Coccus hesperidum
ಕೀಟ
ರೋಗಲಕ್ಷಣಗಳು, ದಾಳಿಯ ತೀವ್ರತೆ ಮತ್ತು ನಿಂಬೆ ತಳಿಗೆ (ವಿಶೇಷವಾಗಿ ನಿಂಬೆಹಣ್ಣು ಮತ್ತು ಚಕ್ಕೋತ ಇದಕ್ಕೆ ಒಳಗಾಗುತ್ತವೆ) ಸಂಬಂಧಿಸಿರುತ್ತವೆ. ಸ್ಕೇಲ್ಗಳು ಕಾಂಡಗಳನ್ನು, ಎಲೆಗಳನ್ನು, ಹಸಿರು ಸಣ್ಣ ರೆಂಬೆಗಳನ್ನು ಹಾಗು ಕೆಲವೊಮ್ಮೆ ಹಣ್ಣುಗಳನ್ನು ತಿನ್ನುತ್ತವೆ ಇದು ಸಾಮಾನ್ಯವಾಗಿ ನೆಲ ಮಟ್ಟದಲ್ಲಿ ಉಂಟಾಗುತ್ತದೆ. ಇವುಗಳ ಸಂಖ್ಯೆ ಹೆಚ್ಚಾಗುವವರೆಗೂ ಪರೋಕ್ಷವಾದ ಹಾನಿ ಅಷ್ಟಾಗಿ ಗೊತ್ತಾಗುವುದಿಲ್ಲ. ಆಹಾರ ಸೇವನೆಯಿಂದಾದ ಹಾನಿಯನ್ನು ಎಲೆಯು ಹಳದಿ ಬಣ್ಣಕ್ಕೆ ತಿರುಗುವುದರಿಂದ ಮತ್ತು ತೀವ್ರವಾದ ಪ್ರಕರಣಗಳಲ್ಲಿ ಎಲೆಗಳಚುವಿಕೆಯಿಂದಲೂ ಕೂಡ ಗುರುತಿಸಬಹುದು. ಸ್ಕೇಲ್ಗಳಿಂದ ಉತ್ಪತ್ತಿಯಾದ ಸಿಹಿಅಂಟು ಬೂದಿಯಾದ ಮೋಲ್ದಿನಿಂದ ಸೋಂಕಿಗೆ ಒಳಗಾಗಬಹುದು ಇದು ಎಲೆಗಳನ್ನು ಮತ್ತು ಹಣ್ಣುಗಳನ್ನು ಕಪ್ಪಾಗಿಸುತ್ತದೆ. ಸ್ಕೇಲ್ಗಳಿಗಿಂತ ಇದು ನಿಜವಾಗಿಯೂ ಹೆಚ್ಚಿನ ಮಟ್ಟದ ಹಾನಿಯನ್ನು ಉಂಟುಮಾಡಬಹುದು. ದುರ್ಬಲಗೊಂಡ ಮರಗಳು ಕಳಪೆ ಗುಣಮಟ್ಟದ ಹಣ್ಣುಗಳನ್ನು ಹೊಂದಿರುತ್ತವೆ ಮತ್ತು ಅವು ಪರಿಪಕ್ವಗೊಂಡಾಗ ಅವುಗಳ ಗಾತ್ರ ಚಿಕ್ಕದಿರುತ್ತದೆ. ಸಿ. ಹೆಸ್ಪರಿಡಿಯಂ ತನ್ನ ಹೋಸ್ಟ್ ಅನ್ನು ಕೊಲ್ಲುವುದು ಅಪರೂಪವಾದರೂ, ಇದು ಎಳೆಯ ನಿಂಬೆ ಮರಗಳ ಬೆಳವಣಿಗೆಯ ಮೇಲೆ ಮತ್ತು ಅವುಗಳ ಭವಿಷ್ಯದ ಉತ್ಪಾದಕತೆ ಮೇಲೆ ಪರಿಣಾಮ ಬೀರುತ್ತದೆ.
