Spilarctia obliqua
ಕೀಟ
ಬೇಗನೆ ಸೋಂಕಿತವಾಗಿರುವ ಎಲೆಗಳು ಕಂದು-ಹಳದಿ ಬಣ್ಣಕ್ಕೆ ಬಂದು ಒಣಗುತ್ತವೆ. ಮರಿಹುಳು ಮುಂದುವರೆದಂತೆ, ಇಡೀ ಎಲೆ ಅಂಗಾಂಶಗಳನ್ನು ತಿನ್ನುತ್ತವೆ. ತೀವ್ರವಾದ ಸೋಂಕಾಗಿದ್ದಾಗ, ಸಸ್ಯಗಳಲ್ಲಿ ಎಲೆಗಳಚುವಿಕೆಯಾಗಿ ಕಾಂಡಗಳು ಮಾತ್ರ ಉಳಿದಿರುತ್ತವೆ. ಎಲೆಗಳು ನೆಟ್ ನಂತೆ ಅಥವಾ ಬಲೆಯಂತೆ ಗೋಚರಿಸುತ್ತವೆ ಮತ್ತು ಅಂತಿಮವಾಗಿ ಅಸ್ಥಿಪಂಜರದಂತಾಗುತ್ತವೆ.
ಬಿಹಾರ ಹೇರಿ ಕ್ಯಾಟರ್ಪಿಲ್ಲರ್ ಸಂಖ್ಯೆಯನ್ನು ಸಾಮಾನ್ಯವಾಗಿ ಹಲವಾರು ನೈಸರ್ಗಿಕ ಶತ್ರುಗಳ ಮೂಲಕ ನಿಯಂತ್ರಿಸಬಹುದು ವಿಶೇಷವಾಗಿ ಎಸ್. ಓಬ್ಲಿಕಾ ಲಾರ್ವಾ ಹಂತದಲ್ಲಿ. ಪ್ರಯೋಜನಕಾರಿ ಪರಾವಲಂಬಿಗಳೆಂದರೆ ಬ್ರಾಕೊನಿಡ್ ಪರಾವಲಂಬಿಗಳು: ಮೀಟಿಯೋರಸ್ ಸ್ಪೈಲೋಸೋಮೆ ಮತ್ತು ಪ್ರೋಟಾಪಾಂಟೆಲ್ಸ್ ಆಬ್ಲಿಕೇ, ಗ್ಲಿಪ್ಟಾಪಾಂಟೆಲ್ಸ್ ಅಗಮೆಮ್ನೋನಿಸ್ ಮತ್ತು ಕೊಟೇಶಿಯಾ ರುಫಿಕ್ರಸ್ ಇದರ ಜೊತೆ ಇಕ್ನ್ಯುಮೋನಿಡ್ ಅಗಾಥಿಸ್ ಜಾತಿಯ ಸಂಯೋಜನೆಯೊಂದಿಗೆ, ಲೇಸ್ವಿಂಗ್, ಲೇಡಿಬರ್ಡ್ ಜೀರುಂಡೆ, ಜೇಡ, ಕೆಂಪು ಇರುವೆ, ಕೊಡತಿಹುಳುಗಳು (ಡ್ರ್ಯಾಗನ್‌ಫ್ಲೈ), ಪ್ರೇಯಿಂಗ್ ಮಾಂಟಿಸ್, ನೆಲದ ಜೀರುಂಡೆ ಮತ್ತು ಶೀಲ್ಡ್ ಬಗ್ಸ್.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕೀಟನಾಶಕಗಳನ್ನು ಎಚ್ಚರಿಕೆಯಿಂದ ಬಳಸಬೇಕು ಏಕೆಂದರೆ ಕೀಟನಾಶಕಗಳ ಅತಿಯಾದ ಬಳಕೆಯು ಅನೇಕ ಬಿಳಿನೊಣಗಳ ಪ್ರಭೇದಗಳು ಅದಕ್ಕೆ ಪ್ರತಿರೋಧವನ್ನು ಬೆಳೆಸಿಕೊಳ್ಳಲು ಕಾರಣವಾಗಿದೆ. ಇದನ್ನು ತಡೆಗಟ್ಟಲು, ಕೀಟನಾಶಕಗಳ ನಡುವೆ ಸರಿಯಾದ ಸರದಿಯನ್ನು ಖಚಿತಪಡಿಸಿಕೊಳ್ಳಿ ಮತ್ತು ಮಿಶ್ರಣಗಳನ್ನು ಬಳಸಿ. ಮರಿಹುಳುಗಳು ಚಿಕ್ಕದಾಗಿದ್ದಾಗ 0.6 ಮಿಲಿ / ಲೀಟರ್ ನೀರಿನಷ್ಟು ಲ್ಯಾಂಬ್ಡಾ-ಸಿಹಲೋಥ್ರಿನ್ 10 ಇಸಿ ಅನ್ನು ಸಿಂಪಡಿಸಿ. ಎಸ್. ಓಬ್ಲಿಕಾ ವಿರುದ್ಧ ಫೆಂಥೊಯೇಟ್ 50% ಸಹಾಯ ಮಾಡುತ್ತದೆಂದು ಪರಿಗಣಿಸಲಾಗುತ್ತದೆ.
