Diaphorina citri
ಕೀಟ
ಸಿಟ್ರಸ್ ಸೈಲಿಡ್ ಗಳು ಬೆಳವಣಿಗೆಯ ಹಂತ ಮತ್ತು ಋತುವಿನ ಸಮಯವನ್ನು ಅವಲಂಬಿಸಿ ವಿಭಿನ್ನ ರೀತಿಯಲ್ಲಿ ಮರಗಳ ಮೇಲೆ ಪರಿಣಾಮ ಬೀರುತ್ತವೆ. ವಯಸ್ಕ ಮತ್ತು ಮರಿಹುಳುಗಳು ತಿನ್ನುವುದರಿಂದ ಋತುವಿನ ಹೊಸ ಬೆಳವಣಿಗೆಗಳಾದ ಮೊಗ್ಗುಗಳು, ಹೂಗಳು, ಕೋಮಲ ಚಿಗುರುಗಳು ಮತ್ತು ಸಣ್ಣ ಹಣ್ಣುಗಳು ಹಾನಿಗೊಳಗಾಗಬಹುದು ಮತ್ತು ದುರ್ಬಲಗೊಳ್ಳಬಹುದು. ಸಿಹಿಯಾದ ಸಾರವನ್ನು ಹೀರುವಾಗ ಕೀಟಗಳು ಹೇರಳವಾಗಿ ಉತ್ಪತ್ತಿ ಮಾಡುವ ಸಿಹಿ ಸ್ರಾವ ಸೂಟಿ ಮೋಲ್ಡ್ ಬೆಳವಣಿಗೆಗೆ ಕಾರಣವಾಗುತ್ತವೆ ಮತ್ತು ಎಲೆಗಳ ದ್ಯುತಿಸಂಶ್ಲೇಷಣೆಯ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ. ಅಂತಿಮವಾಗಿ, ಹೆಚ್ಚಿನ ಸಂಖ್ಯಾ ಸಾಂದ್ರತೆಗಳಲ್ಲಿ, ಹೊಸ ಎಲೆಗಳ ತಿರುಚುವಿಕೆ ಮತ್ತು ಮಡಿಸುವಿಕೆ ಮತ್ತು ಚಿಗುರುಗಳ ಉದ್ದ ಕಡಿಮೆಯಾಗುವುದು ಸಾಮಾನ್ಯವಾಗಿ ವಿಚಸ್ ಬ್ರೂಮ್ ಪರಿಣಾಮಕ್ಕೆ ಕಾರಣವಾಗುತ್ತದೆ. ದೊಡ್ಡ ಸಂಖ್ಯೆಗಳು ಎಳೆಯ ಮರಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ ಮತ್ತು ಗಮನಾರ್ಹ ಇಳುವರಿ ಕಡಿತವನ್ನು ಉಂಟುಮಾಡುತ್ತದೆ. ಈ ಕೀಟವು ಅತ್ಯಂತ ಹಾನಿಕಾರಕವಾಗಬಹುದು. ಏಕೆಂದರೆ ಇದು ಸಿಟ್ರಸ್ ಗ್ರೀನ್ ಪ್ಯಾಥೋಜನ್ ನ ಪ್ರಮುಖ ವಾಹಕವಾಗಿದೆ.
