ಮಾವು

ಸಿಟ್ರಸ್ ಕಪ್ಪು ನೊಣ

Aleurocanthus woglumi

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳು ಮತ್ತು ಕಾಂಡಗಳ ಮೇಲೆ ಸಿಹಿ ಅಂಟು.
  • ಕಪ್ಪು ಮಸಿ ಬೂಷ್ಟು ತುಂಬಿದ ನೋಟ.
  • ಎಲೆಯ ಕೆಳಭಾಗದಲ್ಲಿ ಸಣ್ಣ, ಕಪ್ಪು ಗೆಡ್ಡೆಗಳ ಗುಂಪುಗಳು.


ಮಾವು

ರೋಗಲಕ್ಷಣಗಳು

ಮುತ್ತಿಕೊಂಡಿರುವ ಎಲೆಗಳು ವಿಕೃತ ಮತ್ತು ಸುರುಳಿಯಾಗಿ ಕಾಣಿಸಬಹುದು, ಅಂತಿಮವಾಗಿ, ಅಕಾಲಿಕ ಹಂತದಲ್ಲಿ ಉದುರಿಹೋಗುತ್ತವೆ. ಜಿಗುಟಾದ ಸಿಹಿಅಂಟು ಪದಾರ್ಥಗಳು ಎಲೆಗಳು ಮತ್ತು ಕಾಂಡಗಳ ಮೇಲೆ ಸಂಗ್ರಹವಾಗುತ್ತವೆ ಮತ್ತು ಸಾಮಾನ್ಯವಾಗಿ ಕಪ್ಪು ಬೂಷ್ಟು ಶಿಲೀಂಧ್ರವು ಬೆಳೆಯುತ್ತದೆ, ಇದು ಎಲೆಗಳಿಗೆ ಮಸಿ ತುಂಬಿದ ನೋಟವನ್ನು ನೀಡುತ್ತದೆ. ಸಿಹಿಅಂಟಿಗೆ ಇರುವೆಗಳು ಆಕರ್ಷಿತವಾಗಬಹುದು. ಎಲೆಗಳ ಕೆಳಭಾಗದಲ್ಲಿ ಸಣ್ಣ, ಕಪ್ಪು ಚೂಪಾದ ಉಂಡೆಗಳ ಗುಂಪುಗಳ ರೂಪದಲ್ಲಿ ಕೀಟಗಳು ಹೆಚ್ಚು ಗಮನಾರ್ಹವಾಗಿ ಕಂಡುಬರುತ್ತವೆ. ಕೀಟವು ಆಹಾರ ತಿನ್ನುವುದರಿಂದಾಗುವ ಹಾನಿ ಮತ್ತು ಮಸಿ ಬೂಷ್ಟು ಬೆಳವಣಿಗೆಯ ಸಂಯೋಜನೆಯು ಮರಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಹಣ್ಣು ಬಿಡುವುದನ್ನು ಕಡಿಮೆ ಮಾಡುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಎನ್ಕಾರ್ಸಿಯಾ ಪರ್ಪ್ಲೆಕ್ಸಾ, ಪೋಲಾಸ್ಜೆಕ್ ಮತ್ತು ಅಮಿಟಸ್ ಹೆಸ್ಪೆರಿಡಮ್ ಸಿಲ್ವೆಸ್ಟ್ರಿಗಳನ್ನು ಸಿಟ್ರಸ್ ಕಪ್ಪುನೊಣದ ಪರಾವಲಂಬಿ ಕಣಜಗಳೆಂದು ಗುರುತಿಸಲಾಗಿದೆ. ಕಣಜಗಳು ಸಿಟ್ರಸ್ ಕಪ್ಪು ನೊಣ ಮತ್ತು ನಿಕಟ ಸಂಬಂಧಿತ ಬಿಳಿನೊಣಗಳನ್ನು ಮಾತ್ರ ಪರಾವಲಂಬಿಗೊಳಿಸುತ್ತವೆ, ಹಾಗೆಯೇ ಸಸ್ಯಗಳು ಮತ್ತು ಜನರಿಗೆ ಹಾನಿ ಮಾಡುವುದಿಲ್ಲ. ಲೇಡಿ ಬರ್ಡ್, ಲೇಸ್ವಿಂಗ್, ಬ್ರೂಮಸ್ ಎಸ್ಪಿ., ಸ್ಕಿಮ್ನಸ್ ಎಸ್ಪಿ. ಮತ್ತು ಕ್ಲೈಸೊಪೆರ್ಲಾ ಎಸ್ಪಿ. ಇತರ ಕೀಟಗಳು ನೈಸರ್ಗಿಕ ಶತ್ರುಗಳು. ಕಾಟನ್ ಆಯಿಲ್ ಮತ್ತು ಫಿಶ್ ಆಯಿಲ್ ರೋಸಿನ್ ಸೋಪ್ (ಎಫ್‌ಒಆರ್ಎಸ್) ನಂತಹ ತೈಲಗಳು ಕಪ್ಪುನೊಣದ ಸಂಖ್ಯೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಎಲೆಗಳ ಮೇಲೆ ಮಸಿ ಬೂಷ್ಟುಗಳನ್ನು ಕಡಿಮೆ ಮಾಡುತ್ತದೆ. ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬೇವಿನ ಬೀಜದ ಕಷಾಯವನ್ನು (4%) ಸಿಂಪಡಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ಮುಂಜಾಗ್ರತಾ ಕ್ರಮಗಳಳೊಂದಿಗೆ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಎ. ವೊಗ್ಲುಮಿಯ ನೈಸರ್ಗಿಕ ಶತ್ರುಗಳನ್ನು ಸಂರಕ್ಷಿಸಲು ವಿಶಾಲ-ರೋಹಿತ ಕೀಟನಾಶಕಗಳ ಬಳಕೆಯನ್ನು ತಪ್ಪಿಸಿ. ಸಸಿ ವಸ್ತುಗಳನ್ನು ಧೂಪನ (ಫ್ಯೂಮಿಗೇಷನ್) ಮಾಡುವುದರಿಂದ ಅಥವಾ ರಾಸಾಯನಿಕ ದ್ರವೌಷಧಗಳ ಮೂಲಕ ಕೀಟವನ್ನು ನಿಯಂತ್ರಿಸಬಹುದು. 50% ಕ್ಕಿಂತ ಹೆಚ್ಚು ಮೊಟ್ಟೆಗಳು ಹೊರಬಂದಾಗ ಮತ್ತು ಕಿರಿಯವುಗಳ ದೇಹದ ಮೇಲೆ ಯಾವುದೇ ರಕ್ಷಣಾತ್ಮಕ ಹೊರಪೊರೆ ಇಲ್ಲದಿದ್ದಾಗ ರೋಗನಿರೋಧಕ ಕೀಟನಾಶಕಗಳನ್ನು ಸಿಂಪಡಿಸಿ. ಕ್ವಿನಾಲ್ಫೋಸ್ ಮತ್ತು ಟ್ರಯಾಜೋಫೊಸ್ ಸಿಟ್ರಸ್ ಕಪ್ಪುನೊಣದ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿವೆ. ಕೀಟ ಬೆಳೆಯುವ ಎಲೆಗಳ ಕೆಳಗಿನ ಭಾಗದಲ್ಲಿ ಸಿಂಪರಣೆ ಮಾಡಬೇಕು. ಇಡೀ ಸಸ್ಯ ಮೇಲಾವರಣವನ್ನು ದ್ರಾವಣದೊಂದಿಗೆ ತೇವಗೊಳಿಸಬೇಕು.