ಪ್ಯಾರಾಸೈಟಿಕ್ ಕಣಜಗಳಾದ ಮೆಟಾಫೈಕಸ್ ಲುಟಿಯೋಲಸ್, ಮೈಕ್ರೋಟೆರಿಸ್ ನಿಯೆತ್ನೆರಿ, ಮೆಟಾಫೈಕಸ್ ಹೆಲ್ವೊಲಸ್, ಎನ್ಸಿರ್ಟಾಸ್ ಎಸ್ಪಿಪಿ, ಎನ್ಕಾರ್ಸಿಯ ಸಿಟ್ರಿನಾ ಮತ್ತು ಇರುವೆಯನ್ನು ಸಹಿಸಿಕೊಳ್ಳಬಲ್ಲ ಕೊಕೊಫೆಗಸ್ ಎಸ್ಪಿಪಿ, ಇವು ಸ್ವಾಭಾವಿಕ ಶತ್ರುಗಳಲ್ಲಿ ಸೇರಿವೆ. ಅತಿ ಸಾಮಾನ್ಯಾವಾದ ಪರಭಕ್ಷಕಗಳೆಂದರೆ ಪ್ಯಾರಾಸೈಟಿಕ್ ನೊಣಗಳು, ಲೇಸವಿಂಗ್ಸ್ (ಕ್ರಿಸೋಪ ಕ್ರಿಸೋಪೆರ್ಲ) ಮತ್ತು ಸ್ಕೂಟಲಿಸ್ಟ ಸಿಯೆನೆ ಹಾಗು ಲೇಡಿಬರ್ಡ್ ಜೀರುಂಡೆಗಳಾದ ರೈಝೋಬಿಯಾಸ್ ಲಾಫಾಂತೆ. ಎಂಟೊಮೊ ಪ್ಯಾಥೊಜೆನಿಕ್ ಶಿಲೀಂಧ್ರ (ವರ್ಟಿಕ್ಯುಲಿಯಮ್ ಲೇಸಾನಿ) ಮತ್ತು ನಿಮಟೋಡ್ ಸ್ಟೈನ್ನೆರ್ನಿಮಾ ಫೆಲ್ಟಿಯೆ ಗಳು ವಿಶೇಷವಾಗಿ ಸಾಪೇಕ್ಷವಾಗಿ ಅತಿ ಹೆಚ್ಚಿನ ಆರ್ದ್ರ ಪರಿಸ್ಥಿತಿಗಳಲ್ಲಿ ಪರಿಣಾಮಕಾರಿಯಾಗಿವೆ. ಸಾವಯವ ಸಿಂಪರಣೆಗಳು, ಸಸ್ಯ ಜನ್ಯ ತೈಲಗಳು/ ಸಾರಗಳನ್ನೊಳಗೊಂಡಿವೆ (ಉದಾಹರಣೆಗೆ ಪೈರೇತ್ರಮ್ ಅಥವಾ ಕೊಬ್ಬಿನಾಮ್ಲಗಳು).
ಯಾವಾಗಲೂ ಲಭ್ಯವಿದ್ದಲ್ಲಿ, ಜೈವಿಕ ನಿಯಂತ್ರಣದ ಜೊತೆ, ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕಂದು ಬಣ್ಣದ ಮೃದು ಸ್ಕೇಲ್ಗಳ ನಿಯಂತ್ರಣ ಆಶ್ಚರ್ಯಕರವಾಗಿ ಕಷ್ಟಸಾಧ್ಯವಾಗಿದೆ. ಕ್ಲೋರ್ಪೈರಿಫೋಸ್, ಕಾರ್ಬಾರಿಲ್, ಡೈಮೆಥೋಯೇಟ್ ಅಥವಾ ಮಾಲಥಿಯೋನ್ ಹೊಂದಿರುವ ಉತ್ಪನ್ನಗಳು ಈ ಕೀಟದ ವಿರುದ್ಧ ಚೆನ್ನಾಗಿ ಕೆಲಸ ಮಾಡುತ್ತವೆ. ಕಡಿಮೆ ವ್ಯಾಪ್ತಿಯುಳ್ಳ ಎಣ್ಣೆ ಸಿಂಪರಣೆಯನ್ನು ಈ ಚಿಕಿತ್ಸೆಗಳ ಜೊತೆಗೆ ಬಳಸಬಹುದು. ಬೂದಿಯಾದ ಮೋಲ್ಡನ್ನು ನಿಯಂತ್ರಿಸಲು ಶಿಲೀಂಧ್ರ ನಾಶಕಗಳನ್ನು ಬಳಸಬಹುದು. ಯಾವುದೇ ಪ್ರಕರಣದಲ್ಲಿ, ವಿಶಾಲ-ವ್ಯಾಪ್ತಿಯ ಕೀಟನಾಶಕಗಳ ಬಳಕೆಯನ್ನು ತಪ್ಪಿಸಬೇಕು, ಏಕೆಂದರೆ ಇವು ಪ್ರಯೋಜನಕಾರಿ ಕೀಟಗಳಿಗೆ ಹಾನಿಯನ್ನೊಡ್ಡಬಹುದು.