ರೋಗಲಕ್ಷಣಗಳು ಹೆಚ್ಚಾಗಿ ಸ್ಪಿಲಾರ್ಕ್ಟಿಯಾ ಒಬ್ಲಿಕಾದ ಲಾರ್ವಾಗಳಿಂದ ಉಂಟಾಗುತ್ತವೆ. ಪ್ರೌಢ ಕೀಟಗಳನ್ನು ಕೆಂಪು ಹೊಟ್ಟೆ ಮತ್ತು ಕಪ್ಪು ಕಲೆಗಳನ್ನು ಹೊಂದಿರುವ ಮಧ್ಯಮ ಗಾತ್ರದ ಕಂದು ಬಣ್ಣದ ಚಿಟ್ಟೆ ಎಂದು ನಿರೂಪಿಸಲಾಗಿದೆ. ಹೆಣ್ಣು ಕೀಟಗಳು ತಮ್ಮ ಮೊಟ್ಟೆಗಳನ್ನು (1000/ಹೆಣ್ಣು ಕೀಟ) ಎಲೆಗಳ ಕೆಳಭಾಗದಲ್ಲಿ ಒಂದು ಗುಂಪಿನಲ್ಲಿ ಇಡುತ್ತವೆ. ಮೊಟ್ಟೆಯೊಡೆದ ನಂತರ, ಲಾರ್ವಾಗಳ ಮೇಲೆ ಉದ್ದನೆಯ ಹಳದಿ ಬಣ್ಣದಿಂದ ಕಪ್ಪು ಬಣ್ಣದ ಕೂದಲು ಬೆಳೆದು ಅವು ಸಸ್ಯಗಳಿಗೆ ಹತ್ತಿರವಿರುವ ಎಲೆಯ ಕಸದಲ್ಲಿ ಕೋಶಾವಸ್ಥೆಗೆ ಹೋಗುತ್ತವೆ. ಆರಂಭಿಕ ಇನ್ಸ್ಟಾರ್ ಲಾರ್ವಾಗಳು ಎಲೆಗಳ ಅಡಿಯಲ್ಲಿರುವ ಕ್ಲೋರೊಫಿಲ್ ಅನ್ನು ಒಟ್ಟಾಗಿ ತಿನ್ನುತ್ತವೆ. ನಂತರದ ಹಂತಗಳಲ್ಲಿ, ಅದು ಅಂಚಿನಿಂದ ಎಲೆಗಳನ್ನು ಏಕಾಂಗಿಯಗಿ ತಿನ್ನುತ್ತಾ ಬರುತ್ತವೆ. ಸಾಮಾನ್ಯವಾಗಿ, ಲಾರ್ವಾಗಳು ಬೆಳೆದ ಎಲೆಗಳಿಗೆ ಆದ್ಯತೆ ನೀಡುತ್ತವೆ, ಆದರೆ ತೀವ್ರವಾದ ಸೋಂಕಾಗಿದ್ದರೆ ಮೇಲಿರುವ ಚಿಗುರುಗಳಿಗೂ ಸಹ ಪರಿಣಾಮವಾಗುತ್ತದೆ. ಬಿಹಾರ ಹೇರಿ ಕ್ಯಾಟರ್ಪಿಲ್ಲರ್ ವಿವಿಧ ದೇಶಗಳಲ್ಲಿನ ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಧಾನ್ಯಗಳು ಮತ್ತು ಕೆಲವು ತರಕಾರಿಗಳು ಮತ್ತು ಸೆಣಬಿನ ಮೇಲೆ ದಾಳಿ ಮಾಡಿ ತೀವ್ರ ಆರ್ಥಿಕ ಹಾನಿಯನ್ನುಂಟುಮಾಡುತ್ತದೆ. ಇಳುವರಿ ನಷ್ಟದ ವ್ಯಾಪ್ತಿಯು ಮುತ್ತಿಕೊಳ್ಳುವಿಕೆಯ ತೀವ್ರತೆ ಮತ್ತು ಹವಾಮಾನ ಪರಿಸ್ಥಿತಿಗಳೊಂದಿಗೆ ಬದಲಾಗುತ್ತದೆ. ಏಕೆಂದರೆ ಈ ಕೀಟಗಳ ಬೆಳವಣಿಗೆಗೆ 18 ರಿಂದ 33°C ತಾಪಮಾನ ಅನುಕೂಲಕರ.