ಅದಕ್ಕೆ ಏನು ಕಾರಣ

ಸಿಟ್ರಸ್ ಕಪ್ಪುನೊಣ (ಅಲ್ಯುರೊಕಾಂಥಸ್ ವೊಗ್ಲುಮಿ) ಏಷ್ಯನ್ ಮೂಲದ ಗಂಭೀರ ಸಿಟ್ರಸ್ ಕೀಟವಾಗಿದೆ ಮತ್ತು ಇದು ವಿವಿಧ ಆತಿಥೇಯ ಸಸ್ಯಗಳಿಗೆ ಮುತ್ತಿಕೊಳ್ಳುತ್ತದೆ. ಇದು ಬಿಳಿನೊಣದ ಕುಟುಂಬದ ಸದಸ್ಯ ಆದರೆ ಇದರ ಪ್ರೌಢ ಕೀಟವು ಗಾಢವಾದ, ಸ್ಲೇಟ್ ನೀಲಿ ಬಣ್ಣವನ್ನು ಹೊಂದಿರುವುದರಿಂದ ಇದಕ್ಕೆ ಕಪ್ಪುನೊಣ ಎಂಬ ಹೆಸರನ್ನು ನೀಡಲಾಯಿತು. ಪ್ರೌಢ ಕೀಟವು ಸೀಮಿತ ಹಾರುವ ವ್ಯಾಪ್ತಿಯನ್ನು ಹೊಂದಿರುವ ಬಹಳ ನಿಧಾನವಾಗಿ ಚಲಿಸುವ ಸಣ್ಣ ಕೀಟ, ಆದರೆ ಇದು ಮುಸ್ಸಂಜೆಯಲ್ಲಿ ಸಕ್ರಿಯನಾಗಿರುತ್ತದೆ ಮತ್ತು ಹಗಲಿನಲ್ಲಿ ಕೆಳಗಿನ ಎಲೆಯ ಮೇಲೆ ಕೂರುತ್ತದೆ. ಹೆಣ್ಣುಗಳು ಸುಮಾರು 100 ಚಿನ್ನದ ಬಣ್ಣದ ಮೊಟ್ಟೆಗಳನ್ನು ಉತ್ಪತ್ತಿ ಮಾಡುತ್ತವೆ, ಇವುಗಳನ್ನು ಎಲೆಗಳ ಕೆಳಭಾಗದಲ್ಲಿ ಸುರುಳಿಯಾಕಾರದ ಮಾದರಿಯಲ್ಲಿ ಇಡಲಾಗುತ್ತದೆ. ಮರಿಹುಳುಗಳು ಚಪ್ಪಟೆಯಾಗಿರುತ್ತವೆ, ಅಂಡಾಕಾರದಲ್ಲಿರುತ್ತವೆ ಮತ್ತು ಅವುಗಳು ಚೆಕ್ಕೆಯ ತರಹ ಕಾಣುತ್ತವೆ. ಕಪ್ಪುನೊಣದ ಚುಚ್ಚುವ ಸ್ಟೈಲೆಟ್ ಮೂಲಕ ಎಲೆಗಳ ಕೋಶ ರಸವನ್ನು ಹೀರಿಕೊಳ್ಳಲಾಗುತ್ತದೆ. ಅದೇ ಸಮಯದಲ್ಲಿ ಈ ನೊಣವು ಸಿಹಿಅಂಟನ್ನು ದೊಡ್ಡ ಪ್ರಮಾಣದಲ್ಲಿ ಸ್ರವಿಸುತ್ತದೆ. ಇದರ ಬೆಳವಣಿಗೆಗೆ ಸೂಕ್ತವಾದ ಪರಿಸ್ಥಿತಿಗಳೆಂದರೆ ಸುಮಾರು 28-32°C ತಾಪಮಾನ ಮತ್ತು 70-80% ನಷ್ಟು ಆರ್ದ್ರತೆ. ಎ. ವೊಗ್ಲುಮಿಯು ಹಿಮ ಬೀಳುವ ಶೀತ ವಾತಾವರಣದಲ್ಲಿ ಬದುಕುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಹಣ್ಣಿನ ತೋಟಕ್ಕೆ ಕೀಟ ರಹಿತ ಸಸ್ಯಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ.
  • ಸಸ್ಯಗಳನ್ನು ಒಂದಕ್ಕೊಂದು ಹತ್ತಿರ ನೆಡುವುದನ್ನು ತಪ್ಪಿಸುವ ಮೂಲಕ ನಿಮ್ಮ ತೋಟದಲ್ಲಿ ಗಾಳಿಯ ಪ್ರಸರಣಕ್ಕೆ ಉತ್ತಮ ಪರಿಸ್ಥಿತಿಗಳನ್ನು ರಚಿಸಿ.
  • ಸಾಕಷ್ಟು ಸಮರುವಿಕೆಯನ್ನು ಮತ್ತು ಪರ್ಯಾಯ ಆತಿಥೇಯಗಳನ್ನು (ಕಳೆ ಮತ್ತು ಇತರ ಆಶ್ರಯದಾತ ಬೆಳೆಗಳು) ತೆಗೆದುಹಾಕುವುದರಿಂದ ಕಪ್ಪು ನೊಣಕ್ಕೆ ಸೂಕ್ತವಾದ ಆವಾಸಸ್ಥಾನಗಳು ಕಡಿಮೆಯಾಗುತ್ತವೆ.
  • ಕೀಟ ಮತ್ತು ಮಸಿ ತುಂಬಿದ ಸಸ್ಯದ ಭಾಗಗಳ ಚಿಹ್ನೆಗಳಿಗಾಗಿ ನಿಮ್ಮ ಮರಗಳನ್ನು ನಿಯಮಿತವಾಗಿ ಪರಿಶೀಲಿಸಿ.
  • ನಿಮ್ಮ ಸಿಟ್ರಸ್ ಮರಗಳನ್ನು ಆರೋಗ್ಯವಾಗಿಡಲು ಸಾಕಷ್ಟು ನೀರು ಮತ್ತು ಸ್ವಲ್ಪ ಗೊಬ್ಬರವನ್ನು ಒದಗಿಸಿ ಆದರೆ ನೀರು ನಿಲ್ಲದಂತೆ ನೋಡಿಕೊಳ್ಳಿ ಅಥವಾ ಒತ್ತಡದ ಪರಿಸ್ಥಿತಿಗಳನ್ನು ತಪ್ಪಿಸಿ.
  • ಅತಿಯಾದ ನೀರಾವರಿ ಮತ್ತು ಸಾರಜನಕದ ಬಳಕೆ, ಜೊತೆಗೆ ಕೀಟನಾಶಕ ದ್ರವೌಷಧಗಳ ಅತಿಯಾದ ಬಳಕೆಯನ್ನು ತಪ್ಪಿಸಬೇಕು.
  • ಮುಂದಿನ ಬೆಳವಣಿಗೆಯ ಋತುವಿನಲ್ಲಿ ಹೊಸ ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡಲು ಸಂಭಾವ್ಯ ಚಳಿಗಾಲ ಕಳೆಯುವ ಸಸ್ಯಾವಶೇಷಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