ರೋಗಲಕ್ಷಣಗಳು ಕೊಕಸ್ ಹೆಸ್ಪೆರಿಡಂ ಎಂಬ ಕಂದು ಬಣ್ಣದ ಮೃದು ಸ್ಕೇಲ್ನ ಆಹಾರ ಸೇವನೆಯ ಚಟುವಟಿಕೆಯಿಂದ ಉಂಟಾಗುತ್ತದೆ. ಇದು ನಿಂಬೆಯ ಸಾಮಾನ್ಯ ಕೀಟವಾಗಿದ್ದು, ಇದು ವಿಶೇಷವಾಗಿ ಉಷ್ಣವಲಯ ಮತ್ತು ಉಪಉಷ್ಣವಲಯಗಳ ಸ್ಥಳಗಳಲ್ಲಿ ಹಾಗು ಹಸಿರುಮನೆಗಳಲ್ಲಿಯೂ ಸಹ ಕಂಡುಬರುತ್ತದೆ. ಇದಕ್ಕೆ ಪರಾಕಾಷ್ಠದ ಋತುವೆಂದರೆ ನಡು-ಬೇಸಿಗೆಯಿಂದ ಚಳಿಗಾಲದ ಆರಂಭದವರೆಗೆ. ಗಂಡು ಕೀಟಗಳು ಚಲಿಸುತ್ತಿರುತ್ತವೆ ಮತ್ತು ಅವು ಕಣಜವನ್ನು ಅಥವಾ ನೊಣವನ್ನು ಹೋಲುತ್ತವೆ ಆದರೆ ಅವು ಕಾಣಿಸಿಕೊಳ್ಳುವುದು ಬಲು ವಿರಳ. ಹೆಣ್ಣು ಕೀಟಗಳು, ಅಂಡಾಕಾರವಾಗಿ, ಚಪ್ಪಟೆಯಾಗಿ, ಮೃದುವಾಗಿರುತ್ತವೆ, ಅವು ಎಳೆಗಳ ಕೆಳಭಾಗಕ್ಕೆ ಅಂಟಿಕೊಂಡಿರುತ್ತವೆ. ಅವು ಪ್ರೌಢತೆಯನ್ನು ಪಡೆದಂತೆ ತಮ್ಮ ಹಸಿರು ಬಣ್ಣವನ್ನು ಕಂದು ಬಣ್ಣಕ್ಕೆ ಬದಲಾಯಿಸಿಕೊಳ್ಳುತ್ತವೆ. ಅವು ಒಂದು ರೀತಿಯ ಕಾವುಗೋಡಿನಂತಹ ಜಾಗದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಅಲ್ಲಿಂದ, ಸಣ್ಣದಾದ ತೆವಳುವ ಮರಿ ಹುಳುಗಳು ತಕ್ಷಣವೇ ಸಣ್ಣ ರೆಂಬೆಗಳಲ್ಲಿ, ಎಲೆಗಳ ನಡು ಸಿರೆಗಳುದ್ದಕ್ಕೂ ಅಥವಾ ಹಣ್ಣುಗಳ ಮೇಲೆ ಸೂಕ್ತವಾದ ಆಹಾರ ಸೇವನೆಗೆ ಜಾಗಗಳನ್ನು ಹುಡುಕುತ್ತವೆ. ಅವುಗಳನ್ನು ಸುತ್ತಮುತ್ತಲಿನ ಮರಗಳಿಗೆ ಗಾಳಿಯೂ ಕೂಡ ಪ್ರಸರಿಸಬಹುದು ಮತ್ತು ಈ ರೀತಿ ಈ ಕೀಟವನ್ನು ಹರಡಬಹುದು.