ಪರಭಕ್ಷಕಗಳು ಮತ್ತು ಪರಾವಲಂಬಿಗಳು ಕಡಿಮೆ ಸೈಲಿಡ್ ಸಂಖ್ಯೆಯಿರುವ ಅವಧಿಯಲ್ಲಿ ನಿರಂತರ ನಿಯಂತ್ರಣವನ್ನು ಒದಗಿಸುವ ಸಾಧ್ಯತೆಯಿದೆ. ಉದಾಹರಣೆಗೆ, ಬಿಸಿಯಾದ, ಶುಷ್ಕ ವಾತಾವರಣದಲ್ಲಿ. ಪರಾವಲಂಬಿ ಕಣಜಗಳಲ್ಲಿ ತಮಾರಿಕ್ಸಿಯಾ ರೇಡಿಯೇಟಾ ಅಥವಾ ಸೈಲೆಫಾಗಸ್ ಯೂಪಿಲ್ಲುರೆ ಸೇರಿವೆ. ಪರಭಕ್ಷಕ ಕೀಟಗಳಲ್ಲಿ ಪೈರೇಟ್ ಬಗ್, ಅಂಥೋಕೋರಿಸ್ ನೆಮೊರಲಿಸ್, ಲೇಸ್ವಿಂಗ್, ಕ್ರಿಸೋಪೆರ್ಲಾ ಕಾರ್ನಿಯಾ ಮತ್ತು ಲೇಡಿ ಬೀಟಲ್ ಕೋಸಿನೆಲ್ಲಾ ಸೆಪ್ಟೆಂಪುಂಕ್ಟಾಲಾ ಸೇರಿವೆ. ಬೇವಿನ ಎಣ್ಣೆ ಅಥವಾ ತೋಟಗಾರಿಕಾ ತೈಲವನ್ನು ಆಧರಿಸಿದ ಕೀಟನಾಶಕ ಸೋಪ್ ಗಳು ಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಆದರೆ ಮರಿಹುಳುಗಳು ತಮ್ಮ ರಕ್ಷಣಾತ್ಮಕ ಮೇಣವನ್ನು ಸ್ರವಿಸುವ ಮೊದಲು ಇದನ್ನು ಬಳಸಬೇಕು.
ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಡೈಮೆಥೊಯೇಟ್ ಆಧಾರಿತ ಕೀಟನಾಶಕಗಳನ್ನು ಸರಿಯಾದ ಸಮಯದಲ್ಲಿ ಬಳಸಿದರೆ ಅದು ಸೈಲಿಡ್ಸ್ ವಿರುದ್ಧ ಪರಿಣಾಮಕಾರಿಯಾಗುತ್ತವೆ. ಆದರೆ ಇದನ್ನು ಅಂತಿಮ ಪರಿಹಾರವಾಗಿ ಮಾತ್ರ ಬಳಸಬೇಕು. ಕೀಟಗಳನ್ನು ರಕ್ಷಿಸುವ ಮೇಣದ ಸ್ರವಿಸುವಿಕೆಗೆ ಮೊದಲೇ ಈ ಉತ್ಪನ್ನಗಳನ್ನು ಬಳಸಬೇಕು, ಈ ಮೇಣ ಕೀಟಗಳಿಗೆ ಪ್ರತಿರೋಧವನ್ನು ನೀಡುತ್ತದೆ. ಮಿತಿಮೀರಿದ ದ್ರವೌಷಧಗಳ ಸಿಂಪಡಿಕೆ ಸೈಲಿಡ್ಸ್ ಮತ್ತು ಇತರ ಕೀಟಗಳ ಪುನರುಜ್ಜೀವನಕ್ಕೆ ಕಾರಣವಾಗಬಹುದು ಎಂಬುದನ್ನು ನೆನಪಿಡಿ. ವಲಸೆ ಹೋಗುವ ವಯಸ್ಕ ಕೀಟಗಳು ಮೇಲೆ ಕೆಳಕ್ಕೆ ಓಡಾಡುವುದನ್ನು ತಪ್ಪಿಸಲು ತೊಗಟೆಗೆ ಡೈಮೆಥೊಯೆಟ್ ಪೇಸ್ಟ್ (0.03%) ಹಚ್ಚಬಹುದು.
