ಅವುಗಳ ವಿಶಿಷ್ಟವಾದ ಕೆಂಪು-ಕಂದು ಬಣ್ಣವನ್ನು ಪಡೆಯುತ್ತವೆ. ಅವುಗಳ ಜೀವನ ಚಕ್ರವು ತಾಪಮಾನಕ್ಕೆ ಮತ್ತು ಮರದ ಆರೋಗ್ಯಕ್ಕೆ ಹತ್ತಿರವಾಗಿ ಸಂಬಂಧಿಸಿರುತ್ತದೆ. ಹೀಗಾಗಿ, ಬೇಸಿಗೆಯ ಕೊನೆಯಲ್ಲಿ, ಮರಗಳು ತೇವಾಂಶದ ಒತ್ತಡದಿಂದ ಬಳಲಬಹುದಾದಾಗ, ಸಾಮಾನ್ಯವಾಗಿ ಅತಿ ಹೆಚ್ಚಿನ ಹಾನಿಯು ಸಂಭವಿಸುತ್ತದೆ.