ಸಿಟ್ರಸ್ ಸೈಲಿಡ್, ಡಯಾಫೊರಿನಾ ಸಿಟ್ರಿಯ ಆಹಾರ ಚಟುವಟಿಕೆಗಳಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ವಯಸ್ಕ ಕೀಟಗಳು 3 ರಿಂದ 4 ಮಿಮೀ ಉದ್ದವಿರುತ್ತವೆ. ಕಂದು ಕಪ್ಪು ಬಣ್ಣದ ತಲೆಗಳು ಮತ್ತು ಕುತ್ತಿಗೆ, ತಿಳಿ ಕಂದು ಹೊಟ್ಟೆ ಮತ್ತು ಮಚ್ಚೆಯಿರುವ ಪೊರೆಯಂತಹ ರೆಕ್ಕೆಗಳನ್ನು ಹೊಂದಿರುತ್ತವೆ. ಅವು ಕಾಂಡದ ಅಥವಾ ಪ್ರಬುದ್ಧ ಎಲೆಗಳ ಆಶ್ರಯ ಪ್ರದೇಶಗಳಲ್ಲಿ ಚಳಿಗಾಲ ಕಳೆಯಬಹುದು. ವಯಸ್ಕ ಸೈಲಿಡ್ ಗಳ ಸರಾಸರಿ ಜೀವಿತಾವಧಿಯು ಉಷ್ಣತೆಯ ಮೇಲೆ ಅವಲಂಬಿತವಾಗಿರುತ್ತದೆ, 20 - 30 °C ಸೂಕ್ತ ಉಷ್ಣಾಂಶವಾಗಿರುತ್ತದೆ. ಬಿಸಿ ಉಷ್ಣತೆಯು ಅವುಗಳ ಜೀವಿತಾವಧಿ ಕಡಿಮೆಗೊಳಿಸಿದರೆ ತಂಪಗಿನ ಹವಾಮಾನವು ದೀರ್ಘಾವಧಿಯ ಜೀವಿತಾವಧಿಯನ್ನು ಬೆಂಬಲಿಸುತ್ತವೆ. ವಸಂತಕಾಲದಲ್ಲಿ ಹೊಸ ಚಿಗುರುಗಳು ಮತ್ತು ಮೊಗ್ಗುಗಳ ಮೇಲೆ, ಹೆಣ್ಣು ಕೀಟಗಳು 800 ಕಿತ್ತಳೆ ಬಣ್ಣದ ಮೊಟ್ಟೆಗಳನ್ನು ಇಡಬಹುದು. ಮರಿಹುಳುಗಳು ಚಪ್ಪಟೆಯಾಗಿದ್ದು, ಸಾಮಾನ್ಯವಾಗಿ ಹಳದಿ ಬಣ್ಣದ್ದಾಗಿರುತ್ತವೆ ಮತ್ತು ಅವುಗಳನ್ನು ರಕ್ಷಿಸುವಂತಹ ಬಿಳಿ ಮೇಣದಂಥ ಲೇಪನವನ್ನು ಹೊಂದಿರುತ್ತವೆ. ಬಿಳಿ ಮೇಣದಂಥ ಬೆಳವಣಿಗೆಗಳು ಅಥವಾ ಎಳೆಗಳು ಇವುಗಳನ್ನು ಸ್ಪಷ್ಟವಾಗಿ ಗಿಡಹೇನುಗಳಿಂದ ಪ್ರತ್ಯೇಕಿಸುತ್ತದೆ. ವಯಸ್ಕ ಕೀಟಗಳಿಗೆ ಹೋಲಿಸಿದರೆ, ತೊಂದರೆ ಉಂಟು ಮಾಡಿದಾಗ ಮರಿಹುಳುಗಳು ಕೇವಲ ಸ್ವಲ್ಪ ದೂರದವರೆಗೆ ಮಾತ್ರ ಚಲಿಸುತ್ತವೆ. ಅಂಗಾಂಶಗಳಿಗಾದ ಹಾನಿ ಎಲ್ಲಾ ಭಾಗಗಳಿಗೆ ಪೋಷಕಾಂಶಗಳನ್ನು ವಿತರಿಸುವ ಸಸ್ಯದ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ.